ಪನ್ನೀರ್ ಪ್ರಿಯರಿಗೆ ಶಾಕಿಂಗ್ ಸುದ್ದಿ: ಆಹಾರ ಇಲಾಖೆ ಪರೀಕ್ಷೆ ವೇಳೆ ಬ್ಯಾಕ್ಟೀರಿಯಾ ಅಂಶ ಪತ್ತೆ

| Updated By: ಗಂಗಾಧರ​ ಬ. ಸಾಬೋಜಿ

Updated on: Mar 26, 2025 | 1:41 PM

ಬೆಂಗಳೂರು ಸೇರಿ ಹಲವೆಡೆ ಆಹಾರ ಇಲಾಖೆ ಪನ್ನೀರ್​ ಸ್ಯಾಂಪಲ್ ಸಂಗ್ರಹಿಸಿ ಟೆಸ್ಟ್​ಗೆ ಕಳುಹಿಸಿತ್ತು. ಆಹಾರ ಗುಣಮಟ್ಟ ಇಲಾಖೆಯಿಂದ ಪನೀರ್ ಸ್ಯಾಂಪಲ್ ಟೆಸ್ಟ್ ಮಾಡಲಾಗಿದ್ದು, ಇದೀಗ ಲ್ಯಾಬ್ ರಿಪೋರ್ಟ್ ಆಹಾರ ಇಲಾಖೆ ಕೈಸೇರಿದೆ. ವರದಿಯಲ್ಲಿ ಅಸುರಕ್ಷಿತ ಅಂಶ ಇರೋದು ಪತ್ತೆ ಆಗಿದೆ. ಹೀಗಾಗಿ ಪನ್ನೀರ್​​​​​ ಪ್ರಿಯರಿಗೆ ಶಾಕ್​ ಉಂಟಾಗಿದೆ.

ಪನ್ನೀರ್ ಪ್ರಿಯರಿಗೆ ಶಾಕಿಂಗ್ ಸುದ್ದಿ: ಆಹಾರ ಇಲಾಖೆ ಪರೀಕ್ಷೆ ವೇಳೆ ಬ್ಯಾಕ್ಟೀರಿಯಾ ಅಂಶ ಪತ್ತೆ
ಪನ್ನೀರ್
Follow us on

ಬೆಂಗಳೂರು, ಮಾರ್ಚ್​ 26: ಇತ್ತೀಚೆಗೆ ಆಹಾರ ಇಲಾಖೆ ಕಳಪೆ ಆಹಾರ ಪದಾರ್ಥಗಳ (food) ವಿರುದ್ಧ ಸಮರ ಸಾರಿತ್ತು. ರಾಸಾಯನಿಕಗಳ ಬಳಕೆಗಳ ವಿರುದ್ಧ ಚಾಟಿ ಬೀಸಿತ್ತು. ಹೀಗಾಗಿ ಪನ್ನೀರ್ (Paneer) ಸೇರಿ ಇತರೆ ಆಹಾರ ಉತ್ಪನ್ನಗಳ ಸ್ಯಾಂಪಲ್ ಪಡೆದು ಟೆಸ್ಟ್​ಗೆ ಒಳಪಡಿಸಲಾಗಿತ್ತು. ಇದೀಗ ಅದರ ವರದಿ ಬಂದಿದ್ದು, ಪನ್ನೀರ್​ನಲ್ಲಿ ಬ್ಯಾಕ್ಟೀರಿಯಾ ಅಂಶಗಳು ಪತ್ತೆಯಾಗಿರುವುದು ದೃಢವಾಗಿದೆ. ಆ ಮೂಲಕ ಪನ್ನೀರ್​​​​​ ಪ್ರಿಯರಿಗೆ ಆಹಾರ ಇಲಾಖೆ ಶಾಕ್​ ನೀಡಿದೆ. ಉಳಿದ ಸ್ಯಾಂಪಲ್​​ಗಳ ವರದಿಗಾಗಿ ಆಹಾರ ಇಲಾಖೆ ಕಾಯುತ್ತಿದೆ.

ಪನ್ನೀರ್​ನಲ್ಲಿ ಅಸುರಕ್ಷಿತ ಅಂಶ ಪತ್ತೆ

ಕಲಬೆರಕೆ ಹಿನ್ನೆಲೆ ಕಳೆದ ಹಲವು ದಿನಗಳ ಹಿಂದೆ ಬೆಂಗಳೂರು ಸೇರಿ ಹಲವೆಡೆ ಆಹಾರ ಇಲಾಖೆ ಪನ್ನೀರ್​ ಸ್ಯಾಂಪಲ್ ಸಂಗ್ರಹಿಸಿತ್ತು. ಆಹಾರ ಗುಣಮಟ್ಟ ಇಲಾಖೆಯಿಂದ ಪನೀರ್ ಸ್ಯಾಂಪಲ್ ಟೆಸ್ಟ್ ಮಾಡಲಾಗಿದ್ದು, ಇದೀಗ ಲ್ಯಾಬ್ ರಿಪೋರ್ಟ್ ಆಹಾರ ಇಲಾಖೆ ಕೈಸೇರಿದೆ. ವರದಿಯಲ್ಲಿ ಅಸುರಕ್ಷಿತ ಅಂಶ ಇರೋದು ಪತ್ತೆ ಆಗಿದೆ.

ಇದನ್ನೂ ಓದಿ: Health Tips: ಅಂಗಡಿಯಿಂದ ಪನೀರ್​ ಖರೀದಿಸುವಾಗ ಗಮನಿಸಬೇಕಾದ ಅಂಶಗಳಿವು

ಇದನ್ನೂ ಓದಿ
ಅಂಗಡಿಯಿಂದ ಪನೀರ್​ ಖರೀದಿಸುವಾಗ ಗಮನಿಸಬೇಕಾದ ಅಂಶಗಳಿವು
ಇಡ್ಲಿ ಬಳಿಕ ಬಟಾಣಿಯಲ್ಲೂ ಆರೋಗ್ಯಕ್ಕೆ ಹಾನಿಕಾರಕ ಅಂಶ ಪತ್ತೆ: ಆರೋಗ್ಯ ಇಲಾಖೆ
ಬೆಂಗಳೂರಿಗರಿಗೆ ಶಾಕಿಂಗ್ ಸುದ್ದಿ: ಇಡ್ಲಿ ತಿಂದರೂ ಬರಬಹುದು ಕ್ಯಾನ್ಸರ್‌!
ಆಹಾರದಲ್ಲಿ ಕೃತಕ ಬಣ್ಣ ಬಳಸುವುದರಿಂದ ಏನೆಲ್ಲಾ ಆರೋಗ್ಯ ಸಮಸ್ಯೆ?

231 ಪನೀರ್ ಸ್ಯಾಂಪಲ್ ಪೈಕಿ 17 ಸ್ಯಾಂಪಲ್​​ಗಳ ವರದಿ ಬಂದಿದೆ. 17 ಸ್ಯಾಂಪಲ್ ಲ್ಯಾಬ್ ರಿಪೋರ್ಟ್​ನಲ್ಲಿ 2 ಅನ್ ಸೇಫ್ ಎಂದು ವರದಿ ಬಂದಿದ್ದು, ಪನ್ನೀರ್​ನಲ್ಲಿ ಬ್ಯಾಕ್ಟೀರಿಯಾ ಅಂಶ ಇರೋದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಆಹಾರ ಇಲಾಖೆಯಿಂದ ಮುಂದುವರೆದ ಸಮರ: ಐಸ್ ಕ್ರೀಂ, ಕೂಲ್ ಡ್ರಿಂಕ್ಸ್ ಘಟಕಗಳ ಮೇಲೆ ದಾಳಿ

ಸದ್ಯ ಇಷ್ಟಕ್ಕೆ ಸುಮ್ಮನಾಗದೇ ಆಹಾರ ಇಲಾಖೆ ಸಮರ ಮುಂದುವರೆದಿದೆ. ಐಸ್ ಕ್ರೀಂ ಘಟಕಗಳಲ್ಲಿ ಸ್ಯಾಂಪಲ್ಸ್ ಸಂಗ್ರಹಕ್ಕೆ ಮುಂದಾಗಿದೆ. ಬೇಸಿಗೆ ಹಿನ್ನೆಲ್ ಅಲರ್ಟ್ ಆಗಿರುವ ಅಧಿಕಾರಿಗಳು, ಐಸ್ ಕ್ರೀಂ, ಕೂಲ್ ಡ್ರಿಂಕ್ಸ್ ಘಟಕಗಳ ಮೇಲೆ ಎಫ್​ಎಸ್​ಎಸ್​ಎಐ ದಾಳಿ ಮಾಡಿದೆ. ನಗರದ ಹಾಗೂ ವಿವಿಧ ಜಿಲ್ಲೆಗಳಲ್ಲಿ ಕಾರ್ಯಾಚರಣೆ ಮಾಡಲಾಗಿದ್ದು, ಆಹಾರ ಇಲಾಖೆ‌ ಅಧಿಕಾರಿಗಳು ಸ್ಯಾಂಪಲ್ ಕಲೆಕ್ಟ್ ಮಾಡಿ ಲ್ಯಾಬ್​ಗೆ ಕಳಸಿದೆ.

ಇದನ್ನೂ ಓದಿ: ಇಡ್ಲಿ ಬಳಿಕ ಬಟಾಣಿಯಲ್ಲೂ ಆರೋಗ್ಯಕ್ಕೆ ಹಾನಿಕಾರಕ ಅಂಶ ಪತ್ತೆ: ಆರೋಗ್ಯ ಇಲಾಖೆ

ಇತ್ತೀಚೆಗೆ ರಾಜಧಾನಿ ಬೆಂಗಳೂರು ಸೇರಿದ್ದಂತೆ ಕರ್ನಾಟಕದಲ್ಲಿ ಎಲ್ಲಡೆ ತಿನ್ನುವ ಆಹಾರಗಳದ್ದೆ ಸದ್ದು ಜೋರಾಗಿತ್ತು. ಯಾವುದು ತಿನ್ನೋದು, ಯಾವುದು ಬಿಡೋದು, ಯಾವುದು ಸೇಫ್, ಯಾವುದು ಅನ್ ಸೇಫ್ ಎಂಬಂತಾಗಿತ್ತು. ಕಳಪೆ ಗುಣಮಟ್ಟದ ವಸ್ತುಗಳು ದಿನೇ ದಿನೇ ಬ್ಯಾನ್ ಲಿಸ್ಟ್​ಗೆ ಒಳಪಡುತ್ತಿವೆ. ಇತ್ತೀಚೆಗೆ ಇಡ್ಲಿ ಬಳಿಕ ಬಟಾಣಿಯಲ್ಲೂ ಆರೋಗ್ಯಕ್ಕೆ ಹಾನಿಕಾರಕ ಅಂಶ ಪತ್ತೆ ಆಗಿತ್ತು. ಬಳಿಕ ಪನ್ನಿರ್ ಸಿಹಿ ತಿಂಡಿಗಳಲ್ಲೂ ಅಸುರಕ್ಷಿತ ಅಂಶ ಪತ್ತೆಯಾಗಿರುವುದು ಆಹಾರ ಇಲಾಖೆ ವರದಿಯಲ್ಲಿ ಬಯಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.