ರಮೇಶ್ ಜಾರಕಿಹೊಳಿ ವಿರುದ್ಧ ರೇಪ್ ಕೇಸ್ ಹಾಕಬೇಕು; ಸಿಡಿ ಯುವತಿಗೆ ರಕ್ಷಣೆ ಕೊಡಬೇಕು -ಸಿದ್ದರಾಮಯ್ಯ
ವಿಪಕ್ಷ ನಾಯಕ ಸಿದ್ದರಾಮಯ್ಯ ರಮೇಶ್ ಜಾರಕಿಹೊಳಿ ವಿರುದ್ಧ ರೇಪ್ ಕೇಸ್ ಹಾಕಬೇಕು ಎಂದು ಒತ್ತಾಯಿಸಿದ್ದಾರೆ. ಸಿಡಿ ಯಲ್ಲಿದ್ದ ಯುವತಿಗೆ ಕೂಡಲೇ ರಕ್ಷಣೆ ಕೊಡಬೇಕು. 13 ನೇ ತಾರೀಕು ವಿಡಿಯೋ ಮಾಡಿ ವೈರಲ್ ಮಾಡಿದ್ದರು. ನಾನು ರಮೇಶ್ ಜಾರಕಿಹೊಳಿ ಬಳಿ ಕೆಲಸಕೆಂದು ಹೋಗಿದ್ದೆ ಅವರು ನನ್ನ ಬಳಸಿಕೊಂಡಿದ್ದಾರೆಂದು ಆ ಯುವತಿ ಹೇಳಿದ್ದಾರೆ...
ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣವಿಂದು ವಿಧಾನಸೌಧದಲ್ಲಿ ಭಾರಿ ಚರ್ಚೆಗೆ ಒಳಗಾಗಿದೆ. ಕಾಂಗ್ರೆಸ್ ನಾಯಕರ ಆಕ್ರೋಶ ಜೋರಾಗಿದೆ. ಕಾಂಗ್ರೆಸ್ ನಾಯಕರು ಸದನದ ಬಾವಿಗಿಳಿದು ಸಿಡಿ ಸರ್ಕಾರವೆಂದು ಧಿಕ್ಕಾರ ಕೂಗಿ ಪ್ರತಿಭಟನೆ ನಡೆಸಿದ್ದಾರೆ. ಇನ್ನು ಈ ಬಗ್ಗೆ ಪ್ರಸ್ತಾಪ ಮಾಡಿದ ವಿಪಕ್ಷ ನಾಯಕ ಸಿದ್ದರಾಮಯ್ಯ ರಮೇಶ್ ಜಾರಕಿಹೊಳಿ ವಿರುದ್ಧ ರೇಪ್ ಕೇಸ್ ಹಾಕಬೇಕು ಎಂದು ಒತ್ತಾಯಿಸಿದ್ದಾರೆ.
ಸದನದಲ್ಲಿ ಮಾತನಾಡಿದ ಸಿದ್ದರಾಮಯ್ಯ.. ಸಿಡಿ ಯಲ್ಲಿದ್ದ ಯುವತಿಗೆ ಕೂಡಲೇ ರಕ್ಷಣೆ ಕೊಡಬೇಕು. 13 ನೇ ತಾರೀಕು ವಿಡಿಯೋ ಮಾಡಿ ವೈರಲ್ ಮಾಡಿದ್ದರು. ನಾನು ರಮೇಶ್ ಜಾರಕಿಹೊಳಿ ಬಳಿ ಕೆಲಸಕೆಂದು ಹೋಗಿದ್ದೆ ಅವರು ನನ್ನ ಬಳಸಿಕೊಂಡಿದ್ದಾರೆಂದು ಆ ಯುವತಿ ಹೇಳಿದ್ದಾರೆ. ಹೀಗಾಗಿ ಅದು ರೇಪ್ ಆಗುತ್ತದೆ. ರಮೇಶ್ ಜಾರಕಿಹೊಳಿ ವಿರುದ್ಧ ರೇಪ್ ಕೇಸ್ ಹಾಕಬೇಕು. ನಾವೂ ನ್ಯಾಯಯುತವಾದಂತ ಡಿಮ್ಯಾಂಡ್ಸ್ ಮಾಡಿದ್ದೀವಿ. ಎಲ್ಲಿ ಸ್ತ್ರೀಯರನ್ನು ಪೂಜಿಸ್ತಾರೋ ಅಲ್ಲಿ ದೇವತೆಗಳು ಸಂತೃಪ್ತರಾಗ್ತಾರಂತೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.
ಪೊಲೀಸರು ಮನಸ್ಸು ಮಾಡಿದ್ರೆ 24 ಗಂಟೆಯಲ್ಲಿ ಆರೋಪಿಗಳನ್ನು ಪತ್ತೆಹಚ್ತಾರೆ ಪೊಲೀಸರು ಮನಸ್ಸು ಮಾಡಿದ್ರೆ 24 ಗಂಟೆಯಲ್ಲಿ ಸಿಡಿ ಪ್ರಕರಣದ ಹಿಂದೆ ಇರುವವರನ್ನು ಪತ್ತೆಹಚ್ತಾರೆ. ಆದರೆ ಇದುವರೆಗೆ ಪೊಲೀಸರು ಯುವತಿಯನ್ನು ಪತ್ತೆಹಚ್ಚಿಲ್ಲ. ಎಸ್ಐಟಿಗೆ ಪತ್ರ ಬರೆದು ವಿಚಾರಣೆ ನಡೆಸಿ ವರದಿಗೆ ಸೂಚನೆ ನೀಡಲಾಗಿದೆ. ಎಸ್ಐಟಿ ವರದಿ ನೀಡಬೇಕಿರುವುದು ಕೋರ್ಟ್ಗೆ, ಸರ್ಕಾರಕ್ಕಲ್ಲ. ತೀರ್ಪು ನೀಡುವುದು ಕೋರ್ಟ್, ಸರ್ಕಾರ ತೀರ್ಪು ನೀಡಲ್ಲ. ಹಾಗಾಗಿ ಸಿಜೆ ಮೇಲುಸ್ತುವಾರಿಯಲ್ಲಿ ತನಿಖೆಗೆ ಆಗ್ರಹಿಸುತ್ತೇವೆ ಎಂದು ಸಿದ್ದರಾಮಯ್ಯ ತಿಳಿಸಿದ್ರು.
ಹೈಕೋರ್ಟ್ ಸಿಜೆ ನೇತೃತ್ವದಲ್ಲಿ ತನಿಖೆ ನಡೆಸಿ ಎಸ್ಐಟಿ ಮೇಲೆ ನಮಗೆ ನಂಬಿಕೆ ಇಲ್ಲ. ಹೈಕೋರ್ಟ್ ನಿವೃತ ನ್ಯಾಯಾಧೀಶರೊಬ್ಬರನ್ನ ನೇಮಿಸಬೇಕು. ಈ ಪ್ರಕರಣವನ್ನು ಮುಚ್ಚುಹಾಕೋಕೆ ನೋಡ್ತಿದ್ದಾರೆ. ಅದನ್ನ ಫೇಕ್ ಸಿಡಿ ಎಂದು ಸಾಬೀತು ಮಾಡೋಕೆ ಹೊರಟಿದ್ದಾರೆ. ಹೆಣ್ಮಕ್ಕಳಿಗೆ ರಕ್ಷಣೆ ಇಲ್ಲದ ಮೇಲೆ ನಾವೂ ಯಾಕೆ ಅಸೆಂಬ್ಲಿಗೆ ಬರಬೇಕು. ಹೆಣ್ಣು ಮಕ್ಕಳಿಗೆ ರಕ್ಷಣೆ ಕೊಡಬೇಕಾಗಿರೋದು ಪ್ರಜಾಪ್ರಭುತ್ವದಲ್ಲಿ ನಮ್ಮ ಕರ್ತವ್ಯ. ಹೈಕೋರ್ಟ್ ಸಿಜೆ ನೇತೃತ್ವದಲ್ಲಿ ತನಿಖೆ ನಡೆಸಿದರೆ ಆ ಹೆಣ್ಣುಮಗಳಿಗೆ ನ್ಯಾಯ ಸಿಗುತ್ತೆ ಎಂದು ಆಗ್ರಹಿಸುತ್ತಿದ್ದೇವೆ ಎಂದು ವಿಧಾನಸೌಧದಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ರು.
ಕೋರ್ಟ್ ಮೊರೆ ಹೋದವರು ರಾಜೀನಾಮೆ ನೀಡಬೇಕು ರಮೇಶ್ ಪ್ರಕರಣ ಬೇರೆ, ಹೆಚ್.ವೈ.ಮೇಟಿ ಕೇಸ್ ಬೇರೆ. ತನಿಖೆಯಾಗಬೇಕಾದರೆ ಎಫ್‌ಐಆರ್ ದಾಖಲಿಸಬೇಕಲ್ವಾ? ಎಫ್‌ಐಆರ್ ದಾಖಲಿಸದೆ ಹೇಗೆ ತನಿಖೆ ಮಾಡುತ್ತಾರೆ? ನಿರ್ಭಯಾ ಕಾಯ್ದೆ ಪ್ರಕಾರ ಎಫ್‌ಐಆರ್ ದಾಖಲಿಸಬೇಕು. ಸದನದಲ್ಲಿ ನಮ್ಮ ಹೋರಾಟ ಮುಂದುವರಿಯುತ್ತದೆ. ಕೋರ್ಟ್ ಮೊರೆ ಹೋದ 6 ಜನ ಸಚಿವರು ರಾಜೀನಾಮೆ ನೀಡಬೇಕೆಂದು ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.
ಈ ಹಿಂದೆ ನಾನು ಐದಾರು ಕೇಸ್ ಸಿಬಿಐಗೆ ಕೊಟ್ಟಿದ್ದೇನೆ. ಇವರು 1 ಕೇಸ್ನಾದರೂ ಸಿಬಿಐ ತನಿಖೆಗೆ ಕೊಟ್ಟಿದ್ದಾರಾ? ಬಿಜೆಪಿಯವರು ಸ್ವರ್ಗ ಮಾಡುತ್ತೇವೆ ಎಂದು ಹೇಳಿದ್ದರು. ಇದೇನಾ ಸ್ವರ್ಗ, ಇದೇನಾ ಅಚ್ಛೇ ದಿನ್ ಎಂದು ಸಿದ್ದರಾಮಯ್ಯ ಪ್ರಶ್ನೆ ಮಾಡಿದ್ದಾರೆ.
ಇದನ್ನೂ ಓದಿ: ಬಜೆಟ್ ಅಧಿವೇಶನ: ಕರ್ನಾಟಕ ವಿಧಾನಸೌಧದಲ್ಲಿ ಸಿಡಿ ಪ್ರದರ್ಶನ ಮಾಡಿದ ಕೈ ನಾಯಕರು
Published On - 4:12 pm, Tue, 23 March 21