ವಿಧಾನಮಂಡಲ ಅಧಿವೇಶನ ಹಿನ್ನೆಲೆ: ಸಿದ್ದರಾಮಯ್ಯ ನೇತೃತ್ವದಲ್ಲಿ ಸಿಎಲ್​ಪಿ ಸಭೆ

Karnataka Congress: ಸಭೆಗೆ ಎಂಎಲ್​​​ಸಿ ಬಿ.ಕೆ. ಹರಿಪ್ರಸಾದ್, ಪ್ರಸನ್ನಕುಮಾರ್, ನಾರಾಯಣಸ್ವಾಮಿ, ಮುಖ್ಯ ಸಚೇತಕ ಅಜಯ್ ಸಿಂಗ್, ಅಂಜಲಿ ನಿಂಬಾಳ್ಕರ್, ಕುಸುಮಾ ಶಿವಳ್ಳಿ, ಕಂಪ್ಲಿ ಗಣೇಶ್, ಪ್ರಿಯಾಂಕ್ ಖರ್ಗೆ, ತುಕಾರಾಂ, ಸಿ. ಪುಟ್ಟರಂಗಶೆಟ್ಟಿ, ಜಾರ್ಜ್, ಅಲ್ಲಂ ವೀರಭದ್ರಪ್ಪ ಸೇರಿದಂತೆ ಹಲವರು ಭಾಗಿ ಆಗಿದ್ದಾರೆ.

ವಿಧಾನಮಂಡಲ ಅಧಿವೇಶನ ಹಿನ್ನೆಲೆ: ಸಿದ್ದರಾಮಯ್ಯ ನೇತೃತ್ವದಲ್ಲಿ ಸಿಎಲ್​ಪಿ ಸಭೆ
ಸಿಎಲ್​ಪಿ ಸಭೆಯಲ್ಲಿ ಸಿದ್ದರಾಮಯ್ಯ ಮಾತು
Edited By:

Updated on: Sep 07, 2021 | 9:28 PM

ಬೆಂಗಳೂರು: ವಿಧಾನಮಂಡಲ ಅಧಿವೇಶನವು ಸೆಪ್ಟೆಂಬರ್ 13 ರಿಂದ ನಡೆಯಲಿದೆ. ಆ ಹಿನ್ನೆಲೆಯಲ್ಲಿ ಬೆಂಗಳೂರಿನ ಖಾಸಗಿ ಹೋಟೆಲ್​​ನಲ್ಲಿ ಸಿಎಲ್​​ಪಿ ಸಭೆ ನಡೆಸಿದೆ. ಸಿಎಲ್​​ಪಿ ನಾಯಕ ಸಿದ್ದರಾಮಯ್ಯ ನೇತೃತ್ವದಲ್ಲಿ ಸಭೆ ನಡೆಸಲಾಗಿದೆ. ಸಭೆಗೆ ಎಂಎಲ್​​​ಸಿ ಬಿ.ಕೆ. ಹರಿಪ್ರಸಾದ್, ಪ್ರಸನ್ನಕುಮಾರ್, ನಾರಾಯಣಸ್ವಾಮಿ, ಮುಖ್ಯ ಸಚೇತಕ ಅಜಯ್ ಸಿಂಗ್, ಅಂಜಲಿ ನಿಂಬಾಳ್ಕರ್, ಕುಸುಮಾ ಶಿವಳ್ಳಿ, ಕಂಪ್ಲಿ ಗಣೇಶ್, ಪ್ರಿಯಾಂಕ್ ಖರ್ಗೆ, ತುಕಾರಾಂ, ಸಿ. ಪುಟ್ಟರಂಗಶೆಟ್ಟಿ, ಜಾರ್ಜ್, ಅಲ್ಲಂ ವೀರಭದ್ರಪ್ಪ ಸೇರಿದಂತೆ ಹಲವರು ಭಾಗಿ ಆಗಿದ್ದಾರೆ. ಮಾಜಿ ಸಚಿವ ಕೆಜೆ ಜಾರ್ಜ್ ಸೇರಿದಂತೆ ಹಲವು ಕಾಂಗ್ರೆಸ್ ನಾಯಕರು ಭಾಗಿಯಾಗಿದ್ದಾರೆ.

ಪಂಚಾಯತ್ ಚುನಾವಣೆಗಳಲ್ಲಿ ನಾವೇ ಗೆಲ್ಲುತ್ತೇವೆ
ಪಾಲಿಕೆ ಚುನಾವಣೆ ಫಲಿತಾಂಶ ಕುರಿತಾಗಿ ಸೋಮವಾರ (ಸಪ್ಟೆಂಬರ್ 6) ಮಾತನಾಡಿದ್ದ ಸಿದ್ದರಾಮಯ್ಯ ಮುಂದಿನ ಚುನಾವಣೆಗಳಲ್ಲಿ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದ್ದರು. ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಚುನಾವಣೆಯಲ್ಲಿ ನಾವೇ ಗೆಲ್ಲುತ್ತೇವೆ. ನೂರಕ್ಕೆ ನೂರರಷ್ಟೂ ಕಾಂಗ್ರೆಸ್‌ನವರೇ ಗೆಲ್ಲುತ್ತೇವೆ. ಬಿಬಿಎಂಪಿ ಚುನಾವಣೆಗೆ ದಿನಾಂಕ ಘೋಷಣೆಯಾಗಲಿ. ಈಗಲೇ ಆ ಬಗ್ಗೆ ಹೇಳುವುದಕ್ಕೆ ಆಗಲ್ಲ ಎಂದು ಸಿದ್ದರಾಮಯ್ಯ ತಿಳಿಸಿದ್ದರು. ಬಿಜೆಪಿಯವರು ಮತದಾರರನ್ನು ಹೆದರಿಸಿದ್ದಾರೆ. ಇದು ಅಧಿಕಾರ ದುರುಪಯೋಗವಲ್ಲವೇ ಎಂದು ಪ್ರಶ್ನೆ ಮಾಡಿದ್ದರು. ಬೆಳಗಾವಿಯಲ್ಲಿ ಬಿಜೆಪಿ ಗೆದ್ದಿದೆ ಎಂದು ನಾನು ಒಪ್ಪಿಕೊಳ್ತೇನೆ. ಬಿಜೆಪಿಗೆ ಈ ಚುನಾವಣೆ ಎಚ್ಚರಿಕೆಯಾಗಿದೆ ಎಂದು ಸಿದ್ದರಾಮಯ್ಯ ತಿಳಿಸಿದ್ದರು.

ಈ ಫಲಿತಾಂಶ ಜನರು ಬಿಜೆಪಿ ಪರವಾಗಿ ಇದ್ದಾರೆ ಎಂದು ಸೂಚಿಸುತ್ತಿದೆ ಎಂದು ನಳಿನ್ ಕುಮಾರ್ ಕಟೀಲ್ ಹೇಳಿರುವ ವಿಚಾರವಾಗಿ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದರು. ಬಿಜೆಪಿ ಪರ ಜನರು ಇದ್ರೆ ಹುಬ್ಬಳ್ಳಿ ಧಾರವಾಡದಲ್ಲಿ ಗೆಲ್ಲಬೇಕಿತ್ತು. ಹಣ ಅಧಿಕಾರ ಅವರ ಪರವಾಗಿತ್ತು. ಬೆಳಗಾವಿಯಲ್ಲಿ ನಮ್ಮ ಶಸಾಸಕರು ಇಲ್ಲ. ಆದ್ರೂ ನಮ್ಮ ಪರವಾಗಿ ಸಿಟ್ ಬಂದಿದೆ. ಕಲ್ಬುರ್ಗಿಯಲ್ಲಿ ಬಿಜೆಪಿ ಗೆದ್ದಿಲ್ಲ, ಅಲ್ಲಿ ಕಾಂಗ್ರೆಸ್ ಗೆದ್ದಿದೆ. ಹಾಗಾದ್ರೆ ಬಿಜೆಪಿ ಪರವಾದ ಅಲೆ ಎಲ್ಲಿದೆ ಎಂದು ಕೇಳಿದ್ದರು.

ಇದನ್ನೂ ಓದಿ: ಅಧಿಕಾರಕ್ಕೆ ಬಂದ ಮೊದಲ ದಿನವೇ ಉಚಿತ ಅಕ್ಕಿ ಘೋಷಿಸಿದ ನಾಯಕ: ಸಿದ್ದರಾಮಯ್ಯಗೆ ಡಿಕೆಶಿ ತಾರೀಪು

ಇದನ್ನೂ ಓದಿ: ಕೊತ್ವಾಲ್ ರಾಮಚಂದ್ರ ತೀರಿಕೊಂಡಾಗ ನಾನು ಪ್ರೈಮರಿ ಸ್ಕೂಲ್​ನಲ್ಲಿದ್ದೆ: ಡಿಕೆ ಶಿವಕುಮಾರ್ ಹೇಳಿಕೆಗೆ ಸಿಟಿ ರವಿ ಟಾಂಗ್

Published On - 8:55 pm, Tue, 7 September 21