ಅಧಿಕಾರಕ್ಕೆ ಬಂದ ಮೊದಲ ದಿನವೇ ಉಚಿತ ಅಕ್ಕಿ ಘೋಷಿಸಿದ ನಾಯಕ: ಸಿದ್ದರಾಮಯ್ಯಗೆ ಡಿಕೆಶಿ ತಾರೀಪು

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮತ್ತು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಪರಸ್ಪರರ ಹೆಸರನ್ನು ಹಲವು ಬಾರಿ ಉಲ್ಲೇಖಿಸಿದರು.

ಅಧಿಕಾರಕ್ಕೆ ಬಂದ ಮೊದಲ ದಿನವೇ ಉಚಿತ ಅಕ್ಕಿ ಘೋಷಿಸಿದ ನಾಯಕ: ಸಿದ್ದರಾಮಯ್ಯಗೆ ಡಿಕೆಶಿ ತಾರೀಪು
ಬೆಂಗಳೂರಿನ ಬ್ಯಾಟರಾಯನಪುರದಲ್ಲಿ ನಡೆದ ಸಮಾರಂಭದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮಾತನಾಡಿದರು.
Follow us
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Sep 07, 2021 | 6:28 PM

ಬೆಂಗಳೂರು: ನಗರದ ಬ್ಯಾಟರಾಯಪುರ ಕ್ಷೇತ್ರದಲ್ಲಿ ಶಾಸಕ ಕೃಷ್ಣಬೈರೇಗೌಡ ಮಂಗಳವಾರ ಆಯೋಜಿಸಿದ್ದ ಬಡವರಿಗೆ ದಿನಸಿ ಕಿಟ್ ನೀಡುವ ಕಾರ್ಯಕ್ರಮದಲ್ಲಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮತ್ತು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಪರಸ್ಪರರ ಹೆಸರನ್ನು ಹಲವು ಬಾರಿ ಉಲ್ಲೇಖಿಸಿದರು. ಈ ಮೂಲಕ ಕಾಂಗ್ರೆಸ್​ ಪಕ್ಷದಲ್ಲಿ ಭಿನ್ನಮತ ತಲೆದೋರಿದೆ ಎಂಬ ಟೀಕೆಗಳಿಗೆ ಪರೋಕ್ಷವಾಗಿ ಉತ್ತರ ನೀಡಿದರು.

ಸಮಾರಂಭದಲ್ಲಿ ಮಾತನಾಡಿದ ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ ಅವರು ಪ್ರಮಾಣ ವಚನ ಸ್ವೀಕರಿಸಿದ ಮೊದಲ ದಿನವೇ ಬಡವರಿಗೆ ಉಚಿತ ಅಕ್ಕಿ ಕೊಡುವ ಘೋಷಣೆ ಮಾಡಿದ್ದರು. ಬಿಜೆಪಿ ಸರ್ಕಾರವು ಈವರೆಗೆ ಇಂಥ ಒಂದಾದರೂ ಕಾರ್ಯಕ್ರಮ ಘೋಷಿಸಲಿಲ್ಲ ಎಂದು ಟೀಕಿಸಿದರು. ಮಕ್ಕಳಿಗೆ ಫೀಸು, ಜನರಿಗೆ ಸಹಾಯ ಮಾಡುವುದು ನಮ್ಮ ಉದ್ದೇಶವಾಗಿತ್ತು. ಅದರಂತೆಯೇ ನಾವು ನಡೆದುಕೊಂಡೆವು. ಆದರೆ ಬಿಜೆಪಿಯವರು ಅಧಿಕಾರಕ್ಕೆ ಬಂದ ಮೇಲೆ ಏನು ಮಾಡಿದರು? ಅಕ್ಕಿ ಕಡಿಮೆ ಮಾಡಿದ್ರು, ಸಾಲ ಮನ್ನಾ ಮಾಡಲಿಲ್ಲ, ಉದ್ಯೋಗ ಕೊಡಲಿಲ್ಲ ಎಂದು ಟೀಕಿಸಿದರು.

ಬೆಂಗಳೂರು ಮಹಾನಗರಪಾಲಿಕೆ, ರಾಜ್ಯದ ವಿವಿಧ ಜಿಲ್ಲಾ ಪಂಚಾಯಿತಿಗಳು, ತಾಲ್ಲೂಕು ಪಂಚಾಯಿತಿ ಚುನಾವಣೆಗಳನ್ನು ಸರ್ಕಾರ ಶೀಘ್ರ ನಡೆಸಲಿ. ಜನರ ತೀರ್ಪಿಗೆ ತಲೆಬಾಗಲು ನಾವು ಸಿದ್ಧರಿದ್ದೇವೆ. ಕಾರ್ಪೊರೇಷನ್ ಚುನಾವಣೆಗೆ ಹಿಂಜರಿಕೆ ಏಕೆ? ಎಲೆಕ್ಷನ್ ಮಾಡಿ ಸ್ವಾಮಿ ನೋಡೋಣ. ಏನೇನೋ ನೆಪ ಹೇಳಿಕೊಂಡು ಬೆಂಗಳೂರು ಚುನಾವಣೆಯನ್ನು ಮುಂದಕ್ಕೆ ಹಾಕ್ತಿರೋದು ಏಕೆ? ಚುನಾವಣೆಯಲ್ಲಿ ಗೆಲ್ಲಲಿ ಅಥವಾ ಸೋಲಲಿ, ಜನರ ಕೈಗೆ ಅಧಿಕಾರ ಸಿಗಬೇಕು ಎನ್ನುವುದು ಕಾಂಗ್ರೆಸ್ ಪಕ್ಷದ ಸಿದ್ಧಾಂತ, ಇದು ನಮ್ಮ ಸಂಕಲ್ಪ ಎಂದರು.

ಇದು ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬಂದ 75ನೇ ವರ್ಷಾಚರಣೆ. ಅಕ್ಟೋಬರ್ ತಿಂಗಳಲ್ಲಿ ನಗರದ ಎಲ್ಲ ವಾರ್ಡ್​ಗಳಲ್ಲೂ ‘ಕಾಂಗ್ರೆಸ್ ನಡಿಗೆ, ಜನರ ಬಳಿಗೆ’ ಸಭೆ ನಡೆಸೋಣ. ರಾಜ್ಯದ ಪ್ರಮುಖ ನಾಯಕರೂ ಇಂಥ ಸಭೆಗಳಲ್ಲಿ ಪಾಲ್ಗೊಳ್ಳುತ್ತೇವೆ ಎಂದು ಘೋಷಿಸಿದರು.

‘ಲಾಕ್​ಡೌನ್​ನಿಂದ ಕಂಗಾಲಾದ ಜನರ ನೆರವಿಗೆ ಬರಬೇಕು ಎಂದು ಯಡಿಯೂರಪ್ಪ ಅವರ ಮನೆಬಾಗಿಲು ತಟ್ಟಿದ್ದು ನಾವು. ಬಡವರಿಗೆ ಜೀವನ ಕನಿಷ್ಠ ₹ 10 ಸಾವಿರ ಕೊಡಿ ಅಂತ ವಿನಂತಿಸಿದ್ದೆವು. ಅವರು ಒಂದು ಸಲ ಮಾತ್ರ ಐದು ಸಾವಿರ ರೂಪಾಯಿ ಕೊಡುವುದಾಗಿ ಘೋಷಿಸಿದ್ದರು. ದೇಶದ ಜನರ ನೆರವಿಗಾಗಿ ₹ 20 ಲಕ್ಷ ಕೋಟಿ ಕೊಡ್ತೀವಿ ಅಂತ ನಿರ್ಮಲಾ ಸೀತಾರಾಮನ್ ಘೋಷಿಸಿದ್ದರು. ಇಲ್ಲಿರುವ ಹೆಣ್ಮಕ್ಕಳಲ್ಲಿ ಒಬ್ಬರಾದರೂ ಹೇಳಿ, ನಿಮಗೆ ದುಡ್ಡು ಸಿಕ್ತಾ’ ಎಂದು ಪ್ರಶ್ನಿಸಿದರು.

ಜನರಿಗೆ ಉಚಿತವಾಗಿ ಲಸಿಕೆ ಕೊಡಬೇಕು ಎಂದು ಒತ್ತಾಯಿಸಿದ್ದು ನಾವು. ಸರ್ಕಾರ ದುಡ್ಡು ಇಲ್ಲ ಎಂದಾಗ ಕಾರ್ಯಕರ್ತರ ನೆರವಿನಿಂದ ನಾವು ಶಾಸಕರು ₹ 100 ಕೋಟಿ ಕೊಡ್ತೀವಿ ಅಂತ ಹೇಳಿದ್ದೆವು. ಆಸ್ಪತ್ರೆಗಳ ಜೊತೆಗೆ ಹೊಂದಾಣಿಕೆ ಮಾಡಿಕೊಳ್ಳಲು ಹೋಗಲು ಸರ್ಕಾರ ಯತ್ನಿಸುತ್ತಿದ್ದಾಗ ನಾವು ವಿರೋಧಿಸಿದೆವು. ಈ ಸರ್ಕಾರಕ್ಕೆ ಕಣ್ಣು, ಕಿವಿ, ಹೃದಯ ಇಲ್ಲ ಎಂದು ಆರೋಪಿಸಿದರು.

ಬಡವರಿಗೆ ಬ್ಯಾಂಕ್ ಬಾಗಿಲು ತೆರೆದವರು ಯಾರು: ಸಿದ್ದರಾಮಯ್ಯ ಪ್ರಶ್ನೆ ಬಡವರು ಊಟ ಮಾಡಲಿ ಅಂತ ಇಂದಿರಾ ಕ್ಯಾಂಟೀನ್ ಮಾಡಿದ್ದೆ. ಆದರೆ ಅದನ್ನು ನಿಲ್ಲಿಸೋಕೆ ಹೋಗಿದ್ದರು. ಈಗ ನೋಡಿದ್ರೆ ಹೆಸರು ಬದಲಿಸ್ತೀವಿ ಅಂತಿದ್ದಾರೆ. ಅಲ್ಲ ಕಣ್ರೀ, ಇಂದಿರಾಗಾಂಧಿ ಬಡವರ ಪರ ಕೆಲಸ ಮಾಡಿಲ್ವಾ? ಬ್ಯಾಂಕ್​ಗಳ ರಾಷ್ಟ್ರೀಕರಣ ಮಾಡಿ, ಬಡವರಿಗೂ ಬ್ಯಾಂಕ್ ಬಾಗಿಲು ತೆರೆಯುವಂತೆ ಮಾಡಿದ್ದು ಯಾರು ಎಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಪ್ರಶ್ನಿಸಿದರು. ಬಿಜೆಪಿ ನಾಯಕ ಸಿ.ಟಿ.ರವಿ ಅವರ ಬಗ್ಗೆ ಏಕವಚನದಲ್ಲಿ ಮಾತನಾಡಿದರು.

ಬಡವರು ಕಷ್ಟದಲ್ಲಿದ್ದಾರೆ, ಅವರ ಅಕೌಂಟ್​ಗಳಿಗೆ ತಲಾ ₹ 10 ಸಾವಿರ ಹಾಕಿಬಿಡಿ ಅಂತ ಹೇಳಿದ್ದೆ. ಒಂದು ವರ್ಷ ಅಭಿವೃದ್ಧಿ ಕೆಲಸ ನಿಲ್ಲಿಸಿದರೂ ಪರವಾಗಿಲ್ಲ, ಬಡವರಿಗೆ ಹೊಟ್ಟೆಗೆ ಊಟ ಕೊಡ್ರಿ ಅಂತ ಹೇಳಿದ್ದೆ. ಇವರು ನೋಡಿದ್ರೆ ಉಚಿತ ಅಕ್ಕಿಯ ಪ್ರಮಾಣ ಕಡಿಮೆ ಮಾಡಿದ್ದಾರೆ. ಇವರಪ್ಪನ ಮನೆಯಿಂದ ಅಕ್ಕಿ ಕೊಡ್ತಿದ್ರಾ ಎಂದು ಆಕ್ರೋಶ ವ್ಯಕ್ತಪಡಿಸಿದರು. ಜನರ ದುಡ್ಡನ್ನು ಜನರಿಗೆ ಕೊಡಲು ನಿಮಗೆ ಹೊಟ್ಟೆ ಉರಿಯಿದೆ. ನಿಮಗೆ ನಾಚಿಕೆ ಆಗಲ್ವಾ? ಎಂದು ಆಕ್ರೋಶ ವ್ಯಕ್ತಪಡಿಸಿದರು.

ನಮ್ಮ ಸರ್ಕಾರದಲ್ಲಿ ಕೃಷ್ಣಭೈರೇಗೌಡರು ಕೃಷಿ ಸಚಿವರಾಗಿದ್ದರು. ರೈತರಿಗೆ ಅನುಕೂಲ ಆಗಬೇಕು ಅಂತ ಕೃಷಿಭಾಗ್ಯ ಯೋಜನೆ ಆರಂಭಿಸಿ 2 ಲಕ್ಷ ಕೃಷಿ ಹೊಂಡ ತೋಡಿಸಿದ್ದರು. ನಮ್ಮ ಕಾಲದಲ್ಲಿ ಒಂದೇ ಒಂದು ದಿನ ಗೊಬ್ಬರ, ಬೀಜ, ಔಷಧಿಗಳ ಕೊರತೆ ಆಗಿರಲಿಲ್ಲ. ರೈತರ ಬಗ್ಗೆ ಕಾಳಜಿಯಿರುವವರಿಗೆ ಮಾತ್ರ ಹೀಗೆ ಕೆಲಸ ಮಾಡಲು ಸಾಧ್ಯ. ಯಾವುದೇ ವಿಷಯ ಮಂಡಿಸುವಾಗ ಅವರು ಅಧ್ಯಯನ ಮಾಡಿಕೊಂಡು ಬಂದು ವಿಷಯ ಮಂಡಿಸುತ್ತಾರೆ ಎಂದು ಹೇಳಿದರು.

ಒಂದು ವರ್ಷ ಏಳು ತಿಂಗಳಲ್ಲಿ ಮುಂದಿನ ವಿಧಾನಸಭೆ ಚುನಾವಣೆ ನಡೆಯಲಿದೆ. ಜನರು ತಕ್ಕ ತೀರ್ಪು ಕೊಡ್ತಾರೆ. ಕರ್ನಾಟಕದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು ಎರಡು ವರ್ಷವಾಯ್ತು. ಯಡಿಯೂರಪ್ಪ ಅವರಿಗೆ ಯಾವತ್ತೂ ಮುಂಬಾಗಿಲಿನಿಂದ ಬರಲೇ ಇಲ್ಲ. ಹಿಂಬಾಗಲಿನಿಂದಲೇ ಬರೋದು. ಈಗ ಹಿಂಬಾಗಿನಿಂದಲೇ ಬಂದು ಅವರನ್ನು ಕಳಿಸಿದ್ದಾರೆ. ನಿನಗೆ ವಯಸ್ಸಾಗಿದೆ, ಬಹಳ ಲೂಟಿ ಹೊಡೆಇದ್ದೀ ಹೋಗು ಅಂತ ಕಳಿಸಿದ್ದಾರೆ ಎಂದು ಲೇವಡಿ ಮಾಡಿದರು.

ಬೊಮ್ಮಾಯಿ ಸಹ ಯಡಿಯೂರಪ್ಪ ಆಪ್ತವಲಯದಲ್ಲಿಯೇ ಇದ್ದವರು. ಅವರಿಂದಲೂ ಏನನ್ನೂ ನಿರೀಕ್ಷೆ ಮಾಡಲು ಆಗಲ್ಲ. ಕರ್ನಾಟಕದ ಆರ್ಥಿಕ ಪರಿಸ್ಥಿತಿಯನ್ನು ಇವರು ಹಾಳು ಮಾಡಿದ್ದಾರೆ. ಕಾರಣ ಕೇಳಿದ್ರೆ ಕೊರೊನಾ ಅಂತ ಹೇಳ್ತಾರೆ. ಕೊರೊನಾಗೆ ಐದಾರು ಸಾವಿರ ಕೋಟಿ ಖರ್ಚು ಮಾಡಿರಬಹುದು. ಕರ್ನಾಟಕದ ಒಂದು ವರ್ಷದ ಬಜೆಟ್ ₹ 1.42 ಲಕ್ಷ ಕೋಟಿ. ಇವರ ಭ್ರಷ್ಟಾಚಾರ ಮತ್ತು ದುರಾಡಳಿತ ರಾಜ್ಯದ ಹಣಕಾಸು ಪರಿಸ್ಥಿತಿಯನ್ನು ಸರಿಯಾಗಿ ನಿಭಾಯಿಸದೆ ಇದ್ದುದು ಮುಖ್ಯ ಕಾರಣ ಎಂದರು.

ನಾನು ಮುಖ್ಯಮಂತ್ರಿಯಾಗಿದ್ದ 5 ವರ್ಷ ಹಣಕಾಸು ಇಲಾಖೆಯ ಜವಾಬ್ದಾರಿಯನ್ನೂ ಹೊತ್ತಿದ್ದೆ. ಐದು ವರ್ಷದಲ್ಲಿ ₹ 1.25 ಲಕ್ಷ ಕೋಟಿ ಸಾಲ ಮಾಡಿದ್ದೆ. ಯಡಿಯೂರಪ್ಪ ಒಂದೆ ವರ್ಷದಲ್ಲಿ 1.45 ಲಕ್ಷ ಕೋಟಿ ಸಾಲ ಮಾಡಿದ್ದಾರೆ. ಇವರಿಗೆ ಯಾವ ನೈತಿಕತೆ ಇದೆ ಮಾತಾಡ್ಲೀಕೆ ಎಂದು ಪ್ರಶ್ನಿಸಿದರು. ಬಡವರು ಕೊರೊನಾದಿಂದ ಸಂಕಷ್ಟ ಸ್ಥಿತಿಯಲ್ಲಿದ್ದಾರೆ. ಕೈಲಾದಷ್ಟು ಸಹಾಯ ಮಾಡಿ ನಾನು ಮತ್ತು ಕಾಂಗ್ರೆಸ್ ನಾಯಕರಾದ ಡಿ.ಕೆ.ಶಿವಕುಮಾರ್ ನಮ್ಮ ಶಾಸಕರು ಮತ್ತು ನಾಯಕರಲ್ಲಿ ಮನವಿ ಮಾಡಿದ್ದೆವು. ಅದರಂತೆ ಈ ಕಾರ್ಯಕ್ರಮ ನಡೆಯುತ್ತಿದೆ. ವಾಸ್ತವವಾಗಿ ಇದು ಸರ್ಕಾರದ ಕೆಲಸ ಎಂದು ಅವರು ತಿಳಿಸಿದರು.

ಸಿದ್ದರಾಮಯ್ಯ ಅವರು ತಾವು ಮಾತನಾಡುವಾಗ ಡಿ.ಕೆ.ಶಿವಕುಮಾರ್ ಅವರ ಹೆಸರನ್ನು ಎರಡೂ ಮೂರು ಸಲ ಉಲ್ಲೇಖಿಸಿ, ನಮ್ಮ ನಾಯಕ ಎಂದು ಹೇಳಿದರು. ಈಚಿನ ದಿನಗಳಲ್ಲಿ ಡಿಕೆಶಿ ಮತ್ತು ಸಿದ್ದರಾಮಯ್ಯ ನಡುವೆ ಎಲ್ಲವೂ ಸರಿಯಿಲ್ಲ ಎಂಬ ಮಾತುಗಳು ಕೇಳಿ ಬರುತ್ತಿರುವ ಹಿನ್ನೆಲೆಯಲ್ಲಿ ಇಬ್ಬರೂ ನಾಯಕರ ಇಂದಿನ ಭಾಷಣ ಮಹತ್ವ ಪಡೆದುಕೊಂಡಿದೆ.

(Congress leaders DK Shivakumar and Siddaramaiah praise one another in a function at Byatarayanapura)

ಇದನ್ನೂ ಓದಿ: ಪಾಲಿಕೆ ಫಲಿತಾಂಶ ಮುಂದಿನ ಚುನಾವಣೆಗೆ ದಿಕ್ಸೂಚಿ ಅಲ್ಲ; ಪಂಚಾಯತ್ ಚುನಾವಣೆಯಲ್ಲಿ ನಾವೇ ಗೆಲ್ಲುತ್ತೇವೆ: ಸಿದ್ದರಾಮಯ್ಯ

ಇದನ್ನೂ ಓದಿ: ಕಾಂಗ್ರೆಸ್​ನಲ್ಲಿ ಸಿದ್ದರಾಮಯ್ಯಗೆ ಪರ್ಯಾಯವಾಗಿ ಹಿಂದುಳಿದ ವರ್ಗಗಳ ಮನ ಗೆಲ್ಲಲು ತಂತ್ರ ಹೂಡಿದ ಡಿಕೆ ಶಿವಕುಮಾರ್!

ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಚಿಟ್ಟಾಣಿ ಆಸೆ ಈಡೇರಿಸಲು ಯಕ್ಷಗಾನದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ
ಚಿಟ್ಟಾಣಿ ಆಸೆ ಈಡೇರಿಸಲು ಯಕ್ಷಗಾನದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ
Daily Devotional: ಮಾಘ ಸ್ನಾನದ ಹಿಂದಿನ ರಹಸ್ಯ ಹಾಗೂ ಮಹತ್ವ ತಿಳಿಯಿರಿ
Daily Devotional: ಮಾಘ ಸ್ನಾನದ ಹಿಂದಿನ ರಹಸ್ಯ ಹಾಗೂ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
ಪ್ರಿಯಕರನೊಂದಿಗೆ ಹೆಂಡತಿ ಹೋಗುತ್ತಿದ್ದ ಕಾರಿನ ಮೇಲೆ ಹತ್ತಿ ಕುಳಿತ ಗಂಡ!
ಪ್ರಿಯಕರನೊಂದಿಗೆ ಹೆಂಡತಿ ಹೋಗುತ್ತಿದ್ದ ಕಾರಿನ ಮೇಲೆ ಹತ್ತಿ ಕುಳಿತ ಗಂಡ!
ಅಯ್ಯೋ.. ಸಿಸಿಟಿವಿ ರಿಪೇರಿ ಮಾಡಲು ಬಂದಿದ್ದವನ ವಜ್ರದ ಉಂಗುರ ಬಿಡದ ಖದೀಮರು
ಅಯ್ಯೋ.. ಸಿಸಿಟಿವಿ ರಿಪೇರಿ ಮಾಡಲು ಬಂದಿದ್ದವನ ವಜ್ರದ ಉಂಗುರ ಬಿಡದ ಖದೀಮರು