ಬೆಂಗಳೂರು: ವಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ನ ಟ್ರಬಲ್ ಶೂಟರ್ ಡಿ.ಕೆ.ಶಿವಕುಮಾರ್ ನಡುವೆ ಹಲವು ದಿನಗಳಿಂದ ಇದ್ದ ಶೀತಲಸಮರ ಇದೀಗ ಮತ್ತೆ ಮುನ್ನೆಲೆಗೆ ಬಂದಿದೆ.
ಈ ಕುರಿತು ಪ್ರತಿಕ್ರಿಯಿಸಿದ ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ ಅವರು ನನ್ನ ಬಗ್ಗೆ ಹಾಗೆ ಮಾತನಾಡಲು ಸಾಧ್ಯವಿಲ್ಲ. ವಿಪಕ್ಷ ನಾಯಕ ಸಿದ್ದರಾಮಯ್ಯಗೆ ನನ್ನ ಮೇಲೆ ಪ್ರೀತಿ ಇದೆ. ಆದರೆ ಯಾರೋ ಸಿದ್ದರಾಮಯ್ಯನವರ ದಾರಿ ತಪ್ಪಿಸಿದ್ದಾರೆ ಎಂದರು. ಸ್ವಾಗತದ ವೇಳೆ ನನಗೆ ಎಲ್ಲಾ ತರಹದ ಬಾವುಟ ಕೊಟ್ಟಿದ್ದರು, ಹೀಗಾಗಿ ನಾನು ಬಾವುಟ ಹಿಡಿದುಕೊಂಡಿದ್ದೆ. ಸಿದ್ದರಾಮಯ್ಯನವರು ಹಿರಿಯರು, ನನಗೆ ಸಲಹೆ ನೀಡ್ತಾರೆ. ಆದ್ರೆ ನಾನು ಹುಟ್ಟು ಕಾಂಗ್ರೆಸ್ಸಿಗ ಎಂದು ಡಿ.ಕೆ.ಶಿವಕುಮಾರ್ ತೀಕ್ಷವಾಗಿ ಪ್ರತಿಕ್ರಿಯೆ ನೀಡಿದ್ದಾರೆ.
ಸ್ವಾಗತದ ವೇಳೆ ಡಿಕೆಶಿ ಜೆಡಿಎಸ್ ಬಾವುಟ ಹಿಡಿದುಕೊಂಡಿದ್ದಕ್ಕೆ ಸಿದ್ದರಾಮಯ್ಯ ಬೇಸರ ವ್ಯಕ್ತಪಡಿಸಿದ್ದರು. ಹೀಗಾಗಿ ಸಿದ್ದರಾಮಯ್ಯ ವಿರುದ್ಧ ಡಿ.ಕೆ.ಶಿವಕುಮಾರ್ ಆಪ್ತರು ಗರಂ ಆಗಿದ್ದರು. ಕಾಂಗ್ರೆಸ್ ಹೈಕಮಾಂಡ್ ಜೊತೆ ಡಿಕೆಶಿ ಸಂಬಂಧ ಚೆನ್ನಾಗಿದೆ. ಅಲ್ಲದೆ, ಡಿಕೆಶಿಗೆ ಸಿಕ್ಕ ಅದ್ಧೂರಿ ಸ್ವಾಗತದಿಂದ ಸಿದ್ದರಾಮಯ್ಯ ಉದ್ದೇಶಪೂರ್ವಕವಾಗಿ ಮಾತನಾಡಿದ್ದಾರೆ ಎಂದು ಬೆಂಬಲಿಗರು ಡಿಕೆಶಿ ಬಳಿ ಅಸಮಾಧಾನ ವ್ಯಕ್ತಪಡಿಸಿದ್ದರು. ಸದ್ಯಕ್ಕೆ ಏನೂ ಮಾತನಾಡಬೇಡಿ ಸುಮ್ಮನಿರಿ, ಪರ ವಿರೋಧವಾಗಿ ಈಗ ಮಾತಾಡಬೇಡಿ ಎಂದು ಆಪ್ತರಿಗೆ ಡಿಕೆಶಿ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.
Published On - 2:15 pm, Mon, 28 October 19