AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಿಮ್ಮ ಮಗನ ನೇತೃತ್ವದಲ್ಲಿ ನಡೆದ ದಸರಾ ಹೇಗಾಗಿತ್ತು ಸರ್? : ಯತೀಂದ್ರ ಮುಖ ನೋಡಿದ ಸಿದ್ಧರಾಮಯ್ಯ

ನಿಮ್ಮ ಮಗನ ನೇತೃತ್ವದಲ್ಲಿ ನಡೆದ ದಸರಾ ಹೇಗಾಗಿತ್ತು ಸರ್? : ಯತೀಂದ್ರ ಮುಖ ನೋಡಿದ ಸಿದ್ಧರಾಮಯ್ಯ

ರಾಮ್​, ಮೈಸೂರು
| Edited By: |

Updated on:Oct 23, 2026 | 4:35 PM

Share

ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಸುತ್ತೂರು ಶಾಖಾ ಮಠಕ್ಕೆ ಭೇಟಿ ನೀಡಿ ಸ್ವಾಮೀಜಿಗಳ ಆಶೀರ್ವಾದ ಪಡೆದರು. ಮೈಸೂರಿನಲ್ಲಿ ತಮ್ಮ ವಾಸ್ತವ್ಯ ಹಾಗೂ ಮಗ ಯತೀಂದ್ರ ನೇತೃತ್ವದಲ್ಲಿ ನಡೆದ ದಸರಾ ಕುರಿತು ಪ್ರತಿಕ್ರಿಯಿಸಿದರು. ದಸರಾ ನಾಡಹಬ್ಬವಾಗಿದ್ದು, ಚೆನ್ನಾಗಿ ನಡೆದಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಈ ಬಗ್ಗೆ ವಿಡಿಯೋ ಇಲ್ಲಿದೆ ನೋಡಿ

ಮೈಸೂರು, ಅ,23: ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಬಹಳ ದಿನಗಳ ಬಳಿಕ ಸುತ್ತೂರು ಶಾಖಾ ಮಠಕ್ಕೆ ಭೇಟಿ ನೀಡಿದರು. ಈ ಹಿಂದೆ ದಸರಾ ಹಾಗೂ ವಾರ್ಷಿಕ ಕಾರ್ಯಕ್ರಮಗಳಿಗೆ ಆಹ್ವಾನಿಸಿದ್ದರೂ, ಬರಲು ಸಾಧ್ಯವಾಗಿರಲಿಲ್ಲ ಎಂದು ಅವರು ತಿಳಿಸಿದರು. ಇಂದು ಮಠಕ್ಕೆ ಭೇಟಿ ನೀಡಿ ಸ್ವಾಮೀಜಿಯವರ ಆಶೀರ್ವಚನ ಪಡೆದು, ಅವರೊಂದಿಗೆ ಮಾತುಕತೆ ನಡೆಸಿದರು. ಅಲ್ಲದೆ, ಮಠಕ್ಕೆ ಬಂದ ಜನರನ್ನು ಭೇಟಿಯಾದರು. ಮೈಸೂರಿನಲ್ಲಿ ದೀರ್ಘಕಾಲ ಉಳಿದುಕೊಂಡಿರುವ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಿದ್ಧರಾಮಯ್ಯ, ಮೈಸೂರು ತಮ್ಮ ಸ್ವಂತ ಮನೆಯಾಗಿದೆ ಎಂದು ಹೇಳಿದರು. ತಮ್ಮ ಮಗ ಯತೀಂದ್ರ 11 ದಿನಗಳ ನವರಾತ್ರಿ ಅವಧಿಯಲ್ಲಿ ಇಲ್ಲೇ ಇದ್ದ ಕಾರಣ ತಾವು ಸಹ ಮೈಸೂರಿನಲ್ಲಿ ಉಳಿದುಕೊಂಡಿದ್ದಾಗಿ ಸ್ಪಷ್ಟಪಡಿಸಿದರು.
ಮಗ ಯತೀಂದ್ರ ನೇತೃತ್ವದಲ್ಲಿ ನಡೆದ ದಸರಾ ಹೇಗಾಯಿತು ಎಂದು ಕೇಳಿದಾಗ, ತಾವು ಹೊರಗಡೆಯಿಂದ ನೋಡಿಲ್ಲ ಎಂದು ಹೇಳಿ, “ನೀವೇ ಹೇಳಬೇಕು” ಎಂದು ಸುದ್ದಿಗಾರರಿಗೆ ಮರು ಪ್ರಶ್ನೆ ಹಾಕಿದರು. ಬಳಿಕ ಸುದ್ದಿಗಾರರು “ಚೆನ್ನಾಗಿ ಆಯ್ತು ದಸರಾ, ಬಹಳ ಚೆನ್ನಾಗಿ ಆಗಿದೆ” ಎಂದು ಹೇಳಿದಾಗ, ಸಿದ್ಧರಾಮಯ್ಯ ಅದನ್ನು ಒಪ್ಪಿಕೊಂಡರು. ಜನ ಬಂದಿದ್ದಾರೆ, ತಮ್ಮ ಪ್ರತಿಕ್ರಿಯೆ ಹೇಗಿತ್ತು ಎಂದು ಕೇಳಿದಾಗ, ದಸರಾ ಯಾವಾಗಲೂ ನಾಡಹಬ್ಬವಾಗಿದ್ದು, ನಮ್ಮ ಸಂಸ್ಕೃತಿ, ಕನ್ನಡ ನಾಡಿನ ಅಭಿವೃದ್ಧಿ, ಸಂಗೀತ, ನಾಟಕ, ನೃತ್ಯ ಇವುಗಳ ಬಗ್ಗೆ ವ್ಯಕ್ತಪಡಿಸುವ ಕೆಲಸ ಎಂದರು.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published on: Oct 23, 2026 04:35 PM

Follow Us
ರಾಮ್​, ಮೈಸೂರು
ರಾಮ್​, ಮೈಸೂರು

ರಾಮ್ ಮೈಸೂರು ಪತ್ರಕರ್ತನಾಗಿ 20 ವರ್ಷದ ಅನುಭವ. ಕಳೆದ 14 ವರ್ಷಗಳಿಂದ ಟಿವಿ9 ಕನ್ನಡದ ಮೈಸೂರು ಜಿಲ್ಲಾ ಪ್ರತಿನಿಧಿಯಾಗಿ ಕೆಲಸ ನಿರ್ವಹಣೆ. ರಾಜ್ಯದ ವಿಧಾನಸಭಾ ಲೋಕಸಭಾ ಚುನಾವಣೆಯ ವಿಶೇಷ ವರದಿ ಹಾಗೂ ರಾಜ್ಯದ ವಿವಿಧ ಕ್ಷೇತ್ರಗಳ ಉಪಚುನಾವಣಾ ವರದಿ, ಕೇರಳದ ವಯನಾಡು ಲೋಕಸಭಾ ಕ್ಷೇತ್ರದ ರಾಹುಲ್ ಗಾಂಧಿ ಸ್ಪರ್ಧೆ ಮಾಡಿದ್ದ ಚುನಾವಣಾ ವರದಿ ಸೇರಿದಂತೆ ಹಲವು ಚುನಾವಣೆಯ ವರದಿಯ ಅನುಭವ. ಮುಂಬೈ ಮಹಾಮಳೆಯ ಕವರೇಜ್, ಕೊಡಗು ಜಿಲ್ಲೆಯ ಗುಡ್ಡ ಕುಸಿತ, ಸೇರಿದಂತೆ ಹಲವು ಸ್ಟಿಂಗ್ ಕಾರ್ಯಾಚರಣೆ, ಸಾಮಾಜಿಕ‌ ಸಮಸ್ಯೆ ಹಾಗೂ ಮಾನವೀಯ ಕಳಕಳಿಯುಳ್ಳ ವರದಿ ಮಾಡಿದ ಅನುಭವ.

Read More