Narendra Modi: ಇದೇನಾ ಡಬಲ್ ಇಂಜಿನ್ ಸರ್ಕಾರದ ಸಾಧನೆ? ಎಂದು ಟ್ವೀಟ್​​ ಮೂಲಕ ಪ್ರಧಾನಿ ಮೋದಿಗೆ ಸಿದ್ದರಾಮಯ್ಯ ಸರಣಿ ಪ್ರಶ್ನೆ

Siddaramaiah Tweet: ಜಾಗತಿಕ ಹಸಿವಿನ ಸೂಚ್ಯಂಕದಲ್ಲಿ ಭಾರತ 121 ದೇಶಗಳ ಪೈಕಿ 107 ನೇ ಸ್ಥಾನದಲ್ಲಿದೆ. ಬಹುದೊಡ್ಡ ದುರಂತವೆಂದರೆ ನಮಗಿಂತ ಮೇಲೆ ಇಥಿಯೋಪಿಯ, ಕೀನ್ಯಾ, ಸುಡಾನ್ ದೇಶಗಳಿವೆ. ಇದಕ್ಕೆ ಹೊಣೆ ಯಾರು? ಎಂಬುದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪ್ರಶ್ನೆಯಾಗಿದೆ.

Narendra Modi: ಇದೇನಾ ಡಬಲ್ ಇಂಜಿನ್ ಸರ್ಕಾರದ ಸಾಧನೆ? ಎಂದು ಟ್ವೀಟ್​​ ಮೂಲಕ ಪ್ರಧಾನಿ ಮೋದಿಗೆ ಸಿದ್ದರಾಮಯ್ಯ ಸರಣಿ ಪ್ರಶ್ನೆ
ಬೆಂಗಳೂರಿನಲ್ಲಿ ಪ್ರಧಾನಿ ಮೋದಿ: ಸರಣಿ ಪ್ರಶ್ನೆ ಎತ್ತಿದ ಕಾಂಗ್ರೆಸ್​ ಶಾಸಕಾಂಗ ನಾಯಕ ಸಿದ್ದರಾಮಯ್ಯ
Updated By: ಸಾಧು ಶ್ರೀನಾಥ್​

Updated on: Nov 11, 2022 | 12:49 PM

ಬೆಂಗಳೂರು: ಬೆಂಗಳೂರಿಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ (Narendra Modi) ಆಗಮನ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿಗೆ ಕಾಂಗ್ರೆಸ್​ ಶಾಸಕಾಂಗ ನಾಯಕ ಸಿದ್ದರಾಮಯ್ಯ (Siddaramaiah) ಸರಣಿ ಪ್ರಶ್ನೆ ಕೇಳಿದ್ದಾರೆ. 2014ರವರೆಗೆ ದೇಶದ ಮೇಲಿದ್ದ ಒಟ್ಟು ಸಾಲ 53 ಲಕ್ಷ ಕೋಟಿ ರೂ. ಈಗ ದೇಶದ ಮೇಲಿನ ಒಟ್ಟು ಸಾಲ 155 ಲಕ್ಷ ಕೋಟಿ ರೂಪಾಯಿ. ದೇಶ ದಿವಾಳಿಯತ್ತ ಸಾಗಲು ಕಾರಣ ಯಾರು? ಎಂದು ಸಿದ್ದರಾಮಯ್ಯ ಪ್ರಶ್ನೆ ಎತ್ತಿದ್ದಾರೆ. 2018ಕ್ಕೆ ಮೊದಲು 2.42 ಲಕ್ಷ ಕೋಟಿ ರೂ. ಇದ್ದ ರಾಜ್ಯದ ಸಾಲ ಈ ವರ್ಷದ ಕೊನೆ ಹೊತ್ತಿಗೆ 5.40 ಲಕ್ಷ ಕೋಟಿಗೆ ಏರಿಕೆಯಾಗಲಿದೆ. ಇದೇನಾ ಡಬಲ್ ಇಂಜಿನ್ ಸರ್ಕಾರದ ಸಾಧನೆ? ಎಂದು ಟ್ವೀಟ್​​ ಮೂಲಕ ಮೋದಿಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಪ್ರಶ್ನೆ ಮಾಡಿದ್ದಾರೆ. #AnswerMadiModi ಎಂಬ ಹ್ಯಾಷ್​ ಟ್ಯಾಗ್​ ಬಳಸಿ, ಕರ್ನಾಟಕ ಬಿಜೆಪಿಗೆ (Karnataka BJP) @BJP4Karnataka ಟ್ಯಾಗ್​ ಮಾಡಿ ಸಿದ್ದರಾಮಯ್ಯ ತಮ್ಮ ಅಧಿಕೃತ ಖಾತೆಯಿಂದ ಈ ಪ್ರಶ್ನೆಗಳನ್ನು ಎಸೆದಿದ್ದಾರೆ.

2014 ಕ್ಕಿಂತ ಮೊದಲು ರೂಪಾಯಿಯ ಮೌಲ್ಯ ಡಾಲರಿನ ಎದುರು ಸರಾಸರಿ 58 ರೂ. ಇದ್ದದ್ದು, ಈಗ 82.50 ರೂ. ಗಳಿಗೆ ಕುಸಿಯಲು ಯಾರು ಕಾರಣ? ಜಾಗತಿಕ ಹಸಿವಿನ ಸೂಚ್ಯಂಕದಲ್ಲಿ ಭಾರತ 121 ದೇಶಗಳ ಪೈಕಿ 107 ನೇ ಸ್ಥಾನದಲ್ಲಿದೆ. ಬಹುದೊಡ್ಡ ದುರಂತವೆಂದರೆ ನಮಗಿಂತ ಮೇಲೆ ಇಥಿಯೋಪಿಯ, ಕೀನ್ಯಾ, ಸುಡಾನ್ ದೇಶಗಳಿವೆ. ಇದಕ್ಕೆ ಹೊಣೆ ಯಾರು? ಎಂಬುದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪ್ರಶ್ನೆಯಾಗಿದೆ.

ಸಿದ್ದರಾಮಯ್ಯ ಟ್ವೀಟ್ ಪ್ರಶ್ನಾವಳಿ ಹೀಗಿದೆ:

ಸರ್ಕಾರದ ದುಡ್ಡನ್ನು ಹೇಗೆ ಉಳಿಸಬೇಕು-ಬಳಸಬೇಕು ಅನ್ನೋದು ಬೇಸಿಕ್ ಕಾಮನ್ ಸೆನ್ಸ್: ಬಿಜೆಪಿಯವರು ಅರ್ಜೆಂಟ್ ನಲ್ಲಿದ್ದಾರೆ! -ಡಿ ಕೆ ಶಿವಕುಮಾರ್

ಬೆಂಗಳೂರು: ಪ್ರಧಾನ ಮಂತ್ರಿ ನರೇಂದ್ರ ಮೋದಿ ಬೆಂಗಳೂರಿಗೆ ಭೇಟಿ ಹಿನ್ನೆಲೆಯಲ್ಲಿ ಮತ್ತು ಏರ್ ಪೋರ್ಟ್ ನಲ್ಲಿ ಕೆಂಪೇಗೌಡ ಪ್ರತಿಮೆ ನಿರ್ಮಾಣ ವಿಚಾರ ಮುಂದಿಟ್ಟುಕೊಂಡು ಆಡಳಿತಾರೂಢ ಬಿಜೆಪಿ ಪಕ್ಷವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಪ್ರತಿಮೆ ನಿರ್ಮಾಣ ಏರ್ ಪೋರ್ಟ್ ಅಥಾರಿಟಿಯಿಂದ ಆಗಬೇಕಿತ್ತು ಎಂಬ ವಿಚಾರವನ್ನು ನಾನು ಮೊದಲೇ ಹೇಳಿದ್ದೆ, ಅದು ಈಗ ಹೇಳ್ತಿರೋದಲ್ಲ. ಬೇಕಿದ್ರೆ ನನ್ನ ಬೈಟ್ ಪಾಯಿಂಟ್ಸ್ ತೆಗೆದು ನೋಡಲಿ. ಏರ್ ಪೋರ್ಟ್ ನವರೇ ಪ್ರತಿಮೆ ನಿರ್ಮಾಣ ಮಾಡ್ತಾ ಇದ್ರು. 50-60 ಕೋಟಿ ರೂಪಾಯಿ ಹಣ ಖರ್ಚು ಮಾಡುವುದು ಏರ್ ಪೋರ್ಟ್ ನವರಿಗೆ ದೊಡ್ಡ ವಿಚಾರ ಅಲ್ಲ. ಏರ್ ಪೋರ್ಟ್ ಆವರಣ, ಅವರೇ ಮಾಡಬೇಕಿತ್ತು. ಇದು ಬೇಸಿಕ್ ಕಾಮನ್ ಸೆನ್ಸ್. ಆದರೆ ಬಿಜೆಪಿಯವರು ಏನೇನೋ ಲೆಕ್ಕಾಚಾರ ಹಾಕಿಕೊಂಡು ಮಾಡ್ತಿದ್ದಾರೆ. ಸರ್ಕಾರದ ದುಡ್ಡನ್ನು ಹೇಗೆ ಉಳಿಸಬೇಕು-ಬಳಸಬೇಕು ಅನ್ನೋದು ಬೇಸಿಕ್ ಕಾಮನ್ ಸೆನ್ಸ್. ಇವರು ಏನೋ ದೊಡ್ಡ ಹೆಸರು ಮಾಡಿಕೊಳ್ಳಬೇಕು ಅಂತ ಬಹಳ ಅರ್ಜೆಂಟ್ ನಲ್ಲಿದ್ದಾರೆ ಎಂದು ಕಿಡಿಕಿಡಿಯಾಗಿದ್ದಾರೆ.

ಮೋದಿ ಒಂದು ದಿನದ ಕಾರ್ಯಕ್ರಮಕ್ಕೆ 48 ಕೋಟಿ ರೂ ಖರ್ಚು ವಿಚಾರ ಮಾತನಾರುವ ಡಿ ಕೆ ಶಿವಕುಮಾರ್ ಅವರು ನೋಡ್ರಿ, ತನ್ನ ವೈಭವ ಪಾರ್ಟಿ ವೈಭವ ಅದಕ್ಕಾಗಿ ಎಷ್ಟು ಖರ್ಚಾಗ್ತಿದೆ ಅನ್ನೋದಕ್ಕೆ ನಿಮ್ಮ ಬಳಿಯೇ ಮಾಹಿತಿಯಿದೆ. ಏನು ವೈಭವ ಮಾಡಿಕೊಳ್ಳಲಿ, ಎಷ್ಟೇ ಜನ ಕರೆಸಲಿ, ಏನೇ ಮಾಡಿದರೂ ಜನ ಇವರನ್ನು ಕಿತ್ತೊಗೆಯಬೇಕು ಅಂತ ಸಂಕಲ್ಪ ಮಾಡಿದ್ದಾರೆ. ಇನ್ನು, ಮೋದಿ ಹೋಗುವ ರಸ್ತೆ ಮಾತ್ರ ಸರಿಯಾಗಿದೆ ಎಂಬ ವಿಚಾರ, ಅವರ ನಾಯಕರ ಸಲುವಾಗಿ ಮಾಡಿದ್ದಾರೆ ಹೊರತು ಜನರ ಸಲುವಾಗಿ ಮಾಡಿಲ್ಲ. ಯುವಕರೇ ರಸ್ತೆ ಗುಂಡಿಗಳಲ್ಲಿ ಹೋಮ ಹವನ ಶುರು ಮಾಡ್ತಾರೆ ಎಂದು ಶಿವಕುಮಾರ್ ಹೇಳಿದ್ದಾರೆ.

ಪ್ರಧಾನಿ ನರೇಂದ್ರ ಮೋದಿಗೆ ಕೆಪಿಸಿಸಿಯಿಂದ ಪತ್ರ ವಿಚಾರ ಬೆಂಗಳೂರಿನಲ್ಲಿ ಪ್ರಸ್ತಾಪಿಸಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಾವು ಬರೆದ ಪತ್ರಕ್ಕೆ ಉತ್ತರ ಕೊಡ್ತಾರೆ ಅನ್ನೋ ವಿಶ್ವಾಸವಿದೆ. ಇನ್ನೊಬ್ಬರು ಲಂಚಕ್ಕೆ ಬೇಸತ್ತು ದಯಾಮರಣ ಕೋರಿ ಪತ್ರ ಬರೆದಿದ್ದಾರೆ. ಒಂದು ಭ್ರಷ್ಟ ಆಡಳಿತವನ್ನು ಸ್ವಚ್ಛ ಮಾಡಬೇಕು ಎಂದ ಡಿಕೆಶಿ, ಮೋದಿ ತಮ್ಮ ಪಕ್ಷದ ವೈಭವಕ್ಕೆ ಎಲ್ಲವನ್ನೂ ಮಾಡಿಕೊಳ್ತಿದ್ದಾರೆ. ಪತ್ರಕ್ಕೆ ಉತ್ತರ ಬಂದಿಲ್ಲ ಅಂದ್ರೆ ಮುಂದಿನ ನಿರ್ಧಾರ ಮಾಡ್ತೇವೆ. ನಮ್ಮ ಮುಂದಿನ ಹೋರಾಟದ ಬಗ್ಗೆ ಈಗಲೇ ಹೇಳುವುದಿಲ್ಲ ಎಂದು ಮಾರ್ಮಿಕವಾಗಿ ಹೇಳಿದರು.

Published On - 12:34 pm, Fri, 11 November 22