Soldier: ಯೋಧನಿಂದ ವಿಧವೆ ಮಹಿಳೆಗೆ ವಂಚನೆ -ಬಾಳು ಕೊಡೊದಾಗಿ ತಾಳಿಕಟ್ಟಿರುವ ವಿಚಾರ ಮುಚ್ಚಿಟ್ಟು, 2ನೆ ಮದುವೆಗೆ ಸಿದ್ಧತೆ!
Second marriage: ಯೋಧನ ವಂಚನೆ ಬಗ್ಗೆ ಮಹಿಳೆ ಮಾಹಿತಿ ನೀಡುತ್ತಲೆ ಮದುವೆ ಮಂಟಪದಲ್ಲಿ ಅಲ್ಲೋಲಕಲ್ಲೋಲ ಪರಿಸ್ಥಿತಿ ಸೃಷ್ಟಿಯಾಯಿತು. ಮಹಿಳೆಯ ಹೇಳಿಕೆ ಸಂಭ್ರಮದಲ್ಲಿದ್ದವರಿಗೆ ಶಾಕ್ ನೀಡಿತು.
ಹಾಸನ: ವಿಧವೆಯ ಜೊತೆ ಮಧುವೆಯಾಗಿರೊ ವಿಚಾರ ಮುಚ್ಚಿಟ್ಟು (cheat) ಎರಡನೆ ಮದುವೆ (marriage) ತಯಾರಿ ನಡೆಸಿದ್ದ ಯೋಧ ಕಿರಣ್ ಕುಮಾರ್ ವಿರುದ್ದ ವಂಚನೆ ಆರೋಪ ಕೇಳಿಬಂದಿದೆ. ಹಾಸನದ ವಿಧವೆ ಮಹಿಳೆಗೆ ಬಾಳು ಕೊಡೊದಾಗಿ ತಾಳಿಕಟ್ಟಿ, ಈ ವಿಚಾರ ಮುಚ್ಚಿಟ್ಟು ಬೇರೊಂದು ಮದುವೆ ಮಾಡಿಕೊಳ್ಳುತ್ತಿದ್ದ ಮುಹೂರ್ತದ ವೇಳೆ ಮೊದಲ ಪತ್ನಿ ಬಂದು ಮದುವೆ ನಿಲ್ಲಿಸಿದ್ದಾರೆ. ಹಾಸನ ನಗರದ (hassan) ಹೊರ ವಲಯದ ಬೂವನಹಳ್ಳಿ ಬಳಿಯ ಕಲ್ಯಾಣ ಮಂಟಪದಲ್ಲಿ ನಿನ್ನೆ ಈ ಘಟನೆ ನಡೆದಿದೆ. ಭಾರತೀಯ ಸೇನೆಯಲ್ಲಿ ಸೈನಿಕನಾಗಿರೋ (Indian army (soldier) ಕಿರಣ್ ಕುಮಾರ್ ಎರಡು ವರ್ಷಗಳಿಂದ ತನ್ನನ್ನ ಮದುವೆಯಾಗೋದಾಗಿ ನಂಬಿಸಿದ್ದಾಗಿ ಮಹಿಳೆ (widow) ಆರೋಪ ಮಾಡಿದ್ದಾರೆ.
2ನೆ ಮದುವೆ ನಿಲ್ಲಿಸಿದ ನವ ವಧು ಮನೆಯವರು:
ಆರು ತಿಂಗಳ ಹಿಂದೆ ಮನೆಯೊಳಗೇ ದೇವರ ಮುಂದೆ ತಾಳಿ ಕಟ್ಟಿ ಈಗ ಮತ್ತೊಂದು ಮದುವೆ ಆಗುತ್ತಿದ್ದಾರೆಂಬುದು ಮಹಿಳೆಯ ಆರೋಪವಾಗಿದೆ. ಮದುವೆ ಸಮಯಕ್ಕೆ ಕಲ್ಯಾಣ ಮಂಟಪಕ್ಕೆ ಬಂದು ಮಹಿಳೆ ಗಲಾಟೆ ಮಾಡಿದ್ದಾರೆ. ಮಹಿಳೆ ಬಂದು, ವರ (ಯೋಧ) ಕಿರಣ್ ಕುಮಾರ್ ವಿಚಾರ ಬಹಿರಂಗ ಮಾಡುತ್ತಲೇ ಹುಡುಗಿ ಮನೆಯವರು ಮದುವೆ ನಿಲ್ಲಿಸಿದರು. ತಕ್ಷಣ ಸ್ಥಳೀಯ ಪೊಲೀಸರು ಸ್ಥಳಕ್ಕೆ ಬಂದು ಪರಿಸ್ಥಿತಿ ತಿಳಿಗೊಳಿಸಿದರು.
Also Read: ಮಡಿಕೇರಿ: ಶವಾಗಾರ ಸಿಬ್ಬಂದಿಯಿಂದ ಆಸ್ಪತ್ರೆಯಲ್ಲಿಯೇ ಲೈಂಗಿಕ ದೌರ್ಜನ್ಯ, ಡೀನ್ಗೆ ಹಿಂದೂ ಜಾಗರಣ ವೇದಿಕೆ ದೂರು
ಯೋಧನ ವಂಚನೆ ಬಗ್ಗೆ ಮಹಿಳೆ ಮಾಹಿತಿ ನೀಡುತ್ತಲೆ ಮದುವೆ ಮಂಟಪದಲ್ಲಿ ಅಲ್ಲೋಲಕಲ್ಲೋಲ ಪರಿಸ್ಥಿತಿ ಸೃಷ್ಟಿಯಾಯಿತು. ಮಹಿಳೆಯ ಹೇಳಿಕೆ ಸಂಭ್ರಮದಲ್ಲಿದ್ದವರಿಗೆ ಶಾಕ್ ನೀಡಿತು. ಹಣಕಾಸು ವಿಚಾರದ ಹಿನ್ನೆಲೆಯಲ್ಲಿ ಮದುವೆ ಆಗಿರೊದಾಗಿ ಮಹಿಳೆ ಹೇಳುತ್ತಿರೋದಾಗಿ ಕಿರಣ್ ಪ್ರತಿ ಆರೋಪ ಮಾಡಿದ್ದಾರೆ. ಹಾಸನ ಬಡಾವಣೆ ಠಾಣೆಯಲ್ಲಿ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಎಲ್ಲರನ್ನೂ ಠಾಣೆಗೆ ಕರೆದೊಯ್ದು, ಪೊಲೀಸರು ವಿಚಾರಣೆ ನಡೆಸಿದರು. ಈ ಮಧ್ಯೆ, ನವ ವಧು ಮನೆಯವರು ಎರಡನೇ ಮದುವೆ ನಿಲ್ಲಿಸಿ, ತಮ್ಮ ಮಗಳನ್ನು ಮನೆಗೆ ಕರೆದೊಯ್ದರು.