ಯುವತಿಗೆ ಎಸ್ಐಟಿ ಮೇಲೆ ನಂಬಿಕೆ ಇಲ್ಲದಿದ್ದರೆ ಬೇರೆ ತನಿಖೆಯಾಗಲಿ: ವಿಪಕ್ಷ ನಾಯಕ ಸಿದ್ದರಾಮಯ್ಯ
ಸದನದಲ್ಲಿಯೂ ಕೂಡ ನಾನು ಈ ವಿಚಾರವನ್ನು ಪ್ರಸ್ತಾಪಿಸಿದ್ದೆ. ಹೈಕೋರ್ಟ್ ಸಿಜೆ ಮೇಲುಸ್ತುವಾರಿಯಲ್ಲಿ ತನಿಖೆ ಮಾಡಿಸಲಿ. ಸತ್ಯ ಹೊರಬರಬೇಕು ಎನ್ನುವುದಾದರೆ ತನಿಖೆ ಮಾಡಿಸಲಿ ಎಂದು ಮಾತನಾಡಿದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತನಿಖೆ ಮಾಡಿಸುವುದಕ್ಕೆ ಇವರಿಗೇನು ಸಮಸ್ಯೆ ಎಂದು ಪ್ರಶ್ನೆ ಮಾಡಿದ್ದಾರೆ.

ಬೆಂಗಳೂರು: ನ್ಯಾಯ ಒದಗಿಸಿ ಎಂದು ಸಂತ್ರಸ್ತ ಯವತಿ ಪೊಲೀಸ್ ಆಯುಕ್ತರಿಗೆ ಪತ್ರ ಬರೆದ ವಿಚಾರಕ್ಕೆ ಸಂಬಂಧಿಸಿ ಪ್ರತಿಕ್ರಿಯೆ ನೀಡಿದ ವಿಪಕ್ಷ ನಾಯಕ ಸಿದ್ದರಾಮಯ್ಯ ಯುವತಿಗೆ ಎಸ್ಐಟಿ ಮೇಲೆ ನಂಬಿಕೆ ಇಲ್ಲದಿದ್ದರೆ ಬೇರೆ ತನಿಖೆಯಾಗಲಿ. ಎಸ್ಐಟಿಯ ಮೇಲೆ ರಾಜ್ಯ ಸರ್ಕಾರ ಪ್ರಭಾವ ಬೀರುತ್ತದೆ. ಎಸ್ಐಟಿ ತನಿಖೆಯಿಂದ ಸತ್ಯಾಂಶ ಹೊರಬರಲು ಸಾಧ್ಯವಿಲ್ಲ. ಹೈಕೋರ್ಟ್ ಸಿಜೆ ಮೇಲುಸ್ತುವಾರಿಯಲ್ಲಿ ತನಿಖೆಯಾಗಲಿ ಎಂದು ಹೇಳಿದರು.
ಸದನದಲ್ಲಿಯೂ ಕೂಡ ನಾನು ಈ ವಿಚಾರವನ್ನು ಪ್ರಸ್ತಾಪಿಸಿದ್ದೆ. ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಮೇಲುಸ್ತುವಾರಿಯಲ್ಲಿ ತನಿಖೆ ಮಾಡಿಸಲಿ. ಸತ್ಯ ಹೊರ ಬರಬೇಕು ಎನ್ನುವುದಾದರೆ ತನಿಖೆ ಮಾಡಿಸಲಿ ಎಂದು ಮಾತನಾಡಿದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತನಿಖೆ ಮಾಡಿಸುವುದಕ್ಕೆ ಇವರಿಗೇನು ಸಮಸ್ಯೆ ಎಂದು ಪ್ರಶ್ನೆ ಮಾಡಿದರು.
ಇನ್ನು ಅನ್ನ ಭಾಗ್ಯ ಯೋಜನೆ ವಿಚಾರದ ಬಗ್ಗೆ ಹೇಳಿಕೆ ನೀಡಿದ ಅವರು ಸರ್ಕಾರಿ ದುಡ್ಡು ಯಾರಪ್ಪನ ಮನೆ ದುಡ್ಡಲ್ಲ. ಅದು ಬೈದಂಗಾ? ಮೊದಲು ಯಡಿಯೂರಪ್ಪ ಯತ್ನಾಳ್ಗೆ ಬೈದು ಬಾಯಿ ಮುಚ್ಚಿಸಲಿ. ನನಗೆ ಬೈಯ್ಯೋದಲ್ಲ. ಇದು ಯಡಿಯೂರಪ್ಪ ಮನೆ ಹಣ ಅಲ್ಲ. ಸರ್ಕಾರದ ಹಣ ಅಂತ ಹೇಳುವುದು ಅನ್ ಪಾರ್ಲಿಮೆಂಟರಿ ಪದವಾ? ನನಗೂ ನಲವತ್ತು ವರ್ಷದ ಅನುಭವ ಇದೆ ಎಂದು ಹೇಳಿದರು.
ಕೊರೊನಾ ನಿಯಮಗಳ ಬದಲಾವಣೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ ಇಲ್ಲಿಯವರೆಗೂ ವಿಪಕ್ಷದವರನ್ನು ಕರೆದು ಮಾತನಾಡಿಲ್ಲ. ನಾನೇ ಅವರಿಗೆ ಪತ್ರ ಬರೆದಿದ್ದೇನೆ ಎಂದು ತಿಳಿಸಿದರು.
ಸರ್ಕಾರದಿಂದ ಮಹಿಳೆಯರಿಗೆ ಅನ್ಯಾಯ ರಾಜ್ಯ ಬಿಜೆಪಿ ಸರ್ಕಾರದಿಂದ ಮಹಿಳೆಯರಿಗೆ ಅನ್ಯಾಯವಾಗುತ್ತಿದೆ ಎಂದು ಖಾನಾಪುರ ಕ್ಷೇತ್ರದ ಶಾಸಕಿ ಅಂಜಲಿ ನಿಂಬಾಳ್ಕರ್ ಆರೋಪಿಸಿದ್ದಾರೆ. ಕಾಂಗ್ರೆಸ್ನಲ್ಲಿ ಕಚ್ಚಾಟವಿದೆ ಎಂದು ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ. ಅವರ ಮಂತ್ರಿ ಈಶ್ವರಪ್ಪ ರಾಜ್ಯಪಾಲರಿಗೆ ಪತ್ರ ಬರೆದಿದ್ದಾರೆ. ರಾಜ್ಯದ ಮುಖ್ಯಮಂತ್ರಿ ವಿರುದ್ಧವೇ ಗವರ್ನರ್ಗೆ ಪತ್ರ ಬರೆದಿದ್ದಾರೆ. ಇದರಿಂದಲೇ ಎಲ್ಲಿ ಕಚ್ಚಾಟವಿದೆ ಎಂದು ಗೊತ್ತಾಗುತ್ತದೆ. ಬಿಜೆಪಿಯವರ ಕಚ್ಚಾಟವನ್ನು ಇಡೀ ದೇಶವೇ ನೋಡುತ್ತಿದೆ. ಕಾಂಗ್ರೆಸ್ ಪಕ್ಷದಲ್ಲಿ ನಾವೆಲ್ಲರೂ ಒಗ್ಗಟ್ಟಾಗಿ ಇದ್ದೇವೆ. ಗಂಡ-ಹೆಂಡತಿಯರ ಜಗಳ ಆಗಾಗ ನಡೆಯುತ್ತಿರುತ್ತದೆ. ಆದರೆ ನಾವು ಯಾವುದನ್ನು ಬೀದಿಗೆ ತಂದು ಮಾತನಾಡಲ್ಲ. ನಮ್ಮನೆ ಜಗಳ ನಾವು ನಿಭಾಯಿಸುತ್ತೇವೆ. ತಮ್ಮ ಜಗಳ ಮೊದಲು ಬಿಜೆಪಿ ನಿಭಾಯಿಸಲಿ ಎಂದು ಹೇಳಿದರು.
ಬಸವಕಲ್ಯಾಣ ಕ್ಷೇತ್ರದ ಉಪಚುನಾವಣೆ ಪ್ರಚಾರಕ್ಕೆ ಹೋಗುತ್ತೀನಿ. ಮರಾಠಾ ಸಮುದಾಯ ಅಷ್ಟೇ ಅಲ್ಲ ಎಲ್ಲಾ ಸಮುದಾಯದ ಪರವಾಗಿ ಹೋಗುತ್ತೀನಿ. ಮರಾಠಾ ಸಮುದಾಯಕ್ಕೆ ಬಿಜೆಪಿ ಸರ್ಕಾರದಿಂದ ನ್ಯಾಯ ಸಿಕ್ಕಿಲ್ಲ. ಬಸವಕಲ್ಯಾಣಗೆ ಸಿಎಂ ಹೋದಾಗ ಮರಾಠಾ ಸಮುದಾಯಕ್ಕೆ ನ್ಯಾಯ ನೀಡುವುದಾಗಿ ಹೇಳಿದ್ದರು. ಹೀಗಾಗಿ ಮರಾಠಾ ಸಮುದಾಯದ ಪರವಾಗಿ ನಿಲ್ಲಲು ಬಸವಕಲ್ಯಾಣಕ್ಕೆ ಹೋಗುತ್ತೀನಿ ಎಂದು ತಿಳಿಸಿದರು.
(Siddaramaiah react about victim young woman letter in bengaluru)
ಇದನ್ನೂ ಓದಿ
ಬೆಳ್ಳೂಡಿ ಕನಕ ಗುರುಪೀಠದ ಶಾಖಾ ಮಠದ ಕಾರ್ಯಕ್ರಮ; ದೇವರ ದರ್ಶನ ಪಡೆದ ಬಿ.ಎಸ್.ಯಡಿಯೂರಪ್ಪ



