AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಿದ್ದರಾಮಯ್ಯ ಹೇಳಿದ ತಕ್ಷಣ ಅದು ವೇದಾಂತವಲ್ಲ: ಬಿ.ಸಿ.ಪಾಟೀಲ್

ಸಂತ್ರಸ್ತೆ ಬಂದ ಬಳಿಕ ಪ್ರಕರಣ ಕೂಡ ದಾಖಲಿಸಿದ್ದಾರೆ. ಅವಶ್ಯಕತೆ ಕಂಡುಬಂದರೆ ರಮೇಶ್ ಜಾರಕಿಹೊಳಿ ವಿರುದ್ಧ ಆರೋಪ ಸಾಬೀತಾದರೆ, ಖಂಡಿತವಾಗಿ ರಮೇಶ್ ಜಾರಕಿಹೊಳಿಯನ್ನು ಬಂಧಿಸುತ್ತಾರೆ ಎಂದು ಹೇಳಿದ ಸಚಿವ ಬಿ.ಸಿ.ಪಾಟೀಲ್ ಚಿತ್ರರಂಗಕ್ಕೆ ಕೊರೊನಾ ನಿಯಮದಲ್ಲಿ ಸಡಿಲಿಕೆ ಕೊಟ್ಟಿರುವುದಕ್ಕೆ ಸಮರ್ಥನೆ ಮಾಡಿಕೊಂಡರು.

ಸಿದ್ದರಾಮಯ್ಯ ಹೇಳಿದ ತಕ್ಷಣ ಅದು ವೇದಾಂತವಲ್ಲ: ಬಿ.ಸಿ.ಪಾಟೀಲ್
ಬಿ.ಸಿ.ಪಾಟೀಲ್​
sandhya thejappa
| Edited By: |

Updated on: Apr 04, 2021 | 1:35 PM

Share

ಹಾವೇರಿ: ಕರ್ನಾಟಕದಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿಗೆ ತರುವ ಒತ್ತಾಯಕ್ಕೆ ಸಂಬಂಧಿಸಿದಂತೆ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿಕೆಗೆ ಸಚಿವ ಬಿ.ಸಿ.ಪಾಟೀಲ್ ಪ್ರತಿಕ್ರಿಯೆ ನೀಡಿದ್ದಾರೆ. ಸಿದ್ದರಾಮಯ್ಯ ಹೇಳಿದ ತಕ್ಷಣವೇ ಅದು ವೇದಾಂತವಲ್ಲ. ಈ ಹಿಂದೆ ಹೆಚ್.ವೈ.ಮೇಟಿ ಕೇಸ್​ನಲ್ಲಿ ಎಫ್ಐಆರ್ ಕೂಡ ಆಗಿರಲಿಲ್ಲ. ನಮ್ಮ ಸರ್ಕಾರ ಎಸ್ಐಟಿ ತನಿಖೆಗೆ ಸೂಚನೆ ಕೊಟ್ಟಿದೆ ಎಂದು ಹೇಳಿದರು.

ಸಂತ್ರಸ್ತೆ ಬಂದ ಬಳಿಕ ಪ್ರಕರಣ ಕೂಡ ದಾಖಲಿಸಿದ್ದಾರೆ. ಅವಶ್ಯಕತೆ ಕಂಡುಬಂದರೆ ರಮೇಶ್ ಜಾರಕಿಹೊಳಿ ವಿರುದ್ಧ ಆರೋಪ ಸಾಬೀತಾದರೆ, ಖಂಡಿತವಾಗಿ ರಮೇಶ್ ಜಾರಕಿಹೊಳಿಯನ್ನು ಬಂಧಿಸುತ್ತಾರೆ ಎಂದು ಹೇಳಿದ ಸಚಿವ ಬಿ.ಸಿ.ಪಾಟೀಲ್ ಚಿತ್ರರಂಗಕ್ಕೆ ಕೊರೊನಾ ನಿಯಮದಲ್ಲಿ ಸಡಿಲಿಕೆ ಕೊಟ್ಟಿರುವುದಕ್ಕೆ ಸಮರ್ಥನೆ ಮಾಡಿಕೊಂಡರು.

ಚಿತ್ರರಂಗಕ್ಕೆ ನಿಯಮಗಳ ಸಡಿಲಿಕೆ ಅತಿ ಅವಶ್ಯಕ ಇದೆ. ಎಲ್ಲರೂ ಕೂಡ ಮಾಸ್ಕ್ ಧರಿಸಬೇಕು ಎನ್ನುವ ಸೂಚನೆ ಕೊಟ್ಟಿದ್ದಾರೆ. ಆದರೆ ಕೊರೊನಾ ನಿಯಮಗಳನ್ನು ಕಳೆದ ವರ್ಷದಂತೆ ಜನರು ಪಾಲನೆ ಮಾಡುತ್ತಿಲ್ಲ. ಜನರ ಜವಾಬ್ದಾರಿಯೂ ಬಹಳಷ್ಟಿದೆ. ಒಂದು ವಾರದ ಮಟ್ಟಿಗೆ ಸಿನಿಮಾ ಮಂದಿರ ಬಿಟ್ಟಿದ್ದಾರೆ. ಜನರೂ ಈ ಬಗ್ಗೆ ಜಾಗೃತರಾಗಿರಬೇಕು ಎಂದು ಅಭಿಪ್ರಾಯಪಟ್ಟರು.

ಕಾಮಾಲೆ ಕಣ್ಣಿನವರಿಗೆ ಲೋಕವೆಲ್ಲ ಹಳದಿ ಎಂದ ಸಚಿವ ಬಿ.ಸಿ.ಪಾಟೀಲ್ ರಾಜ್ಯದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿರುದ್ಧ ಸಚಿವ ಈಶ್ವರಪ್ಪ ದೂರು ವಿಚಾರಕ್ಕೆ ಸಂಬಂಧಿಸಿ ಮಾತನಾಡಿದ ಬಿ.ಸಿ.ಪಾಟೀಲ್ ಒಂದು ಮನೆಯಲ್ಲಿದ್ದಾಗ ಸಣ್ಣ ಪುಟ್ಟ ವ್ಯತ್ಯಾಸಗಳು ಇರುತ್ತವೆ. ವರಿಷ್ಠರು ಎಲ್ಲವನ್ನೂ ಸರಿಪಡಿಸುವ ಕೆಲಸವನ್ನು ಮಾಡುತ್ತಾರೆ ಎಂದರು. ಜೊತೆಗೆ ವಿಜಯೇಂದ್ರ ದೇವಲೋಕದಿಂದ ಬಂದಿದ್ದಾರಾ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಕಾಮಾಲೆ ಕಣ್ಣಿನವರಿಗೆ ಲೋಕವೆಲ್ಲ ಹಳದಿಯಾಗಿ ಕಾಣುತ್ತದೆ. ಕಾಂಗ್ರೆಸ್​ನವರಿಗೆ ವಿಜಯೇಂದ್ರರನ್ನು ನೋಡಿದರೆ ಬೇರೆ ರೀತಿ ಕಾಣುತ್ತದೆ. ಬಿ.ವೈ.ವಿಜಯೇಂದ್ರ ಯುವ ನಾಯಕರು, ಚಾಣಾಕ್ಷರಿದ್ದಾರೆ. ಮಸ್ಕಿ, ಬಸವಕಲ್ಯಾಣ, ಬೆಳಗಾವಿ ಚುನಾವಣೆಯಲ್ಲಿ ಅವರ ಪ್ರಭಾವವನ್ನು ತೋರಿಸುತ್ತಾರೆ. ಕ್ಷುಲ್ಲಕ ಕಾರಣಕ್ಕೆ ಬಿ.ವೈ.ವಿಜಯೇಂದ್ರ ಬಗ್ಗೆ ಟೀಕೆ ಸರಿಯಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.

ಇದನ್ನೂ ಓದಿ

1- 9ನೇ ತರಗತಿ ಮೌಲ್ಯಾಂಕನ ಪರೀಕ್ಷಾ ವೇಳಾಪಟ್ಟಿ ಕುರಿತು ನಾಳೆ ಸಭೆ; ಮೂರು ಹಂತದಲ್ಲಿ ಸಭೆ ಕರೆದ ಸಾರ್ವಜನಿಕ ಶಿಕ್ಷಣ ಇಲಾಖೆ

ಹುಣಸೂರು ಕ್ಷೇತ್ರಕ್ಕೆ ಯಾವ ಅನುದಾನವನ್ನೂ ನೀಡಿಲ್ಲ: ಶಾಸಕ ಮಂಜುನಾಥ್ ಸುದ್ದಿಗೋಷ್ಠಿ

(BC Patil React to siddaramaiah statement in haveri)

Follow Us
ಮೂರನೇ ಬಾರಿ ರಾಜ್ಯಪಾಲರನ್ನು ಭೇಟಿ ಮಾಡಿದ ಟಿವಿಕೆ ಮುಖ್ಯಸ್ಥ ವಿಜಯ್
ಮೂರನೇ ಬಾರಿ ರಾಜ್ಯಪಾಲರನ್ನು ಭೇಟಿ ಮಾಡಿದ ಟಿವಿಕೆ ಮುಖ್ಯಸ್ಥ ವಿಜಯ್
ತಮಿಳುನಾಡಿನಲ್ಲಿ ಹೇಗಿದೆ ವಿಜಯ್ ಕ್ರೇಜ್: ಕಣ್ಣಾರೆ ನೋಡಿದ ವಜ್ರಾಂಗ್ ಮಾತು
ತಮಿಳುನಾಡಿನಲ್ಲಿ ಹೇಗಿದೆ ವಿಜಯ್ ಕ್ರೇಜ್: ಕಣ್ಣಾರೆ ನೋಡಿದ ವಜ್ರಾಂಗ್ ಮಾತು
ಮ್ಯಾಜಿಕ್ ನಂಬರ್ ಗಿಂತಲೂ ಹೆಚ್ಚಿನ ಬೆಂಬಲ: ವಿಜಯ್​​ ಕೈ ಹಿಡಿದ ಪಕ್ಷಗಳಾವುವು
ಮ್ಯಾಜಿಕ್ ನಂಬರ್ ಗಿಂತಲೂ ಹೆಚ್ಚಿನ ಬೆಂಬಲ: ವಿಜಯ್​​ ಕೈ ಹಿಡಿದ ಪಕ್ಷಗಳಾವುವು
ತಮಿಳುನಾಡಿನಲ್ಲಿ TVK ಸರ್ಕಾರ ಫಿಕ್ಸ್‌, ಮ್ಯಾಜಿಕ್ ನಂಬರ್ ಹೊಂದಿಸಿದ ವಿಜಯ್
ತಮಿಳುನಾಡಿನಲ್ಲಿ TVK ಸರ್ಕಾರ ಫಿಕ್ಸ್‌, ಮ್ಯಾಜಿಕ್ ನಂಬರ್ ಹೊಂದಿಸಿದ ವಿಜಯ್
ವಿಜಯ್ ಜೊತೆ ನಟಿಸಿರುವ ಕನ್ನಡದ ನಟ ವಜ್ರಾಂಗ್ ದಳಪತಿ ಬಗ್ಗೆ ಹೇಳಿದ್ದೇನು?
ವಿಜಯ್ ಜೊತೆ ನಟಿಸಿರುವ ಕನ್ನಡದ ನಟ ವಜ್ರಾಂಗ್ ದಳಪತಿ ಬಗ್ಗೆ ಹೇಳಿದ್ದೇನು?
ನನ್ನ ಎಲ್ಲಾ ಅಸ್ತಿ ಅನಾಥ ಆಶ್ರಮಕ್ಕೆ ಕೊಡ್ತೇನೆ ಎಂದ ತಾಯಿ
ನನ್ನ ಎಲ್ಲಾ ಅಸ್ತಿ ಅನಾಥ ಆಶ್ರಮಕ್ಕೆ ಕೊಡ್ತೇನೆ ಎಂದ ತಾಯಿ
ತಮಿಳುನಾಡಿನ ಒಳರಾಜಕೀಯನ ಎಳೆಎಳೆಯಾಗಿ ಬಿಚ್ಚಿಟ್ಟ ಕಾಂಗ್ರೆಸ್ ಉಸ್ತುವಾರಿ
ತಮಿಳುನಾಡಿನ ಒಳರಾಜಕೀಯನ ಎಳೆಎಳೆಯಾಗಿ ಬಿಚ್ಚಿಟ್ಟ ಕಾಂಗ್ರೆಸ್ ಉಸ್ತುವಾರಿ
ಆಪ್ತ ಸಹಾಯಕನ ಅರಿಶಿಣ ಶಾಸ್ತ್ರದಲ್ಲಿ ಪತ್ನಿ ಜೊತೆ ಶರಣು ಸಲಗರ ಡ್ಯಾನ್ಸ್​​
ಆಪ್ತ ಸಹಾಯಕನ ಅರಿಶಿಣ ಶಾಸ್ತ್ರದಲ್ಲಿ ಪತ್ನಿ ಜೊತೆ ಶರಣು ಸಲಗರ ಡ್ಯಾನ್ಸ್​​
ಜಿಗಣಿ ಪೊಲೀಸರ ಭರ್ಜರಿ ಬೇಟೆ: ಕೋಟ್ಯಂತರ ರೂ ಮೌಲ್ಯದ 250 ಕೆಜಿ ಗಾಂಜಾ ಜಪ್ತಿ
ಜಿಗಣಿ ಪೊಲೀಸರ ಭರ್ಜರಿ ಬೇಟೆ: ಕೋಟ್ಯಂತರ ರೂ ಮೌಲ್ಯದ 250 ಕೆಜಿ ಗಾಂಜಾ ಜಪ್ತಿ
ಸಂಚಲನ ಮೂಡಿಸಿದ ಬಿಎಲ್ ಸಂತೋಷ್ ಪೋಸ್ಟ್
ಸಂಚಲನ ಮೂಡಿಸಿದ ಬಿಎಲ್ ಸಂತೋಷ್ ಪೋಸ್ಟ್