1- 9ನೇ ತರಗತಿ ಮೌಲ್ಯಾಂಕನ ಪರೀಕ್ಷಾ ವೇಳಾಪಟ್ಟಿ ಕುರಿತು ನಾಳೆ ಸಭೆ; ಮೂರು ಹಂತದಲ್ಲಿ ಸಭೆ ಕರೆದ ಸಾರ್ವಜನಿಕ ಶಿಕ್ಷಣ ಇಲಾಖೆ
1ರಿಂದ9ನೇ ತರಗತಿ ಮೌಲ್ಯಾಂಕನ ಪರೀಕ್ಷಾ ವೇಳಾಪಟ್ಟಿಯ ಕುರಿತಾಗೆ ಸಿದ್ಧತೆ ನಡೆಸಲು ಸಲುವಾಗಿ ನಾಳೆ (ಏಪ್ರಿಲ್ 05) ಸಾರ್ವಜನಿಕ ಶಿಕ್ಷಣ ಇಲಾಖೆ ಸಭೆ ನಡೆಸಲಿದೆ.
ಬೆಂಗಳೂರು: 1ರಿಂದ9ನೇ ತರಗತಿ ಮೌಲ್ಯಾಂಕನ ಪರೀಕ್ಷಾ ವೇಳಾಪಟ್ಟಿಯ ಕುರಿತಾಗಿ ಸಿದ್ಧತೆ ನಡೆಸುವ ಸಲುವಾಗಿ ನಾಳೆ (ಏಪ್ರಿಲ್ 05) ಸಾರ್ವಜನಿಕ ಶಿಕ್ಷಣ ಇಲಾಖೆ ಸಭೆ ನಡೆಸಲಿದೆ. ತಜ್ಞರು, ಖಾಸಗಿ ಶಾಲೆಗಳ ಒಕ್ಕೂಟಗಳ ಪ್ರತಿನಿಧಿಗಳ ಸಭೆ ನಡೆಯಲಿದ್ದು, ಖಾಸಗಿ ಶಾಲೆಗಳ ಒಕ್ಕೂಟ ರುಪ್ಸಾ, ಕ್ಯಾಮ್ಸ್ಗೆ ಆಹ್ವಾನ ನೀಡಲಾಗಿದೆ.
ಒಟ್ಟು ಮೂರು ಹಂತದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಸಭೆ ಕರೆದಿದೆ. ನಾಳೆ ಬೆಳಗ್ಗೆ 10 .30ಕ್ಕೆ ಶಾಲಾ ಸಂಘಟನೆಗಳ ಜೊತೆ ಸಭೆ ನಡೆಯಲಿದ್ದು, 2020-21 ಸಾಲಿನ ಪರೀಕ್ಷೆ ವೇಳಾಪಟ್ಟಿ ಸಂಬಂಧ ತೀರ್ಮಾನ ಸಾಧ್ಯತೆ ಇದೆ. ಶೈಕ್ಷಣಿಕ ಅವಧಿ ನಿಗದಿಪಡಿಸುವ ಸುತ್ತೋಲೆ ಹೊರಡಿಸುವ ಕುರಿತಾಗಿ ಚರ್ಚೆ ನಡೆಯಲಿದೆ.
ಮಧ್ಯಾಹ್ನ 11.30 ಕ್ಕೆ ಮತ್ತೊಂದು ಸಭೆ ಏರ್ಪಾಟು ಮಾಡಲಾಗಿದ್ದು, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ನಿರ್ದೇಶಕರ ಜೊತೆ ಸಭೆ ನಡೆಸಲಾಗುತ್ತದೆ. ಸಭೆಯಲ್ಲಿ 2021-22 ಸಾಲಿನ ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳ ಪುಸ್ತಕ ಖರೀದಿ ಮುಂಗಡ ಪಾವತಿ ಜೊತೆಗೆ ಪಠ್ಯ ಪುಸ್ತಕ ವಿತರಣೆ ಸೇರಿದಂತೆ ಪೂರಕ ವಿಷಯಗಳ ಚರ್ಚೆ ನಡೆಸಲಾಗುತ್ತದೆ. ಮಧ್ಯಾಹ್ನ 12.30 ಕ್ಕೆ ಬಿಸಿಯೂಟ ಸಂಬಂಧ ಅಧಿಕಾರಿಗಳ ಚರ್ಚೆ ನಡೆಸಲು ನಿರ್ಧರಿಸಿದ್ದು, ಬಿಸಿಯೂಟ ನೌಕರರ ಬೇಡಿಕೆಗಳಲ್ಲಿ ಈಡೇರಿಸಬಹುದಾದ ಬೇಡಿಕೆಗಳ ಕುರಿತು ಮಾತನಾಡಲಾಗುತ್ತದೆ.
ಇದನ್ನೂ ಓದಿ: ಮಹಾರಾಷ್ಟ್ರದಲ್ಲಿ 1ರಿಂದ 8ನೆ ತರಗತಿ ವಿದ್ಯಾರ್ಥಿಗಳು ಪರೀಕ್ಷೆ ಇಲ್ಲದೇ ಪಾಸ್
(Karnataka Education department meeting held on April 05th)