ಸುಧಾಕರ್ ಮಂತ್ರಿ ಅಷ್ಟೇ ಅವರೊಬ್ಬರೇ ಎಲ್ಲವೂ ಅಲ್ಲ, ಜಿಲ್ಲಾ ಮಂತ್ರಿಗಳು ಏನು ಮಾಡುತ್ತಿದ್ದಾರೆ: ಸಿದ್ದರಾಮಯ್ಯ

|

Updated on: Apr 27, 2021 | 6:35 PM

Siddaramaiah: ಕೊವಿಡ್ ನಿರ್ವಹಣೆಯಲ್ಲಿ ಕೇಂದ್ರ, ರಾಜ್ಯ ಸರ್ಕಾರ ಎಡವಿದೆ. ಸರ್ಕಾರಕ್ಕೆ ತಜ್ಞರು ಸಲಹೆಯನ್ನು ನೀಡುತ್ತಲೇ ಬಂದಿದ್ದರು. ಆದ್ರೆ ಮೊದಲ ಅಲೆ ಮುಗಿದ ಬಳಿಕ ಕ್ರಮಕೈಗೊಳ್ಳಲಿಲ್ಲ. ಗಂಭೀರ ಕ್ರಮಗಳನ್ನು ಕೈಗೊಳ್ಳದೆ ನಿರ್ಲಕ್ಷ್ಯ ಮಾಡಿದರು.

ಸುಧಾಕರ್ ಮಂತ್ರಿ ಅಷ್ಟೇ ಅವರೊಬ್ಬರೇ ಎಲ್ಲವೂ ಅಲ್ಲ, ಜಿಲ್ಲಾ ಮಂತ್ರಿಗಳು ಏನು ಮಾಡುತ್ತಿದ್ದಾರೆ: ಸಿದ್ದರಾಮಯ್ಯ
ಯಡಿಯೂರಪ್ಪ ‘ಕುತ್ತಾ’ ಎಂದ ಸಿದ್ದರಾಮಯ್ಯ; ನಾನು ಸಿಎಂ ಆಗಿದ್ರೆ ನಿರ್ಮಲಾ ಸೀತಾರಾಮನ್​ ಮನೆ ಮುಂದೆ ಪ್ರತಿಭಟನೆ ಮಾಡ್ತಾಯಿದ್ದೆ ಎಂದರು
Follow us on

ಬೆಂಗಳೂರು: ‘ಮಾಜಿ ಸಚಿವ ಸಿ.ಟಿ.ರವಿಗೆ ಸಂವಿಧಾನ ಗೊತ್ತಿಲ್ಲ’. ನಾನು ಸುಮ್ಮನೆ ರಾಜ್ಯಪಾಲರನ್ನು ಟೀಕೆ ಮಾಡಿಲ್ಲ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ. ರಾಜ್ಯಪಾಲರು ಚುನಾಯಿತರಲ್ಲ, ನೇಮಕವಾದವರು. ರಾಜ್ಯಪಾಲರು ಸಲಹೆ ನೀಡಬಹುದು ಎಂದು ಹೇಳಿದ ಸಿದ್ದರಾಮಯ್ಯ ,ರಾಜೀನಾಮೆ ನೀಡಿ ಎಂದು ನಾನು ಯಾರನ್ನೂ ಕೇಳಲ್ಲ. ಅವರು ಭಂಡರಿದ್ದಾರೆ ನಾನು ಕೇಳಿದರೂ ಕೊಡಲಿಲ್ಲ ಎಂದಿದ್ದಾರೆ. ಡಾ.ಕೆ.ಸುಧಾಕರ್ ಬಗ್ಗೆ ಸಾಫ್ಟ್ ಕಾರ್ನರ್ ಎಂಬ ಯಾಕೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು ನನಗೆ ಯಾರ ಬಗ್ಗೆಯೂ ಸಾಫ್ಟ್ ಕಾರ್ನರ್ ಇಲ್ಲ. ಸುಧಾಕರ್ ಮಂತ್ರಿ ಅಷ್ಟೇ, ಅವರೊಬ್ಬರೇ ಎಲ್ಲವೂ ಅಲ್ಲ. ಜಿಲ್ಲಾ ಮಂತ್ರಿಗಳು ಏನು ಮಾಡುತ್ತಿದ್ದಾರೆ? ಆರೋಗ್ಯ ಮಂತ್ರಿ ಬೆಂಗಳೂರಿಗೆ ಮಾತ್ರ ಸೀಮಿತವಲ್ಲ. ರಾಜ್ಯಕ್ಕೆ ಕೂಡ ಅವರು ಮಂತ್ರಿಯಾಗಿದ್ದಾರೆ. ಇದರಲ್ಲಿ ಆರೋಗ್ಯ ಮಂತ್ರಿಯ ವೈಫಲ್ಯವೂ ಇದೆ. ರಾಜ್ಯ ಸರ್ಕಾರದ ವೈಫಲ್ಯವೂ ಇದೆ ಎಂದಿದ್ದಾರೆ ಸಿದ್ದರಾಮಯ್ಯ.

ಪಿಎಂ ಕೇರ್ಸ್ ಫಂಡ್‌ಗೆ ಎಷ್ಟು ಹಣ ಬಂದಿದೆ?
PM cares Fundಗೆ ಎಷ್ಟು ಹಣ ಬಂದಿದೆ ಎಂದು ಕೇಳಿದರೆ ಉತ್ತರವೇ ನೀಡುತ್ತಿಲ್ಲ. ಪಿಎಂ ಕೇರ್ ಗೆ ಬಂದಿರುವುದು ಜನರ ದುಡ್ಡು ಈ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ. ಡಾ ದೇವಿ ಪ್ರಸಾದ್ ಶೆಟ್ಟಿ, ಪ್ರತಿ ಪಾಸಿಟಿವ್ ವ್ಯಕ್ತಿ ಜೊತೆ 5 ಮಂದಿ ಸೋಂಕಿತರಾಗಿರ್ತಾರೆ ಅಂತಾ ಹೇಳ್ತಾ ಇದಾರೆ

ಆಕ್ಸಿಜನ್, ಲಸಿಕೆ ತಯಾರಿ ಮಾಡದೆ ಏನ್ ಮಾಡ್ತಿದ್ದಾರೆ. ಈಗ ಯುವಕರಲ್ಲೇ ಹೆಚ್ಚಾಗಿ ಕೊರೊನಾ ಪತ್ತೆಯಾಗುತ್ತಿದೆ. ದೇಶದಲ್ಲಿರುವ ಎಲ್ಲರಿಗೂ ಕೊವಿಡ್ ಲಸಿಕೆ ಹಾಕಬೇಕು. ಇದಕ್ಕೆ 200 ಕೋಟಿ ರೂಪಾಯಿ ಮಾತ್ರ ಬೇಕಾಗುತ್ತದೆ. ಏಕೆ ಇದನ್ನು ಮಾಡುವುದಕ್ಕೆ ಸಾಧ್ಯವಿಲ್ಲವೇ? ಈ ಹಿಂದೆ ಘೋಷಿಸಿದ್ದ ಆರ್ಥಿಕ ಪ್ಯಾಕೇಜ್ ಜನರಿಗೆ ತಲುಪಿಲ್ಲ. ಇದನ್ನು ಕೇಳಿದರೆ ಸಹಕಾರ ನೀಡಿ ಎಂದು ಹೇಳುತ್ತಿದ್ದಾರೆ. ನಾವು ಸಹಕಾರ ನೀಡ್ತೀವಿ, ಆದ್ರೆ ಸರ್ಕಾರ ಕೆಲಸ ಮಾಡ್ತಿಲ್ಲ. ಪ್ರಧಾನಿ 2 ತಿಂಗಳ ಆಹಾರ ಧಾನ್ಯ ಕೊಡ್ತೀನಿ ಅಂತಾರೆ.ಕೊವಿಡ್ ನಿಯಂತ್ರಣಕ್ಕೆ ಬರೋವರೆಗೆ ಅದನ್ನು ಕೊಡಲಿ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ರಾಜ್ಯ ಸರ್ಕಾರ ಪ್ರತಿ ತಿಂಗಳು 10 ಕೆಜಿ ಅಕ್ಕಿ ಕೊಡಬೇಕು. ಪ್ರತಿ ಕುಟುಂಬಕ್ಕೂ ಪ್ರತಿ ತಿಂಗಳು 10 ಸಾವಿರ ಕೊಡಬೇಕು. ವಲಸಿಗ ಕಾರ್ಮಿಕರಿಗೆ ಉಚಿತ ಸಾರಿಗೆ, ಆಹಾರಧಾನ್ಯ ಕೊಡಿ. ಹಳ್ಳಿಗಳಲ್ಲಿ ಮನ್ರೇಗಾ ಮೂಲಕ ಕೆಲಸ ಸಿಗುವಂತೆ ಮಾಡಿ. ಆರ್ಥಿಕ ಪ್ಯಾಕೇಜ್‌ ಘೋಷಿಸಿ ಎಂದು ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.

ಉತ್ತರಾಖಂಡ್ ಮುಖ್ಯಮಂತ್ರಿ ಮೂರ್ಖ ಅಂತ ಅನಿಸುತ್ತೆ. ಗಂಗಾಮಾತೆ ಆಶೀರ್ವಾದವಿದೆ, ಕೊರೊನಾ ಬರಲ್ಲ ಎಂದಿದ್ದಾರೆ. ಇತ್ತ ಪ್ರಧಾನಿ ಮೋದಿ ಕುಂಭಮೇಳಕ್ಕೆ ಹೃತ್ಪೂರ್ವಕ ಸ್ವಾಗತ ಅಂತಾರೆ. ಅಸ್ಸಾಂ ಆರೋಗ್ಯ ಸಚಿವ ಅಸ್ಸಾಂನಲ್ಲಿ ಮಾಸ್ಕ್ ಬೇಡ ಅಂದರು. ನನ್ನ ಬ್ರದರ್ ಇನ್ ಲಾ ಪ್ರಿಸ್ಟೀನ್ ಆಸ್ಪತ್ರೆಯಲ್ಲಿ ಸರಿಯಾಗಿ ನೋಡಿಕೊಂಡಿಲ್ಲವಂತೆ ಹೀಗಾಗಿ ನನ್ನ ಸಂಬಂಧಿ ಆಸ್ಪತ್ರೆಯಿಂದ ವಾಪಸಾಗಿದ್ದರು. ಈಗ ನಾನು ಸೀತಾರಾಮ್ ಗೆ ಮಾತಾಡಿ ರಾಮಯ್ಯ ಆಸ್ಪತ್ರೆಯಲ್ಲಿ ಬೆಡ್ ಕೊಡಿಸಿದೆ.ಧರ್ಮಸಿಂಗ್ ಪತ್ನಿಗೆ ಕೊರೋನಾ ಬಂದಾಗ ಮಣಿಪಾಲ್ ಆಸ್ಪತ್ರೆಗೆ ನಾನೇ ಕಾಲ್ ಮಾಡಿದೆ. ಆಸ್ಪತ್ರೆಗಳಲ್ಲಿ ಸೋಂಕಿತರಿಗೆ ಬೆಡ್‌ಗಳು ಸಿಗ್ತಿಲ್ಲ. ಆರೋಗ್ಯ ಸಚಿವರ ಮಾತನ್ನು ಸಿಎಂ ಯಡಿಯೂರಪ್ಪ ಕೇಳಿಲ್ಲ. ಆರೋಗ್ಯ ಸಚಿವರಿಗೆ ತಜ್ಞರು ಮಾಹಿತಿ ನೀಡುತ್ತಿರುತ್ತಾರೆ. ನಿನ್ನೆ ಕೂಡ ಚರ್ಚೆಯಲ್ಲಿ ಸಿಎಂ ಇದ್ಯಾವುದರ ಬಗ್ಗೆ ಒಪ್ಪಿರಲಿಲ್ಲ. ಡಾ ದೇವಿಶೆಟ್ಟಿ ದಿನಕ್ಕೆ 3 ಲಕ್ಷ ಅಲ್ಲ ೧೫ ಲಕ್ಷ ಕೇಸ್ ಬರ್ತಾ ಇದೆ ದೇಶದಲ್ಲಿ ಎಂದಿದ್ದಾರೆ.ಟೆಸ್ಟ್ ಮಾಡದೇ ಇರೋದಕ್ಕೆ ಕಡಿಮೆ ಬರ್ತಿದೆ ಎಂದಿದ್ದಾರೆ

ಕೊವಿಡ್ ನಿರ್ವಹಣೆಯಲ್ಲಿ ಕೇಂದ್ರ, ರಾಜ್ಯ ಸರ್ಕಾರ ಎಡವಿದೆ. ಸರ್ಕಾರಕ್ಕೆ ತಜ್ಞರು ಸಲಹೆಯನ್ನು ನೀಡುತ್ತಲೇ ಬಂದಿದ್ದರು. ಆದ್ರೆ ಮೊದಲ ಅಲೆ ಮುಗಿದ ಬಳಿಕ ಕ್ರಮಕೈಗೊಳ್ಳಲಿಲ್ಲ. ಗಂಭೀರ ಕ್ರಮಗಳನ್ನು ಕೈಗೊಳ್ಳದೆ ನಿರ್ಲಕ್ಷ್ಯ ಮಾಡಿದರು. 2020ರ ನವೆಂಬರ್‌ನಲ್ಲೇ ಸರ್ಕಾರಕ್ಕೆ ವರದಿ ನೀಡಿದ್ದರು. ಜನವರಿಯಲ್ಲಿ 2ನೇ ಅಲೆ ಆರಂಭವಾಗುತ್ತೆ ಎಂದು ವರದಿ ಹೇಳಿತ್ತು. ಆದರೆ ರಾಜ್ಯ ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿಲ್ಲ. ಆಕ್ಸಿಜನ್, ವೆಂಟಿಲೇಟರ್, ಲಸಿಕೆ ವ್ಯವಸ್ಥೆ ಮಾಡಿಕೊಂಡಿಲ್ಲ. ತೀವ್ರತೆ ಬಗ್ಗೆ ಮೊದಲೇ ಹೇಳಿದ್ದರೂ ಸಿದ್ಧತೆ ಮಾಡಿಕೊಂಡಿಲ್ಲ.

ಫೆಬ್ರವರಿ, ಮಾರ್ಚ್ ತಿಂಗಳಲ್ಲೂ ತಯಾರಿ ಮಾಡಿಕೊಂಡಿಲ್ಲ. ಈಗ ಐದು ರಾಜ್ಯಗಳಲ್ಲಿ ಚುನಾವಣೆ ಮಾಡುವ ಅಗತ್ಯವೇನಿತ್ತು? . ಪ್ರಧಾನಿಗಳು ಒಂದು ರ್ಯಾಲಿಯಲ್ಲಿ ಇಂತಹ ದೊಡ್ಡ ಜನಸಾಗರ ನಾನು ಎಲ್ಲೂ ನೋಡಿಲ್ಲ ಎಂದರು. ಪ್ರಧಾನಿ ಖುಷಿಪಟ್ಟು, ಜನರ ಜೀವದ ಜತೆ ಚೆಲ್ಲಾಟವಾಡಿದರು. ಕೊರೊನಾ ತಡೆಗಿಂತ ಅವರಿಗೆ ಱಲಿಗಳೇ ಮುಖ್ಯವಾಯಿತು. ಈಗ ಚುನಾವಣಾ ಆಯೋಗವೇ ಹೊಣೆ ಎಂದು ಹೇಳಿದ್ದಾರೆ. ಮದ್ರಾಸ್ ಹೈಕೋರ್ಟ್ ಚುನಾವಣಾ ಆಯೋಗವನ್ನು ಹೊಣೆ ಮಾಡಿದೆ. ಆಯೋಗದ ಮೇಲೆ ಕೊಲೆ ಕೇಸ್ ಏಕೆ ಹಾಕಬಾರದೆಂದಿದೆ. ನಾನು ಕೂಡ ಚುನಾವಣಾ ಪ್ರಚಾರಗಳಲ್ಲಿ ಭಾಗಿಯಾಗಿದ್ದೆ ಚುನಾವಣೆ ಮಾಡಿದ್ದರಿಂದ ನಾವು ಕೂಡ ಹೋಗಬೇಕಾಯಿತು. ಚುನಾವಣೆಗಳಲ್ಲಿ 200 ಜನ ಸೇರಬಾರದೆಂದು ಆದೇಶವಿತ್ತು. ಬಿಎಸ್‌ವೈ ಮಸ್ಕಿಗೆ ಹೋದಾಗ ಯಾವ ನಿಯಮವೂ ಇರಲಿಲ್ಲ ಎಂದು  ಸಿದ್ದರಾಮಯ್ಯ  ಹೇಳಿದ್ದಾರೆ.

ಇದನ್ನೂ ಓದಿ: ಕೊವಿಡ್ 19 ಲಸಿಕೆಗೆ ಬೆಲೆ ನಿಗದಿ ಮಾಡುವಲ್ಲಿ ಯಾವ ತಾರ್ಕಿಕ ಆಧಾರ ಅನ್ವಯಿಸಿದ್ದೀರಿ?-ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಪ್ರಶ್ನೆ

(Siddaramaiah slams state and centre for not taking measures to tackle covid second wave)

Published On - 6:32 pm, Tue, 27 April 21