ತೆಂಗಿನ ಮರ ಬಿದ್ದು 6 ವರ್ಷದ ಬಾಲಕ ಸಾವು, ಬಾಲಕಿ ಆಸ್ಪತ್ರೆಗೆ ದಾಖಲು

TV9kannada Web Team

TV9kannada Web Team | Edited By: Ayesha Banu

Updated on: Jun 13, 2021 | 7:42 AM

ತೆಂಗಿನ ಮರ ಮೈಮೇಲೆ ಬಿದ್ದು ಬಾಲಕ ಮೃತಪಟ್ಟಿರುವ ಘಟನೆ ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನ ಕುಪ್ಪರವಳ್ಳಿ ಗ್ರಾಮದಲ್ಲಿರುವ ತೋಟದ ಮನೆಯಲ್ಲಿ ನಡೆದಿದೆ. ಕ್ರಿಕೆಟ್ ಆಡುತ್ತಿದ್ದ ಅಭಯ್(6) ಮೃತ ದುರ್ದೈವಿ. ಘಟನೆಯಲ್ಲಿ ಬಾಲಕಿಗೆ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.

ತೆಂಗಿನ ಮರ ಬಿದ್ದು 6 ವರ್ಷದ ಬಾಲಕ ಸಾವು, ಬಾಲಕಿ ಆಸ್ಪತ್ರೆಗೆ ದಾಖಲು
ತೆಂಗಿನ ಮರ ಬಿದ್ದು 6 ವರ್ಷದ ಬಾಲಕ ಸಾವು

ಮೈಸೂರು: ತೆಂಗಿನಕಾಯಿ ಕಲ್ಪವೃಕ್ಷ. ಸಾಮಾನ್ಯವಾಗಿ ಅದು ತೊಂದರೆ ಕೊಡುವಂತಹುದ್ದಲ್ಲ. ಮರದಿಂದ ತೆಂಗಿನಕಾಯಿ ಬೀಳುವಾಗ ಜೀವಹಾನಿ ಸಂಭವಿಸುವುದು ಅಥವಾ ತೆಂಗಿನ ಮರವೇ ಉರುಳಿ ಮನುಷ್ಯನಿಗೆ ಉರುಳಾಗುವಂತಹ ನಿದರ್ಶನಗಳು ಕಡಿಮೆಯೇ. ಆದರೆ ಇಲ್ಲೊಂದು ದುರಂತ ಸಂಭವಿಸಯೇ ಬಿಟ್ಟಿದೆ.

ತೆಂಗಿನ ಮರ ಮೈಮೇಲೆ ಬಿದ್ದು ಬಾಲಕ ಮೃತಪಟ್ಟಿರುವ ಘಟನೆ ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನ ಕುಪ್ಪರವಳ್ಳಿ ಗ್ರಾಮದಲ್ಲಿರುವ ತೋಟದ ಮನೆಯಲ್ಲಿ ನಡೆದಿದೆ. ಕ್ರಿಕೆಟ್ ಆಡುತ್ತಿದ್ದ ಅಭಯ್(6) ಮೃತ ದುರ್ದೈವಿ. ಘಟನೆಯಲ್ಲಿ ಬಾಲಕಿಗೆ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ಬಿಳಿಗೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಅತ್ತಿಗೆ ಹತ್ಯೆಗೈದು ನಾದಿನಿ ಆತ್ಮಹತ್ಯೆ ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಅತ್ತಿಗೆ ಹತ್ಯೆಗೈದು ನಾದಿನಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಂಡ್ಯ ತಾಲೂಕಿನ ಕಂಬದಹಳ್ಳಿಯಲ್ಲಿ ನಡೆದಿದೆ. ಕಲ್ಲು ಎತ್ತಿಹಾಕಿ ಅತ್ತಿಗೆ ಪ್ರಿಯಾಂಕಾಳನ್ನು(32) ಬರ್ಬರವಾಗಿ ಕೊಲೆ ಮಾಡಲಾಗಿದೆ. ಬಳಿಕ ನಾದಿನಿ ಗಿರಿಜಾ(31) ನೇಣಿಗೆ ಶರಣಾಗಿದ್ದಾಳೆ. ಬಸರಾಳು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಇದನ್ನೂ ಓದಿ: Terror Attack: ಉತ್ತರ ಕಾಶ್ಮೀರದಲ್ಲಿ ಉಗ್ರರ ದಾಳಿ; ಭಯೋತ್ಪಾದಕರ ಗುಂಡಿಗೆ ಇಬ್ಬರು ಪೊಲೀಸರು, ಇಬ್ಬರು ನಾಗರಿಕರು ಸಾವು

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada