AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರು ವಿಮಾನ ನಿಲ್ದಾದಲ್ಲಿ ಪ್ಯಾಸೆಂಜರ್ ಬ್ಯಾಗ್‌ಗೆ ಗೋಲ್ಡ್ ಬಿಸ್ಕೆಟ್ ಹಾಕಿ ಸ್ಮಗ್ಲರ್ ಎಸ್ಕೇಪ್: 3.5 ಕೆಜಿ ಚಿನ್ನ ಪತ್ತೆ

ದುಬೈನಿಂದ ಅಕ್ರಮ ಚಿನ್ನ ಸಾಗಾಟ ಮಾಡುತ್ತಿದ್ದವರ ಭಯಗೊಂಡು ಮಾರ್ಗ ಮಧ್ಯೆದಲ್ಲೇ ಚಿನ್ನ ಬಿಸ್ಕೆಟ್ ಸಹ ಪ್ರಯಾಣಿಕನ ಬ್ಯಾಗ್​ ಗೆ ಹಾಕಿ ಪರಾರಿಯಾಗಿರುವ ಘಟನೆ ನಡೆದಿದೆ. ಕಸ್ಟಮ್ಸ್ ಅಧಿಕಾರಿಗಳ ಕೈಗೆ ತಗಲಾಕ್ಕೊಳ್ಳುವ ಭಯದಿಂದ ಬೇರೆಯವರ ಟ್ರಾಲಿ ಬ್ಯಾಗ್​​ ಗೆ ಚಿನ್ನ ಹಾಕಿ ಎಸ್ಪೇಪ್ ಆಗಿದ್ದಾನೆ. ಹಾಗಾದ್ರೆ, ಸ್ಮಗ್ಲರ್​ ಖರ್ತನಾಕ್​ ಐಡಿಯಾಕ್ಕೆ ಸಹ ಪ್ರಯಾಣಿಕ ಸಿಕ್ಕಿಬಿದ್ದಿದ್ಗೇಗೆ? ಬ್ಯಾಗ್​ ನಲ್ಲಿ ಸಿಕ್ಕ ಚಿನ್ನ ಎಷ್ಟು? ಎನ್ನುವ ಸಂಪೂರ್ಣ ಡಿಟೇಲ್ಸ್ ಇಲ್ಲಿದೆ.

ಬೆಂಗಳೂರು ವಿಮಾನ ನಿಲ್ದಾದಲ್ಲಿ ಪ್ಯಾಸೆಂಜರ್ ಬ್ಯಾಗ್‌ಗೆ ಗೋಲ್ಡ್ ಬಿಸ್ಕೆಟ್ ಹಾಕಿ ಸ್ಮಗ್ಲರ್ ಎಸ್ಕೇಪ್: 3.5 ಕೆಜಿ ಚಿನ್ನ ಪತ್ತೆ
Gold
ನವೀನ್ ಕುಮಾರ್ ಟಿ
| Updated By: ರಮೇಶ್ ಬಿ. ಜವಳಗೇರಾ|

Updated on:Jul 25, 2025 | 5:56 PM

Share

ಬೆಂಗಳೂರು, (ಜುಲೈ 25): ದುಬೈ (Dubai) ಪ್ಯಾಸೆಂಜರ್ ಬ್ಯಾಗ್‌ಗೆ 3.5 ಕೆಜಿ ಚಿನ್ನದ (Gold) ಬಿಸ್ಕೆಟ್ ಗಳನ್ನು ಹಾಕಿ ಸ್ಮಗ್ಲರ್ ಎಸ್ಪೇಪ್ ಆಗಿರುವ ಘಟನೆ ಬೆಂಗಳೂರಿನ ಕಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (Bengaluru Airport) ನಡೆದಿದೆ. ಬ್ಯಾಗ್ ಮಾಲೀಕ ತನ್ನ ಟ್ರ್ಯಾಲಿಯನ್ನು ಎಳೆದುಕೊಂಡು ಹೋಗುವಾಗ ಚಿನ್ನ ಬ್ಯಾಗ್ ಕೆಳಗೆ ಬಿದ್ದಿದೆ. ಇದನ್ನು ಗಮನಿಸಿದ ಮಾಲೀಕ ಕೂಡಲೇ ಚಿನ್ನದ ಬ್ಯಾಗ್‌ನ್ನು ಡಿಆರ್‌ಐ ಅಧಿಕಾರಿಗಳ ಬಳಿ ತೆಗೆದುಕೊಂಡು ಹೋಗಿದ್ದಾರೆ. ಆಗ ಅಧಿಕಾರಿಗಳು ಬ್ಯಾಗ್ ಪರಿಶೀಲನೆ ಮಾಡಿದಾಗ 3.5 ಕೆಜಿ ಚಿನ್ನದ ಬಿಸ್ಕೆಟ್ ಇರುವುದು ಪತ್ತೆಯಾಗಿದೆ.

ಅಧಿಕಾರಿಗಳು ಮಾಲೀಕನ ವಿಚಾರಣೆ ನಡೆಸಿದಾಗ ಚಿನ್ನಕ್ಕೂ ಆತನಿಗೂ ಯಾವುದೇ ಸಂಬಂಧ ಇಲ್ಲ ಎನ್ನುವುದು ಬಹಿರಂಗ ಆಗಿದೆ. ಬಳಿಕ ಸ್ಮಗ್ಲರ್, ಪ್ರಯಾಣಿಕನ ಬ್ಯಾಗ್‌ಗೆ ಚಿನ್ನ ಪರಾರಿಯಾಗಿರುವುದು ತಿಳಿದುಬಂದಿದ್ದು, ಸದ್ಯ ಡಿಆರ್‌ಐ ಅಧಿಕಾರಿಗಳು (DRI Officers) ಸಿಸಿಟಿವಿ ದೃಶ್ಯಗಳನ್ನು ಆಧರಿಸಿ ಸ್ಮಗ್ಲರ್‌ಗಾಗಿ ಹುಡುಕಾಟ ನಡೆಸಿದ್ದಾರೆ.

Published On - 5:55 pm, Fri, 25 July 25