ಕರ್ನಾಟಕದಲ್ಲಿ ಹಾವು ಕಡಿತದಿಂದ ಸಾವಿನ ಪ್ರಮಾಣ ಹೆಚ್ಚಳ:​ ನಿರ್ಲಕ್ಷ್ಯ ವಹಿಸದಂತೆ ಆರೋಗ್ಯ ಇಲಾಖೆ​ ಸೂಚನೆ

ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಹಾವು ಕಡಿತ ಪ್ರಕರಣಗಳು ಮತ್ತು ಸಾವುಗಳು ದಾಖಲೆ ಪ್ರಮಾಣದಲ್ಲಿ ಹೆಚ್ಚಾಗಿವೆ. ಕಳೆದ ಐದು ತಿಂಗಳಲ್ಲಿ 5597 ಜನರಿಗೆ ಹಾವು ಕಚ್ಚಿದ್ದು, 56 ಮಂದಿ ಸಾವನ್ನಪ್ಪಿದ್ದಾರೆ. ಹೀಗಾಗಿ ಆರೋಗ್ಯ ಇಲಾಖೆ ಸೂಕ್ತ ಮುನ್ನೆಚ್ಚರಿಕೆಗೆ ಮುಂದಾಗಿದೆ. ನಿರ್ಲಕ್ಷ್ಯ ವಹಿಸದ್ದಂತೆ ಜನರಿಗೂ ಸೂಚಿಸಲಾಗಿದೆ.

ಕರ್ನಾಟಕದಲ್ಲಿ ಹಾವು ಕಡಿತದಿಂದ ಸಾವಿನ ಪ್ರಮಾಣ ಹೆಚ್ಚಳ:​ ನಿರ್ಲಕ್ಷ್ಯ ವಹಿಸದಂತೆ ಆರೋಗ್ಯ ಇಲಾಖೆ​ ಸೂಚನೆ
ಹಾವು (ಸಂಗ್ರಹ ಚಿತ್ರ)
Image Credit source: Gettyimages.in
Edited By:

Updated on: May 27, 2026 | 3:10 PM

ಬೆಂಗಳೂರು, ಮೇ 27: ಒಂದು ಕಡೆ ಬೀದಿನಾಯಿಗಳ ಕಾಟ ಹೆಚ್ಚುತ್ತಿದ್ದರೆ, ಮತ್ತೊಂದಡೆ ಹಾವುಗಳು ಸೈಲೆಂಟ್ ಕಿಲ್ಲರ್ ಆಗುತ್ತಿವೆ. ಏಕೆಂದರೆ ಬೆಂಗಳೂರು ಸೇರಿದ್ದಂತೆ ಕರ್ನಾಟಕದಲ್ಲಿ (Karnataka) ಕಳೆದ 5 ತಿಂಗಳಲ್ಲಿ 5597 ಜನರು ಹಾವು ಕಡಿತಗೊಳಗಾಗಿದ್ದು, 56 ಜನರು ಬಲಿ ಆಗಿದ್ದಾರೆ. ಆ ಮೂಲಕ ರಾಜ್ಯದಲ್ಲಿ ಸ್ನೇಕ್ ಬೈಟ್ (snake bites) ಹಾಗೂ ಡೆತ್ ರೇಟ್​​​​ ದಾಖಲೆಯ ಪ್ರಮಾಣದಲ್ಲಿ ಹೆಚ್ಚಳವಾಗುತ್ತಿರುವುದು ಕಂಡುಬಂದಿದೆ.

ಮುಖ್ಯಾಂಶಗಳು

  • ರಾಜ್ಯದಲ್ಲಿ ದಾಖಲೆಯ ಪ್ರಮಾಣದಲ್ಲಿ ಸ್ನೇಕ್ ಬೈಟ್ ಹಾಗೂ ಡೆತ್​​
  • ಸೂಕ್ತ ಮುನ್ನೆಚ್ಚರಿಕೆ ಕ್ರಮಕ್ಕೆ ಮುಂದಾದ ಆರೋಗ್ಯ ಇಲಾಖೆ
  • ಹಾವು ಕಡಿವಾದರೆ ನಿರ್ಲಕ್ಷ್ಯವಹಿಸದ್ದಂತೆ ಜನರಿಗೆ ಸೂಚನೆ

ಸದ್ಯ ರಾಜ್ಯದಲ್ಲಿ ಬೀದಿನಾಯಿಗಳ ಕಾಟ ಬೆನ್ನಲ್ಲೇ ಇದೀಗ ಹಾವು ಕಡಿತ ಪ್ರಕರಣಗಳು ಹೆಚ್ಚಾಗುತ್ತಿವೆ. ಸಿಲಿಕಾನ್ ಸಿಟಿ ಬೆಂಗಳೂರು ಸೇರಿದ್ದಂತೆ ರಾಜ್ಯದಲ್ಲಿ ದಾಖಲೆಯ ಪ್ರಮಾಣದಲ್ಲಿ ಹಾವು ಕಡಿತ ಪ್ರಕರಣಗಳು ಕಂಡುಬಂದಿವೆ.

ಹಾವಿನಿಂದ ಕಡಿತಕ್ಕೊಳಗಾದವರ ಮತ್ತು ಮೃತರ ಅಂಕಿ-ಅಂಶ

ಇನ್ನು ಹಾವಿನ ಕಡಿತದಿಂದ ಸಾವಿನ ಸಂಖ್ಯೆಯೂ ಹೆಚ್ಚಳವಾಗಿದೆ. 2026 ಜನವರಿಯಿಂದ ಮೇ 17ರವರೆಗೆ ಹಾವು ಕಡಿತಕ್ಕೆ 56 ಜನರು ಮೃತಪಟ್ಟಿದ್ದು, 5597 ಜನರು ಹಾವು ಕಚ್ಚಿಸಿಕೊಂಡಿದ್ದಾರೆ. ಕಳೆದ ಒಂದು ತಿಂಗಳಲ್ಲಿ 2000ಕ್ಕೂ ಹೆಚ್ಚು ಜನರಿಗೆ ಹಾವು ಕಡಿತ ಹಾಗೂ 10ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಇನ್ನು ಕಳೆದ ಒಂದೇ ವಾರದಲ್ಲಿ 545 ಜನರು ಹಾವು ಕಡಿತಕ್ಕೊಳಗಾಗಿದ್ದು, 4 ಜನರು ಬಲಿಯಾಗಿದ್ದಾರೆ.

ಸೂಕ್ತ ಮುನ್ನೆಚ್ಚರಿಕೆಗೆ ಮುಂದಾದ ಆರೋಗ್ಯ ಇಲಾಖೆ 

ಸದ್ಯ ಹೆಚ್ಚುತ್ತಿವರು ಸ್ನೇಕ್ ಬೈಟ್ ಹಾಗೂ ಡೆತ್​​ ಹಿನ್ನೆಲೆ ಆರೋಗ್ಯ ಇಲಾಖೆ ಸೂಕ್ತ ಮುನ್ನೆಚ್ಚರಿಕೆಗೆ ಮುಂದಾಗಿದೆ. ರಾಜಧಾನಿ ಬೆಂಗಳೂರಿನ ಎಲ್ಲಾ ಸಾರ್ವಜನಿಕ ಆಸ್ಪತ್ರೆಗಳಲ್ಲಿ ಹಾಗೂ ರಾಜ್ಯದ ಎಲ್ಲಾ ಜಿಲ್ಲಾಸ್ಪತ್ರೆ, ತಾಲ್ಲೂಕಾಸ್ಪತ್ರೆಗಳಲ್ಲಿ ಆ್ಯಂಟಿ ಸ್ನೇಕ್‌ ವೀನೋಮ್ ಅನ್ನು ಬೇಡಿಕೆಯಷ್ಟು ಸ್ಟಾಕ್ ಇರಿಸುವಂತೆ ಸೂಚಿಸಲಾಗಿದೆ.

ಇದನ್ನೂ ಓದಿ: ಹಾವು ಕಚ್ಚಿದರೆ ಜೀವ ಉಳಿಸಲು ಮೊದಲು ಏನು ಮಾಡಬೇಕು? ಏನು ಮಾಡಬಾರದು?

ಇನ್ನು ಜನರು ಮಾತ್ರ ಹಾವು ಕಡಿತಕ್ಕೆ ದಿವ್ಯನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಜನರು ತುರ್ತು ಚಿಕಿತ್ಸೆ ಪಡೆಯದೆ ನಾಟಿ ಔಷಧಗಳತ್ತ ಮುಖ ಮಾಡಿ, ಕೊನೆಯ ಹಂತದಲ್ಲಿ ಆಸ್ಪತ್ರೆಗಳತ್ತ ಬರುತ್ತಿರುವುದು ಸಾವಿಗೆ ಕಾರಣ ಎಂದು ತಜ್ಞರು ಹೇಳುತ್ತಿದ್ದಾರೆ. ಹೀಗಾಗಿ ಯಾವುದೇ ಜಾತಿಯ ಹಾವು ಕಡಿವಾದರೆ ನಿರ್ಲಕ್ಷ್ಯವಹಿಸದ್ದಂತೆ ಜನರಿಗೆ ಆರೋಗ್ಯ ಇಲಾಖೆ ಸೂಚಿಸಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ವಿನಯ್​ ಕಾಶಪ್ಪನವರ್​

ವಿನಯಕುಮಾರ್ ಕಾಶಪ್ಪನವರ್ ಅವರು ಸಮೂಹ ಸಂವಹನ ಹಾಗೂ ತಂತ್ರಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಮತ್ತು ಪತ್ರಿಕೋದ್ಯಮದಲ್ಲಿ ವಿದ್ಯಾಭ್ಯಾಸ ಪಡೆದಿದ್ದಾರೆ. ಕಳೆದ 8 ವರ್ಷಗಳಿಂದ ಟಿವಿ9 ಕನ್ನಡದಲ್ಲಿ ಹಿರಿಯ ವರದಿಗಾರನಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಬೆಂಗಳೂರು ನಗರ, ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರಗಳಲ್ಲಿ 10 ವರ್ಷಗಳ ವರದಿಗಾರಿಕೆ ಅನುಭವ ಹೊಂದಿದ್ದು, ಸಮಾಜಮುಖಿ ಹಾಗೂ ತನಿಖಾ ವರದಿಗಳ ಮೂಲಕ ಜನಪರ ವಿಷಯಗಳನ್ನು ಬೆಳಕಿಗೆ ತರುತ್ತಿದ್ದಾರೆ.

Read More
Loading...
Unable to load recommendations.
Follow Us