ಕ್ರೀಡಾ ಇಲಾಖೆಯ ತರಬೇತುದಾರರಿಗೆ ಶೇ. 20ರಷ್ಟು ವೇತನ ಹೆಚ್ಚಳ; ಏಪ್ರಿಲ್ 1 ರಿಂದಲೇ ಜಾರಿ
ಕ್ರೀಡಾ ಇಲಾಖೆಯ ತರಬೇತುದಾರರಿಗೆ ವೇತನ ಹೆಚ್ಚಳ ಮಾಡಲಾಗಿದೆ. ಕ್ರೀಡಾ ಪ್ರಾಧಿಕಾರದ ತರಬೇತುದಾರರ ವೇತನವನ್ನು ಶೇ. 20ರಷ್ಟು ಹೆಚ್ಚಳ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.
ಬೆಂಗಳೂರು: ಕ್ರೀಡಾ ಇಲಾಖೆಯ ತರಬೇತುದಾರರಿಗೆ ವೇತನ ಹೆಚ್ಚಳ ಮಾಡಲಾಗಿದೆ. ಕ್ರೀಡಾ ಪ್ರಾಧಿಕಾರದ ತರಬೇತುದಾರರ ವೇತನವನ್ನು ಶೇ. 20ರಷ್ಟು ಹೆಚ್ಚಳ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಪರಿಷ್ಕೃತ ವೇತನ ಏಪ್ರಿಲ್ 1 ರಿಂದಲೇ ಅನ್ವಯವಾಗಲಿದೆ. ಪದವಿ ಮತ್ತು ಕ್ರೀಡಾ ತರಬೇತಿಯಲ್ಲಿ ಡಿಪ್ಲೋಮಾ ಮಾಡಿರುವ ತರಬೇತುದಾರರಿಗೆ 39,960 ರೂ. ನಿಂದ 47, 952ರೂ. ಗೆ ಹೆಚ್ಚಳ ಮಾಡಲಾಗಿದೆ. ಪದವೀಧರೇತರ ಹಾಗೂ ಕ್ರೀಡಾ ತರಬೇತಿಯಲ್ಲಿ ಡಿಪ್ಲೋಮಾ ಪಡೆದಿರುವ ತರಬೇತುದಾರರಿಗೆ 31,050 ರೂ.ನಿಂದ 37,260 ರೂ.ಗೆ ಹೆಚ್ಚಳ ಮಾಡಲಾಗಿದೆ.
ಇನ್ನು ರಾಜ್ಯದಲ್ಲಿ ಖಾಲಿ ಇರುವ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿಗೆ (6-8 ನೇ ತರಗತಿ) ಅನುಮೋದನೆ ನೀಡಿ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ. ವಿವರಕ್ಕೆ ಇಲ್ಲಿ ಓದಿ. Teachers Recruitment: ಹೈದರಾಬಾದ್-ಕರ್ನಾಟಕಕ್ಕೆ 5000 ಶಾಲಾ ಶಿಕ್ಷಕರ ನೇಮಕ, ವಿವರ ನೀಡಿದ ಶಿಕ್ಷಣ ಸಚಿವ ನಾಗೇಶ್
ನಕಲಿ ಮಾರ್ಕ್ಸ್ ಕಾರ್ಡ್ ದಂಧೆ, 4 ಕಿಂಗ್ ಪಿನ್ ಬಂಧನ ಪ್ರಕರಣ: ದೇಶದ ಪ್ರತಿಷ್ಠಿತ 10 ವಿ.ವಿ. ಗಳಿಗೆ ಜಯನಗರ ಪೊಲೀಸ್ ನೋಟಿಸ್ ಬೆಂಗಳೂರು: ದೊಡ್ಡ ಪ್ರಮಾಣದ ನಕಲಿ ಮಾರ್ಕ್ಸ್ ಕಾರ್ಡ್ ದಂಧೆಯ ಕಿಂಗ್ ಪಿನ್ ಗಳನ್ನು ಬಂಧಿಸಿದ್ದ ಪ್ರಕರಣದ ಮುಂದುವರಿದ ಭಾಗವಾಗಿ ದೇಶದ ಪ್ರತಿಷ್ಠಿತ 10 ಕಾಲೇಜುಗಳಿಗೆ ಬೆಂಗಳೂರು ಪೊಲೀಸರು ನೋಟಿಸ್ ಜಾರಿ ಮಾಡಿದ್ದಾರೆ. ಜಯನಗರ ಪೊಲೀಸರು ಮಂಗಳೂರು ಯೂನಿವರ್ಸಿಟಿ, ಸಿವಿಆರ್ ಯೂನಿವರ್ಸಿಟಿ – ಜಾರ್ಖಂಡ್, ಕರ್ನಾಟಕ ಓಪನ್ ಯೂನಿವರ್ಸಿಟಿ, ದೆಹಲಿ ಜವಹರಲಾಲ್ ನೆಹರೂ ಯೂನಿವರ್ಸಿಟಿ, ಕುವೆಂಪು ಯೂನಿವರ್ಸಿಟಿ, ರಾಜಸ್ಥಾನದ ಜನಾರ್ಧನ್ ಯೂನಿವರ್ಸಿಟಿ, ಮಧ್ಯಪ್ರದೇಶದ ಠಾಕೂರ್ ಯೂನಿವರ್ಸಿಟಿ, ಛತ್ತೀಸಗಡದ ಸಿವಿ ರಾಮನ್ ಯುನಿವರ್ಸಿಟಿ ಸೇರಿದಂತೆ ಒಟ್ಟು 10 ಯೂನಿವರ್ಸಿಟಿಗಳಿಗೆ ನೋಟಿಸ್ ಜಾರಿ ಮಾಡಿದ್ದಾರೆ.
ನಕಲಿ ಅಂಕ ಪಟ್ಟಿ ಕುರಿತು ಸ್ಪಷ್ಟನೆ ಕೋರಿ ಈ ಹತ್ತೂ ಯೂನಿವರ್ಸಿಟಿಗಳಿಗೆ ನೋಟಿಸ್ ನೀಡಲಾಗಿದೆ. ಇದೇ ವೇಳೆ ನಕಲಿ ಮಾರ್ಕ್ಸ್ ಕಾರ್ಡ್ ಪಡೆದು ನೌಕರಿಯಲ್ಲಿದ್ದವರಿಗೂ ಶಾಕ್ ನೀಡಲಾಗಿದೆ. ಆರೋಪಿಗಳ ಹೇಳಿಕೆ ಆಧರಿಸಿ ಈ ಪಟ್ಟಿ ಸಿದ್ಧಪಡಿಸಲಾಗಿದೆ. ನಕಲಿ ಮಾರ್ಕ್ಸ್ ಕಾರ್ಡ್ ಪಡೆದ 150 ಮಂದಿ ಹೆಸರು ಪಟ್ಟಿಯಲ್ಲಿದೆ. ಒಬ್ಬೊಬ್ಬರಾಗಿ ಇವರನ್ನು ಠಾಣೆಗೆ ಕರೆಯಿಸಿಕೊಂಡು ವಿಚಾರಿಸಿಕೊಳ್ಳಲಾಗುತ್ತಿದೆ.
ಈವರೆಗೂ 13 ಮಂದಿಯ ವಿಚಾರಣೆ ನಡೆಸಿ ಹೇಳಿಕೆ ದಾಖಲು ಮಾಡಿಕೊಳ್ಳಲಾಗಿದೆ. ಪರೀಕ್ಷೆ ಬರೆದು ಮಾರ್ಕ್ಸ್ ಪಡೆದಿದ್ದಾಗಿ ಇವರು ಹೇಳುತ್ತಿದ್ದಾರೆ. ಬೆಂಗಳೂರು ಸೇರಿದಂತೆ ಹಲವು ಜಿಲ್ಲೆಗಳಿಗೆ ಮಾರ್ಕ್ಸ್ ಕಾರ್ಡ್ ದಂಧೆ ನಡೆದಿದೆ. ಕೊಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಜನರಿಂದ ನಕಲಿ ಮಾರ್ಕ್ಸ್ ಕಾರ್ಡ್ ಖರೀದಿಯಾಗಿದೆ. ಸದ್ಯ ನಕಲಿ ಮಾರ್ಕ್ಸ್ ಕಾರ್ಡ್ ಎಂದು ತಿಳಿದು ಕಣ್ಣೀರು ಹಾಕುತ್ತಿದ್ದಾರೆ ಈ ವಿದ್ಯಾರ್ಥಿಗಳು. ಇದೇ ಮಾರ್ಚ್ ತಿಂಗಳ 8 ರಂದು ಜಯನಗರ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದರು. ಕಿಂಗ್ ಪಿನ್ ಧರ್ಮೇಂದ್ರ, ನರೇಶ್ ಸೇರಿದಂತೆ ನಾಲ್ವರನ್ನು ಬಂಧಿಸಲಾಗಿದೆ.
ಇದನ್ನೂ ಓದಿ: ಪಾದಯಾತ್ರೆ ನಾಟಕ ಮಾಡುವ ಕಾಂಗ್ರೆಸ್ಸಿಗರಿಗೆ ಮಿತ್ರಪಕ್ಷ ಡಿಎಂಕೆ ಮನವೊಲಿಸುವ ಧೈರ್ಯವಿಲ್ಲವೇ? -ಸಚಿವ ಸುಧಾಕರ್ ಮಾರ್ಮಿಕ ಪ್ರಶ್ನೆ ಇದನ್ನೂ ಓದಿ: ಇದು ಹೋಳಿ ಸಮಯ! ಸಮವಸ್ತ್ರ ಧರಿಸಿಯೇ ರಂಗಿನ ಹಬ್ಬ ಆಚರಿಸಿ, ಸೆಲ್ಫಿ ಕ್ರೇಜ್ನಲ್ಲಿ ಮಿಂದೆದ್ದ ಮಹಿಳಾ ಪೊಲೀಸ್
Published On - 6:54 pm, Tue, 22 March 22