ಕಂದಾಯ ಸಚಿವ PA ವಿರುದ್ಧ ಕಾನೂನು ಸಮರ: ನಿಷ್ಟಾವಂತ ಸಬ್ ರಿಜಿಸ್ಟ್ರಾರ್​ರಿಂದ ಶೃಂಗೇರಿ ಠಾಣೆಯಲ್ಲಿ ದೂರು ದಾಖಲು!

ಚಿಕ್ಕಮಗಳೂರು ಜಿಲ್ಲೆ ಶೃಂಗೇರಿ ತಾಲೂಕಿನ ಸಬ್ ರಿಜಿಸ್ಟ್ರಾರ್ ಚಲುವರಾಜ್ ಕಂದಾಯ ಸಚಿವರಾದ ಆರ್.ಅಶೋಕ್ ಪಿಎ ವಿರುದ್ಧ ಸದ್ಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಭ್ರಷ್ಟಾಚಾರದ ವಿರುದ್ಧ ಧನಿ ಎತ್ತಿ ಜನರಿಂದ ಮೆಚ್ಚುಗೆ ಪಡೆದುಕೊಂಡಿದ್ದಾರೆ.

ಕಂದಾಯ ಸಚಿವ PA ವಿರುದ್ಧ ಕಾನೂನು ಸಮರ: ನಿಷ್ಟಾವಂತ ಸಬ್ ರಿಜಿಸ್ಟ್ರಾರ್​ರಿಂದ ಶೃಂಗೇರಿ ಠಾಣೆಯಲ್ಲಿ ದೂರು ದಾಖಲು!
ಸಬ್ ರಿಜಿಸ್ಟ್ರಾರ್ ಚಲುವರಾಜ್
Follow us
preethi shettigar
| Updated By: ಸಾಧು ಶ್ರೀನಾಥ್​

Updated on: Jan 27, 2021 | 1:09 PM

ಚಿಕ್ಕಮಗಳೂರು: ಒಂದು ವ್ಯವಸ್ಥೆಯಲ್ಲಿ ಒಬ್ಬರ ಮೇಲೆ ಮತ್ತೊಬ್ಬರು ಆರೋಪ-ಪ್ರತ್ಯಾರೋಪ ಮಾಡೋದು ಸಹಜ. ಆದರೆ ಒಬ್ಬ ಸರ್ಕಾರಿ ಅಧಿಕಾರಿಯೇ ಸರ್ಕಾರದಲ್ಲಿನ ದುಷ್ಟಕೂಟದ ವಿರುದ್ಧ ದನಿ ಎತ್ತುತ್ತಾರೆ ಎಂದರೆ ಅದು ನಿಜವಾಗಿಯೂ ಮೆಚ್ಚಲೇಬೇಕಾದ ವಿಚಾರ. ಸದ್ಯ ಇಂತಹದೊಂದು ಗಂಭೀರ ಆರೋಪವನ್ನ ರಾಜ್ಯದ ಕಂದಾಯ ಸಚಿವರ ಪಿಎ ವಿರುದ್ಧ ಸಬ್ ರಿಜಿಸ್ಟ್ರಾರ್ ಒಬ್ಬರು ಮಾಡಿದ್ದಾರೆ. ತನ್ನಲ್ಲಿ ಹಣ ಕೇಳಿದ್ದಾರೆ ಎಂದು ಪೊಲೀಸ್ ಠಾಣೆಯಲ್ಲಿ ದೂರು ಕೂಡ ದಾಖಲಿಸಿದ್ದಾರೆ. ಅಷ್ಟಕ್ಕೂ ಈ ರೀತಿಯ ವ್ಯವಸ್ಥೆಯ ವಿರುದ್ಧವೇ ದನಿ ಎತ್ತಿದ್ದ ನಿಷ್ಠಾವಂತ ಅಧಿಕಾರಿ ಯಾರು ಅಂತೀರಾ..

ಚಿಕ್ಕಮಗಳೂರು ಜಿಲ್ಲೆ ಶೃಂಗೇರಿ ತಾಲೂಕಿನ ಸಬ್ ರಿಜಿಸ್ಟ್ರಾರ್ ಚಲುವರಾಜ್ ಕಂದಾಯ ಸಚಿವರ ಪಿಎ ವಿರುದ್ಧ ಸದ್ಯ ದೂರು ದಾಖಲಿಸಿರುವ ವ್ಯಕ್ತಿ. ಮೂಲತಃ ಮೈಸೂರು ಜಿಲ್ಲೆ ಹುಣಸೂರಿನವರಾದ ಚಲುವರಾಜ್ ಕಾರ್ಯವೈಖರಿ ಬಗ್ಗೆ ಕೇವಲ ಶೃಂಗೇರಿ ಜನರಿಗೆ, ಹೆಚ್ಚೆಂದರೆ ಚಿಕ್ಕಮಗಳೂರಿನ ಜನರಿಗೆ ಮಾತ್ರ ಗೊತ್ತಿತ್ತು. ಆದರೆ ಯಾವಾಗ ಕಂದಾಯ ಸಚಿವ ಆರ್. ಅಶೋಕ್, ಚಿಕ್ಕಮಗಳೂರಿಗೆ ಜನವರಿ 24ರಂದು ಭೇಟಿ ನೀಡಿದರೋ ಆಗ ಇವರ ಹೆಸರು ಇಡೀ ರಾಜ್ಯಕ್ಕೆ ತಿಳಿಯುವಂತಾಗಿದೆ.

ಹೌದು, ಮೊನ್ನೆ ಕಂದಾಯ ಸಚಿವ ಆರ್. ಅಶೋಕ್ ಚಿಕ್ಕಮಗಳೂರು ಜಿಲ್ಲೆಗೆ ಆಗಮಿಸಿದ್ದರು. ಈ ವೇಳೆ ಸಚಿವರ ಪಿಎ ಗಂಗಾಧರ್ ಎಂಬಾತ, ಶೃಂಗೇರಿಯ ಸಬ್ ರಿಜಿಸ್ಟ್ರಾರ್ ಅವರಿಗೆ ಕರೆ ಮಾಡಿ, ಸಚಿವರು ಶೃಂಗೇರಿಗೆ ಬರುತ್ತಾರೆ. ಭೇಟಿ ಮಾಡಿ, ತರ್ತೀರಾ ಎಂದು ಕೇಳಿದ್ದಾರೆ. ಆ ವೇಳೆ ಬರ್ತೀನಿ ಸರ್ ಎಂದು ಸಚಿವರು ಇರುವ ಸ್ಥಳಕ್ಕೆ ಸಬ್ ರಿಜಿಸ್ಟ್ರಾರ್ ಚಲುವರಾಜ್ ಹೋಗಿದ್ದರು. ಈ ವೇಳೆ ಸಚಿವರ ಪಿಎ ಗಂಗಾಧರ್, ಚೆಲುವರಾಜ್​ರನ್ನು ರೂಂಗೆ ಕರೆದುಕೊಂಡು ಹೋಗಿ ಕೊಡಿ ಅಂತಾ ಹೇಳಿದ್ದಾರೆ ಎಂದು ಶೃಂಗೇರಿ ಸಬ್ ರಿಜಿಸ್ಟ್ರಾರ್ ಚಲುವರಾಜ್ ಹೇಳಿದ್ದಾರೆ.

ಕಂದಾಯ ಸಚಿವರ ವಿರುದ್ಧ ದೂರು ನೀಡಿರುವ ಸಬ್ ರಿಜಿಸ್ಟ್ರಾರ್ ಚಲುವರಾಜ್

ಇದ್ದರಿಂದ ಒಂದು ಸೆಕೆಂಡ್ ವಿಚಲಿತರಾದ ಸಬ್ ರಿಜಿಸ್ಟ್ರಾರ್, ಏನು ಸರ್? ಎಂದು ಕೇಳಿದ್ದಾರೆ. ಮತ್ತೆ ಮಾತು ಮುಂದುವರಿಸಿ ಏನೂ ತಂದಿಲ್ವಾ? ಎಂದೂ ಸಚಿವರ ಪಿಎ ಗಂಗಾಧರ್ ಕೇಳಿದ್ದಾರೆ. ಇಲ್ಲ ಸರ್ ನನಗೆ ತೆಗೆದುಕೊಳ್ಳುವುದೂ ಗೊತ್ತಿಲ್ಲ, ಕೊಡೋದೂ ಗೊತ್ತಿಲ್ಲ ಎಂದು ಚೆಲುವರಾಜ್ ಹೇಳಿದಾಗ ಸರಿ ಹಾಗಿದ್ದರೆ ಹೋಗಿ ಮುಂದೆ ನೋಡಿಕೊಳ್ಳುತ್ತೇವೆ ಎಂದು ಕಂದಾಯ ಸಚಿವ ಪಿಎ ಕಳುಹಿಸಿದ್ದಾರೆ. ಇದರಿಂದ ಬೇಸರಗೊಂಡ ಸಬ್ ರಿಜಿಸ್ಟ್ರಾರ್ ಚಲುವರಾಜ್ ಇದೀಗ ಸಚಿವರ ಪಿಎ ಭ್ರಷ್ಟಾಚಾರವನ್ನು ಬಯಲು ಮಾಡಿದ್ದಾರೆ.

ಕೇವಲ ಪಿಎ ಕರ್ಮಕಾಂಡವನ್ನ ಬಯಲು ಮಾಡಿ, ಸುಮ್ಮನೆ ಕೂಡದ.. ಶೃಂಗೇರಿ ಪೊಲೀಸ್ ಠಾಣೆಯಲ್ಲಿ ಸಚಿವರ ಪಿಎ ವಿರುದ್ಧ ದೂರನ್ನು ಕೂಡ ದಾಖಲಿಸಿದ್ದಾರೆ. ಇನ್ನು ಒಬ್ಬ ಸರ್ಕಾರಿ ಅಧಿಕಾರಿಯೇ ಸರ್ಕಾರದಲ್ಲಿನ ದುಷ್ಟಕೂಟದ ಬಗ್ಗೆ ದನಿ ಎತ್ತಿದ್ದಕ್ಕೆ ರಾಜ್ಯಾದ್ಯಂತ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದೆ. ಈ ಬಗ್ಗೆ ಟಿವಿ9 ಜೊತೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ಈ ರೀತಿ ಸಚಿವರ ಪಿಎ ಒಬ್ಬ ಹಣ ಕೇಳಿರುವುದು ಹೊಸ ಪ್ರಕರಣವಲ್ಲ. ಇದೊಂದು ಭ್ರಷ್ಟ ಸರ್ಕಾರ, ಇಡೀ ಸರ್ಕಾರವೇ ಈ ರೀತಿ ಇದೆ ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

ಶೃಂಗೇರಿ ಪೊಲೀಸ್ ಠಾಣೆಯ ಚಿತ್ರಣ

ಕಂದಾಯ ಸಚಿವರ ಭೇಟಿಗಿಂತ ಅವರ ಆಪ್ತನದೇ ಮಾತು, ಸುದ್ದಿಯಾಗಿದೆ..! ಒಟ್ಟಿನಲ್ಲಿ ಚಿಕ್ಕಮಗಳೂರು ಜಿಲ್ಲೆಗೆ ಕಂದಾಯ ಸಚಿವ ಆರ್. ಅಶೋಕ್ ಮೊನ್ನೆ ಭೇಟಿ ನೀಡಿದ್ದು ದೊಡ್ಡ ಸುದ್ದಿಯಾಗಿದೆಯೋ ಇಲ್ಲವೋ ಗೊತ್ತಿಲ್ಲ. ಆದರೆ ಕಂದಾಯ ಸಚಿವರ ಪಿಎ ತೆರೆ ಹಿಂದೆ ಆಡಿದ ಆಟ ಮಾತ್ರ ಬಹಳಷ್ಟು ಸದ್ದು ಮಾಡುತ್ತಿದೆ. ಹಣದ ಹೊಳೆಯೇ ಹರಿಯೋ ಸಬ್ ರಿಜಿಸ್ಟ್ರಾರ್ ಕಛೇರಿಯಲ್ಲಿ, ಚಲುವರಾಜ್​ನಂತಹ ಅಧಿಕಾರಿಯನ್ನೇ ಪಡೆದ ನಾವೇ ಧನ್ಯರು ಎಮದು ಕಾಫಿನಾಡಿಗರು ಮಾತನಾಡಿಕೊಳ್ಳುತ್ತಿದ್ದಾರೆ.

ಗ್ರಾಮ ಪಂಚಾಯತಿಯಲ್ಲಿ ಕೆಲಸದಲ್ಲಿರೋ ಒಬ್ಬ ಸಾಮಾನ್ಯ ಸರ್ಕಾರಿ ನೌಕರರನ್ನ ಮಾತನಾಡಿಸಲು ಸಾಧ್ಯವಾಗದ ಪರಿಸ್ಥಿತಿಯಲ್ಲಿ, ಒಂದೇ ಒಂದು ವಾಹನವನ್ನ ಖರೀದಿಸದೇ, ಆದ್ದೂರಿ ಜೀವನ ಮಾಡದೇ ಸರಳವಾಗಿ ಬದುಕುತ್ತಿರುವ ಚಲುವರಾಜ್ ಬಗ್ಗೆ ಎಷ್ಟು ಹೇಳಿದರೂ ಕಡಿಮೆಯೇ. ಅದೇನೆ ಆಗಲಿ, ಭ್ರಷ್ಟ ವ್ಯವಸ್ಥೆಯಲ್ಲಿ ಗಟ್ಟಿ ಧೈರ್ಯ ಮಾಡಿ ಕಾನೂನು ಹೋರಾಟಕ್ಕೆ ಇಳಿದಿರುವ ಸಬ್ ರಿಜಿಸ್ಟ್ರಾರ್​ಗೆ ಶುಭವಾಗಲಿ ಎನ್ನುವುದೇ ಎಲ್ಲರ ಆಶಯ.

2ಜಿ ತೀರ್ಪಿನ ವಿರುದ್ಧ ಸಿಬಿಐ ಸಲ್ಲಿಸಿದ್ದ ಮೇಲ್ಮನವಿ ಪ್ರಶ್ನಿಸಿದ್ದ ಮನವಿಗಳನ್ನು ತಿರಸ್ಕರಿಸಿದ ದೆಹಲಿ ಹೈಕೋರ್ಟ್

ಕೊಟ್ಟ ಮಾತು ಉಳಿಸಿಕೊಂಡ ಸುರೇಶ್, ಧನರಾಜ್ ಮಗಳಿಗೆ ಉಡುಗೊರೆ
ಕೊಟ್ಟ ಮಾತು ಉಳಿಸಿಕೊಂಡ ಸುರೇಶ್, ಧನರಾಜ್ ಮಗಳಿಗೆ ಉಡುಗೊರೆ
ಬಿಗ್​ಬಾಸ್: ಫ್ಯಾಮಿಲಿ ವಿಸಿಟ್ ಬಳಿಕ ಗೆಳೆತನಗಳೆಲ್ಲ ಪೀಸ್-ಪೀಸ್
ಬಿಗ್​ಬಾಸ್: ಫ್ಯಾಮಿಲಿ ವಿಸಿಟ್ ಬಳಿಕ ಗೆಳೆತನಗಳೆಲ್ಲ ಪೀಸ್-ಪೀಸ್
ಕುಟುಂಬದ ಅರಣ್ಯರೋದನೆ; ಗೋಗರೆದರೂ ಕಿವಿಗೆ ಹಾಕಿಕೊಳ್ಳದ ಪೊಲೀಸರು
ಕುಟುಂಬದ ಅರಣ್ಯರೋದನೆ; ಗೋಗರೆದರೂ ಕಿವಿಗೆ ಹಾಕಿಕೊಳ್ಳದ ಪೊಲೀಸರು
ಹಿರಿಯ ನಾಯಕರನ್ನು ಪೊಲೀಸ್ ವಶಕ್ಕೆ ಪಡೆದರೂ ಎದೆಗುಂದದ ಕಾರ್ಯಕರ್ತರು
ಹಿರಿಯ ನಾಯಕರನ್ನು ಪೊಲೀಸ್ ವಶಕ್ಕೆ ಪಡೆದರೂ ಎದೆಗುಂದದ ಕಾರ್ಯಕರ್ತರು
ತನ್ನೂರಿನ ಸರ್ಕಾರಿ ಶಾಲೆಗೆ ಹೈಕೆಟ್ ಸ್ಪರ್ಷ ನೀಡುತ್ತಿರುವ ಡಾಲಿ: ವಿಡಿಯೋ
ತನ್ನೂರಿನ ಸರ್ಕಾರಿ ಶಾಲೆಗೆ ಹೈಕೆಟ್ ಸ್ಪರ್ಷ ನೀಡುತ್ತಿರುವ ಡಾಲಿ: ವಿಡಿಯೋ
29 ಎಸೆತಗಳಲ್ಲಿ ಅರ್ಧಶತಕ; 50 ವರ್ಷಗಳ ಹಳೆಯ ದಾಖಲೆ ಮುರಿದ ಪಂತ್
29 ಎಸೆತಗಳಲ್ಲಿ ಅರ್ಧಶತಕ; 50 ವರ್ಷಗಳ ಹಳೆಯ ದಾಖಲೆ ಮುರಿದ ಪಂತ್
ಮಧ್ಯಪ್ರದೇಶದ ಪಿತಾಂಪುರದಲ್ಲಿ ಪ್ರತಿಭಟನೆ ವೇಳೆ ಬೆಂಕಿ ಹಚ್ಚಿಕೊಂಡ ಇಬ್ಬರು
ಮಧ್ಯಪ್ರದೇಶದ ಪಿತಾಂಪುರದಲ್ಲಿ ಪ್ರತಿಭಟನೆ ವೇಳೆ ಬೆಂಕಿ ಹಚ್ಚಿಕೊಂಡ ಇಬ್ಬರು
ಶಾಸಕನ ಜಾತಿಯವರೇ ಕ್ಷೇತ್ರದ ಪದಾಧಿಕಾರಿಗಳಾಗಬಾರದು: KN ರಾಜಣ್ಣ
ಶಾಸಕನ ಜಾತಿಯವರೇ ಕ್ಷೇತ್ರದ ಪದಾಧಿಕಾರಿಗಳಾಗಬಾರದು: KN ರಾಜಣ್ಣ
ಖರ್ಗೆ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ: ಕಲಬುರಗಿಯಲ್ಲಿ ಜನಸಾಗರ
ಖರ್ಗೆ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ: ಕಲಬುರಗಿಯಲ್ಲಿ ಜನಸಾಗರ
ವಕ್ಫ್ ವಿರುದ್ಧ ಹೋರಾಟದ ರೂವಾರಿ ಯತ್ನಾಳ್ ಹೆಸರು ಪ್ರಸ್ತಾಪಿಸದ ವಿಜಯೇಂದ್ರ
ವಕ್ಫ್ ವಿರುದ್ಧ ಹೋರಾಟದ ರೂವಾರಿ ಯತ್ನಾಳ್ ಹೆಸರು ಪ್ರಸ್ತಾಪಿಸದ ವಿಜಯೇಂದ್ರ