ಪದವೀಧರರ ಗಮನಕ್ಕೆ.. ವಿವಿಧ ಸಚಿವಾಲಯಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನ

ಡಿಸೆಂಬರ್​ 21ರಿಂದ ನೋಂದಣಿ ಪ್ರಕ್ರಿಯೆ ಆರಂಭವಾಗಲಿದೆ. ssc.nic.in ವೆಬ್​ಸೈಟ್​ನಲ್ಲಿ ಅರ್ಜಿ ಸಲ್ಲಿಕೆ ಮಾಡಬಹುದಾಗಿದೆ. 2021ರ ಜನವರಿ 25 ಕೊನೆಯ ದಿನಾಂಕ.

ಪದವೀಧರರ ಗಮನಕ್ಕೆ.. ವಿವಿಧ ಸಚಿವಾಲಯಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನ
ಸಾಂದರ್ಭಿಕ ಚಿತ್ರ
Rajesh Duggumane

| Edited By: sadhu srinath

Dec 14, 2020 | 3:49 PM

ಸಿಬ್ಬಂದಿ ನೇಮಕಾತಿ ಆಯೋಗ (ಎಸ್​​ಎಸ್​ಸಿ) ಭಾರತ ಸರ್ಕಾರದ ವಿವಿಧ ಸಚಿವಾಲಯ,ಇಲಾಖೆ ಹಾಗೂ ಸಂಸ್ಥೆಗಳಲ್ಲಿ Combined Graduate ವರ್ಗದ ಗ್ರೂಪ್​ ಬಿ ಹಾಗೂ ಗ್ರೂಪ್​ ಸಿ ಹುದ್ದೆಗಳಿಗೆ ಅರ್ಜಿ ಆಹ್ವಾನ ಮಾಡಿದೆ. ಡಿಸೆಂಬರ್​ 21ರಿಂದ ನೋಂದಣಿ ಪ್ರಕ್ರಿಯೆ ಆರಂಭವಾಗಲಿದೆ. ಅರ್ಹ ಅಭ್ಯರ್ಥಿಗಳು ssc.nic.in ವೆಬ್​ಸೈಟ್​ನಲ್ಲಿ ಅರ್ಜಿ ಸಲ್ಲಿಕೆ ಮಾಡಬಹುದಾಗಿದೆ. 2021ರ ಜನವರಿ 25 ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ.

SSC CGL 2020 ಅರ್ಹತಾ ಮಾನದಂಡಗಳು

ಸಹಾಯಕ ಲೆಕ್ಕಪರಿಶೋಧಕ ಅಧಿಕಾರಿ (Assistant Audit Officer)- ಮಾನ್ಯತೆ ಪಡೆದ ಯಾವುದೇ ವಿಶ್ವವಿದ್ಯಾಲಯದಿಂದ ಪದವಿ ಪಡೆದಿರಬೇಕು. ಅರ್ಹತೆ: ಸಿಎ/ ಸಿಎಸ್/ ಎಂಬಿಎ/ ಕಾಸ್ಟ್​ & ಮ್ಯಾನೇಜ್ಮೆಂಟ್​ ಅಕೌಂಟ್​​​/ ಎಂ.ಕಾಮ್/ ವ್ಯವಹಾರ ಅಧ್ಯಯನದಲ್ಲಿ ಸ್ನಾತಕೋತ್ತರ ಪದವಿ.

ಸಂಖ್ಯಾಶಾಸ್ತ್ರೀಯ ತನಿಖಾಧಿಕಾರಿ ಗ್ರೇಡ್​ II (Statistical Investigator Grade-II)- ಮಾನ್ಯತೆ ಪಡೆದ ಯಾವುದೇ ವಿಶ್ವವಿದ್ಯಾಲಯದಿಂದ ಪದವಿ ಹೊಂದಿರಬೇಕು. ಸಂಖ್ಯಾಶಾಸ್ತ್ರ ಕೂಡ ಒಂದ ವಿಷಯವಾಗಿರುವುದು ಕಡ್ಡಾಯ

ಕಿರಿಯ ಸಂಖ್ಯಾಶಾಸ್ತ್ರೀಯ ಅಧಿಕಾರಿ (Junior Statistical Officer- ಮಾನ್ಯತೆ ಪಡೆದ ಯಾವುದೇ ವಿಶ್ವವಿದ್ಯಾಲಯದಿಂದ ಸ್ನಾತಕ್ಕೋತ್ತರ ಪದವಿ ಪಡೆದಿರಬೇಕು. 12ನೇ ತರಗತಿಯ ಗಣಿತ ವಿಷಯದಲ್ಲಿ ಶೇ.60 ಅಂಕ ಪಡೆದಿರಬೇಕು ಅಥವಾ ಪದವಿಯಲ್ಲಿ ಸಂಖ್ಯಾಶಾಸ್ತ್ರ ಅಧ್ಯಯನ ಮಾಡಿರಬೇಕು.

ಇತರೆ ಹುದ್ದೆಗಳು: ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ ಪಡೆದಿರಬೇಕು. ಪದವಿ ಕೊನೆಯ ವರ್ಷದಲ್ಲಿ ಅಧ್ಯಯನ ಮಾಡುವವರು ಕೂಡ ಅರ್ಜಿ ಸಲ್ಲಿಸಬಹುದು.

ಆಯ್ಕೆ ಪ್ರಕ್ರಿಯೆ ಹೇಗೆ? ಶ್ರೇಣಿ-1, ಶ್ರೇಣಿ-2, ಶ್ರೇಣಿ-3 ಹಾಗೂ ಶ್ರೇಣಿ-4 ಹಂತದಲ್ಲಿ SSC CGL ಪರೀಕ್ಷೆ ಪರೀಕ್ಷೆ ನಡೆಯಲಿದೆ. ಈ ಮೂಲಕ ಆಯ್ಕೆ ಪ್ರಕ್ರಿಯೆ ನಡೆಯಲಿದೆ.

Bengaluru Tech Summit 2020 ಮುಂದಿನ 5 ವರ್ಷಗಳಲ್ಲಿ 50 ಲಕ್ಷ ಉದ್ಯೋಗ: CM ಯಡಿಯೂರಪ್ಪ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada