ರಾಜರ್ಷಿ ಕೃಷ್ಣರಾಜ ಒಡೆಯರ್ ಹೆಸರಲ್ಲಿ 10 ಜನರಿಗೆ ಪ್ರಶಸ್ತಿ: YSV ದತ್ತಾ ಮಾತ್ನಾಡಿದ್ದಾರೆ ಕೇಳಿ

ಮೈಸೂರು: ಇಂದು, ನಾಡನ್ನು ಆಳಿದ, ಜನಪರ ಕಾಳಜಿಯಿದ್ದ ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರವರ 136ನೇ ಜಯಂತಿ. ಈ ವರ್ಷದಿಂದ ನಾಲ್ವಡಿ ಕೃಷ್ಣರಾಜ ಒಡೆಯರ್ ಹೆಸರಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತೆ ಎಂದು ಮೈಸೂರು ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ತಿಳಿಸಿದ್ದಾರೆ. ನಾಲ್ವಡಿ ಕೃಷ್ಣರಾಜ ಒಡೆಯರವರ ಹೆಸರಿನಲ್ಲಿ ಪ್ರತಿವರ್ಷ 10 ಜನರಿಗೆ ಪ್ರಶಸ್ತಿ ವಿತರಣೆ ಮಾಡಲಾಗುವುದು. ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ 10 ಜನರನ್ನು ಮೈಸೂರು ಜಿಲ್ಲಾಧಿಕಾರಿ ಆಯ್ಕೆ ಮಾಡಲಿದ್ದಾರೆ. ಈ ಮೂಲಕ ನಾಡ ದೊರೆಗೆ ಗೌರವ‌ ಸಮರ್ಪಣೆ ಮಾಡಲಾಗುತ್ತಿದೆ. […]

ರಾಜರ್ಷಿ ಕೃಷ್ಣರಾಜ ಒಡೆಯರ್ ಹೆಸರಲ್ಲಿ 10 ಜನರಿಗೆ ಪ್ರಶಸ್ತಿ: YSV ದತ್ತಾ ಮಾತ್ನಾಡಿದ್ದಾರೆ ಕೇಳಿ
Edited By:

Updated on: Jun 06, 2020 | 10:55 AM

ಮೈಸೂರು: ಇಂದು, ನಾಡನ್ನು ಆಳಿದ, ಜನಪರ ಕಾಳಜಿಯಿದ್ದ ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರವರ 136ನೇ ಜಯಂತಿ. ಈ ವರ್ಷದಿಂದ ನಾಲ್ವಡಿ ಕೃಷ್ಣರಾಜ ಒಡೆಯರ್ ಹೆಸರಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತೆ ಎಂದು ಮೈಸೂರು ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ತಿಳಿಸಿದ್ದಾರೆ.

ನಾಲ್ವಡಿ ಕೃಷ್ಣರಾಜ ಒಡೆಯರವರ ಹೆಸರಿನಲ್ಲಿ ಪ್ರತಿವರ್ಷ 10 ಜನರಿಗೆ ಪ್ರಶಸ್ತಿ ವಿತರಣೆ ಮಾಡಲಾಗುವುದು. ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ 10 ಜನರನ್ನು ಮೈಸೂರು ಜಿಲ್ಲಾಧಿಕಾರಿ ಆಯ್ಕೆ ಮಾಡಲಿದ್ದಾರೆ. ಈ ಮೂಲಕ ನಾಡ ದೊರೆಗೆ ಗೌರವ‌ ಸಮರ್ಪಣೆ ಮಾಡಲಾಗುತ್ತಿದೆ. ಮಹಾತ್ಮ ಗಾಂಧಿ ಅವರು ಆರೋಗ್ಯ ಸುಧಾರಣೆಗೆ ಅದೊಮ್ಮೆ ನಂದಿಬೆಟ್ಟಕ್ಕೆ ಬಂದಿದ್ದಾಗ ನಾಲ್ವಡಿ ಕೃಷ್ಣರಾಜ ಒಡೆಯರವರು ದೇಖರೇಖಿ ನಡೆಸುತ್ತಾರೆ. ಇದರಿಂದ ಸಂತೃಪ್ತರಾದ ಮಹಾತ್ಮ ಗಾಂಧಿ ಅವರು ನಾಲ್ವಡಿ ಕೃಷ್ಣರಾಜ ಒಡೆಯರರನ್ನು ‘ರಾಜಋಷಿ’ ಎಂದು ಕರೆದಿದ್ದರು.

ಜೊತೆಗೆ, ಕನ್ನಂಬಾಡಿ ನಿರ್ಮಾಣ ಮಾಡುವುದಕ್ಕೆ ಸರ್ ಎಂ ವಿಶ್ವೇರಯ್ಯ ಅವರಿಗೆ ಒತ್ತಾಸೆಯಾಗಿ ನಿಂತವರು ಇದೇ ನಾಲ್ವಡಿ ಕೃಷ್ಣರಾಜ ಒಡೆಯರು. ಕೋಲಾರದ ಚಿನ್ನದ ಗಣಿಗೆ ಶವನಸಮುದ್ರದಿಂದ ವಿದ್ಯುತ್​ ಸಂಪರ್ಕ ಕಲ್ಪಿಸಿದವರು ಇದೇ ರಾಜಋಷಿ ನಾಲ್ವಡಿ ಕೃಷ್ಣರಾಜ ಒಡೆಯರು.

ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಬಗ್ಗೆ ಜೆಡಿಎಸ್ ನಾಯಕ ವೈಎಸ್​ವಿ ದತ್ತಾ ಅವರು ಮಾತನಾಡಿದ್ದಾರೆ, ವೀಕ್ಷಿಸಿ:

Published On - 11:40 am, Thu, 4 June 20