ಒಂದೆಡೆ ಮೂರನೇ ಅಲೆ ಎಚ್ಚರಿಕೆ, ಮತ್ತೊಂಡೆ ಶಾಲೆ ಆರಂಭದ ಸಲಹೆ; ತಜ್ಞರ ವರದಿಯಿಂದ ಗೊಂದಲದಲ್ಲಿ ಸರ್ಕಾರ.. ಮುಂದೇನು?

ಒಂದು ಕಡೆ ತಜ್ಞರು ಮೂರನೇ ಅಲೆಯಲ್ಲಿ ಮಕ್ಕಳಿಗೆ ಗಂಡಾಂತರ ಎಂದು ಎಚ್ಚರಿಕೆ ನೀಡಿದ್ದಾರೆ. ಮತ್ತೊಂದು ಕಡೆ ಹಂತ ಹಂತವಾಗಿ ಶಾಲೆ ತೆರೆಯಬಹುದೆಂದು ಸೂಚನೆ ನೀಡಿದ್ದಾರೆ. ಇವೆರಡೂ ತಜ್ಞರ ವರದಿಯಿಂದ ಸರ್ಕಾರಕ್ಕೆ ಗೊಂದಲ ಉಂಟಾಗಿದೆ. ತಜ್ಞರ ವರದಿಯಿಂದ ಶಿಕ್ಷಣ ಇಲಾಖೆ ತಬಿಬ್ಬಾಗಿದೆ. ಕೊವಿಡ್ ತಾಂತ್ರಿಕ ಸಲಹಾ ಸಮಿತಿ ನಿನ್ನೆಯಷ್ಟೆ ಶಾಲೆ ಆರಂಭಕ್ಕೆ ಸಲಹೆ ನೀಡಿತ್ತು.

ಒಂದೆಡೆ ಮೂರನೇ ಅಲೆ ಎಚ್ಚರಿಕೆ, ಮತ್ತೊಂಡೆ ಶಾಲೆ ಆರಂಭದ ಸಲಹೆ; ತಜ್ಞರ ವರದಿಯಿಂದ ಗೊಂದಲದಲ್ಲಿ ಸರ್ಕಾರ.. ಮುಂದೇನು?
ಪ್ರಾತಿನಿಧಿಕ ಚಿತ್ರ
Follow us
| Updated By: ಆಯೇಷಾ ಬಾನು

Updated on: Jun 23, 2021 | 7:30 AM

ಬೆಂಗಳೂರು: ಮಹಾಮಾರಿ ಕೊರೊನಾದಿಂದ ಬಂದ್ ಆಗಿದ್ದ ಶಾಲೆಗಳನ್ನು ತೆರೆಯಲು ಸರ್ಕಾರ ಚಿಂತಿಸಿದೆ. ರಾಜ್ಯದಲ್ಲಿ ಹಂತ ಹಂತವಾಗಿ ಶಾಲೆಗಳನ್ನು ಆರಂಭಿಸಲು ಡಾ.ದೇವಿಪ್ರಸಾದ್ ಶೆಟ್ಟಿ ಸಲಹೆ ನೀಡಿದ್ದಾರೆ. ಆದರೆ ಶಾಲೆಗಳ ಆರಂಭ ವಿಚಾರದಲ್ಲಿದ್ದ ಗೊಂದಲ ಇನ್ನೂ ಬಗೆ ಹರಿದಿಲ್ಲ. ಸರ್ಕಾರಕ್ಕೆ ಚಿಂತೆ ಹೆಚ್ಚಾಗಿದೆ. ಶಾಲೆ ತೆಯಬೇಕೆ ಬೇಡವೇ ಎಂಬ ಗೊಂದಲ ಹೆಚ್ಚಾಗಿದೆ.

ಒಂದು ಕಡೆ ತಜ್ಞರು ಮೂರನೇ ಅಲೆಯಲ್ಲಿ ಮಕ್ಕಳಿಗೆ ಗಂಡಾಂತರ ಎಂದು ಎಚ್ಚರಿಕೆ ನೀಡಿದ್ದಾರೆ. ಮತ್ತೊಂದು ಕಡೆ ಹಂತ ಹಂತವಾಗಿ ಶಾಲೆ ತೆರೆಯಬಹುದೆಂದು ಸೂಚನೆ ನೀಡಿದ್ದಾರೆ. ಇವೆರಡೂ ತಜ್ಞರ ವರದಿಯಿಂದ ಸರ್ಕಾರಕ್ಕೆ ಗೊಂದಲ ಉಂಟಾಗಿದೆ. ತಜ್ಞರ ವರದಿಯಿಂದ ಶಿಕ್ಷಣ ಇಲಾಖೆ ತಬಿಬ್ಬಾಗಿದೆ. ಕೊವಿಡ್ ತಾಂತ್ರಿಕ ಸಲಹಾ ಸಮಿತಿ ನಿನ್ನೆಯಷ್ಟೆ ಶಾಲೆ ಆರಂಭಕ್ಕೆ ಸಲಹೆ ನೀಡಿತ್ತು. ಶಾಲೆ ಆರಂಭಿಸಿ ಅಂತಾ ಸಿಎಂಗೆ ವರದಿ ನೀಡಿತ್ತು. ಇನ್ನೊಂದೆಡೆ ಇದೇ ಸಮಿತಿ ಮೂರನೇ ಅಲೆಯ ಎಚ್ಚರಿಕೆ ನೀಡಿದೆ. ಕೊರೊನಾ ಮೂರನೇ ಅಲೆ ಮಕ್ಕಳಿಗೆ ಕಂಟಕ ಅಂತಾ ವರದಿ ನೀಡಿದೆ. ಮೂರನೇ ಅಲೆಯಿಂದ ಮಕ್ಕಳ ರಕ್ಷಣೆ ಮಾಡಲು ಈಗಿನಿಂದಲೇ ಸಿದ್ಧತೆ ಮಾಡಿಕೊಳ್ಳಿ ಅಂತಾ ಹೇಳಿದೆ. ತಜ್ಞರ ಈ ವರದಿಯಿಂದ ಸರ್ಕಾರ ಗೊಂದಲದಲ್ಲಿ ಸಿಲುಕಿದೆ. ತಜ್ಞರ ಗೊಂದಲದ ವರದಿಯಿಂದ ಪೋಷಕರಲ್ಲಿಯೂ ಆತಂಕ ಹೆಚ್ಚಾಗಿದೆ. ಯಾವುದನ್ನ ಪರಿಗಣಿಸುವುದು ಯಾವುದನ್ನು ಬಿಡುವುದು ಎನ್ನುವ ಗೊಂದಲದಲ್ಲಿ ಸರ್ಕಾರ ತಲೆ ಮೇಲೆ ಕೈ ಇಟ್ಟು ಕೂತಿದೆ.

ಶಾಲೆ ಆರಂಭಕ್ಕೆ ತಜ್ಞರು ಹೇಳೋದೇನು? ಮಕ್ಕಳ ಆರೋಗ್ಯದ ದೃಷ್ಟಿಯಿಂದ ಶಾಲೆ ಆರಂಭಿಸುವಂತೆ ಕೊವಿಡ್ ಸಲಹಾ ಸಮಿತಿ ಸಲಹೆ ನೀಡಿದೆ. ಮಕ್ಕಳ ಕಲಿಕೆ, ದೈಹಿಕ ಆರೋಗ್ಯ, ಮಾನಸಿಕ ಆರೋಗ್ಯ ಮತ್ತು ಮಕ್ಕಳ ಪೌಷ್ಟಿಕಾಂಶ ಉತ್ತಮಗೊಳಿಸಲು ಶಾಲೆಗಳನ್ನು ತೆರೆಯಲು ಶಿಫಾರಸು ಮಾಡಿದೆ. ಶಾಲೆ ತೆರೆಯಲು ತಡವಾದ್ರೆ ಬಾಲ ಕಾರ್ಮಿಕ ಪದ್ಧತಿ, ಬಾಲ್ಯ ವಿವಾಹ, ಮಕ್ಕಳ ಕಳ್ಳಸಾಗಣೆ, ಭಿಕ್ಷಾಟನೆ ಇತ್ಯಾದಿ ಪ್ರಕರಣಗಳು ಹೆಚ್ಚಾಗಲಿವೆ. ಶಾಲೆ ಆರಂಭ ತಡವಾದ್ರೆ ಮಕ್ಕಳ ಮಾನಸಿಕ ಸ್ಥಿತಿಯನ್ನು ಇನ್ನಷ್ಟು ಹದಗೆಡಿಸುತ್ತದೆ. ಡಿಜಿಟಲ್ ಕಲಿಕೆ ನಿರೀಕ್ಷಿತ ಗುರಿಗಳಿಗಿಂತ ಕಡಿಮೆ ಯಶಸ್ವಿಯಾಗಿದೆ. ಶಾಲೆ ಆರಂಭವಾಗದೆ ಇರುವುದು ಶೈಕ್ಷಣಿಕ ಅಸಮಾನತೆಯನ್ನು ಸೃಷ್ಟಿಸುವಲ್ಲಿ ಕಲಿಕೆಯಲ್ಲಿ ದೊಡ್ಡ ಅಂತರವನ್ನು ಸೃಷ್ಟಿಸಿದೆ. ಶಾಲೆಗಳು ಕೊವಿಡ್ ವ್ಯಾಪಕವಾಗಿ ಹರಡುವ ದೊಡ ಪ್ರದೇಶಗಳಾಗಿರುವ ಸಾಧ್ಯತೆ ಪ್ರಪಂಚದಲ್ಲಿ ಎಲ್ಲಿಯೂ ಸಾಬೀತಾಗಿಲ್ಲ. ಎಸ್‌ಡಿಎಂಸಿ ಗೆ ಶಾಲೆ ತೆರೆಯುವ ಬಗ್ಗೆ ನಿರ್ಧಾರ ತೆಗೆದುಕೊಳ್ಳುವ ಜವಬ್ದಾರಿ ನೀಡಬೇಕು. ಜಿಲ್ಲಾ ಮಟ್ಟದ ಶಾಲಾ ಸುರಕ್ಷತಾ ಪರಿಶೀಲನಾ ಸಮಿತಿಯನ್ನು ಸ್ಥಾಪಿಸವಂತೆ ಸಲಹೆ ನೀಡಲಾಗಿದೆ.

ಮೂರನೇ ಅಲೆಗೆ ತಜ್ಞರು ನೀಡಿದ ಸಲಹೆ ಏನು? ಮೂರನೇ ಅಲೆಯಿಂದ ಮಕ್ಕಳಿಗೆ ಹೆಚ್ಚು ಅಪಾಯವಾಗಲಿದೆ. ಸೋಂಕು ಹೆಚ್ಚು ಮಕ್ಕಳಿಗೆ ಹರಡುವ ಸಾಧ್ಯತೆ ಇದೆ. ಅಪೌಷ್ಟಿಕ ಮಕ್ಕಳೆ ಮೂರನೇ ಅಲೆಯ ಪ್ರಮುಖ ಟಾರ್ಗೆಟ್. ಮಕ್ಕಳಿಗೆ ಮೂರನೇ ಅಲೆಯ ತೀವ್ರತೆ ಹೆಚ್ಚು ಸಿದ್ಧತೆಗೆ ಸರ್ಕಾರಕ್ಕೆ ಸಲಹೆ ನೀಡಿದೆ. ಐಸಿಯು / ಎಸ್‌ಎನ್‌ಸಿಯು, ಪೀಡಿಯಾಟ್ರಿಕ್ ವಾರ್ಡ್ ಹಾಸಿಗೆಗಳು ಹೆಚ್ಚಿನ ಸಂಖ್ಯೆಯಲ್ಲಿ ಹೆಚ್ಚಿಸುವುದು. ತಾಲ್ಲೂಕು ಆಸ್ಪತ್ರೆಗಳು, ಜಿಲ್ಲಾ ಆಸ್ಪತ್ರೆಗಳು ಮತ್ತು ವೈದ್ಯಕೀಯ ಕಾಲೇಜುಗಳನ್ನು ಸಿದ್ದಪಡಿಸಿಕೊಳ್ಳುವುದು. ವೈದ್ಯರು, ದಾದಿಯರು ಮತ್ತು ಅರೆವೈದ್ಯಕೀಯ ವೈದ್ಯರನ್ನು ಹೆಚ್ಚಿನ ಸಂಖ್ಯೆಯಲ್ಲಿ ನೇಮಕಾತಿ ಮಾಡುವುದು. ಸದ್ಯ ಆಸ್ಪತ್ರೆಯಲ್ಲಿರುವ ಎಸ್‌ಎನ್‌ಸಿಯು / ಎನ್‌ಐಸಿಯು, ಪಿಐಸಿಯು ಅನ್ನು ನವೀಕರಿಸುವುದು. ಅಸ್ತಿತ್ವದಲ್ಲಿರುವ ಹೆಚ್‌ಡಿಯು ಬೆಡ್ಗಳನ್ನ ಪಿಐಸಿಯು ಬೆಡ್ಗಳಾಗಿ ಪರಿವರ್ತಿಸುವುದು. ಪೀಡಿಯಾಟ್ರಿಕ್ ವಾರ್ಡ್‌ಗಳನ್ನು ಪೈಪ್ಡ್ ಸೆಂಟ್ರಲ್ ಆಕ್ಸಿಜನ್ ಮತ್ತು ಹೀರುವ ಸೌಲಭ್ಯದೊಂದಿಗೆ ಹೆಚ್‌ಡಿಯು ಆಗಿ ನವೀಕರಿಸುವುದರಿಂದ ಆಸ್ಪತ್ರೆಯ ಕ್ಯಾಂಪಸ್‌ನಲ್ಲಿ ಐಜಿಐಸಿಎಚ್‌ನಂತಹ ಸೌಲಭ್ಯ ಹೆಚ್ಚಾಗುತ್ತೆ. ಪೀಡಿಯಾಟ್ರಿಕ್ ಪ್ರಕರಣಗಳ ಉಲ್ಬಣವು ಕಂಡುಬಂದರೆ ಮಕ್ಕಳಿಗಾಗಿ ಅಸ್ತಿತ್ವದಲ್ಲಿರುವ MICU ವಾರ್ಡ್ ಹಾಸಿಗೆಗಳಲ್ಲಿ 10-20 ಪ್ರತಿಶತದಷ್ಟು ನಿಗದಿಪಡಿಸುವುದು. ಈ ರೀತಿ ಮಕ್ಕಳನ್ನು ಮೂರನೇ ಅಲೆಯಿಂದ ಕಾಪಾಡಲು ಸರ್ಕಾರ ಕೆಲವು ಸಲಹೆಗಳನ್ನು ನೀಡಿದೆ.

ಇದನ್ನೂ ಓದಿ: School Reopening: ಶಾಲೆಗಳ ಆರಂಭಕ್ಕೆ ತಜ್ಞರಿಂದ ಸಲಹೆ; ಸಮ, ಬೆಸ ಮಾದರಿಯಲ್ಲಿ ಆರಂಭ

ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ