ರೈತರಿಗೆ ಹಣ ಪಾವತಿ ಬಾಕಿ ಇಟ್ಟುಕೊಂಡಿರುವ 7 ಸಕ್ಕರೆ ಕಾರ್ಖಾನೆಗಳಿಗೆ 2 ದಿನ ಗಡುವು ನೀಡಿದ ಸಚಿವ ಶಂಕರ ಪಾಟೀಲ ಮುನೇನಕೊಪ್ಪ

ಇನ್ನೆರಡು ದಿನಗಳಲ್ಲಿ ರೈತರಿಗೆ ಹಣ ಪಾವತಿಸದಿದ್ದರೆ ಜಿಲ್ಲಾಧಿಕಾರಿಗಳ ಮೂಲಕ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸಭೆಯಲ್ಲಿ ಸಕ್ಕರೆ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ತಾಕೀತು ಮಾಡಿದರು. ಹಾಗಾದರೆ ಯಾವ ಸಕ್ಕರೆ ಕಾರ್ಖಾನೆಗಳಲ್ಲಿ ಎಷ್ಟು ಹಣ ಪಾವತಿಸುವುದು ಬಾಕಿಯಿದೆ? ಇಲ್ಲಿದೆ ವಿವರ.

ರೈತರಿಗೆ ಹಣ ಪಾವತಿ ಬಾಕಿ ಇಟ್ಟುಕೊಂಡಿರುವ 7 ಸಕ್ಕರೆ ಕಾರ್ಖಾನೆಗಳಿಗೆ 2 ದಿನ ಗಡುವು ನೀಡಿದ ಸಚಿವ ಶಂಕರ ಪಾಟೀಲ ಮುನೇನಕೊಪ್ಪ
ಶಂಕರ ಪಾಟೀಲ್ ಮುನೇನಕೊಪ್ಪ

ಬೆಂಗಳೂರು: 7 ಸಕ್ಕರೆ ಕಾರ್ಖಾನೆಗಳು ರೈತರಿಗೆ ಒಟ್ಟು 42 ಕೋಟಿ ಹಣ ಪಾವತಿಸುವುದನ್ನು ಬಾಕಿ ಉಳಿಸಿಕೊಂಡಿದ್ದು, 2 ದಿನದೊಳಗೆ ರೈತರಿಗೆ ಬಾಕಿ ಪಾವತಿಸುವಂತೆ ಸೂಚಿಸಿದ್ದೇನೆ ಎಂದು ಸಕ್ಕರೆ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ತಿಳಿಸಿದರು.

2021-22ನೇ ಸಾಲಿನಲ್ಲಿ ಕಬ್ಬು ಅರೆಯಲು ಪ್ರಾರಂಭಿಸಲು ಪೂರ್ವ ಸಿದ್ಧತಾ ಯೋಜನೆಗಳು, ಕಾರ್ಖಾನೆಗಳ ಕಾರ್ಯ, ದೊರೆಯಬಹುದಾದ ಕಬ್ಬಿನ ಲಭ್ಯತೆ ಕೂಡ ಸಭೆಯಲ್ಲಿ ಚರ್ಚಿಸಲಾಗಿದೆ ಎಂದು ಅವರು ವಿವರಿಸಿದರು. ಬಾಕಿ ಉಳಿಸಿಕೊಂಡಿರುವ ಕಾರ್ಖಾನೆಗಳು ಆಕ್ಟೋಬರ್ 03 ರೊಳಗೆ ಹಣ ಪಾವತಿ ಮಾಡುವಂತೆ ಸೂಚನೆ ನೀಡಲಾಗಿದೆ. ಈಗಾಗಲೇ ಬಸವೇಶ್ವರ ಶುಗರ್ಸ್ ಹಾಗೂ ಕೋರ್ ಗ್ರೀನ್ ಶುಗರ್ಸ್ ಕಾರ್ಖಾನೆಗಳಿಗೆ ಜಿಲ್ಲಾಧಿಕಾರಿಗಳ ಮೂಲಕ ವಸೂಲಾತಿಗೆ ನೊಟೀಸ್ ಜಾರಿಗೊಳಿಸಲಾಗಿದೆ. ಉಳಿದ ಕಾರ್ಖಾನೆಗಳು ಇನ್ನೆರಡು ದಿನಗಳಲ್ಲಿ ರೈತರಿಗೆ ಹಣ ಪಾವತಿಸದಿದ್ದರೆ ಜಿಲ್ಲಾಧಿಕಾರಿಗಳ ಮೂಲಕ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸಭೆಯಲ್ಲಿ ಸಕ್ಕರೆ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ತಾಕೀತು ಮಾಡಿದರು.

ಸೋಮೇಶ್ವರ ಎಸ್‌. ಎಸ್. ಕೆ .ಲಿ. ಬೈಲಹೊಂಗಲ, ಬೆಳಗಾವಿ – 69 ಲಕ್ಷ
ಜಮಖಂಡಿ ಶುಗರ್ಸ್ ಲಿ. ಹಿರೆಪಡಸಲಗಿ, ಜಮಖಂಡಿ, ಬಾಗಲಕೋಟೆ- 1 ಕೋಟಿ 5 ಲಕ್ಷ
ನಿರಾಣಿ ಶುಗರ್ಸ್ ಲಿ. ಮುಧೋಳ, ಬಾಗಲಕೋಟೆ – 5 ಕೋಟಿ 67 ಲಕ್ಷ
ಶ್ರೀ ಸಾಯಿಪ್ರಿಯಾ ಶುಗರ್ಸ್ ಲಿ. ಹಿಪ್ಪರಗಿ, ಬಾಗಲಕೋಟೆ – 4 ಕೋಟಿ 15 ಲಕ್ಷ
ಬೀದರ್ ಕಿಸಾನ್ ಸಕ್ಕರೆ ಕಾರ್ಖಾನೆ ಲಿ. ಬೀದರ್ – 2 ಕೋಟಿ 9 ಲಕ್ಷ
ಶ್ರೀ ಬಸವೇಶ್ವರ ಶುಗರ್ಸ್ ಲಿ, ಕಾರಜೋಳ, ವಿಜಯಪುರ – 22 ಕೋಟಿ 11 ಲಕ್ಷ
ಕೋರ್ ಗ್ಲೀನ್ ಶುಗರ್ಸ್ ಅಂಡ್ ಫ್ಯೂಯೆಲ್ಸ್ ಪ್ರೈ ಲಿ. ಶಹಾಪುರ, ಯಾದಗಿರಿ- 6 ಕೋಟಿ 41 ಲಕ್ಷ

ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಅಳಗಂಚಿಪುರ ಬಳಿಯಿರುವ ಬಣ್ಣಾರಿ ಅಮ್ಮನ್ ಸಕ್ಕರೆ ಕಾರ್ಖಾನೆಯಿಂದ ಸಮಸ್ಯೆ ಉಂಟಾಗಿರುವ ಕುರಿತೂ ಮಾತನಾಡಿದ ಅವರು, ಟಿವಿ9ನಲ್ಲಿ ಸುದ್ದಿ ಪ್ರಸಾರ ಬಳಿಕ ವಿಷಯ ತಿಳಿದುಕೊಂಡಿದ್ದೇನೆ. ಗ್ರಾಮದ ಸುತ್ತ ಅಂತರ್ಜಲದಲ್ಲಿ ಕೆಮಿಕಲ್ ಸೇರಿರುವ ಆರೋಪದ ಕುರಿತು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಲು ಮೈಸೂರು ಜಿಲ್ಲಾಧಿಕಾರಿ ಮತ್ತು ಸಕ್ಕರೆ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಬೋರ್ವೆಲ್ಗಳಿಗೆ ರಾಸಾಯನಿಕ ಮಿಶ್ರಣವಾಗಿದ್ದಲ್ಲಿ ತಕ್ಷಣ ಕ್ರಮ ಕೈಗೊಳ್ಳುತ್ತೇವೆ. ಸಮಸ್ಯೆಯಾಗಿದ್ದರೆ ಪರಿಹಾರ ಮಾಡುವ ಕೆಲಸ ಮಾಡುತ್ತೇವೆ ಎಂದು ತಿಳಿಸಿದರು.

ಇದನ್ನೂ ಓದಿ: 

ಕಬ್ಬು ಬೆಳೆಗಾರರಿಗೆ ಬಾಕಿ ಹಣ ನೀಡಲು ಸಕ್ಕರೆ ಕಾರ್ಖಾನೆ ಮಾಲೀಕರಿಗೆ ಖಡಕ್ ಸೂಚನೆ ನೀಡಿದ ವಿಜಯಪುರ ಜಿಲ್ಲಾಧಿಕಾರಿ

ಒಂದೇ ರಾತ್ರಿಯಲ್ಲಿ 43 ಮೆಟ್ರಿಕ್ ಟನ್ ಕಬ್ಬು ಟ್ರ್ಯಾಕ್ಟರ್​ಗೆ ತುಂಬಿಸಿ ಸಾಹಸ ಮೆರೆದ ಕಾರ್ಮಿಕ

Read Full Article

Click on your DTH Provider to Add TV9 Kannada