ಮುಗಿಯದ ಹೆಚ್​ಡಿಕೆ ಸುಮಲತಾ ಮಹಾಸಮರ; ಅಂಬಿ ಅಭಿಮಾನಿಗಳಿಂದ ಇಂದು ಸಭೆ

ಇಂದು ಅಂಬರೀಶ್ ಅಭಿಮಾನಿಗಳು ಶಾಸಕ ರವೀಂದ್ರ ಶ್ರೀಕಂಠಯ್ಯ ವಿರುದ್ದ ಸಭೆ ನಡೆಸ್ತಿದ್ದಾರೆ. ಬೆಳಗ್ಗೆ 11 ಗಂಟೆಗೆ ಶ್ರೀರಂಗಪಟ್ಟಣದ ಪ್ರವಾಸಿ ಮಂದಿರದಲ್ಲಿ ಸಭೆ ನಡೆಯಲಿದೆ.

ಮುಗಿಯದ ಹೆಚ್​ಡಿಕೆ ಸುಮಲತಾ ಮಹಾಸಮರ; ಅಂಬಿ ಅಭಿಮಾನಿಗಳಿಂದ ಇಂದು ಸಭೆ
ಸುಮಲತಾ ಅಂಬರೀಶ್
Follow us
TV9 Web
| Updated By: ಆಯೇಷಾ ಬಾನು

Updated on: Jul 09, 2021 | 7:54 AM

ಮಂಡ್ಯ ಅಖಾಡದಲ್ಲಿ ದಳಪತಿಗಳು ಹಾಗೂ ಲೇಡಿ ರೆಬೆಲ್ ಸ್ಟಾರ್ ನಡುವಿನ ಮಹಾಸಮರ ಸದ್ಯಕ್ಕೆ ನಿಲ್ಲೋ ಲಕ್ಷಣ ಕಾಣಿಸ್ತಿಲ್ಲ. ಕೆಆರ್ಎಸ್ ಡ್ಯಾಂ ಬಿರುಕಿನಿಂದ ಆರಂಭವಾದ ಟಾಕ್ ಫೈಟ್ ಅಕ್ರಮ ಗಣಿಗಾರಿಕೆ ಸ್ಪಾಟ್ಗೇ ರೇಡ್ ಮಾಡೋ ತನಕವೂ ತಲುಪಿದೆ. ಇದ್ರ ಜೊತೆಗೆ ಮಾತಿನ ಡೈನಮೇಟ್ಗಳು ರಾಜ್ಯರಾಜಕಾರಣವನ್ನೇ ಮಂಡ್ಯದತ್ತ ತಿರುಗಿ ನೋಡುವಂತೆ ಮಾಡಿದೆ. ಸುಮಲತಾ ಹಾಗೂ ಕುಮಾರಸ್ವಾಮಿ ನಡುವಿನ ವಾಗ್ಯುದ್ಧಕ್ಕೆ ಸದ್ಯ ಕದನವಿರಾಮ ಘೋಷಣೆಯಾಗೋ ಲಕ್ಷಣ ಕಾಣಿಸ್ತಿಲ್ಲ.

ಇಂದು ಅಂಬರೀಶ್ ಅಭಿಮಾನಿಗಳು ಶಾಸಕ ರವೀಂದ್ರ ಶ್ರೀಕಂಠಯ್ಯ ವಿರುದ್ದ ಸಭೆ ನಡೆಸ್ತಿದ್ದಾರೆ. ಬೆಳಗ್ಗೆ 11 ಗಂಟೆಗೆ ಶ್ರೀರಂಗಪಟ್ಟಣದ ಪ್ರವಾಸಿ ಮಂದಿರದಲ್ಲಿ ಸಭೆ ನಡೆಯಲಿದೆ. ಅಂಬರೀಶ್ ಅಭಿಮಾನಿಗಳ ಸಂಘದ ರಾಜ್ಯಾಧ್ಯಕ್ಷ ಬೇಲೂರು ಸೋಮಶೇಖರ್ ನೇತೃತ್ವದಲ್ಲಿ ಶಾಸಕ ರವೀಂದ್ರ ಶ್ರೀಕಂಠಯ್ಯ ಅಂಬರೀಶ್ ಹೆಸರು ಬಳಕೆ ಮಾಡಿ ಸಂಸದೆ ಸುಮಲತ ಅಂಬರೀಶ್ ಬಗ್ಗೆ ಲಘುವಾದ ಮಾತುಗಳನ್ನು ಬಳಕೆ ಮಾಡ್ತಿದ್ದಾರೆ. ಈ ಸಂಬಂಧ ಶಾಸಕರ ವಿರುದ್ದ ಹೋರಾಟದ ರೂಪು ರೇಷೆಗಳ ಬಗ್ಗೆ ಚರ್ಚೆ ನಡೆಸಲಿದ್ದಾರೆ.

ಸುಮಲತಾ ಹೆಸರು ಕೇಳ್ತಿದ್ದಂತೆ ಕೈಮುಗೀತಿದ್ದಾರೆ ಹೆಚ್ಡಿಕೆ ಕೆಆರ್ಎಸ್ ಡ್ಯಾಂ ಬಿರುಕು ಹೇಳಿಕೆಯಿಂದ ಮಂಡ್ಯ ರಾಜಕೀಯದಲ್ಲಿ ಉಂಟಾಗಿರೋ ಕಂಪನದ ಸದ್ಯದ ಕೇಂದ್ರಬಿಂದು ಅಕ್ರಮ ಗಣಿಗಾರಿಕೆ. ಡ್ಯಾಂ ಬಿರುಕು ಬಿಟ್ಟಿದೆ ಅನ್ನೋ ಸ್ಫೋಟಕ ಹೇಳಿಕೆ ನೀಡಿದ್ದ ಸುಮಲತಾ ಗಣಿಗಾರಿಕೆ ಪ್ರದೇಶಕ್ಕೇ ವಿಸಿಟ್ ಕೊಟ್ಟು ದಳಪತಿಗಳಿಗೆ ಟಕ್ಕರ್ ಕೊಟ್ಟಿದ್ರು. ಆದ್ರೆ ಎರಡೇ ದಿನಕ್ಕೆ ಈ ಸಹವಾಸ ಸಾಕಪ್ಪಾ ಅಂತಿರೋ ಕುಮಾರಸ್ವಾಮಿ, ಸುಮಲತಾ ಬಗ್ಗೆ ಕೇಳಿದ್ರೆ ಕೈಮುಗಿದು ಹೊರಟು ಹೋಗ್ತಿದ್ದಾರೆ.

ಹೆಚ್ಡಿಕೆ ಆಡಿಯೋ ಬಾಂಬ್ಗೆ ಸುಮಲತಾ ಫೋನ್ ಟ್ಯಾಪಿಂಗ್ ಟಾಂಗ್ ಕೆಆರ್ಎಸ್ ಡ್ಯಾಂ ಬಿರುಕು ಬಿಟ್ಟಿದೆ ಅಂದಿದ್ದ ಸುಮಲತಾ ವಿರುದ್ಧ ಹೆಚ್ಡಿಕೆ ಆಡಿರೋ ಆ ಮಾತು ಇವತ್ತು ಮಂಡ್ಯ ರಾಜಕಾರಣ ಧಗಧಗಿಸುವಂತೆ ಮಾಡಿದೆ. ಕೆಆರ್‌ಎಸ್‌ ಡ್ಯಾಂ ಬಾಗಿಲಿಗೆ ಸುಮಲತಾರನ್ನು ಮಲಗಿಸಬೇಕು ಅಂತಾ ಹೇಳ್ತಿದ್ದಂತೆ ಸಿಡಿಮಿಡಿಗೊಂಡ ಸುಮಲತಾ ಗಣಿಗಾರಿಕೆ ಪ್ರದೇಶಕ್ಕೇ ಲಗ್ಗೆ ಇಡೋ ಮೂಲಕ ದಳಪತಿಗಳಿಗೆ ಸೆಡ್ಡು ಹೊಡೆದಿದ್ರು. ಈ ವೇಳೆ ಸುಮಲತಾ ವಿರುದ್ಧ ಆಡಿಯೋ ಅಸ್ತ್ರ ಪ್ರಯೋಗಕ್ಕೆ ಕುಮಾರಸ್ವಾಮಿ ಮುಂದಾಗಿದ್ದರು. ಆದ್ರೆ ಮಾಜಿ ಸಿಎಂ ಆಡಿಯೋ ಬಾಂಬ್ಗೆ ಸುಮಲತಾ ಫೋನ್ ಟ್ಯಾಪಿಂಗ್ ಟಾಂಗ್ ಕೊಟ್ಟಿದ್ದಾರೆ. ಕುಮಾರಸ್ವಾಮಿ ಸರ್ಕಾರದಲ್ಲಿ ನನ್ನ ಫೋನ್ ಟ್ಯಾಪ್ ಆಗಿದೆ. ಅಷ್ಟೇ ಅಲ್ಲ ಆದಿಚುಂಚನಗಿರಿ ಶ್ರೀಗಳ ಫೋನ್ ಸಹ ಟ್ಯಾಪ್ ಆಗಿದೆ ಅಂತಾ ಆರೋಪಿಸಿದ್ರು.

ಇತ್ತ ಸುಮಲತಾ ಫೋನ್ ಟ್ಯಾಪಿಂಗ್ ಬಾಂಬ್ ಸಿಡಿಸ್ತಿದ್ದಂತೆ ಕುಮಾರಸ್ವಾಮಿ ಕೂಡಾ ಅಲರ್ಟ್ ಆಗಿದ್ದಾರೆ. ಸುಮಲತಾ ಆರೋಪಕ್ಕೆ ಉತ್ತರಿಸಿರೋ ಕುಮಾರಸ್ವಾಮಿ ನಾನ್ಯಾಕೆ ಟೆಲಿಫೋನ್‌ ಕದ್ದಾಲಿಕೆ ಮಾಡಲಿ. ಹಾಗೇನಾದ್ರೂ ಟೆಲಿಫೋನ್‌ ಕದ್ದಾಲಿಕೆ ಮಾಡುತ್ತಿದ್ದರೆ ನನ್ನ ಸರ್ಕಾರ ಉರುಳೋದಿಕ್ಕೆ ಬಿಡುತ್ತಿರಲಿಲ್ಲ ಎಂದು ಸಮಜಾಯಿಷಿ ನೀಡಿದ್ರು.

ಜೆಡಿಎಸ್ ಶಾಸಕರ ಭ್ರಷ್ಟಾಚಾರಕ್ಕೆ ಅವ್ರ ನಾಯಕ ಅಂಬಾಸಿಡರ್ ಮಂಡ್ಯ ಜಿಲ್ಲೆಯಲ್ಲಿರೋ ಕೆಲ ಜೆಡಿಎಸ್ ಶಾಸಕರು ಅಕ್ರಮ ಗಣಿಗಾರಿಕೆ ಜೊತೆಗೆ ಭ್ರಷ್ಟಾಚಾರ ನಡೆಸ್ತಿದ್ದಾರೆ ಅಂತಾ ಸುಮಲತಾ ಮತ್ತೊಂದು ಆರೋಪ ಮಾಡಿದ್ದಾರೆ. ಅಲ್ಲದೆ ಜೆಡಿಎಸ್ ಶಾಸಕರ ನಾಯಕ ಭ್ರಷ್ಟಾಚಾರದ ಅಂಬಾಸಿಡರ್, ಅಂದ್ರೆ ರಾಯಭಾರಿ ಅಂತಾ ಪರೋಕ್ಷವಾಗಿ ಹೆಚ್ಡಿಕೆಗೆ ಕುಟುಕಿದ್ರು. ಇದಕ್ಕೆ ತಿರುಗೇಟು ಕೊಟ್ಟ ಹೆಚ್ಡಿಕೆ ನಮ್ಮದು ಭ್ರಷ್ಟಾಚಾರದ ವಿರುದ್ಧ ಹೋರಾಟ ಮಾಡಿದ ಕುಟುಂಬ ಅಂದ್ರು.

ಸುಮಲತಾ ‘ಸಮಾಧಿ’ ಹೇಳಿಕೆಗೆ ಹೆಚ್ಡಿಕೆ ‘ಮಣ್ಣು’ ತಿರುಗೇಟು ಇನ್ನು ನಿನ್ನೆಯಷ್ಟೇ ಕುಮಾರಸ್ವಾಮಿ ಅಂಬರೀಶ್ ಹೆಸರನ್ನ ಪ್ರಸ್ತಾಪ ಮಾಡೋ ಮೂಲಕ ಸುಮಲತಾ ವಿರುದ್ಧ ಕಿಡಿ ಕಾರಿದ್ರು. ಇವತ್ತು ಪ್ರತಿಕ್ರಿಯೆ ನೀಡಿರೋ ಸುಮಲತಾ ಕಳೆದ ಬಾರಿ ಚುನಾವಣೆಯಲ್ಲಿ ಅಂಬರೀಶ್ ಹೆಸ್ರು ಪ್ರಸ್ತಾಪಿಸಿ 1 ಪಾಠ ಕಲಿತಿದ್ದಾರೆ. ಮುಂದಿನ ಚುಣಾವಣೆಯಲ್ಲಿ 7 ಪಾಠ ಕಲೀತಾರೆ. ನಿಮ್ಮ ಸಮಾಧಿಯನ್ನ ನೀವೇ ತೋಡಿಕೊಂಡ್ರೆ ಯಾರೂ ಸಹಾಯ ಮಾಡೋಕೆ ಆಗಲ್ಲ ಅಂದ್ರು. ಇದಕ್ಕೆ ತಿರುಗೇಟು ನೀಡಿದ ಕುಮಾರಸ್ವಾಮಿ, ನಾನಲ್ಲ ಮಣ್ಣಾಗೋದು ನೀವು ಅಂತಾ ಕೌಂಟರ್ ಅಟ್ಯಾಕ್ ಮಾಡಿದ್ರು.

ಡ್ಯಾಂ ಬಿರುಕು, ಅಕ್ರಮ ಗಣಿಗಾರಿಕೆ ಆರೋಪದಿಂದ ಶುರುವಾದ ಫೈಟ್ ಹೆಚ್ಡಿಕೆ-ಸುಮಲತಾ ನಡುವಿನ ಪರ್ಸನಲ್ ಕಾದಾಟಕ್ಕೆ ಬಂದು ನಿಂತಿದೆ. ಕುಮಾರಸ್ವಾಮಿಗೆ ಮಹಿಳೆಯರ ಬಗ್ಗೆ ಗೌರವವಿಲ್ಲ, ಮಹಿಳೆಯರು ಉನ್ನತ ಸ್ಥಾನದಲ್ಲಿ ಇದ್ರೆ ಅದನ್ನ ಜೀರ್ಣಿಸಿಕೊಳ್ಳೋಕೆ ಆಗಲ್ಲ ಅಂತಾ ಸುಮಲತಾ ತಿವಿದ್ರು. ಇದಕ್ಕೆ ವ್ಯಂಗ್ಯವಾಗೇ ಕುಮಾರಸ್ವಾಮಿ ಟಾಂಗ್ ಕೊಟ್ರು.

ಇಷ್ಟೆಲ್ಲ ಮಾತಿನ ಫೈಟ್ ನಡೀತಿರಬೇಕಾದ್ರೆ, ಇಂದು ಕುಮಾರಸ್ವಾಮಿ ಮಂಡ್ಯ ಜಿಲ್ಲೆಗೆ ವಿಸಿಟ್ ಕೊಟ್ಟಿದ್ರು. ಹೆಚ್ಡಿಕೆ ಮಂಡ್ಯಕ್ಕೆ ಬರೋ ಹೊತ್ತಿಗೆ ಶಾಸಕ ರವೀಂದ್ರ ಶ್ರೀಕಂಠಯ್ಯ ಬಿರುಕು ಹುಡುಕಿಕೊಂಡು ಕೆಆರ್ಎಸ್ ಡ್ಯಾಂ ತಲುಪಿದ್ರು. ಈ ವೇಳೆ ಅವರ ಬೆಂಬಲಿಗರು ಸುಮಲತಾ ವಿರುದ್ಧ ಘೋಷಣೆ ಕೂಗಿ ಆಕ್ರೋಶ ಹೊರಹಾಕಿದ್ರು.

ಕಳೆದೆರಡು ದಿನಗಳಿಂದ ಮಂಡ್ಯ ರಾಜಕೀಯದಲ್ಲಿ ಧೂಳೆಬ್ಬಿಸಿರೋ ಗಣಿಗಾರಿಕೆ ಡೈನಮೇಟ್ ಮತ್ತಷ್ಟು ಸಿಡಿಯುತ್ತಿದ್ದಂತೆ ಮಾಜಿ ಸಿಎಂ ಹೆಚ್ಡಿಕೆ ಒಂದು ಹೆಜ್ಜೆ ಹಿಂದಿಟ್ಟಿದ್ದಾರೆ. ಸುಮಲತಾ ಆರೋಪಗಳ ಬಗ್ಗೆ ಕುಹಕವಾಡುತ್ತಲೇ ತಕ್ಕ ತಿರುಗೇಟು ಕೊಟ್ರು. ಇನ್ನೊಂದೆರಡು ದಿನಗಳಲ್ಲಿ ಸುಮಲತಾ-ದಳಪತಿಗಳ ನಡುವಿನ ಯುದ್ಧ ಕೊನೆಗೊಂಡ್ರೂ ಮುಂದಿನ ಚುನಾವಣೆಯಲ್ಲಿ ಮತ್ತೆ ಗಣಿ ಡೈನಮೇಟ್ ಸ್ಫೋಟಗೊಳ್ಳೋ ಎಲ್ಲಾ ಸಾಧ್ಯತೆ ಇದೆ.

ಇದನ್ನೂ ಓದಿ: ಸಂಸದೆ ಸುಮಲತಾ ಮತ್ತು ಮಾಜಿ ಸಿಎಂ ಕುಮಾರಸ್ವಾಮಿ ಮಧ್ಯೆ ಇಸ್ರೇಲ್ ಮತ್ತು ಪ್ಯಾಲೆಸ್ತೇನ್ ನಡುವಿನ ಯುದ್ಧದಂತಾಗಿದೆ: ಕಂದಾಯ ಸಚಿವ ಆರ್ ಅಶೋಕ್ ಹೋಲಿಕೆ

(sumalatha ambareesh fans planning for meeting over discuss on going issue)