ಸುಮಲತಾ ಮಂಡ್ಯ ಕ್ಷೇತ್ರದಿಂದಲೇ ಸ್ಪರ್ಧಿಸಬೇಕು, ಜೆಡಿಎಸ್​ಗೆ ಯಾಕೆ ಕೊಡಬೇಕು? ಕೆಸಿ ನಾರಾಯಣಗೌಡ ಪ್ರಶ್ನೆ

| Updated By: ಗಂಗಾಧರ​ ಬ. ಸಾಬೋಜಿ

Updated on: Jan 25, 2024 | 4:57 PM

ಜೆಪಿ‌ನಗರದ ನಿವಾಸದಲ್ಲಿ ಸುಮಲತಾ ಭೇಟಿ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಮಾಜಿ ಸಚಿವ ಕೆ.ಸಿ. ನಾರಾಯಣಗೌಡ, ಸಂಸದೆ ಸುಮಲತಾ ಅವರು ಮಂಡ್ಯ ಕ್ಷೇತ್ರದಿಂದಲೇ ಸ್ಪರ್ಧಿಸಬೇಕು. ಮಂಡ್ಯವನ್ನ ಜೆಡಿಎಸ್ ನಾಯಕರಿಗೆ ಯಾಕೆ ಕೊಡಬೇಕು. ಸುಮಲತಾ ಅವರು ಬಿಜೆಪಿಗೆ ಬೆಂಬಲ ಘೋಷಿಸಿದ್ದಾರೆ. ಮಂಡ್ಯ MP ಕ್ಷೇತ್ರ ಜೆಡಿಎಸ್​ಗೆ​​ ಬಿಟ್ಟುಕೊಡದಂತೆ ಆಗ್ರಹ ಮಾಡಿದ್ದಾರೆ. 

ಸುಮಲತಾ ಮಂಡ್ಯ ಕ್ಷೇತ್ರದಿಂದಲೇ ಸ್ಪರ್ಧಿಸಬೇಕು, ಜೆಡಿಎಸ್​ಗೆ ಯಾಕೆ ಕೊಡಬೇಕು? ಕೆಸಿ ನಾರಾಯಣಗೌಡ ಪ್ರಶ್ನೆ
ಕೆ.ಸಿ.ನಾರಾಯಣಗೌಡ
Follow us on

ಬೆಂಗಳೂರು, ಜನವರಿ 25: ಸಂಸದೆ ಸುಮಲತಾ ಅವರು ಮಂಡ್ಯ ಕ್ಷೇತ್ರದಿಂದಲೇ ಸ್ಪರ್ಧಿಸಬೇಕು. ಮಂಡ್ಯವನ್ನ ಜೆಡಿಎಸ್ ನಾಯಕರಿಗೆ ಯಾಕೆ ಕೊಡಬೇಕು ಎಂದು ಮಾಜಿ ಸಚಿವ ಕೆ.ಸಿ. ನಾರಾಯಣಗೌಡ (KC Narayana Gowda) ಹೇಳಿದ್ದಾರೆ. ಜೆಪಿ‌ನಗರದ ನಿವಾಸದಲ್ಲಿ ಸುಮಲತಾ ಭೇಟಿ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸುಮಲತಾ ಅವರು ಬಿಜೆಪಿಗೆ ಬೆಂಬಲ ಘೋಷಿಸಿದ್ದಾರೆ. ಮಂಡ್ಯ ಕ್ಷೇತ್ರವನ್ನ ಯಾಕೆ ಜೆಡಿಎಸ್​ನವರಿಗೆ ಕೊಡಬೇಕು. ಜಿಲ್ಲೆಯಲ್ಲಿ ಬಿಜೆಪಿ ಚಿಗುರುತ್ತಿದೆ, ನಾನು ಶಾಸಕ ಆಗಿದ್ದವನು. ಹೈಕಮಾಂಡ್ ಸುಮಲತಾ ಸ್ಪರ್ಧೆಗೆ ಅವಕಾಶ ಕೊಡಬೇಕು. ಮಂಡ್ಯ MP ಕ್ಷೇತ್ರ ಜೆಡಿಎಸ್​ಗೆ​​ ಬಿಟ್ಟುಕೊಡದಂತೆ ಆಗ್ರಹ ಮಾಡಿದ್ದಾರೆ.

ಮಾಜಿ ಸಿಎಂ ಹೆಚ್​ಡಿ ಕುಮಾರಸ್ವಾಮಿಗೆ ಕೇಂದ್ರ ಸಚಿವ ಸ್ಥಾನ ನೀಡುವ ಬಗ್ಗೆ ಚರ್ಚೆ ಆಗುತ್ತಿದೆ. ಈ ಬಗ್ಗೆ ನಮ್ಮ ವಿರೋಧ ಇಲ್ಲ. ಸುಮಲತಾರವರು, ಕುಮಾರಸ್ವಾಮಿ ಅವರ ಜೊತೆ ಮಾತುಕತೆ ಮಾಡಿದ್ದಾರೋ ಇಲ್ಲವೋ ನಮಗೆ ಗೊತ್ತಿಲ್ಲ. ಅದೇ ವಿಚಾರದ ಬಗ್ಗೆ ಮಾತನಾಡಲು ಬಂದಿದ್ದೇವೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಬಿಜೆಪಿ ಟಿಕೆಟ್ ಕೈ ತಪ್ಪಿದಕ್ಕೆ ಸುಮಲತಾ ಮುನಿಸು, ಬಿ.ವೈ. ವಿಜಯೇಂದ್ರ ಮಾತುಕತೆ ಸಾಧ್ಯತೆ

2024ರ ಲೋಕಸಭಾ ಚುನಾವಣೆ ಹಿನ್ನೆಲೆ ಮಂಡ್ಯ ಜಿಲ್ಲೆಯಲ್ಲಿ ರಾಜಕಾರಣ ಗರಿಗೆದರಿದೆ. ಇಂದು ಅಂಬರೀಶ್ ಅಭಿಮಾನಿಗಳ ಜೊತೆ ಸುಮಲತಾ ಅವರು ಮಾತು ಕತೆ ನಡೆಸುವ ಸಾಧ್ಯತೆ ಇದೆ. ಈಗಾಗಲೇ ಜೆಪಿ ನಗರದ ನಿವಾಸದ ಬಳಿ ಕೆಲ ಅಭಿಮಾನಿಗಳು ಆಗಮಿಸಿದ್ದಾರೆ.

ಟಿಕೆಟ್ ಕೈತಪ್ಪುವ ಆತಂಕ: ಸಂಸದೆ ಸುಮಲತಾ ಸಭೆ

ಬಿಜೆಪಿಯಿಂದ ಟಿಕೆಟ್ ಕೈತಪ್ಪುವ ಆತಂಕ, ಜೆಡಿಎಸ್​ಗೆ ಮಂಡ್ಯ ಬಿಟ್ಟುಕೊಡುವ ಬಗ್ಗೆ ಚರ್ಚೆ ಹಿನ್ನೆಲೆ ಸದ್ಯ ಸಂಸದೆ ಸುಮಲತಾ ಅತಂತ್ರ ಪರಿಸ್ಥಿತಿಗೆ ಸಿಲುಕಿದ್ದಾರೆ. ಹೀಗಾಗಿ ಮುಂದಿನ ರಾಜಕೀಯ ನಿರ್ಧಾರದ ಬಗ್ಗೆ
ಇಂದು ಮಂಡ್ಯದ ತಮ್ಮ ಆಪ್ತರ ಸಭೆ ಕರೆದಿದ್ದಾರೆ.

ಇದನ್ನೂ ಓದಿ: ಒಂದು ಸುತ್ತು ರಾಜಕೀಯ ಪಯಣ ಪೂರ್ಣಗೊಳಿಸಿದ 68 ವರ್ಷದ ಜಗದೀಶ್ ಶೆಟ್ಟರ್! ಅದರ ಏಳುಬೀಳುಗಳ ಹಿನ್ನೋಟ ಇಲ್ಲಿದೆ

ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಜೆಡಿಎಸ್​ನಿಂದ ಹೆಚ್​ಡಿ ಕುಮಾರಸ್ವಾಮಿ ಸ್ಪರ್ಧೆ ಮಾಡುತ್ತಾರೆಂಬ ವಿಚಾರ ಮಹತ್ವ ಪಡೆದುಕೊಂಡ ಬೆನ್ನಲ್ಲೆ ಸಭೆ ಮಾಡಲಾಗುತ್ತಿದೆ. ಲೋಕಸಭೆ‌ ಚುನಾವಣೆ ಸ್ಪರ್ಧೆ ಬಗ್ಗೆ ತಮ್ಮ ಬೆಂಬಲಿಗರ ಜೊತೆ ಚರ್ಚಿಸಿ, ಬಳಿಕ ಮಹತ್ವದ ನಿರ್ಧಾರ ಪ್ರಕಟ ಮಾಡುವ ಸಾಧ್ಯತೆಗಳಿವೆ.

ಬಿಜೆಪಿ ಟಿಕೆಟ್ ಸಿಗದಿದ್ದರೆ ಪಕ್ಷೇತರವಾಗಿ ಸ್ವರ್ಧೆ ಮಾಡಲು ಸುಮಲತಾ ಅವರು ಚಿಂತನೆ ನಡೆಸಿದ್ದರು. ಈ ಮಧ್ಯೆ ಕಾಂಗ್ರೆಸ್​ಗೆ ಸೆಳೆಯಲು ಕಾಂಗ್ರೆಸ್ ಹೈಕಮಾಂಡ್ ಮಾಸ್ಟರ್ ಪ್ಲ್ಯಾನ್ ಮಾಡಿತ್ತು. ಮಂಡ್ಯ ಕ್ಷೇತ್ರಕ್ಕೆ ಕಾಂಗ್ರೆಸ್​ನಿಂದ ಸೂಕ್ತ ಅಭ್ಯರ್ಥಿ ಸಿಗದ ಹಿನ್ನೆಲೆ ಸುಮಲತಾರನ್ನೆ ಕಾಂಗ್ರೆಸ್​ನಿಂದ ಕಣಕ್ಕೆ ಇಳಿಸಲು ಪ್ಲ್ಯಾನ್ ಮಾಡಲಾಗಿತ್ತು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

Published On - 4:20 pm, Thu, 25 January 24