ಕೊನೆ ಹಂತದ ಎಸ್ಎಸ್ಎಲ್ಸಿ ಪರೀಕ್ಷಾ ತಯಾರಿ ಪರಿಶೀಲನೆಗೆ ಮುಂದಾದ ಸಚಿವ ಸುರೇಶ್ ಕುಮಾರ್
ಓಎಮ್ಆರ್ ಶೀಟ್ ಮೇಲೆ ಮಕ್ಕಳ ಫೋಟೋ ಹಾಗೂ ರಿಜಿಸ್ಟರ್ ನಂಬರ್ ಇರುತ್ತೆ. 75 ಸಾವಿರ ಸಿಬ್ಬಂದಿ ಕಳೆದ ವರ್ಷ ಪರೀಕ್ಷೆಗೆ ಕೆಲಸ ಮಾಡಿದ್ದರು. ಈ ಬಾರಿ 1 ಲಕ್ಷಕ್ಕೂ ಹೆಚ್ಚು ಸಿಬ್ಬಂದಿ ಕೆಲಸ ಮಾಡಿದ್ದಾರೆ. ಎಲ್ಲಾ ಜಿಲ್ಲೆಗೆ ಒಂದೊಂದು ನೋಡೆಲ್ ಆಫೀಸರ್ ಮಾಡಿದ್ದೇವೆ.
ಬೆಂಗಳೂರು: ಈಗಾಗಲೇ ರಾಜ್ಯದಲ್ಲಿ ಈ ವರ್ಷ 4,885 ಪರೀಕ್ಷಾ ಕೇಂದ್ರ ಸ್ಥಾಪನೆಯಾಗಿದೆ ಎಂದು ಮಾತನಾಡಿದ ಸಚಿವ ಸುರೇಶ್ ಕುಮಾರ್, ಕಳೆದ ವರ್ಷ 3 ಸಾವಿರ ಕೇಂದ್ರಗಳು ಮಾತ್ರ ಇತ್ತು. ಕಳೆದ 48 ಸಾವಿರಕ್ಕೂ ಹೆಚ್ಚು ಪರೀಕ್ಷಾ ಕೊಠಡಿ ಇತ್ತು. ಈ ಬಾರಿ 73 ಸಾವಿರಕ್ಕೂ ಹೆಚ್ಚು ಕೊಠಡಿಗಳ ವ್ಯವಸ್ಥೆ ಮಾಡಲಾಗಿದೆ. ಇವತ್ತು ಎಲ್ಲಾ ಕೇಂದ್ರಗಳಲ್ಲಿ ಒಂದು ರಿಹರ್ಸಲ್ ನಡೆಯುತ್ತಿದೆ. ಸಾಮಾಜಿಕ ಅಂತರ ಶಾಲೆ ಒಳಗೆ ಹಾಗೂ ಹೊರಗೆ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಓಎಮ್ಆರ್ ಶೀಟ್ ಮೇಲೆ ಮಕ್ಕಳ ಫೋಟೋ ಹಾಗೂ ರಿಜಿಸ್ಟರ್ ನಂಬರ್ ಇರುತ್ತೆ. 75 ಸಾವಿರ ಸಿಬ್ಬಂದಿ ಕಳೆದ ವರ್ಷ ಪರೀಕ್ಷೆಗೆ ಕೆಲಸ ಮಾಡಿದ್ದರು. ಈ ಬಾರಿ 1 ಲಕ್ಷಕ್ಕೂ ಹೆಚ್ಚು ಸಿಬ್ಬಂದಿ ಕೆಲಸ ಮಾಡಿದ್ದಾರೆ. ಎಲ್ಲಾ ಜಿಲ್ಲೆಗೆ ಒಂದೊಂದು ನೋಡೆಲ್ ಆಫೀಸರ್ ಮಾಡಿದ್ದೇವೆ. ಎಸ್ಒಪಿಯಲ್ಲಿ ಯಾವುದೇ ದೋಷ ಇಲ್ಲದೆ ಕ್ರಮ ಕೈಗೊಳ್ಳಲಾಗುತ್ತದೆ. ಪರೀಕ್ಷಾ ಕೇಂದ್ರ ಮಕ್ಕಳ ಸುರಕ್ಷಾ ಕೇಂದ್ರವಾಗಿರುತ್ತದೆ. ಮಕ್ಕಳಿಗೆ ಬಿಸಿ ನೀರಿನ ವ್ಯವಸ್ಥೆ ಕೂಡ ಇರುತ್ತೆ. ಯಾವುದೇ ಸಮಸ್ಯೆ ಇಲ್ಲದೆ ಪರೀಕ್ಷೆ ನಡೆಯುತ್ತೆ ಎನ್ನುವ ವಿಶ್ವಾಸ ಇದೆ ಎಂದು ಸಚಿವರು ಅಭಿಪ್ರಾಯಪಟ್ಟಿದ್ದಾರೆ.
ರಾಜ್ಯದಲ್ಲಿ 19 ಮತ್ತು 22ರಂದು ಎಸ್ಎಸ್ಎಲ್ ಸಿ ಪರೀಕ್ಷೆ ನಡೆಯುತ್ತಿರುವ ಹಿನ್ನೆಲೆ ಕೊನೆ ಹಂತದ ಪರೀಕ್ಷಾ ತಯಾರಿ ಪರಿಶೀಲನೆಗೆ ಸಚಿವ ಸುರೇಶ್ ಕುಮಾರ್ ಮುಂದಾಗಿದ್ದಾರೆ. ಮಲ್ಲೇಶ್ವರಂ, ಸದಾಶಿವನಗರ, ದಾಸರಹಳ್ಳಿ ಪರೀಕ್ಷಾ ಕೇಂದ್ರಗಳಿಗೆ ಸುರೇಶ್ ಕುಮಾರ್ ಭೇಟಿ ನೀಡುತ್ತಿದ್ದಾರೆ. ಕೊರೊನಾ ನಡುವೆ ಪರೀಕ್ಷೆ ನಡೆಯುತ್ತಿದ್ದು, ವ್ಯವಸ್ಥೆ ಬಗ್ಗೆ ಹೆಚ್ಚು ಮುಂಜಾಗ್ರತ ಕ್ರಮ ತೆಗೆದುಕೊಳ್ಳಲು ಸಚಿವರು ಸಲಹೆ ನೀಡುತ್ತಿದ್ದಾರೆ.
ಇದನ್ನೂ ಓದಿ
(Suresh Kumar is reviewing SSLC exam preparation)