ಕೊಪ್ಪಳ, ಆಗಸ್ಟ್ 3: ಯಾದಗಿರಿಯಲ್ಲಿ ಅನುಮಾನಾಸ್ಪದವಾಗಿ ಸಾವನ್ನಪ್ಪದ ಪಿಎಸ್ಐ ಪರಶುರಾಮ (PSI Parasurama) ಅವರು ಇದೀಗ ಮಣ್ಣಲ್ಲಿ ಮಣ್ಣಾಗಿದ್ದಾರೆ. ಜಿಲ್ಲೆಯ ಕಾರಟಗಿ ತಾಲೂಕಿನ ಸೋಮನಾಳ ಸ್ವಗ್ರಾಮದಲ್ಲಿ ಕುಟುಂಬಕ್ಕೆ ಸೇರಿದ ಜಮೀನಿನಲ್ಲಿ ಅಂತ್ಯಸಂಸ್ಕಾರ (cremated) ಮಾಡಲಾಗಿದೆ. ಅಂತ್ಯಕ್ರಿಯೆ ಮುನ್ನ ಸರ್ಕಾರಿ ಶಾಲೆ ಆವರಣದಲ್ಲಿ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿದ್ದು, ಸಾವಿರಾರು ಜನರು ದರ್ಶನ ಪಡೆದುಕೊಂಡರು. ಅಂತ್ಯಕ್ರಿಯೆಯಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳು ಕೂಡ ಭಾಗಿಯಾಗಿದ್ದರು.
ಜಿಲ್ಲೆಯ ಕಾರಟಗಿ ತಾಲೂಕಿನ ಸೋಮನಾಳ ಗ್ರಾಮದ ನಿವಾಸಿಯಾಗಿದ್ದ ಪರಶುರಾಮ, ಯಾದಗಿರಿಯಲ್ಲಿ ಪಿಎಸ್ಐ ಆಗಿ ಕೆಲಸ ನಿರ್ವಹಿಸುತ್ತಿದ್ದರು. ಆದರೆ ವರ್ಗಾವಣೆ ವಿಚಾರದಲ್ಲಿ ನೊಂದಿದ್ದ ಪರಶುರಾಮ, ಕಳೆದ ರಾತ್ರಿ ಮೃತಪಟ್ಟಿದ್ದಾರೆ. ಅವರ ಸಾವಿಗೆ ಯಾದಗಿರಿ ಶಾಸಕ ಮತ್ತು ಅವರ ಪುತ್ರ ಕಾರಣ ಅಂತ ಪರಶುರಾಮ ಕುಟುಂಬದವರು ಆರೋಪಿಸಿದ್ದು, ಈ ಬಗ್ಗೆ ದೂರು ಕೂಡ ನೀಡಿದ್ದಾರೆ.
ಇದನ್ನೂ ಓದಿ: PSI ಪರಶುರಾಮ್ ಮೃತ ದೇಹ ನೋಡಿ ಕಣ್ಣೀರಿಟ್ಟ ಅಮ್ಮ
ಪರಶುರಾಮ ಅವರ ಪ್ರಾರ್ಥಿವ ಶರೀರವನ್ನು ಇಂದು ಸಂಜೆ ಆರು ಗಂಟೆಗೆ ಅವರ ಹುಟ್ಟುರಾದ ಸೋಮನಾಳ ಗ್ರಾಮಕ್ಕೆ ತರಲಾಯಿತು. ಪರಶುರಾಮ ಅವರ ಪ್ರಾರ್ಥಿವ ಶರೀರಿ ಬರ್ತಿದ್ದಂತೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಇಡೀ ಗ್ರಾಮಕ್ಕೆ ಹೆಮ್ಮೆ ತರುವಂತೆ ಇದ್ದ ಪರಶುರಾಮನ ಸಾವಿನ ಸುದ್ದಿ ಕೇಳಿದ್ದ ಗ್ರಾಮದ ಜನರು, ಅವರ ಮನೆಗೆ ಧಾವಿಸಿ ಬಂದಿದ್ದರು. ಸುತ್ತಮುತ್ತಲಿನ ಗ್ರಾಮಗಳಿಂದ ಕೂಡ ನೂರಾರು ಜನರು ಆಗಮಸಿದ್ದರು. ಕೆಲ ಹೊತ್ತು ಪರಶುರಾಮ ಮನೆಯಲ್ಲಿ ಪ್ರಾರ್ಥಿವ ಶರೀರಿದ ದರ್ಶನಕ್ಕೆ ಕುಟುಂಬಸ್ಥರಿಗೆ ಅವಕಾಶ ನೀಡಲಾಯಿತು. ನಂತರ ಪ್ರಾರ್ಥಿವ ಶರೀರಿವನ್ನು ಗ್ರಾಮದಲ್ಲಿರುವ ಸರ್ಕಾರಿ ಶಾಲೆಯ ಮೈದಾನಕ್ಕೆ ತರಲಾಯಿತು.
ಈ ಸಮಯದಲ್ಲಿ ಛಲವಾದಿ ಸಂಘಟನೆಯ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ರು. ತಪ್ಪಿತಸ್ಥರ ವಿರುದ್ದ ಕ್ರಮವಾಗಬೇಕು, ಕುಟುಂಬಕ್ಕೆ ನ್ಯಾಯ ದೊರಕಿಸಿ ಕೊಡಬೇಕು ಅಂತ ಆಗ್ರಹಿಸಿದ್ದರು. ಮನೆಯಿಂದ ಹೊರಟಿದ್ದ ಪ್ರಾರ್ಥಿವ ಶರೀರವನ್ನು ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಗೆ ಸಂಜೆ ಆರು ಮೂವತ್ತರ ಸಮಯಕ್ಕೆ ತರಲಾಯಿತು. ಸರ್ಕಾರಿ ಶಾಲೆಯಲ್ಲಿ ಪೊಲೀಸ್ ಗೌರವ ವಂದನೆ ಸಲ್ಲಿಸಲಾಯಿತು. ಮೂರು ಸುತ್ತು ಗುಂಡು ಹಾರಿಸಿ ಪೊಲೀಸರು ಗೌರವ ವಂದನೆ ಸಲ್ಲಿಸಿದರು.
ಈ ಸಮಯದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ತಂಗಡಗಿ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಹಾಜರಿದ್ದರು. ಕೆಲ ಹೊತ್ತು ಗ್ರಾಮದ ಸರ್ಕಾರಿ ಶಾಲೆಯ ಆವರಣದಲ್ಲಿ ಪರಶುರಾಮ ಪ್ರಾರ್ಥಿವ ಶರೀರಿದ ಅಂತಿಮ ದರ್ಶನಕ್ಕೆ ಅವಕಾಶ ಮಾಡಿಕೊಡಲಾಯಿತು. ಸುತ್ತಮುತ್ತಲಿನ ಗ್ರಾಮಗಳಿಂದ ಬಂದಿದ್ದ ಸಾವಿರಾರು ಜನರು ಅಂತಿಮ ದರ್ಶನ ಪಡೆದರು. ನಂತರ ಪರಶುರಾಮ ಅವರ ಕುಟುಂಬದ ಜಮೀನಿನಲ್ಲಿ ಅಂತ್ಯಸಂಸ್ಕಾರ ನಡೆಸಲಾಯಿತು.
ಇದನ್ನೂ ಓದಿ: ಯಾದಗಿರಿ ಪಿಎಸ್ಐ ಸಾವು ಪ್ರಕರಣ: ಕಡುಬಡತನದಲ್ಲಿ ಬೆಳೆದು ಒಂದಲ್ಲಾ ಎಂಟು ಸರ್ಕಾರಿ ಕೆಲಸಕ್ಕೆ ಆಯ್ಕೆಯಾಗಿದ್ದ ಪರಶುರಾಮ!
ಎಂಟು ಸರ್ಕಾರಿ ನೌಕರಿ ಪಡೆದಿದ್ದ ಪರಶುರಾಮ, ಕೊನೆಗೆ ಇಷ್ಟಪಟ್ಟು ಪಿಎಸ್ಐ ನೌಕರಿ ಪಡೆದು ಕೆಲಸ ಮಾಡುತ್ತಿದ್ದರು. ಆದರೆ ವರ್ಗಾವಣೆ ಪರಶುರಾಮನನ್ನು ಬಲಿ ಪಡೆದಿದೆ ಎನ್ನಲಾಗುತ್ತಿದೆ. ಹೀಗಾಗಿ ಪರಶುರಾಮ ಸಾವಿಗೆ ಕಾರಣರಾದವರಿಗೆ ಕಠೀಣ ಶಿಕ್ಷೆಯಾಗಬೇಕು ಎಂಬುವುದು ಕುಟ್ಟುಂಬದವರ ಮಾತಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.