ಯಾವುದೇ ವ್ಯಕ್ತಿ ಕುರಿತು ಸಮಾವೇಶ ಮಾಡುತ್ತಿಲ್ಲ; ನಾಡಿನ ಹಿತದೃಷ್ಟಿ ಕುರಿತಾದ ಚರ್ಚೆಗೆ ಭಾನುವಾರದ ಸಭೆ: ಮಠಾಧಿಪತಿಗಳು
ಇದು ಒಂದು ಸಮಾಜದ ಸಭೆಯಲ್ಲ. ಎಲ್ಲಾ ಸಮಾಜಗಳ ಮಠಾಧೀಶರ ಸಭೆ. ಯಾವುದೇ ವ್ಯಕ್ತಿ ಕುರಿತು ಸಮಾವೇಶ ಮಾಡ್ತಿಲ್ಲ. ಹಲವು ಧ್ಯೇಯೋದ್ದೇಶಗಳನ್ನ ಕುರಿತು ಚರ್ಚಿಸಲಿದ್ದೇವೆ ಎಂದು ಬಾಳೆಹೊಸೂರಿನ ದಿಂಗಾಲೇಶ್ವರ ಶ್ರೀ ತಿಳಿಸಿದ್ದಾರೆ.
ಬೆಂಗಳೂರು: ಸದ್ಯದ ಕರ್ನಾಟಕ ರಾಜಕೀಯ ಬೆಳವಣಿಗೆ ಬಗ್ಗೆ ಸ್ವಾಮೀಜಿಗಳ ನಡೆಗೆ ಆಕ್ಷೇಪ ಹಿನ್ನೆಲೆಯಲ್ಲಿ ಜುಲೈ 25ಕ್ಕೆ ಎಲ್ಲಾ ಸಮುದಾಯಗಳ ಮಠಾಧೀಶರ ಸಮಾವೇಶ ನಡೆಯಲಿದೆ. ಬೆಂಗಳೂರಿನ ಅರಮನೆ ಮೈದಾನದಲ್ಲಿ ಮಠಾಧೀಶರ ಸಮಾವೇಶ ನಡೆಯಲಿದ್ದು, ನಾಡಿನ ಹಿತದೃಷ್ಟಿ, ಪ್ರಸ್ತುತ ಬೆಳವಣಿಗೆಯ ಕುರಿತು ಚರ್ಚೆಗೆ ಸಭೆ ನಡೆಸಲಿದ್ದೇವೆ ಎಂದು ಸುದ್ದಿಗೋಷ್ಠಿ ನಡೆಸಿ ಸ್ವಾಮೀಜಿಗಳು ಮಾಹಿತಿ ನೀಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ತಿಪಟೂರಿನ ಷಡಕ್ಷರಿ ರುದ್ರಮುನಿ ಸ್ವಾಮಿ, ಬಾಳೆಹೊಸೂರಿನ ದಿಂಗಾಲೇಶ್ವರ ಶ್ರೀ ಹಾಗೂ ಹಲವು ಮಠಾಧೀಶರು ಭಾಗಿಯಾಗಿದ್ದಾರೆ. ಯಾವುದೇ ವ್ಯಕ್ತಿ ಕುರಿತು ಸ್ವಾಮೀಜಿಗಳ ಸಮಾವೇಶ ಮಾಡುತ್ತಿಲ್ಲ. ಹಲವು ಧ್ಯೇಯೋದ್ದೇಶಗಳನ್ನ ಕುರಿತು ಇಲ್ಲಿ ಚರ್ಚಿಸಲಿದ್ದೇವೆ. ರಾಜ್ಯದ ಮಠಾಧಿಪತಿಗಳು ನಾಳೆ ಬೆಂಗಳೂರಿಗೆ ಆಗಮಿಸಬೇಕು. ಎಲ್ಲರಿಗೂ ವಸತಿ, ಊಟದ ವ್ಯವಸ್ಥೆ ಮಾಡಲಾಗುತ್ತದೆ ಎಂದು ಅವರು ವಿವರಣೆ ನೀಡಿದ್ದಾರೆ.
ವರ್ತಮಾನದ ವಿಚಾರಗಳ ಚರ್ಚೆಗೆ ಸಮಾವೇಶ ಮಾಡುತ್ತಿದ್ದೇವೆ. ಇದೇ 25 ರಂದು ಮಠಾಧಿಪತಿಗಳ ಸಮಾವೇಶ ಕರೆದಿದ್ದೇವೆ. ಅರಮನೆ ಮೈದಾನದಲ್ಲಿ ಸಮಾವೇಶ ನಡೆಯಲಿದೆ. ಈ ಸಮಾವೇಶ ರಾಜ್ಯದ ಹಿತ ರಕ್ಷಣೆಗೆ. ಮಠಾಧಿಪತಿಗಳ ಕರ್ತವ್ಯ ಕುರಿತು ಚಿಂತನೆ ಮಾಡಲಿದ್ದೇವೆ. ರಾಜ್ಯದ ಅಗ್ರಗಣ್ಯ ಮಠಾಧಿಪತಿಗಳು ಈ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಇದು ಸಾರ್ವಜನಿಕ ಸಭೆಯಲ್ಲ. ಇದು ಮಠಾಧಿಪತಿಗಳ ಸಭೆ. ಇದು ಒಂದು ಸಮಾಜದ ಸಭೆಯಲ್ಲ. ಎಲ್ಲಾ ಸಮಾಜಗಳ ಮಠಾಧೀಶರ ಸಭೆ. ಯಾವುದೇ ವ್ಯಕ್ತಿ ಕುರಿತು ಸಮಾವೇಶ ಮಾಡ್ತಿಲ್ಲ. ಹಲವು ಧ್ಯೇಯೋದ್ದೇಶಗಳನ್ನ ಕುರಿತು ಚರ್ಚಿಸಲಿದ್ದೇವೆ ಎಂದು ಬಾಳೆಹೊಸೂರಿನ ದಿಂಗಾಲೇಶ್ವರ ಶ್ರೀ ತಿಳಿಸಿದ್ದಾರೆ.
ಕೊರೊನಾ ಸಂದರ್ಭದಲ್ಲಿ ಮಠಗಳು ಮುಂದೆ ಬರಲಿಲ್ಲ ಎಂಬ ವಿಚಾರದ ಬಗ್ಗೆಯೂ ದಿಂಗಾಲೇಶ್ವರ ಶ್ರೀ ಮಾತನಾಡಿದ್ದಾರೆ. ಸಾಕಷ್ಟು ಒಳ್ಳೆಯ ಕೆಲಸಗಳನ್ನು ಮಠಗಳು ಮಾಡಿವೆ. ಮಠಾಧೀಶರು ಮಾಡಿಲ್ಲ ಅನ್ನೋದು ಸರಿಯಲ್ಲ. ಮಠಗಳುಸಮಾಜ ಮುಖಿಕೆಲಸ ಮಾಡಬೇಕಿದೆ. ಇದು ಎಲ್ಲರ ಹಿತವಾಗಿದೆ. ಸಮಾಜದ ಹಿತಕ್ಕಾಗಿ ರಾಜಕಾರಣಿಗಳ ಬಳಿ ಬರಬೇಕು. ನಾವು ಯಾವುದೇ ಹೊಸಸಂಪ್ರದಾಯ ಮಾಡಿಕೊಂಡಿಲ್ಲ. ಶಿಕ್ಷಣ ಸಂಸ್ಥೆಗಳನ್ನ ಮಠಗಳು ಕಟ್ಟಿವೆ. ಶಿಕ್ಷಣ ಕೆಲಸಗಳನ್ನ ಮಾಡಿಕೊಳ್ಳಬೇಕಾದರೆ ಬರಬೇಕಾಗುತ್ತದೆ. ಯಾವುದೇ ಪಕ್ಷದ ಪರ ಮಠಗಳು ನಿಂತಿಲ್ಲ. ಅನ್ಯಾಯವಾದಾಗ ಮಠಾಧೀಶರು ಮಧ್ಯಪ್ರವೇಶ ಮಾಡ್ತಾರೆ. ವ್ಯಕ್ತಿಗೆ ಅನ್ಯಾಯವಾದಾಗ ಕೇಳುವುದರಲ್ಲಿ ತಪ್ಪಿಲ್ಲ. ಎಲ್ಲಿ ಅನ್ಯಾಯ ನಡೆಯುತ್ತೆ ಅಲ್ಲಿಮಾರ್ಗದರ್ಶನ ಮಾಡಬೇಕಾಗುತ್ತದೆ ಎಂದು ಹೇಳಿದ್ದಾರೆ.
ಅವರು ಕೊಟ್ಟ ಕವರ್ ನಲ್ಲಿ ಏನೂ ಇರಲಿಲ್ಲ ಮಠಾಧೀಶರಿಗೆ ಮುಖ್ಯಮಂತ್ರಿ ನಿವಾಸದಲ್ಲಿ ಕವರ್ ಕೊಟ್ಟ ವಿಚಾರವಾಗಿ ಅವರು ಪ್ರತಿಕ್ರಿಯಿಸಿದ್ದಾರೆ. ಸಚಿವರು ಕಾಗದ ತೋರಿಸಿದ್ದಕ್ಕೆ ಅಷ್ಟು ಸುದ್ದಿಯಾಯ್ತು. ನಂತರ ಅದರಲ್ಲಿರುವುದು ಏನೆಂದು ಗೊತ್ತಾದಾಗ ನಂತರ ಸುಮ್ಮನಾದ್ರಿ. ಹಾಗೆ ಮಠಾಧೀಶರಿಗೂ ಪತ್ರ ಕೊಟ್ಟಿದ್ದಾರೆ. ಇದನ್ನೇ ಬೇರೆ ರೀತಿಯಲ್ಲಿತೋರಿಸಿದ್ದು ವಿಕೃತಿ ತೋರಿಸುತ್ತದೆ. ಅದನ್ನು ತೋರಿಸುವವರ ಮನಸ್ಸಿನ ವಿಕೃತಿ ತೋರಿಸುತ್ತದೆ. ಮಠಾಧೀಶರು ಹೋದಾಗ ಹಣ್ಣುಹಂಪಲು ಕೊಡ್ತಾರೆ. ಮನೆಗಳಿಗೆ ಬಂದಾಗ ಭಕ್ತರು ನೀವೇ ಕೊಡ್ತೀರ. ಅದನ್ನೇ ಬೇರೆ ರೀತಿ ತೋರಿಸಿದರೆ ಹೇಗೆ. ಅವರು ಕೊಟ್ಟ ಕವರ್ ನಲ್ಲಿ ಏನೂ ಇರಲಿಲ್ಲ. ಕಾಣಿಕೆ ಕೊಡುವ ಸಂಸ್ಕೃತಿ ಭಕ್ತರಲ್ಲಿದೆ. ಅದಕ್ಕೆ ಬೇರೆ ಅರ್ಥ ಮಾಡಿಕೊಳ್ಳುವುದು ಸರಿಯಲ್ಲ ಎಂದು ಬಾಳೆ ಹೊಸೂರಿನ ದಿಂಗಾಲೇಶ್ವರ ಶ್ರೀಗಳ ಸ್ಪಷ್ಟನೆ ನೀಡಿದ್ದಾರೆ.
ಇದನ್ನೂ ಓದಿ: 20 ವರ್ಷ ಆದ್ರೂ ಗುಂಡಿ ಬೀಳದಂತೆ ರಸ್ತೆ ಅಭಿವೃದ್ಧಿ ಆಗಿದೆ; ಬೆಂಗಳೂರು ಸಿಟಿ ರೌಂಡ್ಸ್ ವೇಳೆ ಬಿಎಸ್ ಯಡಿಯೂರಪ್ಪ ಹೇಳಿಕೆ
ರಾಜಕೀಯ ತುರ್ತು: ಇಂದು ಮಧ್ಯಾಹ್ನ ಸ್ವಾಮೀಜಿಗಳಿಂದ ಸುದ್ದಿಗೋಷ್ಠಿ; ಭಾನುವಾರ ಅರಮನೆ ಮೈದಾನದಲ್ಲಿ ಸ್ವಾಮೀಜಿಗಳ ಸಮಾವೇಶ
(Swamijis on Conference at Aramane Stadium on 25 July BS Yediyurappa)
Published On - 3:37 pm, Fri, 23 July 21