Ayyappa Devotee: ಮಂಡ್ಯದಲ್ಲಿ ಅಯ್ಯಪ್ಪನ ವಿಶೇಷ ಭಕ್ತ ಪ್ರತ್ಯಕ್ಷ, ಪುನೀತ್ ಬಾವುಟ ಹಿಡಿದು ಶಬರಿಮಲೆಗೆ ಪಾದಯಾತ್ರೆ
ಈ ತಿಂಗಳ ಆರಂಭದಿಂದಲೂ ಎಲ್ಲೆಲ್ಲೂ ಅಯ್ಯಪ್ಪ ಭಕ್ತರ ಸಾಲು ಕಾಣಿಸುತ್ತಿದೆ, ಆದರೆ ಮಂಡ್ಯದಲ್ಲಿ ಓರ್ವ ವಿಶೇಷ ಅಯ್ಯಪ್ಪ ಭಕ್ತ ಪ್ರತ್ಯಕ್ಷವಾಗಿದ್ದಾರೆ. ಅವರು ಪ್ರತಿ ವರ್ಷ ತುಮಕೂರಿನಿಂದ ಮಧುಗಿರಿಯವರೆಗೆ ಪಾದಯಾತ್ರೆ ನಡೆಸುವ ಮೂಲಕ ವಿಶಿಷ್ಟ ಭಕ್ತಿಯನ್ನು ಮೆರೆಯುತ್ತಿದ್ದಾರೆ.

ಈ ಬಾರಿ ನಟ ದಿ. ಪುನೀತ್ ರಾಜ್ಕುಮಾರ್ ಅವರ ಬಾವುಟ ಹಿಡಿದು ಶಬರಿಮಲೆಯತ್ತ ಪ್ರಯಾಣ ಬೆಳೆಸಿದ್ದಾರೆ. ಗಂಗಾಧರ್ ಬೆಳೆ ನಷ್ಟದಿಂದ ಕಂಗಾಲಾಗಿದ್ದರು, ಈ ಹಿನ್ನಲೆ ಅಯ್ಯಪ್ಪನಿಗೆ ಹರಕೆಯನ್ನ ಹೊತ್ತುಕೊಂಡಿದ್ದರು.
ಶಬರಿಮಲೆಗೆ ಪಾದಯಾತ್ರೆ ಮಾಡಿದ ಬಳಿಕ ಗಂಗಾಧರನಿಗೆ ಎಲ್ಲವೂ ಶುಭವೇ ಆಗಿತ್ತು. ಕಳೆದ ಬಾರಿ ಶಬರಿಮಲೆಗೆ ಹೋಗುವಾಗ ಪುನೀತ್ ರಾಜ್ ಕುಮಾರ್ ಮೃತ ಪಟ್ಟಿದ್ದರು. ಅಯ್ಯಪ್ಪನ ದರ್ಶನದ ಬಳಿಕ ನೇರವಾಗಿ ಅಪ್ಪು ಸಮಾಧಿಗೆ ಗಂಗಾಧರ್ ಭೇಟಿ ಕೊಟ್ಟಿದ್ದರು. ಈ ಹಿನ್ನಲೆ ಪ್ರತಿ ವರ್ಷ ತನ್ನ
ಹರಕೆ ತೀರಿಸುವ ಸಲುವಾಗಿ ಹಾಗೂ ಅಪ್ಪುವಿನ ಆತ್ಮಕ್ಕೆ ಶಾಂತಿ ಸಿಗುವ ಸಲುವಾಗಿ ಪಾದಯಾತ್ರೆ ಮಾಡುತ್ತಿದ್ದಾರೆ. ಮದುಗಿರಿಯಿಂದ ಶಬರಿಮಲೆಗೆ ಕಾಲ್ನಡಿಗೆಯ ಮೂಲಕವೇ ಪಾದ ಯಾತ್ರೆ ನಡೆಸಿ, ಭಕ್ತಿ ಮೆರೆಯುತ್ತಿದ್ದಾರೆ.
ಕೊರೊನಾ ಸಾಂಕ್ರಾಮಿಕದ ಬಳಿಕ ಶಬರಿಮಲೆಗೆ ದಾಖಲೆಯ ಭಕ್ತರು ಭೇಟಿ ನೀಡುತ್ತಿದ್ದಾರೆ. ಡಿಸೆಂಬರ್ 8 ರಿಂದ ಐದು ದಿನಗಳಲ್ಲಿ 4.5 ಲಕ್ಷ ಭಕ್ತರು ದರ್ಶನಕ್ಕಾಗಿ ಟಿಕೆಟ್ ಕಾಯ್ದಿರಿಸಿದ್ದಾರೆ. ಬುಧವಾರ 61,315 ಮಂದಿ ದೇವಸ್ಥಾನಕ್ಕೆ ಭೇಟಿ ನೀಡಿದ್ದರೆ, ಗುರುವಾರಕ್ಕೆ ಬುಕ್ಕಿಂಗ್ ಮಾಡಿದ್ದ 96,030 ಮಂದಿಯಲ್ಲಿ 72,000 ಮಂದಿ ಸಂಜೆ ವೇಳೆಗೆ ಪಂಪಾಕ್ಕೆ ಆಗಮಿಸಿದ್ದಾರೆ.
ರಾಜ್ಯದ ಇತರೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ