ಯುಗಾದಿ, ರಂಜಾನ್ ರಜೆಗೆ ಊರಿಗೆ ಹೋದವರಿಗೆ ಬೆಂಗಳೂರಿಗೆ ವಾಪಸ್ ಬರಲು ವಿಶೇಷ ರೈಲುಗಳು: ಇಲ್ಲಿದೆ ಸಂಪೂರ್ಣ ವೇಳಾಪಟ್ಟಿ

ಯುಗಾದಿ ಮತ್ತು ರಂಜಾನ್ ರಜೆಗಳಿಗಾಗಿ ಬೆಂಗಳೂರಿನಿಂದ ಊರಿಗೆ ತೆರಳಿದ್ದ ಪ್ರಯಾಣಿಕರು ಮರಳಲು ನೈಋತ್ಯ ರೈಲ್ವೆ (SWR) ವಿಶೇಷ ರೈಲುಗಳನ್ನು ವ್ಯವಸ್ಥೆಗೊಳಿಸಿದೆ. ಹೆಚ್ಚುವರಿ ದಟ್ಟಣೆ ನಿಭಾಯಿಸಲು ಬೆಂಗಳೂರು, ಬೆಳಗಾವಿ, ಹುಬ್ಬಳ್ಳಿ, ವಿಜಯಪುರ, ಹೊಸಪೇಟೆ ಮತ್ತು ಗೋವಾ ಮಾರ್ಗಗಳಲ್ಲಿ ಈ ರೈಲುಗಳು ಸಂಚರಿಸುತ್ತಿವೆ. ವೇಳಾಪಟ್ಟಿ ಮತ್ತು ನಿಲುಗಡೆ ಮಾಹಿತಿ ಇಲ್ಲಿದೆ.

ಯುಗಾದಿ, ರಂಜಾನ್ ರಜೆಗೆ ಊರಿಗೆ ಹೋದವರಿಗೆ ಬೆಂಗಳೂರಿಗೆ ವಾಪಸ್ ಬರಲು ವಿಶೇಷ ರೈಲುಗಳು: ಇಲ್ಲಿದೆ ಸಂಪೂರ್ಣ ವೇಳಾಪಟ್ಟಿ
ಸಾಂದರ್ಭಿಕ ಚಿತ್ರ
Image Credit source: TV9 Network

Updated on: Mar 19, 2026 | 8:21 AM

ಬೆಂಗಳೂರು, ಮಾರ್ಚ್ 18: ಯುಗಾದಿ (Ugadi) ಹಾಗೂ ರಂಜಾನ್ ಹಬ್ಬದ ಸಾಲು ರಜೆಗಳ ಸಂದರ್ಭ ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ನಿರ್ವಹಿಸಲು ನೈಋತ್ಯ ರೈಲ್ವೆ (SWR) ಬೆಂಗಳೂರು (Bangalore) ನಗರದಿಂದ ವಿವಿಧ ಸ್ಥಳಗಳಿಗೆ ವಿಶೇಷ ರೈಲುಗಳ ಸೇವೆ ಒದಗಿಸುತ್ತಿದೆ. ಬೆಳಗಾವಿ, ಹುಬ್ಬಳ್ಳಿ, ವಿಜಯಪುರ, ಹೋಸಪೇಟೆ ಹಾಗೂ ಗೋವಾ (ಮಡಗಾಂವ್) ಮಾರ್ಗಗಳಿಗೆ ಈ ವಿಶೇಷ ರೈಲುಗಳು ಸಂಚರಿಸುತ್ತಿವೆ. ವಿಶೇಷ ರೈಲುಗಳ ವೇಳಾಪಟ್ಟಿ, ಎಲ್ಲೆಲ್ಲಿ ನಿಲುಗಡೆ ಹೊಂದಿವೆ ಎಂಬ ಹಾಗೂ ಇತರ ಮಾಹಿತಿ ಇಲ್ಲಿದೆ.

ಬೆಂಗಳೂರು ಬೆಳಗಾವಿ ವಿಶೇಷ ರೈಲು

ರೈಲು ಸಂಖ್ಯೆ 06503 ಮಾರ್ಚ್ 18ರಂದು ಸಂಜೆ 7 ಗಂಟೆಗೆ ಸರ್ ಎಂ.ವಿಶ್ವೇಶ್ವರಯ್ಯ ಟರ್ಮಿನಲ್ (SMVT) ಬೆಂಗಳೂರಿನಿಂದ ಹೊರಟು, ಮುಂದಿನ ದಿನ ಬೆಳಿಗ್ಗೆ 7.35ಕ್ಕೆ ಬೆಳಗಾವಿ ತಲುಪಿದೆ.

ರಿಟರ್ನ್ ರೈಲು ಸಂಖ್ಯೆ 06504 ಮಾರ್ಚ್ 22ರಂದು ಸಂಜೆ 5.30ಕ್ಕೆ ಬೆಳಗಾವಿಯಿಂದ ಹೊರಟು, ಮಾರ್ಚ್ 23ರಂದು ಬೆಳಿಗ್ಗೆ 5ಕ್ಕೆ ಬೆಂಗಳೂರು ತಲುಪಲಿದೆ.

ಈ ರೈಲು ಚಿಕ್ಕಬಾಣಾವರ, ತುಮಕೂರು, ಅರಸೀಕೆರೆ, ಬೀರೂರು, ದಾವಣಗೆರೆ, ಹರಿಹರ, ಹಾವೇರಿ, ಹುಬ್ಬಳ್ಳಿ, ಧಾರವಾಡ, ಅಳ್ನಾವರ, ಲೊಂಡಾ ಮತ್ತು ಖಾನಾಪುರ ನಿಲ್ದಾಣಗಳಲ್ಲಿ ನಿಲುಗಡೆ ಹೊಂದಿದೆ.

ಬೆಂಗಳೂರು ವಿಜಯಪುರ ವಿಶೇಷ ರೈಲು

ರೈಲು ಸಂಖ್ಯೆ 06277 ಮಾರ್ಚ್ 18ರಂದು ರಾತ್ರಿ 9.50ಕ್ಕೆ ಯಶವಂತಪುರದಿಂದ ಹೊರಟು, ಮುಂದಿನ ದಿನ ಬೆಳಿಗ್ಗೆ 9.45ಕ್ಕೆ ವಿಜಯಪುರ ತಲುಪಿದೆ.

ರಿಟರ್ನ್ ರೈಲು ಸಂಖ್ಯೆ 06278 ಮಾರ್ಚ್ 22ರಂದು ಮಧ್ಯಾಹ್ನ 1.30ಕ್ಕೆ ವಿಜಯಪುರದಿಂದ ಹೊರಟು, ಮಾರ್ಚ್ 23ರಂದು ರಾತ್ರಿ 12.30ಕ್ಕೆ ಯಶವಂತಪುರ ತಲುಪಲಿದೆ.

ಈ ರೈಲು ತುಮಕೂರು, ಅರಸೀಕೆರೆ, ಬೀರೂರು, ದಾವಣಗೆರೆ, ಹರಿಹರ, ರಾಣಿಬೆನ್ನೂರು, ಹಾವೇರಿ, ಬಾದಾಮಿ, ಬಾಗಲಕೋಟೆ ಮತ್ತು ಆಲಮಟ್ಟಿ ನಿಲ್ದಾಣಗಳಲ್ಲಿ ನಿಲುಗಡೆ ಹೊಂದಿದೆ.

ಹುಬ್ಬಳ್ಳಿ-ಯಶವಂತಪುರ ವಿಶೇಷ ರೈಲು

ರೈಲು ಸಂಖ್ಯೆ 07379 ಮಾರ್ಚ್ 18ರಂದು ಮಧ್ಯಾಹ್ನ 12ಕ್ಕೆ ಹುಬ್ಬಳ್ಳಿಯಿಂದ ಹೊರಟು, ಅದೇ ದಿನ ರಾತ್ರಿ 8.15ಕ್ಕೆ ಯಶವಂತಪುರ ತಲುಪಿದೆ.
ಹಾವೇರಿ, ಹರಿಹರ, ದಾವಣಗೆರೆ, ಅರಸೀಕೆರೆ ಮತ್ತು ತುಮಕೂರು ನಿಲ್ದಾಣಗಳಲ್ಲಿ ನಿಲುಗಡೆ ಇರುತ್ತದೆ.

ಬೆಂಗಳೂರು ಗೋವಾ (ಮಡಗಾಂವ್) ವಿಶೇಷ ರೈಲು

ರೈಲು ಸಂಖ್ಯೆ 06267 ಮಾರ್ಚ್ 18ರಂದು ಮಧ್ಯಾಹ್ನ 12ಕ್ಕೆ ಯಶವಂತಪುರದಿಂದ ಹೊರಟು, ಮಾರ್ಚ್ 19ರಂದು ಬೆಳಿಗ್ಗೆ 6.45ಕ್ಕೆ ಮಡಗಾಂವ್ ತಲುಪಿದೆ.

ಕುಣಿಗಲ್, ಚನ್ನರಾಯಪಟ್ಟಣ, ಹಾಸನ, ಸಕಲೇಶಪುರ, ಸುಬ್ರಹ್ಮಣ್ಯ ರಸ್ತೆ, ಕಬಕಪುತ್ತೂರು, ಬಂಟ್ವಾಳ, ಸುರತ್ಕಲ್, ಮಂಗಳೂರು ಸಮೀಪದ ಹಲವಾರು ನಿಲ್ದಾಣಗಳಲ್ಲಿ ನಿಲುಗಡೆ ಇರುತ್ತದೆ.

ರಿಟರ್ನ್ ರೈಲು ಸಂಖ್ಯೆ 06268 ಮಾರ್ಚ್ 19ರಂದು ಬೆಳಿಗ್ಗೆ 11ಕ್ಕೆ ಮಡಗಾಂವ್‌ನಿಂದ ಹೊರಟು, ಮಾರ್ಚ್ 20ರಂದು ಬೆಳಿಗ್ಗೆ 5.20ಕ್ಕೆ ಬೆಂಗಳೂರು ಕ್ಯಾಂಟೋನ್ಮೆಂಟ್ ತಲುಪಲಿದೆ. ಈ ರೈಲು SMVT ಬೆಂಗಳೂರಲ್ಲಿಯೂ ನಿಲುಗಡೆ ಹೊಂದಿದೆ.

ಬೆಂಗಳೂರು ಹೋಸಪೇಟೆ ವಿಶೇಷ ರೈಲು

ರೈಲು ಸಂಖ್ಯೆ 06533 ಮಾರ್ಚ್ 18ರಂದು ಸಂಜೆ 6.15ಕ್ಕೆ ಯಶವಂತಪುರದಿಂದ ಹೊರಟು, ಮಾರ್ಚ್ 19ರಂದು ಮಧ್ಯಾಹ್ನ 4ಕ್ಕೆ ಹೋಸಪೇಟೆ ತಲುಪಲಿದೆ. ರಿಟರ್ನ್ ರೈಲು ಸಂಖ್ಯೆ 06534 ಮಾರ್ಚ್ 19ರಂದು ಬೆಳಿಗ್ಗೆ 9ಕ್ಕೆ ಹೋಸಪೇಟೆಯಿಂದ ಹೊರಟಿದ್ದು, ಸಂಜೆ 7.20ಕ್ಕೆ ಯಶವಂತಪುರ ತಲುಪಲಿದೆ.

ಇದನ್ನೂ ಓದಿ: ಹಬ್ಬಕ್ಕೆ ಊರಿಗೆ ಹೊರಟ ಜನ: ಬೆಂಗಳೂರಿನಲ್ಲಿ ರಾತ್ರಿಯೆಲ್ಲ ಟ್ರಾಫಿಕ್ ಜಾಮ್, ಮೆಜೆಸ್ಟಿಕ್​ನಲ್ಲಿ ಜನವೋ ಜನ

ತುಮಕೂರು, ಅರಸೀಕೆರೆ, ಕಡೂರು, ಚಿಕ್ಕಜಜೂರು, ಚಿತ್ರದುರ್ಗ, ರಾಯದುರ್ಗ, ಬಳ್ಳಾರಿ ಕ್ಯಾಂಟೋನ್ಮೆಂಟ್ ಮತ್ತು ತೋರಣಗಲ್ಲು ನಿಲ್ದಾಣಗಳಲ್ಲಿ ಈ ರೈಲಿಗೆ ನಿಲುಗಡೆ ಇರುತ್ತದೆ. ಯುಗಾದಿ ಹಬ್ಬದ ಸಂದರ್ಭದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಕರು ಊರಿಗೆ ತೆರಳಿ ವಾಪಸಾಗುತ್ತಿರುವ ಹಿನ್ನೆಲೆಯಲ್ಲಿ, ಈ ವಿಶೇಷ ರೈಲುಗಳು ಪ್ರಯಾಣಿಕರಿಗೆ ದೊಡ್ಡ ಮಟ್ಟದಲ್ಲಿ ಅನುಕೂಲ ಕಲ್ಪಿಸಲಿವೆ ಎಂದು ರೈಲ್ವೆ ಇಲಾಖೆ ತಿಳಿಸಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಗಣಪತಿ ಶರ್ಮಾ

ಕೇರಳದ ಕಾಸರಗೋಡು ಮೂಲದ ಕನ್ನಡಿಗ, ಪ್ರಸ್ತುತ ಬೆಂಗಳೂರಿನಲ್ಲಿ ವಾಸ. 14 ವರ್ಷಗಳಿಂದ ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದು, ವರದಿಗಾರಿಕೆ ಅನುಭವದ ಜತೆಗೆ ಬರವಣಿಗೆ, ಅನುವಾದದಲ್ಲಿ ಆಸಕ್ತಿ ಮತ್ತು ಪರಿಣತಿ. ಪ್ರಚಲಿತ ವಿದ್ಯಮಾನಗಳು, ರಾಜ್ಯ-ರಾಷ್ಟ್ರ ರಾಜಕೀಯ, ಉದ್ಯಮ, ವೈಯಕ್ತಿಕ ಹಣಕಾಸು ವಿಚಾರಗಳ ಬರವಣಿಗೆಯ ಬಗ್ಗೆ ಹೆಚ್ಚಿನ ಆಸಕ್ತಿ, ಒಲವು. ವಿಜಯ ಕರ್ನಾಟಕ, ಸಮಯ ನ್ಯೂಸ್ ಟಿವಿ, ವಿಜಯವಾಣಿ, ಪ್ರಜಾವಾಣಿ ಪತ್ರಿಕೆಗಳು ಹಾಗೂ ಡಿಜಿಟಲ್ ಮೀಡಿಯಾದಲ್ಲಿ ಕೆಲಸ ಮಾಡಿದ ಅನುಭವ. 2022 ರಿಂದ ಟಿವಿ9 ಕನ್ನಡ ಡಿಜಿಟಲ್​ನಲ್ಲಿ ಕಾರ್ಯನಿರ್ವಹಣೆ.

Read More
Loading...
Unable to load recommendations.
Follow Us