ಕೊರೊನಾ ಸೋಂಕಿನ ಎರಡನೇ ಅಲೆ: ಚಿಕ್ಕಬಳ್ಳಾಪುರದ ಮಾರುಕಟ್ಟೆಯಲ್ಲಿ ಬಿಕರಿಯಾಗುತ್ತಿಲ್ಲ ಹುಣಸೆ

|

Updated on: Apr 06, 2021 | 11:47 AM

ಹುಣಸೆ ಹಣ್ಣಿನ ಸಿಜನ್ ಬಂದರೆ ಸಾಕು ಇಲ್ಲಿ ನೂರಾರು ಟನ್ ಗಟ್ಟಲೇ ಹುಣಸೆ ಹಣ್ಣು ಮಾರುಕಟ್ಟೆಗೆ ಬರುತ್ತದೆ. ಆದರೆ ಈ ಬಾರಿ ಒಳ್ಳೆ ಫಸಲು ಬಂದಿದ್ದರೂ, ವಿವಿಧ ರಾಜ್ಯಗಳ ವರ್ತಕರು ಇತ್ತ ಕಡೆ ಆಗಮಿಸಿಲ್ಲ. ಇದರ ಪರಿಣಾಮ ರೈತರು ಬೆಳೆದ ಹುಣಸೆ ಹಣ್ಣಿಗೆ ಬೇಡಿಕೆಯೇ ಇಲ್ಲದಂತೆ ಆಗಿದೆ.

ಕೊರೊನಾ ಸೋಂಕಿನ ಎರಡನೇ ಅಲೆ: ಚಿಕ್ಕಬಳ್ಳಾಪುರದ ಮಾರುಕಟ್ಟೆಯಲ್ಲಿ ಬಿಕರಿಯಾಗುತ್ತಿಲ್ಲ ಹುಣಸೆ
ಹುಣಸೆ ಹಣ್ಣು
Follow us on

ಚಿಕ್ಕಬಳ್ಳಾಪುರ: ಜಿಲ್ಲೆಯ ಹುಣಸೆ ಹಣ್ಣು ತುಂಬಾನೇ ಜನಪ್ರಿಯವಾಗಿದ್ದು, ಅದರ ಬಣ್ಣ, ಹುಳಿ, ರುಚಿಗೆ ಮಾರು ಹೋಗದವರೇ ಇಲ್ಲ. ಈ ಕಾರಣಕ್ಕೆ ವಿವಿಧ ರಾಜ್ಯದ ಹುಣಸೆ ಹಣ್ಣಿನ ವ್ಯಾಪಾರಿಗಳು ಇಲ್ಲಿಯ ಮಾರುಕಟ್ಟೆಗೆ ಆಗಮಿಸಿ ಕೇಳಿದಷ್ಟು ಹಣ ನೀಡಿ ಹುಣಸೆ ಹಣ್ಣು ಖರೀದಿ ಮಾಡುತ್ತಿದ್ದರು. ಆದರೆ, ಈಗ ದೇಶದೆಲ್ಲೆಡೆ ಮತ್ತೆ ಕೊರೊನಾ ಸೋಂಕಿನ ಎರಡನೇ ಅಲೆಯ ಅಬ್ಬರ ಆರಂಭವಾಗಿದ್ದು, ಹುಣಸೆ ಹಣ್ಣಿನ ವರ್ತಕರು ಮಾರುಕಟ್ಟೆಯತ್ತ ಮುಖ ಮಾಡುತ್ತಿಲ್ಲ. ಹೀಗಾಗಿ ಹುಣಸೆ ಹಣ್ಣು ನಿಗದಿತ ದರಕ್ಕೆ ಮಾರಾಟವಾಗದೆ, ಬಿಕಾರಿಯಾಗುತ್ತಿಲ್ಲ.

ಕೋಲಾರ ಚಿಕ್ಕಬಳ್ಳಾಪುರ ಬಯಲು ಸೀಮೆಯ ಅವಳಿ ಜಿಲ್ಲೆಗಳಿಗೆ ಚಿಕ್ಕಬಳ್ಳಾಪುರವೇ ಪ್ರಮುಖ ವಾಣಿಜ್ಯ ನಗರ. ಇನ್ನೂ ಚಿಂತಾಮಣಿಯಲ್ಲಿರುವ ಎಪಿಎಂಸಿ ಮಾರುಕಟ್ಟೆ ಹುಣಸೆ ಹಣ್ಣಿನ ವ್ಯಾಪಾರಕ್ಕೆ ಹೆಸರುವಾಸಿ. ಹುಣಸೆ ಹಣ್ಣಿನ ಸೀಜನ್ ಬಂದರೆ ಸಾಕು ಇಲ್ಲಿ ನೂರಾರು ಟನ್ ಹುಣಸೆ ಹಣ್ಣು ಮಾರುಕಟ್ಟೆಗೆ ಬರುತ್ತದೆ. ಆದರೆ ಈ ಬಾರಿ ಒಳ್ಳೆ ಫಸಲು ಬಂದಿದ್ದರೂ, ವಿವಿಧ ರಾಜ್ಯಗಳ ವರ್ತಕರು ಇತ್ತ ಕಡೆ ಆಗಮಿಸಿಲ್ಲ. ಇದರ ಪರಿಣಾಮ ರೈತರು ಬೆಳೆದ ಹುಣಸೆ ಹಣ್ಣಿಗೆ ಬೇಡಿಕೆಯೇ ಇಲ್ಲದಂತೆ ಆಗಿದೆ.

ಹೋದ ವರ್ಷ ಚೆನ್ನಾಗಿ ಫಸಲು ಸಿಕ್ಕಿತ್ತು ಮತ್ತು ಬೆಲೆಯೂ ಚೆನ್ನಾಗಿ ಇತ್ತು ಈ ಬಾರಿ ಮಾರುಕಟ್ಟೆಯಲ್ಲಿ ಕೊರೊನಾದ ಕಾರಣದಿಂದಾಗಿ ವ್ಯಾಪಾರವಾಗುತ್ತಿಲ್ಲ ಹೀಗಾಗಿ ಸಾಕಷ್ಟು ಸಂಕಷ್ಟವನ್ನು ಎದುರಿಸುವಂತಾಗಿದೆ ಎಂದು ಹುಣಸೆ ಬೆಳೆದ ರೈತ ವೆಂಕಟಶಿವ ರೆಡ್ಡಿ ತೀಳಿಸಿದ್ದಾರೆ.

ಹುಣಸೆ ಹಣ್ಣಿನ ಮಾರುಕಟ್ಟೆ

ಚಿಂತಾಮಣಿ ಹುಣಸೆ ಹಣ್ಣಿನ ಮಾರುಕಟ್ಟೆಗೆ ಕೋಲಾರ, ಶ್ರೀನಿವಾಸಪುರ, ಚಿಂತಾಮಣಿ, ಶಿಡ್ಲಘಟ್ಟ, ಚಿಕ್ಕಬಳ್ಳಾಪುರ ಸೇರಿದಂತೆ ಸುತ್ತಮುತ್ತಲ ತಾಲೂಕುಗಳ ರೈತರು ಇಲ್ಲಿಗೆ ಬರುತ್ತಾರೆ. ತಾವು ಬೆಳೆದ ಟನ್ ಗಟ್ಟಲೆ ಹುಣಸೆ ಹಣ್ಣು ತರುತ್ತಾರೆ. ಪ್ರತಿ ವರ್ಷ ಸಾಮಾನ್ಯವಾಗಿ ಕೆ.ಜಿ ಹುಣಸೆ ಹಣ್ಣಿಗೆ 50-60 ರೂಪಾಯಿ ಇರುತ್ತಿತ್ತು. ಆದರೆ ಈ ಬಾರಿ ಕೇವಲ 30 ರೂಪಾಯಿಗೆ ಬಿಕಾರಿಯಾಗಿದೆ. ಕೊರೊನಾ ಸೋಂಕಿನ ಭೀತಿಯಿಂದ ಉತ್ತರ ಭಾರತ ಮೂಲದ ವರ್ತಕರುಗಳು ಇನ್ನೂ ಆಗಮಿಸಿಲ್ಲ ಇದರಿಂದ ಬೆಲೆ ಕುಸಿತವಾಗಿದೆ ಎಂದು ವರ್ತಕರಾದ ನರಸಿಂಹಪ್ಪ ಹೇಳಿದ್ದಾರೆ.

ಚಿಂತಾಮಣಿಯ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ

ಚಿಂತಾಮಣಿ ತಾಲೂಕಿನ ಸುತ್ತಮುತ್ತಲ ಪ್ರದೇಶದಲ್ಲಿರುವ ಮಣ್ಣಿನ ಗುಣಮಟ್ಟದ ಪರಿಣಾಮ, ಚಿಂತಾಮಣಿ ಮಾರುಕಟ್ಟೆಗೆ ಬರುವ ಹುಣಸೆ ಹಣ್ಣಿನ ಬಣ್ಣ ಮತ್ತು ಹುಳಿ ಹೆಚ್ಚು ಆಕರ್ಷಕವಾಗಿ ಇರುತ್ತದೆ. ಆದರೆ ಕೊರೊನಾ ಸೋಂಕಿನ ಭೀತಿ ಇರುವ ಕಾರಣ ಈ ಬಾರಿ ನಿರೀಕ್ಷೆಯಷ್ಟು ಉತ್ತರ ಭಾರತ ಮೂಲದ ವರ್ತಕರು ಮಾರುಕಟ್ಟೆಗೆ ಆಗಮಿಸಿಲ್ಲ ಇದರಿಂದ ಹುಣಸೆ ಹಣ್ಣಿನ ಬೆಲೆಯೂ ಕಡಿಮೆಯಾಗಿದೆ.

(ವರದಿ: ಭೀಮಪ್ಪ ಪಾಟೀಲ-9980914135)

ಇದನ್ನೂ ಓದಿ: 

ಸರ್ಕಾರ ನೀಡಿದ ಭೂಮಿಗೆ ತಡೆ; ಚಾಮರಾಜನಗರ ರೈತರ ಜಮೀನಿಗೆ ಚೈನ್ ಗೇಟ್ ಹಾಕಿದ ಅರಣ್ಯ ಇಲಾಖೆ ಅಧಿಕಾರಿಗಳು

ರೈತರ ಆರ್ಥಿಕ ಸ್ಥಿತಿ ಬುಡಮೇಲಾಗಿದೆ: ಬೆಂಗಳೂರು ರೈತ ಸಮಾವೇಶದಲ್ಲಿ ಕೋಡಿಹಳ್ಳಿ ಚಂದ್ರಶೇಖರ್ ಹೇಳಿಕೆ

(Tamarind price suddenly decreased in Chikkaballapur due to Coronavirus Second wave Covid 19)

Published On - 11:46 am, Tue, 6 April 21