ನಾಳೆಯಿಂದ ಖಾಸಗಿ ಬಸ್ ಟಿಕೆಟ್ ದರದಲ್ಲಿ ಏರಿಕೆ ಸಾಧ್ಯತೆ.. ಜನ ಸಾಮಾನ್ಯರಿಗೆ ಗಾಯದ ಮೇಲೆ ಬರೆ
ಸಾಮಾನ್ಯ ದಿನದಲ್ಲಿ ₹600ರಿಂದ ₹700ರಷ್ಟಿರುವ ಖಾಸಗಿ ಬಸ್ಗಳ ಟಿಕೆಟ್ ದರ ಇದೀಗ ₹1,200ರಿಂದ ₹1,300ಕ್ಕೆ ಏರಿಕೆಯಾಗಲಿದೆ ಎನ್ನಲಾಗುತ್ತಿದ್ದು, ಸರ್ಕಾರಿ ಬಸ್ಗಳನ್ನು ನೆಚ್ಚಿಕೊಂಡ ಪ್ರಯಾಣಿಕರಿಗೆ ಇದು ತಾಳಲಾರದ ಹೊರೆಯಾಗಲಿದೆ.
ಬೆಂಗಳೂರು: ಕರ್ನಾಟಕ ರಾಜ್ಯ ಸರ್ಕಾರದ ಧೋರಣೆಯ ವಿರುದ್ಧ ಮುನಿಸಿಕೊಂಡಿರುವ ಕೆಎಸ್ಆರ್ಟಿಸಿ, ಬಿಎಂಟಿಸಿ ಸಾರಿಗೆ ನೌಕರರು ನಾಳೆಯಿಂದ ರಾಜ್ಯವ್ಯಾಪಿ ಮುಷ್ಕರ ನಡೆಸಲು ಸನ್ನದ್ಧರಾಗಿದ್ದಾರೆ. ಸರ್ಕಾರಿ ಬಸ್ಗಳು ಸೇವೆಯನ್ನು ಸ್ಥಗಿತಗೊಳಿಸುತ್ತಿರುವುದರಿಂದ ಅದರ ಲಾಭ ಪಡೆಯಲು ಮುಂದಾದ ಖಾಸಗಿ ಬಸ್ಗಳು ನಾಳೆಯಿಂದಲೇ ಟಿಕೆಟ್ ದರ ಏರಿಕೆ ಮಾಡುವ ಸಾಧ್ಯತೆ ದಟ್ಟವಾಗಿದೆ. ಹೊರಜಿಲ್ಲೆ ಮತ್ತು ಹೊರರಾಜ್ಯಗಳಿಗೆ ತೆರಳುವ ಖಾಸಗಿ ಬಸ್ ದರದಲ್ಲಿ ಏರಿಕೆ ಆಗಲಿದ್ದು, ಜನಸಾಮಾನ್ಯರಿಗೆ ಹೊರೆಯಾಗಲಿದೆ.
ಸಾಧಾರಣವಾಗಿ ಹಬ್ಬ ಹರಿದಿನಗಳ ಸಂದರ್ಭದಲ್ಲಿ ಮನಸೋ ಇಚ್ಛೆ ದರ ಏರಿಸಿ ಪ್ರಯಾಣಿಕರಿಂದ ಹಣ ಪಡೆಯುವ ಖಾಸಗಿ ಬಸ್ಗಳು ಇದೀಗ ರಾಜ್ಯ ಸಾರಿಗೆ ನೌಕರರ ಮುಷ್ಕರದ ವೇಳೆಯಲ್ಲಿ ಟಿಕೆಟ್ ದರ ಏರಿಕೆಗೆ ಮುಂದಾಗಿರುವುದು ಪ್ರಯಾಣಿಕರ ಜೇಬಿಗೆ ಕತ್ತರಿ ಪ್ರಯೋಗ ಆಗಲಿದೆ. ಬಿಜಾಪುರ, ಬಾಗಲಕೋಟೆ, ಹುಬ್ಬಳ್ಳಿ ಸೇರಿದಂತೆ ಬಹುತೇಕ ಎಲ್ಲಾ ಜಿಲ್ಲೆಗಳಿಗೆ ಹೋಗುವ ಖಾಸಗಿ ಬಸ್ಗಳ ಪ್ರಯಾಣ ದರದಲ್ಲಿ ಈಗಾಗಲೇ ಏರಿಕೆಯಾಗಿದ್ದು, ನಾಳೆ ಇನ್ನಷ್ಟು ದರ ಏರುವ ಸಂಭವವಿದೆ.
ಸಾಮಾನ್ಯ ದಿನದಲ್ಲಿ ₹600ರಿಂದ ₹700ರಷ್ಟಿರುವ ಖಾಸಗಿ ಬಸ್ಗಳ ಟಿಕೆಟ್ ದರ ಇದೀಗ ₹1,200ರಿಂದ ₹1,300ಕ್ಕೆ ಏರಿಕೆಯಾಗಲಿದೆ ಎನ್ನಲಾಗುತ್ತಿದ್ದು, ಸರ್ಕಾರಿ ಬಸ್ಗಳನ್ನು ನೆಚ್ಚಿಕೊಂಡ ಪ್ರಯಾಣಿಕರಿಗೆ ಇದು ತಾಳಲಾರದ ಹೊರೆಯಾಗಲಿದೆ. ಖಾಸಗಿ ಬಸ್ಗಳು ಹೀಗೆ ಪರಿಸ್ಥಿತಿಯ ಲಾಭ ಪಡೆದುಕೊಳ್ಳುವುದನ್ನು ನಿಯಂತ್ರಿಸಲಾಗದೆ ಅಸಹಾಯಕರಂತೆ ವರ್ತಿಸುವ ಸರ್ಕಾರ ಕಡೇ ಪಕ್ಷ ತನ್ನದೇ ನೌಕರರ ಸಮಸ್ಯೆಗಳನ್ನು ಬಗೆಹರಿಸಿ ಮುಷ್ಕರ ಆಗದಂತೆ ನೋಡಿಕೊಂಡರೆ ಜನಸಾಮಾನ್ಯರ ಮೇಲಿನ ಹೊರೆಯಾದರೂ ತಗ್ಗುತ್ತದೆ ಎನ್ನುವುದು ಬಹುತೇಕರ ಅಭಿಪ್ರಾಯ.
ಇದನ್ನೂ ಓದಿ: Bus Strike: ಇಂದು ಮಧ್ಯಾಹ್ನದಿಂದಲೇ ಬಿಎಂಟಿಸಿ ಬಸ್ ಸಂಚಾರ ಅನುಮಾನ; ನಾಳೆಯಿಂದ ಕರ್ನಾಟಕ ರಾಜ್ಯಾದ್ಯಂತ ಬಸ್ ಬಂದ್?
ನಾಳೆ ಸಾರಿಗೆ ಮುಷ್ಕರ ನಡೆದೇ ನಡೆಯುತ್ತೆ, ಖಾಸಗಿ ನೌಕರರಿಗೂ ಬಸ್ ಓಡಿಸದಂತೆ ಮನವಿ: ಕೋಡಿಹಳ್ಳಿ ಚಂದ್ರಶೇಖರ್
(KSRTC BMTC Bus Strike leads to hike in Private bus ticket price)