ಟ್ಯಾಕ್ಸಿ ಚಾಲಕ ಪ್ರತಾಪ್ ಆತ್ಮಹತ್ಯೆ ನಂತರ ಎಚ್ಚೆತ್ತ ರಾಜ್ಯ ಸರ್ಕಾರ; ಟ್ಯಾಕ್ಸಿ ಪ್ರಯಾಣ ದರ ಹೆಚ್ಚಳ

ಪರಿಷ್ಕರಿತ ದರದ ಪ್ರಕಾರ 20 ನಿಮಿಷಗಳವರೆಗೆ ಕಾಯುವಿಕೆ ದರಗಳನ್ನು ಟ್ಯಾಕ್ಸಿ ಚಾಲಕರು ಪಡೆಯುವಂತಿಲ್ಲ. ನಂತರದ ಪ್ರತಿ 15 ನಿಮಿಷಗಳಿಗೆ ₹ 10 ನಿಗದಿ ಮಾಡಲಾಗಿದೆ.

ಟ್ಯಾಕ್ಸಿ ಚಾಲಕ ಪ್ರತಾಪ್ ಆತ್ಮಹತ್ಯೆ ನಂತರ ಎಚ್ಚೆತ್ತ ರಾಜ್ಯ ಸರ್ಕಾರ; ಟ್ಯಾಕ್ಸಿ ಪ್ರಯಾಣ ದರ ಹೆಚ್ಚಳ
ಏರ್ಪೋರ್ಟ್ ಟ್ಯಾಕ್ಸಿ
Follow us
guruganesh bhat
|

Updated on:Apr 01, 2021 | 7:13 PM

ಬೆಂಗಳೂರು: ಕಳೆದ ಎರಡು ದಿನಗಳಿಂದ ರಾಜ್ಯದಲ್ಲಿ ಸಂಚಲನ ಮೂಡಿಸಿದ್ದ ಟ್ಯಾಕ್ಸಿ ಚಾಲಕ ಪ್ರತಾಪ್ ಆತ್ಮಹತ್ಯೆಯ ನಂತರ ಎಚ್ಚೆತ್ತಿರುವ ರಾಜ್ಯ ಸರ್ಕಾರ ಟ್ಯಾಕ್ಸಿ ಪ್ರಯಾಣ ದರ ಏರಿಕೆ ಮಾಡಿ ಆದೇಶ ಹೊರಡಿಸಿದೆ. ದಿನದಿಂದ ದಿನಕ್ಕೆ ಇಂಧನ ಬೆಲೆ ಹೆಚ್ಚಳ‌ವಾಗುತ್ತಿರುವ ಕಾರಣ ಟ್ಯಾಕ್ಸಿ ಪ್ರಯಾಣ ದರವನ್ನು ಹೆಚ್ಚಳಗೊಳಿಸಲು ಸರ್ಕಾರ ಅನುಮತಿ ನೀಡಿದೆ. ಈಗಾಗಲೇ ಪ್ರಯಾಣ ದರ‌ ಏರಿಕೆ ಮಾಡುವಂತೆ ಟ್ಯಾಕ್ಸಿ ಮಾಲೀಕರ ಬೇಡಿಕೆ ಸಲ್ಲಿಸಿದ್ದು, ವಿವಿಧ ಸ್ವರೂಪದ ಟ್ಯಾಕ್ಸಿಗಳ ಪ್ರಯಾಣ ದರ‌ದಲ್ಲಿ ಟ್ಯಾಕ್ಸಿ ಮೌಲ್ಯಗಳ ಆಧಾರದ ಮೇಲೆ ದರ ಪರಿಷ್ಕರಣೆ ಮಾಡಲಾಗಿದೆ.

ಪರಿಷ್ಕರಣೆಯ ನಂತರದ ದರವೆಷ್ಟು? ಟ್ಯಾಕ್ಸಿಗಳನ್ನು ಎ, ಬಿ, ಸಿ, ಮತ್ತು ಡಿಗಳೆಂದು ವರ್ಗೀಕರಣ ಮಾಡಿ ದರ ಹೆಚ್ಚಳ ಮಾಡಲಾಗಿದೆ. ಎ ವರ್ಗದ ₹ 15 ಲಕ್ಷ ಮೇಲ್ಪಟ್ಟ ವಾಹನಗಳಿಗೆ ಕನಿಷ್ಠ 4 ಕಿಮೀವರೆಗೆ ₹ 150 ನಿಗದಿಪಡಿಸಲಾಗಿದೆ.  ಹೆಚ್ಚುವರಿ ಪ್ರತಿ ಕಿಮೀಗೆ  ಕನಿಷ್ಠ ₹ 27 ಗರಿಷ್ಟ ₹ 54 ದರ ನಿಗದಿ ಮಾಡಲಾಗಿದೆ. ಬಿ ವರ್ಗದಲ್ಲಿ ₹ 10 ಲಕ್ಷದಿಂದ ₹  16 ಲಕ್ಷದವರೆಗಿನ ಟ್ಯಾಕ್ಸಿಗಳಿಗೆ ಕನಿಷ್ಠ 4 ಕಿಮೀವರೆಗೆ ₹ 120 ದರ ನಿಗದಿ ಮಾಡಲಾಗಿದೆ. ನಂತರದ ಪ್ರತಿ ಕಿಮೀಗೆ ಕನಿಷ್ಠ ₹ 24,  ಗರಿಷ್ಠ ₹48 ದರ ನಿಗಡಿಪಡಿಸಲಾಗಿದೆ. ಸಿ ವರ್ಗದ 5 ಲಕ್ಷದಿಂದ 10 ಲಕ್ಷದ ವಾಹನಗಳಿಗೆ ಕನಿಷ್ಠ 4 ಕಿಮೀಗೆ  ₹100 ನಿಗದಿ ಮಾಡಲಾಗಿದ್ದು, ನಂತರ ಪ್ರತಿ ಕಿಮೀಗೆ ಕನಿಷ್ಠ ₹21 ಮತ್ತು ಗರಿಷ್ಠ₹ 42 ನಿಗದಿಪಡಿಸಲಾಗಿದೆ. ಡಿ ವರ್ಗದ ವಾಹನಗಳಿಗೆ 5 ಲಕ್ಷದವರಿಗಿನ ವಾಹನಗಳಿಗೆ ಕನಿಷ್ಠ ದರ ₹75 ಆಗಿದ್ದರೆ, ಮುಂದಿನ ಹೆಚ್ಚುವರಿ ಪ್ರತಿ ಕಿಲೋಮೀಟರಿಗೆ  ಕನಿಷ್ಠ₹ 18, ಗರಿಷ್ಠ ₹ 36 ದರ ನಿಗದಿ ಮಾಡಿ ಆದೇಶ ಹೊರಡಿಸಲಾಗಿದೆ.

NEW TAXI FARE

ಪರಿಷ್ಕೃತ ಟ್ಯಾಕ್ಸಿ ದರ

ಜಿಎಸ್​ಟಿ ಹಾಗೂ ಟೋಲ್ ಶುಲ್ಕ ಪ್ರಯಾಣಿಕನಿಂದ ಸಮಯದ ಆಧಾರದಲ್ಲಿ ದರ ವಸೂಲಿಗೆ ತಡೆ ನೀಡಲಾಗಿದೆ. ಕಿಲೋಮೀಟರ್ ಆಧಾರದಲ್ಲಿ ಅಧಿಸೂಚನೆಯ ದರ ಮಾತ್ರ ಪ್ರಯಾಣಿಕರಿಂದ ಪಡೆಯಬಹುದು ಎಂದು ಪರಿಷ್ಕರಿಸಿ ಆದೇಶ ನೀಡಲಾಗಿದೆ.  ಪರಿಷ್ಕರಿತ ದರದ ಪ್ರಕಾರ  20 ನಿಮಿಷಗಳವರೆಗೆ ಕಾಯುವಿಕೆ ದರಗಳನ್ನು ಟ್ಯಾಕ್ಸಿ ಚಾಲಕರು ಪಡೆಯುವಂತಿಲ್ಲ. ನಂತರದ ಪ್ರತಿ 15 ನಿಮಿಷಗಳಿಗೆ ₹ 10 ನಿಗದಿ ಮಾಡಲಾಗಿದೆ.

ಟ್ಯಾಕ್ಸಿ ದರ ಹೆಚ್ಚಳಕ್ಕೆ ಕಾರಣವಾಯಿತೇ ಚಾಲಕ ಪ್ರತಾಪ್ ಆತ್ಮಹತ್ಯೆ?

ದೇವನಹಳ್ಳಿ ಬಳಿಯ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಆಗಮನದ ದ್ವಾರದ ಮುಂಭಾಗ ಮಾರ್ಚ್ 30ರಂದು ರಾಮನಗರ ಮೂಲದ ಪ್ರತಾಪ್ ಏರ್​ಪೋರ್ಟ್ ಟರ್ಮಿನಲ್‌ನಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದರು. ಕ್ಯಾಬ್‌ನಲ್ಲಿಯೇ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿಕೊಂಡಿದ್ದರು. ಆಗ ಭದ್ರತಾಪಡೆಯ ಸಿಬ್ಬಂದಿಗಳು ಕ್ಯಾಬ್ ಗಾಜು ಒಡೆದು ಗಂಭೀರ ಗಾಯಗೊಂಡಿದ್ದ ಚಾಲಕ ಪ್ರತಾಪ್ ಅವರನ್ನು ರಕ್ಷಿಸಿ ಆಸ್ಪತ್ರೆಗೆ ಸೇರಿಸಿದ್ದರು. ಆದರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಚಾಲಕ ಪ್ರತಾಪ್ ಮೃತಪಟ್ಟಿದ್ದರು.

ಕೊರೊನಾ ನಂತರ ಬಾಡಿಗೆ ಕಡಿಮೆಯಾಗಿದ್ದ ಕಾರಣ ಪ್ರತಾಪ್ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದ ಎನ್ನಲಾಗಿತ್ತು. ಸಂಸಾರ ನಿರ್ವಹಣೆ ಮತ್ತು ವಾಹನದ ಕಂತು ಕಟ್ಟುವ ಹೊರೆಯಿಂದ ಬೇಸರಗೊಂಡಿದ್ದ ಚಾಲಕ ಪ್ರತಾಪ್ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದ ಎಂದು ಕಾರಣ ಕೇಳಿಬಂದಿತ್ತು. ಚಾಲಕ ಪ್ರತಾಪ್ ಮೃತಪಟ್ಟಿರುವ ಹಿನ್ನೆಲೆಯಲ್ಲಿ ಏರ್​ಪೋರ್ಟ್​ ಟ್ಯಾಕ್ಸಿಗಳನ್ನು ನಿಲ್ಲಿಸಿ ಧರಣಿ ನಡೆಸಿದ್ದರು. ಹೀಗಾಗಿ ಏರ್​ಪೋರ್ಟ್ ಪ್ರಯಾಣಿಕರಿಗೆ ಟ್ಯಾಕ್ಸಿ ಬಿಸಿ ತಟ್ಟಿತ್ತು. ಅಲ್ಲದೇ ಮೊನ್ನೆ ಸಂಜೆಯಿಂದಲೇ ಒಲಾ ಉಬರ್ ಮತ್ತು ಏರ್​ಪೋರ್ಟ್ ಟ್ಯಾಕ್ಸಿ ಚಾಲಕರು ಟ್ಯಾಕ್ಸಿ ಸೇವೆ ಸ್ಥಗಿತಗೊಳಿಸಿದ್ದರು.‘

ಇದನ್ನೂ ಓದಿ: ಏರ್​ಪೋರ್ಟ್ ಚಾಲಕ ಆತ್ಮಹತ್ಯೆ; ಪ್ರತಾಪ್ ಕುಟುಂಬಕ್ಕೆ ಧೈರ್ಯ ತುಂಬಿದ ಜೆಡಿಎಸ್ ಯುವನಾಯಕ ನಿಖಿಲ್ ಕುಮಾರಸ್ವಾಮಿ

ಬಜೆಟ್​ ಬೆನ್ನಲ್ಲೇ.. ಟ್ಯಾಕ್ಸಿ ಪ್ರಯಾಣಿಕರಿಗೆ ದರದ ಬರೆ: ರಾಜ್ಯ ಸರ್ಕಾರದಿಂದ ನೂತನ ದರ ಪರಿಷ್ಕರಣೆ

Published On - 6:50 pm, Thu, 1 April 21

ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!