ಗೃಹಲಕ್ಷ್ಮಿಗೆ ಬಿಡದ ಟೆಕ್ನಿಕಲ್ ಸಮಸ್ಯೆ: ಜೂನ್ ತಿಂಗಳಲ್ಲಿ 80 ಸಾವಿರ ಜನರಿಗೆ ಬಂದಿಲ್ಲ ಹಣ
ಗೃಹಲಕ್ಷ್ಮಿ ಯೋಜನೆಯಲ್ಲಿ ಮತ್ತೆ ತಾಂತ್ರಿಕ ದೋಷ ಶುರುವಾಗಿದೆ. ಈ ತಾಂತ್ರಿಕ ಸಮಸ್ಯೆಯಿಂದಾಗಿ 80 ಸಾವಿರಕ್ಕೂ ಹೆಚ್ಚು ಮಂದಿಗೆ ಗೃಹಲಕ್ಷ್ಮಿಯರಿಗೆ ಹಣ ತಲುಪಿಲ್ಲ. ಅಂದಹಾಗೇ ಕಳೆದ ಎಲೆಕ್ಷನ್ ಬಳಿಕ ಮೂರು ತಿಂಗಳಿನಿಂದ ಗೃಹಲಕ್ಷ್ಮಿ ಹಣವನ್ನ ಖಾತೆಗೆ ಹಾಕಿರಲಿಲ್ಲ. ಮೂರು ತಿಂಗಳ ಬಳಿಕ ಜೂನ್ ತಿಂಗಳ ಗೃಹಲಕ್ಷ್ಮಿ ಹಣವನ್ನ ಕಳೆದ ತಿಂಗಳಿನಿಂದ ಹಾಕಲಾಗುತ್ತಿದೆ.
ಬೆಂಗಳೂರು, ಆಗಸ್ಟ್ 28: ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆಗೆ (Gruha Lakshmi Scheme) ಅದ್ಯಾಕೋ ಒಂದಿಲ್ಲೊಂದು ಸಮಸ್ಯೆಗಳು ಕಾಣಿಸಿಕೊಳ್ಳುತ್ತಿದೆ. ಸದ್ಯ ಗೃಹಲಕ್ಷ್ಮಿ ಯೋಜನೆಗೆ ತಾಂತ್ರಿಕ ಸಮಸ್ಯೆ ಬೆನ್ನಿಗಂಟಿದ ಬೇತಾಳದಂತಾಗಿದೆ. ಇದರ ಪರಿಣಾಮದಿಮದ ಮೂರು ತಿಂಗಳಿನಿಂದ ಗೃಹಲಕ್ಷ್ಮಿ ಹಣ ಗೃಹಿಣಿಯರ ಖಾತೆ ಸೇರಿಲ್ಲ.
ಗೃಹಲಕ್ಷ್ಮಿ ತಾಂತ್ರಿಕ ದೋಷ
ಹೌದು, ಗೃಹಲಕ್ಷ್ಮಿ ಯೋಜನೆಯಲ್ಲಿ ಮತ್ತೆ ತಾಂತ್ರಿಕ ದೋಷ ಶುರುವಾಗಿದೆ. ಈ ತಾಂತ್ರಿಕ ಸಮಸ್ಯೆಯಿಂದಾಗಿ 80 ಸಾವಿರಕ್ಕೂ ಹೆಚ್ಚು ಮಂದಿಗೆ ಗೃಹಲಕ್ಷ್ಮಿಯರಿಗೆ ಹಣ ತಲುಪಿಲ್ಲ. ಅಂದಹಾಗೇ ಕಳೆದ ಎಲೆಕ್ಷನ್ ಬಳಿಕ ಮೂರು ತಿಂಗಳಿನಿಂದ ಗೃಹಲಕ್ಷ್ಮಿ ಹಣವನ್ನ ಖಾತೆಗೆ ಹಾಕಿರಲಿಲ್ಲ. ಮೂರು ತಿಂಗಳ ಬಳಿಕ ಜೂನ್ ತಿಂಗಳ ಗೃಹಲಕ್ಷ್ಮಿ ಹಣವನ್ನ ಕಳೆದ ತಿಂಗಳಿನಿಂದ ಹಾಕಲಾಗುತ್ತಿದೆ. ಆದರೆ ಹಣ ಹಾಕುವಾಗ ತಾಂತ್ರಿಕ ಸಮಸ್ಯೆಗಳು ಕಂಡುಬರುತ್ತಿದ್ದು, ಒಟ್ಟು 80 ಸಾವಿರ ಮಹಿಳೆಯರಿಗೆ ಇನ್ನು ಗೃಹಲಕ್ಷ್ಮಿಯ ಹಣವೇ ಬಂದಿಲ್ಲ.
ಇದನ್ನೂ ಓದಿ: ಗೃಹಲಕ್ಷ್ಮಿ ಹಣದಿಂದ ಊರಿಗೆ ಊಟ ಹಾಕಿಸಿದ ಅಜ್ಜಿಗೆ ಕರೆ ಮಾಡಿ ಮಾತನಾಡಿದ ಲಕ್ಷ್ಮೀ ಹೆಬ್ಬಾಳ್ಕರ್
ಸದ್ಯ ಗೃಹಲಕ್ಷ್ಮಿಯಲ್ಲಿ 1 ಕೋಟಿ 23 ಲಕ್ಷ ಗೃಹಲಕ್ಷ್ಮಿ ಫಾಲಾನುಭವಿಗಳಿದ್ದು, 90 ಲಕ್ಷ ಜನರ ಖಾತೆಗೆ ಮಾತ್ರ ಹಣ ಜಮಾವಣೆಯಾಗಿದೆ. ಉಳಿದ 80 ಸಾವಿರ ಜನರ ಖಾತೆಯ ತಾಂತ್ರಿಕ ಸಮಸ್ಯೆಗಳನ್ನ ಬಗೆಹರಿಸಿ, ಬಲಿಕ ಹಣ ಹಾಕಲು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ನಿರ್ಧರಿಸಿದೆ.
ಇನ್ನು ಕಳೆದ ತಿಂಗಳು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್, ಖಾತೆಗೆ ಹಣ ಬರುತ್ತೆ ಎಂದು ಹೇಳಿದ ಮೇಲೆ ಸಾಕಷ್ಟು ಮಹಿಳೆಯರು ಬ್ಯಾಂಕ್ಗಳಿಗೆ ಹೋಗಿ ಬರುತ್ತಿದ್ದಾರೆ. ಆದರೆ ಕೆಲವೊಂದಿಷ್ಟು ಜನರಿಗೆ ಹಣ ಬಂದಿದ್ದರೆ, ಇನ್ನೊಂದಿಷ್ಟು ಮಂದಿಗೆ ಬಂದಿಲ್ಲ. ಹೀಗಾಗಿ ಪ್ರತಿದಿನ ಬ್ಯಾಂಕ್ ಅಲೆದಾಡುತ್ತಿದ್ದು, ಈ ಯೋಜನೆಗಳ ಸಹವಾಸವೇ ಬೇಡ ಅಂತ ಗೃಹಿಣಿಯರು ಆಕ್ರೋಶ ಹೊರಹಾಕಿದ್ದಾರೆ.
ಇದನ್ನೂ ಓದಿ: ಬೆಳಗಾವಿ: ಗೃಹಲಕ್ಷ್ಮಿ ಯೋಜನೆಯಿಂದ ಬಂದ ಹಣದಿಂದ ಇಡೀ ಊರಿಗೆ ಹೋಳಿಗೆ ಊಟ ಹಾಕಿಸಿದ ಅಜ್ಜಿ
ಗೃಹಲಕ್ಷ್ಮಿಯರ ಗೃಹಲಕ್ಷ್ಮಿ ಹಣಕ್ಕೆ ತಾಂತ್ರಿಕ ಸಮಸ್ಯೆ ಎದುರಾಗಿದ್ದು, ಸದ್ಯ ಈ ತಾಂತ್ರಿಕ ಸಮಸ್ಯೆಯನ್ನ ಬಗೆಹರಿಸುವುದಕ್ಕೆ ಇಲಾಖೆ ಮುಂದಾಗುತ್ತಿದ್ದು, ರಾಜ್ಯದ ಎಲ್ಲಾ ಗೃಹಿಣಿಯರ ಖಾತೆಗೆ ಯಾವಾಗ ಹಣ ಬರುತ್ತದೆ ಕಾದು ನೋಡಬೇಕಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.