ಬೆಂಗಳೂರು, ಸೆಪ್ಟೆಂಬರ್ 02: ಸಿಲಿಕಾನ್ ಸಿಟಿಯ ಜನರು ಹೆಚ್ಚಾಗಿ ಮೆಟ್ರೋವನ್ನು (Namma Metro) ಅವಲಂಬಿಸಿದ್ದಾರೆ. ಪಿಕ್ ಅವರ್ನಲ್ಲಿ ಪರ್ಪಲ್ ಮತ್ತು ಗ್ರೀನ್ ಲೈನ್ ಮೆಟ್ರೋ ರೈಲಿನಲ್ಲಿ ಕಿಕ್ಕಿರಿದು ಪ್ರಯಾಣಿಕರು ಪ್ರಯಾಣಿಸುತ್ತಾರೆ. ಹೀಗಾಗಿ ಇಂದು ಬೆಂಗಳೂರು ದಕ್ಷಿಣ ಮತ್ತು ಕೇಂದ್ರ ಸಂಸದರಾದ ತೇಜಸ್ವಿ ಸೂರ್ಯ ಹಾಗೂ ಪಿ.ಸಿ ಮೋಹನ್ ನಮ್ಮ ಮೆಟ್ರೋದಲ್ಲಿ ಇಂದು ಪ್ರಯಾಣ ಮಾಡಿ ಪ್ರಯಾಣಿಕರ ಸಮಸ್ಯೆ ಆಲಿಸಲಿದ್ದಾರೆ. ಪರ್ಪಲ್ ಲೈನ್ನಲ್ಲಿ ಬರುವ ವೈಟ್ ಫೀಲ್ಡ್ ಟು ಚಲ್ಲಘಟ್ಟ ಮಾರ್ಗದಲ್ಲಿ ಸಂಸದರು ಪ್ರಯಾಣಿಸಿದ್ದಾರೆ.
ಪ್ರತಿದಿನ ಏಳರಿಂದ ಏಳುವರೆ ಲಕ್ಷ ಪ್ರಯಾಣಿಕರು ಪ್ರಯಾಣ ಮಾಡುತ್ತಿದ್ದಾರೆ. ಇದರಿಂದ ಪ್ರಯಾಣಿಕರಿಗೆ ತುಂಬಾ ಸಮಸ್ಯೆ ಆಗುತ್ತಿರುವ ಬಗ್ಗೆ ದೂರುಗಳು ಬಂದ ಹಿನ್ನೆಲೆಯಲ್ಲಿ ಬೆಂಗಳೂರಿನ ಇಬ್ಬರೂ ಸಂಸದರು ಇಂದು ಪ್ರಯಾಣಿಕರ ಸಮಸ್ಯೆಗಳು ಆಲಿಸಿದ್ದಾರೆ.
ಇದನ್ನೂ ಓದಿ: ಕರ್ನಾಟಕದಲ್ಲಿ ಕೇವಲ ಮೂರು ತಿಂಗಳಲ್ಲಿ ಟ್ರ್ಯಾಕ್ಗಿಳಿಯಲಿದೆ ಅತ್ಯಾಧುನಿಕ ವಂದೇ ಭಾರತ್ ಸ್ಲೀಪರ್ ಕೋಚ್ ರೈಲು
ಕಾಲಿಡಲು ಜಾಗವಿಲ್ಲದಷ್ಟು ಮೆಟ್ರೋ ರೈಲು ರಷ್ ಆಗುತ್ತದೆ. ಪಿಕ್ ಅವರ್ನಲ್ಲಿ ರೈಲಿನ ಸಂಖ್ಯೆ ಹೆಚ್ಚಳ ಮಾಡಬೇಕು ಎಂದು ಪ್ರಯಾಣಿಕರು ಇಬ್ಬರೂ ಸಂಸದರಿಗೆ ಮನವಿ ಮಾಡಿದ್ದಾರೆ.
ಮೆಟ್ರೋದಲ್ಲಿ ಪ್ರಯಾಣದ ಬಳಿಕ ಮಾತನಾಡಿದ ಸಂಸದ ತೇಜಸ್ವಿ ಸೂರ್ಯ, ಜನರ ಜೊತೆ ಮಾತನಾಡಿ ಅಧಿಕಾರಿಗಳಿಗೆ ಅವುಗಳನ್ನ ತಿಳಿಸಿದ್ದೇವೆ. ಪೀಕ್ ಅವರ್ನಲ್ಲಿ ಜನರಿಗೆ ಸಮಸ್ಯೆಯಾಗುತ್ತಿದೆ. ಪಿಸಿ ಮೋಹನ್ ರವರು ಶಾರ್ಟ್ ಲೂಪ್ ಟ್ರೈನ್ಗಳ ಬಗ್ಗೆ ಹೆಳಿದ್ದಾರೆ. ಪಟ್ಟಂದೂರು ವರೆಗೂ ವಿಸ್ತರಿಸಲು ಸಾಧ್ಯವಿದೆಯಾ ಎಂದು ಮನವಿ ಮಾಡಿದ್ದೇವೆ ಎಂದಿದ್ದಾರೆ.
ನಮ್ಮ ಬಳಿ ಇರುವ ಟ್ರೈನ್ ಸೆಟ್ಗಳಲ್ಲಿ 95 % ರಷ್ಟು ಕಾರ್ಯ ನಿರ್ವಹಿಸುತ್ತಿವೆ. ಜೂನ್ 25ರ ಒಳಗೆ ಸೆಟ್ಸ್ ಕಾರ್ಯರೂಪಕ್ಕೆ ತರಲು ಹೇಳಿದ್ದಾರೆ. ಮುಂದಿನ ವಾರ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲಿದ್ದಾರೆ. ಬಿಎಂಆರ್ಸಿಎಲ್ ಅಧಿಕಾರಿಗಳು ದೆಹಲಿಗೆ ಬರುತ್ತಾರೆ. ಅವರ ಏನೆಲ್ಲಾ ಮನವಿಯನ್ನ ಕಾರ್ಯರೂಪಕ್ಕೆ ತರಬೇಕು ಅದಕ್ಕೆ ನಾವು ಮಾತನಾಡುತೇವೆ. ಮೆಜೆಸ್ಟಿಕ್ನಲ್ಲಿ ಸೈನೇಜ್ ಬೋರ್ಡ್ ಬಗ್ಗೆ ಹೇಳಿದ್ದಾರೆ, ಅಧಿಕಾರಿಗಳಿಗೆ ಹೇಳಿದ್ದೇವೆ. ಸೈನೇಜ್ಗಳನ್ನ ರಿವಿವ್ಯೂ ಮಾಡಲು ಹೇಳಿದ್ದಾರೆ ಎಂದರು.
ಇದನ್ನೂ ಓದಿ: ನಮ್ಮ ಮೆಟ್ರೋ: ಹಸಿರು ಮಾರ್ಗದ ಈ ನಿಲ್ದಾಣಗಳ ನಡುವೆ ರೈಲು ಸಂಚಾರ 2 ದಿನ ಬಂದ್
ಪಿಎಸ್ಡಿ ಡೋರ್ ಅಳವಡಿಕೆ ಮಾಡಲು ಹೊಸ ನಿಲ್ದಾಣಗಳಲ್ಲಿ ಸುಲಭ. ಈ ಹಿನ್ನೆಲೆ ಮೊದಲಿಗೆ ಮೆಜೆಸ್ಟಿಕ್ ಸ್ಟೇಷನ್ನಲ್ಲಿ ಸೇಫ್ಟಿ ಡೋರ್ ಮಾಡುತ್ತೇವೆ. ಬಿಎಂಆರ್ಸಿಎಲ್ನಿಂದಲೇ ಹಣವನ್ನ ಒದಗಿಸುವುದಾಗಿ ಹೇಳಬಹುದು. ಅಡಿಷನ್ ಕಾಸ್ಟ್ ಹಾಕಿಸಲು ಕೇಂದ್ರ ಸರ್ಕಾರದಿಂದ ನಾವು ಸಹಕಾರ ನೀಡುತ್ತೇವೆ. ಸಿಂಗಾಪುರ ಮಾದರಿ ಕುರಿತು ಚರ್ಚೆ ಮಾಡಲಾಗುತ್ತಿದೆ. ಕೇಂದ್ರ ಸರ್ಕಾರದಿಂದ ಹಣ ತೆಗೆದುಕೊಂಡು ಬರಲು ನಮ್ಮ ಪ್ರಯತ್ನ ಇರುತ್ತೆ ಎಂದು ತಿಳಿಸಿದ್ದಾರೆ.
ಸಂಸದ ಪಿಸಿ ಮೋಹನ್ ಮಾತನಾಡಿ, ಇಂದು ನಾನು ಮತ್ತು ತೇಜಸ್ವಿ ಸೂರ್ಯರವರು ಮೆಟ್ರೊದಲ್ಲಿ ಪ್ರಯಾಣ ಮಾಡಿದ್ದೇವೆ. ಕೆಆರ್ಪುರಂನಿಂದ ಬರುವಾಗ ಜನರ ಸಮಸ್ಯೆ ಆಲಿಸಿದ್ದೇವೆ. ಪೀಕ್ ಅವರ್ನಲ್ಲಿ ಟ್ರೈನ್ ಫ್ರೀಕೆನ್ಸಿ ಹೆಚ್ಚಾಗಬೇಕು ಅಂತ ಹೇಳಿದ್ದಾರೆ. ಗರುಡಾಚಾರ್ ಪಾಳ್ಯದಲ್ಲಿ ನಿಲ್ಲುತ್ತಿದ್ದ ರೈಲು ಪಟ್ಟಂದೂರಿಗೂ ಬೇಕು ಅಂತ ಹೇಳಿದ್ದಾರೆ. ಎಂಟುವರೆ ಲಕ್ಷ ಜನ ಮೆಟ್ರೋದಲ್ಲಿ ಪ್ರಯಾಣ ಮಾಡುತ್ತಿದ್ದಾರೆ. ಪೀಕ್ ಅವರ್ಸ್ಗೆ 21 ಸೆಟ್ ಟ್ರೈನ್ ಆರ್ಡರ್ ಮಾಡಿದ್ದಾರೆ. ಕೆಲ ಕಾರಣಗಳಿಂದ ತಡವಾಗಿದೆ. ಬೇರೆ ಬೇರೆ ವಿಚಾರಗಳಿಗೂ ಕೂಡಾ ಒತ್ತು ಕೊಟ್ಟಿದ್ದೇವೆ ಎಂದಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.