AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರಿನಲ್ಲಿ ಧಾರಾಕಾರ ಮಳೆ: ಮೆಟ್ರೋ ಹಳಿ ಮೇಲೆ ವಾಲಿದ ಮರ, ಸಂಚಾರ ವ್ಯತ್ಯಯ

ಇಂದು ಸುರಿದ ಮಳೆಯಿಂದಾಗಿ‌ ಟ್ರಾಫಿಕ್ ಸಮಸ್ಯೆ ಒಂದಡೆಯಾದರೆ ಮತ್ತೊಂದೆಡೆಗೆ ಬೃಹತ್ ಗಾತ್ರದ ಮರ ಉರುಳಿ ಕಾರು ಡ್ಯಾಮೇಜ್ ಆಗಿದೆ. ಇನ್ನೊಂದೆಡೆ ಧಾರಾಕಾರ ಸುರಿದ ಮಳೆಗೆ ಮೆಟ್ರೋ ಹಳಿ ಮೇಲೆ ಮರ ವಾಲಿತ್ತು. ಹೀಗಾಗಿ ನಮ್ಮ ಮೆಟ್ರೋ ನೇರಳೆ ಮಾರ್ಗದಲ್ಲಿ ಸಂಚಾರ ವ್ಯತ್ಯಯ ಉಂಟಾಗಿತ್ತು. ಇದೀಗ ರೈಲು ಸಂಚಾರ ಪುನಾರಂಭಿಸಲಾಗಿದೆ.

ಬೆಂಗಳೂರಿನಲ್ಲಿ ಧಾರಾಕಾರ ಮಳೆ: ಮೆಟ್ರೋ ಹಳಿ ಮೇಲೆ ವಾಲಿದ ಮರ, ಸಂಚಾರ ವ್ಯತ್ಯಯ
ಬೆಂಗಳೂರಿನಲ್ಲಿ ಧಾರಾಕಾರ ಮಳೆ: ಮೆಟ್ರೋ ಹಳಿ ಮೇಲೆ ವಾಲಿದ ಮರ, ಸಂಚಾರ ವ್ಯತ್ಯಯ
Kiran Surya
| Updated By: ಗಂಗಾಧರ​ ಬ. ಸಾಬೋಜಿ|

Updated on:Aug 29, 2024 | 7:47 PM

Share

ಬೆಂಗಳೂರು, ಆಗಸ್ಟ್​ 29: ಸಿಲಿಕಾನ್​ ಸಿಟಿಯಲ್ಲಿ ಇಂದು ಮಳೆರಾಯ (rain) ಆರ್ಭಟಿಸಿದ್ದಾನೆ. ಮಧ್ಯಾಹ್ನ ಸುರಿದ ಮಳೆಗೆ ರಸ್ತೆಗಳು ಕೆರೆಯಾದಂತಾಗಿದ್ದು, ವಾಹನ ಸವಾರರು ಪರದಾಡಿದ್ದಾರೆ. ಈ ಮದ್ಯ ಮಳೆಯಿಂದ ಮೆಟ್ರೋ ಹಳಿ ಮೇಲೆ ಮರ ವಾಲಿದೆ. ಹೀಗಾಗಿ ನಮ್ಮ ಮೆಟ್ರೋ (metro) ನೇರಳೆ ಮಾರ್ಗದಲ್ಲಿ ಸಂಜೆ 4.53ರಿಂದ 5.05ರವರೆಗೆ ಅಂದರೆ 12 ನಿಮಿಷ ಸಂಚಾರ ಸ್ಥಗಿತವಾಗಿತ್ತು.

ಮೆಟ್ರೋ ರೈಲು ಸಂಚಾರ ಪುನಾರಂಭ

ಮರ ತೆರವುಗೊಳಿಸಿದ ನಂತರ ಮೆಟ್ರೋ ರೈಲು ಸಂಚಾರ ಪುನಾರಂಭಿಸಲಾಗಿದೆ ಎಂದು ಬೆಂಗಳೂರು ಮೆಟ್ರೋ ರೈಲು ನಿಗಮದ ಅಧಿಕಾರಿಗಳಿಂದ ಮಾಹಿತಿ ನೀಡಲಾಗಿದೆ. ಈಗಾಗಲೇ ನಗರದಲ್ಲಿರುವ ಒಣಗಿದ ಹಾಗೂ ಹಳೆ ಮರಗಳ ಕುರಿತು ಟಿವಿ9 ವರದಿ ಮಾಡಿದರೂ ಪಾಲಿಕೆ ಅಧಿಕಾರಿಗಳು ಎಚ್ಚೆತ್ತುಕೊಂಡಿಲ್ಲ.

ಇದನ್ನೂ ಓದಿ: ಬೆಂಗಳೂರಿನಲ್ಲಿ ವರುಣನ ಅಬ್ಬರ: ದಿಢೀರ್ ಮಳೆಯಿಂದ ವಾಹನ ಸವಾರರು ಪರದಾಟ

ಧಾರಾಕಾರ ಮಳೆಗೆ ನಗರದಲ್ಲಿ ಕೆಲ ಅವಾಂತಗಳು ಸಂಭವಿಸಿದ್ದು, ಕೆಲವೆಡೆ ಮರಗಳು ಧರೆಗುರುಳಿವೆ. ಕೋರಮಂಗಲದ ಬಿಡಿಎ ಕಾಪ್ಲೆಕ್ಸ್ 8ನೇ ಮುಖ್ಯ ರಸ್ತೆ ಪಕ್ಕದಲ್ಲಿ ಪಾರ್ಕ್ ಮಾಡಿದ್ದ ಕಾರ್ ಮೇಲೆ ಮರ ಬಿದ್ದಿದೆ. ಅದೃಷ್ಟವಶಾತ್​ ಕೂದಲೆಳೆ ಅಂತರದಲ್ಲಿ ವಾಹನ ಚಾಲಕ ಪಾರಾಗಿದ್ದಾರೆ. ಹಾಗಾಗಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

ಸದ್ಯ ಬಿದಿದ್ದ ಮರವನ್ನು ಬಿಬಿಎಪಿಂ ಪಾಲಿಕೆ ಸಿಬ್ಬಂದಿಗಳು ತೆರವುಗೊಳಿಸಿದ್ದಾರೆ. ಮಳೆಯಿಂದ ಅವಾಂತರ ಆದರು ಪಾಲಿಕೆ ಸನ್ನದ್ಧವಾಗಿಲ್ಲ. ಮಳೆಗೆ ಸಕಲ ರೀತಿಯ ಸಿದ್ಧತೆ ಎನ್ನುವ ಪಾಲಿಕೆ, ಧರೆಗುರುಳಿದ ಮರ ಎತ್ತಲು ಪಾಲಿಕೆ ಬಳಿ ಕ್ರೇನ್ ವ್ಯವಸ್ಥೆ ಇಲ್ಲ. ಕಾರು ಮಾಲೀಕ ವೇಣು ಕುಮಾರ್ ಕಾರು ಡ್ಯಾಮೇಜ್ ಆದ ನೋವಿನಲ್ಲಿದ್ದಾರೆ. ಆದರೂ ಅನಿವಾರ್ಯ 5 ಸಾವಿರ ರೂ. ಕೊಟ್ಟು ಮರ ತೆರವುಗೊಳಿಸಲೇಬೇಕು ಎಂದು ಕಾರು ಮಾಲೀಕ ಹೇಳಿದ್ದಾರೆ.

ಇದನ್ನೂ ಓದಿ: 4 ಕಿಮೀ ನಡೆದು ಶಾಲೆಗೆ ಹೋಗುವಾಗ ಕೆಟ್ಟ ಜನರ ಕಾಟ: ನಮ್ಮೂರಿಗೆ ಬಸ್​ ಬಿಡಿ ಎಂದ ಶಾಲಾ ಬಾಲಾಕಿ

ಇನ್ನೂ ಬೆಂಗಳೂರಲ್ಲಿ ಭಾಗಶಃ ದೊಡ್ಡ ಮಳೆ ಪ್ರಾರಂಭವಾಗಿಲ್ಲ, ಈಗ ಆಗುತ್ತಿರುವ ಮಳೆಯಿಂದಾಗಿ ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದರೂ ಪಾಲಿಕೆ ಅಧಿಕಾರಿಗಳು ಮಲ್ಕೊಂಡಿದ್ದಾರೆ ಇದರಿಂದ ಜನರಿಗೆ ತೊಂದರೆ ಆಗುತ್ತದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 7:26 pm, Thu, 29 August 24

ಬಿಗ್​​ಬಾಸ್ 12: ರಕ್ಷಿತಾ ಶೆಟ್ಟಿಗೆ ಯೋಗ್ಯತೆ ಇಲ್ಲ, ರಿಯಾಕ್ಷನ್ ಹೇಗಿತ್ತು?
ಬಿಗ್​​ಬಾಸ್ 12: ರಕ್ಷಿತಾ ಶೆಟ್ಟಿಗೆ ಯೋಗ್ಯತೆ ಇಲ್ಲ, ರಿಯಾಕ್ಷನ್ ಹೇಗಿತ್ತು?
ದೈತ್ಯ ಹೆಬ್ಬಾವು ರಕ್ಷಣೆ, ನಿಟ್ಟುಸಿರು ಬಿಟ್ಟ ರೈತರು
ದೈತ್ಯ ಹೆಬ್ಬಾವು ರಕ್ಷಣೆ, ನಿಟ್ಟುಸಿರು ಬಿಟ್ಟ ರೈತರು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ