ಬೇಗ ವರದಿ ಸಿಗಬೇಕೆಂದು ಟೆಸ್ಟ್ ಕಡಿಮೆ ಮಾಡಿದ್ದೇವೆ: ಸ್ಪಷ್ಟನೆ ಕೊಟ್ಟ ಡಿಸಿಎಂ ಡಾ. ಅಶ್ವತ್ಥ್ ನಾರಾಯಣ
ಲಸಿಕೆ ಬಗ್ಗೆ ಮಾತನಾಡಿದ ಡಾ. ಅಶ್ವತ್ಥ್ ನಾರಾಯಣ, ರಾಜ್ಯದಲ್ಲಿ ಹಂತಹಂತವಾಗಿ ಕೊವಿಡ್ ಲಸಿಕೆ ಕೊಡುತ್ತೇವೆ. ಎರಡನೇ ಡೋಸ್ ಮತ್ತು ಮೊದಲ ಡೋಸ್ ಸಮಸ್ಯೆ ಆಗ್ತಿದೆ. ರಾಜ್ಯದಲ್ಲಿ ಕೊವಿಡ್ ಲಸಿಕೆಯ ಕೊರತೆ ಇಲ್ಲ. ಮೊದಲು ಬಂದವರಿಗೆ ಮೊದಲ ಆದ್ಯತೆ ಎಂದಿದ್ದಾರೆ.
ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಟೆಸ್ಟಿಂಗ್ ಅನ್ನು ದಿಢೀರನೆ ಕಡಿಮೆ ಮಾಡಲಾಗಿದೆ ಎಂಬ ಸುದ್ದಿಯ ಬಗ್ಗೆ ಡಿಸಿಎಂ ಡಾ. ಅಶ್ವತ್ಥ್ ನಾರಾಯಣ ಸ್ಪಷ್ಟನೆ ಕೊಟ್ಟಿದ್ದಾರೆ. ನಮ್ಮ ಸಾಮರ್ಥ್ಯಕ್ಕಿಂತ ಹೆಚ್ಚು ಕೊವಿಡ್ ಟೆಸ್ಟ್ ಮಾಡ್ತಿದ್ದೆವು. ಇದರಿಂದ ಟೆಸ್ಟ್ ರಿಪೋರ್ಟ್ ಬರುವುದು ವಿಳಂಬವಾಗ್ತಿತ್ತು. ರಿಪೋರ್ಟ್ ಬೇಗ ಸಿಗುವಂತೆ ಮಾಡುವ ಉದ್ದೇಶದಿಂದ ರೋಗ ಲಕ್ಷಣ ಇರುವವರಿಗೆ ಮಾತ್ರ ಈಗ ಟೆಸ್ಟ್ ಮಾಡ್ತಿದ್ದೇವೆ. ಪಾಸಿಟಿವಿಟಿ ರೇಟ್ ಕಡಿಮೆ ತೋರಿಸಲು ಎಂಬುದು ಸುಳ್ಳು ಎಂದು ಡಾ. ಅಶ್ವತ್ಥ್ ನಾರಾಯಣ ತಿಳಿಸಿದ್ದಾರೆ.
ಕಡಿಮೆ ಟೆಸ್ಟ್ ಮಾಡಿದಾಗಲೇ ಹೆಚ್ಚು ಪಾಸಿಟಿವಿಟಿ ಇರುತ್ತೆ. ಸರ್ಕಾರ ಯಾವುದನ್ನೂ ಮುಚ್ಚಿಡುವ ಪ್ರಯತ್ನ ಮಾಡ್ತಿಲ್ಲ. ಬೇಗ ವರದಿ ಸಿಗಬೇಕೆಂದು ಟೆಸ್ಟ್ ಸೀಮಿತ ಮಾಡಿದ್ದೇವೆ ಅಷ್ಟೇ ಎಂದು ಡಿಸಿಎಂ ಡಾ.ಅಶ್ವತ್ಥ್ ನಾರಾಯಣ ಹೇಳಿದ್ದಾರೆ. ಇನ್ನು ಲಸಿಕೆ ಬಗ್ಗೆ ಮಾತನಾಡಿದ ಡಾ. ಅಶ್ವತ್ಥ್ ನಾರಾಯಣ, ರಾಜ್ಯದಲ್ಲಿ ಹಂತಹಂತವಾಗಿ ಕೊವಿಡ್ ಲಸಿಕೆ ಕೊಡುತ್ತೇವೆ. ಎರಡನೇ ಡೋಸ್ ಮತ್ತು ಮೊದಲ ಡೋಸ್ ಸಮಸ್ಯೆ ಆಗ್ತಿದೆ. ರಾಜ್ಯದಲ್ಲಿ ಕೊವಿಡ್ ಲಸಿಕೆಯ ಕೊರತೆ ಇಲ್ಲ. ಮೊದಲು ಬಂದವರಿಗೆ ಮೊದಲ ಆದ್ಯತೆ. ಮುಂದಿನ ದಿನಗಳಲ್ಲಿ ಆನ್ ಲೈನ್ ಮೂಲಕ ರಿಜಿಸ್ಟರ್ ಮಾಡಿಕೊಂಡವರಿಗೆ ಅವಕಾಶ ಮಾಡಿ ಕೊಡ್ತೇವೆ ಎಂದು ಡಿಸಿಎಂ ಅಶ್ವತ್ಥ್ ನಾರಾಯಣ ತಿಳಿಸಿದ್ದಾರೆ.
(testing for coronavirus reduced in karnataka dcm dr cn ashwath narayan reply )
ರೂಪಾಂತರಿತ ವೈರಸ್ಗೆ ಹೆಚ್ಚು ಶಕ್ತಿಯಿಲ್ಲ: ಉಪಮುಖ್ಯಮಂತ್ರಿ ಅಶ್ವತ್ಥ್ ನಾರಾಯಣ್
Published On - 12:23 pm, Wed, 12 May 21