ಪ್ರೀತಿಸಿ ಮದುವೆಯಾದವರನ್ನು ಕಾಡುತ್ತಿದೆ ಜಾತಿ ಭೂತ; ಹುಡುಗಿ ಮನೆಯವರ ಕಿರುಕುಳಕ್ಕೆ ದಂಪತಿ ಕಂಗಾಲು

ಪ್ರೀತಿಸಿ ಮದುವೆಯಾಗಿ ಮನೆಯಿಂದ ಓಡಿಬಂದ ಜೋಡಿಗೆ ಇದೀಗ ಜಾತಿಯೇ ಭೂತದಂತೆ ಅಡ್ಡಬರುತ್ತಿದೆ. ಅದರಲ್ಲೂ ಹುಡುಗಿ ಮನೆಯವರೇ ಅಡ್ಡಿಪಡಿಸುತ್ತಿರುವುದು ನುಂಗಲಾರದ ತುತ್ತಾಗಿ ಪರಿಣಮಿಸಿದೆ. ತಮ್ಮನ್ನು ರಕ್ಷಣೆ ಮಾಡುವಂತೆ ಪೊಲೀಸ್​ ಠಾಣೆಯ ಮೆಟ್ಟಿಲು ಏರಿದರೂ ಪ್ರಯೋಜನ ಆಗುತ್ತಿಲ್ಲ.

ಪ್ರೀತಿಸಿ ಮದುವೆಯಾದವರನ್ನು ಕಾಡುತ್ತಿದೆ ಜಾತಿ ಭೂತ; ಹುಡುಗಿ ಮನೆಯವರ ಕಿರುಕುಳಕ್ಕೆ ದಂಪತಿ ಕಂಗಾಲು
Follow us
Lakshmi Hegde
| Updated By: ಪೃಥ್ವಿಶಂಕರ

Updated on:Jan 02, 2021 | 11:36 AM

ಬೀದರ್​: ಪ್ರೀತಿಸಿ ಮದುವೆಯಾಗಿ ಮನೆಯಿಂದ ಓಡಿಬಂದ ಜೋಡಿಗೆ ಇದೀಗ ಜಾತಿಯೇ ಭೂತದಂತೆ ಅಡ್ಡಬರುತ್ತಿದೆ. ಅದರಲ್ಲೂ ಹುಡುಗಿ ಮನೆಯವರೇ ಅಡ್ಡಿಪಡಿಸುತ್ತಿರುವುದು ನುಂಗಲಾರದ ತುತ್ತಾಗಿ ಪರಿಣಮಿಸಿದೆ. ತಮ್ಮನ್ನು ರಕ್ಷಣೆ ಮಾಡುವಂತೆ ಪೊಲೀಸ್​ ಠಾಣೆಯ ಮೆಟ್ಟಿಲು ಏರಿದರೂ ಪ್ರಯೋಜನ ಆಗುತ್ತಿಲ್ಲ.

ಏಳು ವರ್ಷಗಳಿಂದ ಪ್ರೀತಿಸುತ್ತಿದ್ದ ಹುಮನಾಬಾದ್ ಪಟ್ಟಣದ ಮರಾಠಾ ಗಲ್ಲಿಯ ನಿವಾಸಿಗಳಾದ ಸುಧಾರಾಣಿ ಮತ್ತು ಸೂರ್ಯಕಾಂತ್​ 2019ರ ನವೆಂಬರ್​ 13ರಂದು ರಿಜಿಸ್ಟರ್ ಮದುವೆಯಾಗಿದ್ದಾರೆ. ಆದರೆ ಜಾತಿ ಬೇರೆ ಎನ್ನುವ ಕಾರಣಕ್ಕೆ ಹುಡುಗಿಯ ಮನೆಯವರು ಮದುವೆಯನ್ನು ಒಪ್ಪುತ್ತಿಲ್ಲ. ಈ ಮಧ್ಯೆ ಹುಡುಗನಿಗೆ ನಿರಂತರವಾಗಿ ಬೆದರಿಕೆ ಕರೆಗಳನ್ನು ಮಾಡಲಾಗುತ್ತಿದ್ದು, ಆತನ ಕುಟುಂಬದವರಿಗೂ ಹುಡುಗಿ ಕಡೆಯವರು ಮಾನಸಿಕ ಕಿರುಕುಳ ನೀಡುತ್ತಿದ್ದಾರೆ ಎನ್ನಲಾಗಿದೆ. ನಮಗೆ ರಕ್ಷಣೆ ಕೊಡಿ ಎಂದು ಜೋಡಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಆದರೆ ಪೊಲೀಸರೂ ಇವರ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ ಎಂದು ಅಲವತ್ತುಕೊಳ್ಳುತ್ತಿದ್ದಾರೆ.

ಒಂದೇ ಬಡಾವಣೆ ನಿವಾಸಿಗಳು ಒಂದೇ ಬಡಾವಣೆಯಲ್ಲಿ ವಾಸವಾಗಿದ್ದ ಸುಧಾರಾಣಿ ಮತ್ತು ಸೂರ್ಯಕಾಂತ್ ನಡುವಿನ ಪರಿಚಯ ಪ್ರೀತಿಗೆ ತಿರುಗಿತ್ತು. ತಮ್ಮ ಪ್ರೇಮವನ್ನು ಬಿಟ್ಟುಕೊಡಲು ತಯಾರಿಲ್ಲದ ಇವರು, ವರ್ಷದ ಹಿಂದೆ ಮನೆಯವರ ವಿರೋಧದ ನಡುವೆಯೂ ಮದುವೆಯಾಗಿದ್ದಾರೆ. ಆದರೆ ಹುಡುಗಿಯ ಮನೆಯಲ್ಲಿ ಈ ವಿವಾಹವನ್ನು ಒಪ್ಪುತ್ತಿಲ್ಲ. ಆತನನ್ನು ಬಿಟ್ಟು ಬಾ ಎಂದು ಕಿರುಕುಳ ನೀಡುತ್ತಿದ್ದಾರೆ. ಇನ್ನು ಹುಡುಗನ ಕುಟುಂಬದವರು ಹುಡುಗಿಯ ಮನೆಯವರ ಕಿರುಕುಳಕ್ಕೆ ಹೆದರಿ ಮರಾಠಾ ಕಾಲನಿ ಬಿಟ್ಟು ವಿದ್ಯಾನಗರ ಕಾಲನಿಗೆ ಹೋಗಿ ವಾಸವಾಗಿದ್ದಾರೆ. ಆದರೂ ದಂಪತಿಗಾಗಲಿ, ಹುಡುಗನ ಮನೆಯವರಿಗಾಗಲಿ ಕಿರುಕುಳ ತಪ್ಪುತ್ತಿಲ್ಲ.

ಪ್ರೀತಿಸಿ ಮದುವೆಯಾಗಿದ್ದ ಜೋಡಿ ಹೈದರಾಬಾದ್​ಗೆ ತೆರಳಿದ್ದರು. ಈಗ ಒಂದು ತಿಂಗಳ ಹಿಂದಷ್ಟೇ ಅಲ್ಲಿಂದ ವಾಪಸ್​ ಬಂದಿದ್ದಾರೆ. ಆದರೆ ಹುಡುಗಿಯ ಅಣ್ಣ, ಚಿಕ್ಕಪ್ಪ ನಿರಂತರವಾಗಿ ಧಮಕಿ ಹಾಕುತ್ತಿದ್ದಾರೆ. ಪ್ರೇಮಿಗಳು ಪೊಲೀಸರ ಸಹಾಯಕ್ಕಾಗಿ ಕಾಯುತ್ತಿದ್ದಾರೆ.

ಕೊಟಗ್ಯಾಳ ಗ್ರಾಮದಲ್ಲಿ ಚಾಕುವಿನಿಂದ ಇರಿದು, ಬೆಂಕಿ ಹಚ್ಚಿ ಬಾಲಕನ ಬರ್ಬರ ಹತ್ಯೆ

Published On - 9:56 am, Sat, 2 January 21

ಸುಖಾಸುಮ್ಮನೆ ವಿರಾಟ್ ಕೊಹ್ಲಿ ಕಿರಿಕ್: ತಿರುಗಿ ನಿಂತ ಸ್ಯಾಮ್ ಕೊನ್​ಸ್ಟಾಸ್
ಸುಖಾಸುಮ್ಮನೆ ವಿರಾಟ್ ಕೊಹ್ಲಿ ಕಿರಿಕ್: ತಿರುಗಿ ನಿಂತ ಸ್ಯಾಮ್ ಕೊನ್​ಸ್ಟಾಸ್
ಬಡತನದಿಂದ ಮುಕ್ತಿ ಹೊಂದಲು, ಮನೆಯಲ್ಲಿ ನೆಮ್ಮದಿಗೆ ಇಲ್ಲಿದೆ ಸುಲಭ ಉಪಾಯ
ಬಡತನದಿಂದ ಮುಕ್ತಿ ಹೊಂದಲು, ಮನೆಯಲ್ಲಿ ನೆಮ್ಮದಿಗೆ ಇಲ್ಲಿದೆ ಸುಲಭ ಉಪಾಯ
ಸಫಲ ಏಕಾದಶಿಯ ಈ ದಿನ ನಿಮ್ಮ ರಾಶಿ ಭವಿಷ್ಯ ಹೇಗಿರಲಿದೆ ನೋಡಿ
ಸಫಲ ಏಕಾದಶಿಯ ಈ ದಿನ ನಿಮ್ಮ ರಾಶಿ ಭವಿಷ್ಯ ಹೇಗಿರಲಿದೆ ನೋಡಿ
ಜೊಮ್ಯಾಟೊ ಡೆಲಿವರಿ ಬಾಯ್​ ಧರಿಸಿದ್ದ ಸಾಂತಾಕ್ಲಾಸ್​ ಡ್ರೆಸ್ ಬಿಚ್ಚಿಸಿದ ಹಿಂ
ಜೊಮ್ಯಾಟೊ ಡೆಲಿವರಿ ಬಾಯ್​ ಧರಿಸಿದ್ದ ಸಾಂತಾಕ್ಲಾಸ್​ ಡ್ರೆಸ್ ಬಿಚ್ಚಿಸಿದ ಹಿಂ
ಬಿಪಿಎಸ್‌ಸಿ ಪರೀಕ್ಷೆ ರದ್ದುಗೊಳಿಸಲು ಪ್ರತಿಭಟನೆ; ಪೊಲೀಸರ ಲಾಠಿ ಚಾರ್ಜ್
ಬಿಪಿಎಸ್‌ಸಿ ಪರೀಕ್ಷೆ ರದ್ದುಗೊಳಿಸಲು ಪ್ರತಿಭಟನೆ; ಪೊಲೀಸರ ಲಾಠಿ ಚಾರ್ಜ್
ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಮುನಿರತ್ನ ಮೇಲೆ ಒತ್ತಡ: ವಿಜಯೇಂದ್ರ
ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಮುನಿರತ್ನ ಮೇಲೆ ಒತ್ತಡ: ವಿಜಯೇಂದ್ರ
ಸಿಟಿ ರವಿ ಬಂಧನ ಕೇಸ್: ಸಿಪಿಐನ ಅಮಾನತು ಮಾಡಿದ್ಯಾಕೆ? ಕಾರಣ ಕೊಟ್ಟ ಸಿಎಂ
ಸಿಟಿ ರವಿ ಬಂಧನ ಕೇಸ್: ಸಿಪಿಐನ ಅಮಾನತು ಮಾಡಿದ್ಯಾಕೆ? ಕಾರಣ ಕೊಟ್ಟ ಸಿಎಂ
ಡಿ 31ರಿಂದ ಬಸ್​ಗಳು ಸಂಚರಿಸುವುದಿಲ್ಲ: ಪ್ರಯಾಣಿಕರಿಗೆ ಕರಪತ್ರ ಹಂಚಿಕೆ
ಡಿ 31ರಿಂದ ಬಸ್​ಗಳು ಸಂಚರಿಸುವುದಿಲ್ಲ: ಪ್ರಯಾಣಿಕರಿಗೆ ಕರಪತ್ರ ಹಂಚಿಕೆ
‘ಮ್ಯಾಕ್ಸ್’ ಸಿನಿಮಾ ನೋಡಿದ್ರೆ ನಾಲ್ಕು ಕ್ವಾಟ್ರು ಹೊಡೆದ ಕಿಕ್ಕು’
‘ಮ್ಯಾಕ್ಸ್’ ಸಿನಿಮಾ ನೋಡಿದ್ರೆ ನಾಲ್ಕು ಕ್ವಾಟ್ರು ಹೊಡೆದ ಕಿಕ್ಕು’
ಮುನಿರತ್ನ ಘಟನೆ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಡಾ ಮಂಜುನಾಥ್
ಮುನಿರತ್ನ ಘಟನೆ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಡಾ ಮಂಜುನಾಥ್