ಈ ಬಾರಿ ಸಾಮಾನ್ಯವಾಗಿರಲಿದೆ ನೈಋತ್ಯ ಮಾನ್ಸೂನ್; ಹವಾಮಾನ ಇಲಾಖೆ ವರದಿಯಿಂದ ಆರ್ಥಿಕ ತಜ್ಞರು ಫುಲ್ ಖುಷ್
ದೀರ್ಘಾವಧಿ ಸರಾಸರಿ ಶೇ.96 ರಿಂದ ಶೇ.104ರವರೆಗೆ ಮಳೆಯಾದರೆ ಅದನ್ನು ಸಾಮಾನ್ಯ ಮಾನ್ಸೂನ್ ಎಂದೇ ಪರಿಗಣಿಸಲಾಗುತ್ತದೆ. ಜೂನ್ನಿಂದ ಪ್ರಾರಂಭವಾಗುವ ನೈಋತ್ಯ ಮಾನ್ಸೂನ್ ಮುನ್ಸೂಚನಾ ವರದಿಯನ್ನು ಮೇ ತಿಂಗಳ ಕೊನೇ ವಾರದಲ್ಲಿ ಹವಾಮಾನ ಇಲಾಖೆ ನೀಡಲಿದೆ.
ದೆಹಲಿ: ಈ ಬಾರಿ ದೇಶದಲ್ಲಿ ನೈಋತ್ಯ ಮಾನ್ಸೂನ್ ಸಾಮಾನ್ಯವಾಗಿ ಇರಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. ಜೂನ್ನಲ್ಲಿ ಶುರುವಾಗುವ ಈ ನೈಋತ್ಯ ಮಾನ್ಸೂನ್ ಮಳೆ ಸೆಪ್ಟೆಂಬರ್ವರೆಗೆ ಬೀಳಲಿದ್ದು, ಕಳೆದ ಮೂರುವರ್ಷಗಳಿಂದ ನೈಋತ್ಯ ಮಾನ್ಸೂನ್ ಎಫೆಕ್ಟ್ ಸರಾಸರಿಗಿಂತ ಜಾಸ್ತಿಯೇ ಇರುತ್ತಿತ್ತು. ಈ ಬಾರಿ ನಾಲ್ಕು ತಿಂಗಳ ದೀರ್ಘಾವಧಿ ಸರಾಸರಿ (ಎಲ್ಪಿಎ) ಶೇ.98ರಷ್ಟು ಮಳೆಯಾಗುವ ಸಾಧ್ಯತೆಯಿದ್ದು, ಇದು ಸಾಮಾನ್ಯ ಮಾನ್ಸೂನ್ ಎನ್ನಿಸಿಕೊಳ್ಳಲಿದೆ ಎಂದು ಐಎಂಡಿ ಹೇಳಿದೆ.
ದೀರ್ಘಾವಧಿ ಸರಾಸರಿ ಶೇ.96 ರಿಂದ ಶೇ.104ರವರೆಗೆ ಮಳೆಯಾದರೆ ಅದನ್ನು ಸಾಮಾನ್ಯ ಮಾನ್ಸೂನ್ ಎಂದೇ ಪರಿಗಣಿಸಲಾಗುತ್ತದೆ. ಜೂನ್ನಿಂದ ಪ್ರಾರಂಭವಾಗುವ ನೈಋತ್ಯ ಮಾನ್ಸೂನ್ ಮುನ್ಸೂಚನಾ ವರದಿಯನ್ನು ಮೇ ತಿಂಗಳ ಕೊನೇ ವಾರದಲ್ಲಿ ಹವಾಮಾನ ಇಲಾಖೆ ನೀಡಲಿದೆ. ಹಾಗೇ, ಜೂನ್ನಿಂದ ಸೆಪ್ಟೆಂಬರ್ವರೆಗೆ ಪ್ರತಿತಿಂಗಳ ಮುನ್ಸೂಚನೆಯನ್ನೂ ಅಪ್ಡೇಟ್ ಮಾಡಲಾಗುವುದು ಎಂದು ಭೂ ವಿಜ್ಞಾನ ಸಚಿವಾಲಯದ ಕಾರ್ಯದರ್ಶಿ ಮಾಧವನ್ ರಾಜೀವನ್ ತಿಳಿಸಿದ್ದಾರೆ.
ಕೃಷಿಗೆ ತೊಡಕಿಲ್ಲ ಇನ್ನು ಈ ಬಾರಿ ನೈಋತ್ಯ ಮಾನ್ಸೂನ್ ಸಾಮಾನ್ಯವಾಗಿರಲಿದೆ ಎಂಬ ಹವಾಮಾನ ಇಲಾಖೆ ವರದಿಯ ಬಗ್ಗೆ ಆರ್ಥಿಕ ತಜ್ಞರು ಖುಷಿ ವ್ಯಕ್ತಪಡಿಸಿದ್ದಾರೆ. ಕೃಷಿವಲಯಕ್ಕೆ ನಿಜಕ್ಕೂ ಇದು ಗುಡ್ನ್ಯೂಸ್ ಎಂದು ಹೇಳಿದ್ದಾರೆ. ಮಾನ್ಸೂನ್ ಸಾಮಾನ್ಯವಾಗಿರಲಿದೆ ಎಂಬ ಹವಾಮಾನ ಇಲಾಖೆಯ ವರದಿ ನಿಜಕ್ಕೂ ಸಮಾಧಾನ ತಂದಿದೆ ಎಂದು ಐಸಿಆರ್ಎ ಮುಖ್ಯ ಆರ್ಥಿಕ ತಜ್ಞರಾದ ಅದಿತಿ ನಾಯರ್ ತಿಳಿಸಿದ್ದಾರೆ.
ಇದನ್ನೂ ಓದಿ: ನನ್ನ ಸಂಪರ್ಕದಲ್ಲಿದ್ದವರೆಲ್ಲಾ ಕ್ವಾರಂಟೈನ್ ಆಗಿ, ಕೊವಿಡ್ ಟೆಸ್ಟ್ ಮಾಡಿಸಿಕೊಳ್ಳಿ: ಬಿ.ಎಸ್.ಯಡಿಯೂರಪ್ಪ ಮನವಿ
ರಾತ್ರೋರಾತ್ರಿ ಮುಂಬೈ ಬಿಟ್ಟು ಬೆಂಗಳೂರಿಗೆ ಬಂದ ದೀಪಿಕಾ-ರಣವೀರ್ ಸಿಂಗ್! ಕೊರೊನಾ ಕಾರಣ
Published On - 5:45 pm, Fri, 16 April 21