ಯಂತ್ರಾಂಗಕ್ಕೆ ಚುರುಕು ಮುಟ್ಟಿಸಿದ ಜಿಲ್ಲಾಡಳಿತ: ಆನ್​ಲೈನ್​ ಸೇವೆಯಲ್ಲಿ ಕೋಲಾರ ಜಿಲ್ಲೆ ರಾಜ್ಯಕ್ಕೆ ಪ್ರಥಮ

| Updated By: ಗಂಗಾಧರ​ ಬ. ಸಾಬೋಜಿ

Updated on: Jul 03, 2024 | 9:56 PM

ಜಿಲ್ಲಾಡಳಿತದ‌ ಹಲವು ಕಟ್ಟುನಿಟ್ಟಿನ ಕ್ರಮಗಳಿಂದ ಆನ್​ಲೈನ್ ಸೇವೆಯಲ್ಲಿ ಕೊನೆಯ ಸ್ಥಾನದಲ್ಲಿದ್ದ ಕೋಲಾರ‌ ಜಿಲ್ಲೆ ಇಂದು‌ ಮೊದಲ ಸ್ಥಾನ ಪಡೆದಿದೆ. ಕಳೆದ ಆರು ತಿಂಗಳ‌ ಹಿಂದೆ ಆನ್ ಲೈನ್ ಸೇವೆಯಲ್ಲಿ 25 ಸ್ಥಾನ ಪಡೆದಿದೆ ಕೋಲಾರ ಜಿಲ್ಲೆ ಈಗ ಜಿಲ್ಲಾಡಳಿತದ‌ ಮಹತ್ವ ನಿರ್ಧಾರಗಳಿಂದ ಮೊದಲ ಸ್ಥಾನದಲ್ಲಿ‌‌ ನಿಂತಿದೆ.

ಯಂತ್ರಾಂಗಕ್ಕೆ ಚುರುಕು ಮುಟ್ಟಿಸಿದ ಜಿಲ್ಲಾಡಳಿತ: ಆನ್​ಲೈನ್​ ಸೇವೆಯಲ್ಲಿ ಕೋಲಾರ ಜಿಲ್ಲೆ ರಾಜ್ಯಕ್ಕೆ ಪ್ರಥಮ
ಯಂತ್ರಾಂಗಕ್ಕೆ ಚುರುಕು ಮುಟ್ಟಿಸಿದ ಜಿಲ್ಲಾಡಳಿತ: ಆನ್​ಲೈನ್​ ಸೇವೆಯಲ್ಲಿ ಕೋಲಾರ ಜಿಲ್ಲೆ ರಾಜ್ಯಕ್ಕೆ ಪ್ರಥಮ
Follow us on

ಕೋಲಾರ, ಜುಲೈ 03: ಆ ಜಿಲ್ಲೆ‌ಯಲ್ಲಿ ಆಡಳಿತ ಯಂತ್ರಾಂಗ ಕುಸಿದು ಆನ್‌ಲೈನ್ ಸೇವೆಯಲ್ಲಿ (online service) ಕೊನೆಯ ಸ್ಥಾನದಲ್ಲಿತ್ತು. ದಲ್ಲಾಳಿಗಳ‌ ಕೈಗೆ ಸಿಲುಕಿ ಜಿಲ್ಲೆಯ ಜನರು ಸರ್ಕಾರಿ ಕಚೇರಿ ಸುತ್ತ ಅಲೆದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಹಳಿ ತಪ್ಪಿದ ಯಂತ್ರಾಂಗಕ್ಕೆ ಚುರುಕು ಮುಟ್ಟಿಸಲು ಜಿಲ್ಲಾಡಳಿತ ತೆಗೆದುಕೊಂಡ‌ ನಿಲುವಿನಿಂದ ಇಂದು ಆ ಜಿಲ್ಲೆ ರಾಜ್ಯದಲ್ಲಿಯೇ ಮೊದಲ ಸ್ಥಾನದಲ್ಲಿ ನಿಂತಿದೆ. ಕೋಲಾರ (Kolar) ಜಿಲ್ಲೆ ಆಲ್ ಲೈನ್ ಸೇವೆಗಳಲ್ಲಿ ರಾಜ್ಯದಲ್ಲಿಯೇ ಪ್ರಥಮ ಸ್ಥಾನ ಪಡೆದಿದೆ. ಸರ್ಕಾರಿ ಕಚೇರಿಗಳ ಸುತ್ತ ಸಾರ್ವಜನಿಕರು ಕೆಲಸ ಕಾರ್ಯಗಳನ್ನು ಬಿಟ್ಟು ಸುತ್ತಾಡುವುದನ್ನು ತಪ್ಪಿಸುವ ನಿಟ್ಟಿನಲ್ಲಿ ಕೋಲಾರ ಜಿಲ್ಲಾಡಳಿತ ಹತ್ತು ಹಲವು ಕಾರ್ಯಗಳನ್ನು ಹಮ್ಮಿಕೊಂಡ ಪರಿಣಾಮ ಇಂದು ಕೋಲಾರ ರಾಜ್ಯದಲ್ಲಿ ಆಗ್ರಸ್ಥಾನವನ್ನು ಪಡೆದಿದೆ.

ಜಿಲ್ಲಾಡಳಿತದ‌ ಮಹತ್ವ ನಿರ್ಧಾರದಿಂದ ಕೋಲಾರ ಜಿಲ್ಲೆಗೆ ಮೊದಲ ಸ್ಥಾನ

ಕಳೆದ ಆರು ತಿಂಗಳ‌ ಹಿಂದೆ ಆನ್ ಲೈನ್ ಸೇವೆಯಲ್ಲಿ 25 ಸ್ಥಾನ ಪಡೆದಿದೆ ಕೋಲಾರ ಜಿಲ್ಲೆ ಈಗ ಜಿಲ್ಲಾಡಳಿತದ‌ ಮಹತ್ವ ನಿರ್ಧಾರಗಳಿಂದ ಮೊದಲ ಸ್ಥಾನದಲ್ಲಿ‌‌ ನಿಂತಿದೆ. ರಾಜ್ಯದಲ್ಲಿ ಪಹಣಿಗಳೊಂದಿಗೆ ಆಧಾರ್‌ ಜೋಡಣೆ ಕಾರ್ಯ ಭರದಿಂದ ನಡೆಯುತ್ತಿದ್ದು, ಕೋಲಾರ ಜಿಲ್ಲೆಯು ಅಗ್ರಸ್ಥಾನ ಪಡೆದಿದೆ. ಎಜೆಎಸ್‌ಕೆ, ಆಧಾರ ಲಿಂಕ್, ಸರ್ಕಾರಿ ಆಸ್ತಿ ಜಿಯೋ ಟ್ಯಾಗ್ ಮಾಡುವುದರಲ್ಲಿ ಮತ್ತು ಸಕಾಲದಲ್ಲೂ ರಾಜ್ಯದಲ್ಲಿ ಕೋಲಾರ ಜಿಲ್ಲೆ ರಾರಾಜಿಸುತ್ತಿದೆ. ಜಿಲ್ಲೆಯಲ್ಲಿ ಆಧಾರ್‌ ಜೋಡಣೆ ಆಗದ 10,02,265 ಆರ್‌ಟಿಸಿ ವಾರಸುದಾರರಿದ್ದಾರೆ. ಅವರಲ್ಲಿ ಜೂನ್‌ 18ರವರೆಗೆ 4, 23, 478 ಪಹಣಿಗಳನ್ನು ಆಧಾರ್‌ಗೆ ಜೋಡಣೆ ಮಾಡಲಾಗಿದೆ. ಶೇ 68.44ರಷ್ಟು ಗುರಿ ಸಾಧನೆ ಮಾಡಲಾಗಿದೆ.

ಇದನ್ನೂ ಓದಿ: ಮಹಿಳಾ ಪೊಲೀಸ್ ಪೇದೆಗಳಿಗೆ ಠಾಣೆಯಲ್ಲೇ ಸೀಮಂತ; ಬಾಗಿನ ನೀಡಿ ಶುಭ ಹಾರೈಸಿದ ಹಿರಿಯ ಅಧಿಕಾರಿಗಳು

ಇನ್ನು ಕೋಲಾರ ಜಿಲ್ಲೆಯಲ್ಲಿ ಕೆಲವು ಇಲಾಖೆಗಳು‌ ತುಕ್ಕು‌ ಹಿಡಿದಿದ್ದವು. ಈ‌ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿ ಅಕ್ರಂ ಪಾಷಾ ಅವರೇ ಸ್ವತಃ ಫೀಲ್ಡ್ ಗೆ ಇಳಿದು ಕೆಲ ಇಲಾಖೆಗಳಿಗೆ ಬಿಸಿ ಮುಟ್ಟಿಸಿದರು. ಪ್ರತಿದಿನ ಇಲಾಖೆಯಲ್ಲಿ ಎಷ್ಟು ಕಡತಗಳು ವಿಲೇವಾರಿ ಮಾಡಿರುವ ಬಗ್ಗೆ ಮಾಹಿತಿ ಹಂಚಬೇಕು ಹಾಗೂ‌ ಯಾವ ಕಡತ ಎಲ್ಲಿದೆ ಎಂಬುದರ ಬಗ್ಗೆ ಅನ್ ಲೈನ್ ನಲ್ಲಿ ಆಪ್ ಲೋಡ್ ಮಾಡಬೇಕೆಂಬ ಜಿಲ್ಲಾಧಿಕಾರಿಗಳು ನೀಡಿದ ಸೂಚನೆಯಿಂದ ತುಕ್ಕು‌ ಹಿಡಿದಿದ್ದ ಯಂತ್ರಾಂಗ‌ದ ವೇಗ‌ ಹೆಚ್ಚು ಮಾಡಿಕೊಂಡಿತ್ತು.

ಇದನ್ನೂ ಓದಿ: ಕೋಲಾರದಲ್ಲಿ ವಿದೇಶಿ ಮಾವು ಕ್ರಾಂತಿ; ಹೊಸ ತಳಿಗಳ ಸಂಶೋಧನೆ, ಇಲ್ಲಿ ಸಿಗುತ್ತೆ ವಿದೇಶಿ ಮಾವು

ಜೊತೆಗೆ ನೋಂದಣಿ ಸಮಯದಲ್ಲಿನ ಅಕ್ರಮಗಳಿಗೆ ಕಡಿವಾಣ ಹಾಕಲು ಹಾಗೂ ಸರ್ಕಾರದ ಸೌಲಭ್ಯಗಳನ್ನು ರೈತರಿಗೆ ನೇರವಾಗಿ ತಲುಪಿಸಲು ಪಹಣಿಗಳೊಂದಿಗೆ ಆಧಾರ್‌ ಜೋಡಣೆ ಕಾರ್ಯ ಆರಂಭಿಸಲಾಯಿತು. ಗ್ರಾಮ ಲೆಕ್ಕಿಗರು ಮನೆಮನೆಗೆ ತೆರಳಿ ಪಹಣಿ ಮತ್ತು ಆಧಾರ್ ಜೋಡಣೆ ಕಾರ್ಯವನ್ನು ಆರಂಭ ಮಾಡಿದ ಪರಿಣಾಮ ಯಾವುದೇ ದಳ್ಳಾಳಿಗಳಿಲ್ಲದೆ ಜನರ ಕೆಲಸ ಮನೆ ಬಾಗಿಲಲ್ಲೇ ಮಾಡುವಂತಾಗಿತ್ತು, ಸದ್ಯ ಜಿಲ್ಲಾಧಿಕಾರಿಗಳು ಚುರುಕು ಮುಟ್ಟಿಸಿದ ಪರಿಣಾಮ 28ನೇ ಸ್ಥಾನದಲ್ಲಿದ್ದ ಕೋಲಾರ ಕೇವಲ ಆರೇ ತಿಂಗಳಲ್ಲಿ ಇಂದು ಆಲ್​ ಲೈನ್​ ಸೇವೆಗಳನ್ನು ಒದಗಿಸುವಲ್ಲಿ ರಾಜ್ಯದಲ್ಲಿಯೇ ಪ್ರಥಮ‌ ಸ್ಥಾನ‌ ಪಡೆದುಕೊಂಡಿದೆ.

ಜಿಲ್ಲಾಡಳಿತದ‌ ಹಲವು ಕಟ್ಟುನಿಟ್ಟಿನ ಕ್ರಮಗಳಿಂದ ಆನ್ ಲೈನ್ ಸೇವೆಯಲ್ಲಿ ಕೊನೆಯ ಸ್ಥಾನದಲ್ಲಿದ್ದ ಕೋಲಾರ‌ ಜಿಲ್ಲೆ ಇಂದು‌ ಮೊದಲ ಸ್ಥಾನ ಪಡೆದಿದ್ದು, ಮುಂದೆ ಅಭಿವೃದ್ದಿಯಲ್ಲೂ ಮೊದಲ‌ ಸ್ಥಾನ ಪಡೆಯಬೇಕು ಎಂಬುದು ಜಿಲ್ಲೆಯ ಜನರ ಆಶಯವಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.