Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೋಲಾರದಲ್ಲಿ ವಿದೇಶಿ ಮಾವು ಕ್ರಾಂತಿ; ಹೊಸ ತಳಿಗಳ ಸಂಶೋಧನೆ, ಇಲ್ಲಿ ಸಿಗುತ್ತೆ ವಿದೇಶಿ ಮಾವು

ವಿಶ್ವದ ಪ್ರಸಿದ್ದ ಮಾವಿನ ನಗರಿಯಲ್ಲಿ ಮಾವಿನ ಹಣ್ಣಿನ ಸಂಶೋಧನೆ ನಿರಂತರವಾಗಿ ನಡೆಯುತ್ತಲೇ ಇದೆ, ಸದ್ಯ ಮಾವಿನ ನಗರಿಯಲ್ಲಿ ಹೊಸ ಹೊಸ ತಳಿಗಳನ್ನು ಹಾಗೂ ಅಂತರಾಷ್ಟ್ರೀಯ ಮಟ್ಟದ ತಳಿಗಳ ಸಂಶೋಧನೆ ಮಾಡಲು ಇಂಡೋ-ಇಸ್ರೇಲ್​ ಸಹಭಾಗಿತ್ವದಲ್ಲಿ ಹೊಸ ಪ್ರಯೋಗ ನಡೆಯುತ್ತಿದೆ.

ಕೋಲಾರದಲ್ಲಿ ವಿದೇಶಿ ಮಾವು ಕ್ರಾಂತಿ; ಹೊಸ ತಳಿಗಳ ಸಂಶೋಧನೆ, ಇಲ್ಲಿ ಸಿಗುತ್ತೆ ವಿದೇಶಿ ಮಾವು
ಇಂಡೋ ಇಸ್ರೇಲ್​ ಉತ್ಕೃಷ್ಟ ಕೇಂದ್ರ
Follow us
ರಾಜೇಂದ್ರ ಸಿಂಹ ಬಿ.ಎಲ್. ಕೋಲಾರ
| Updated By: ಆಯೇಷಾ ಬಾನು

Updated on: May 31, 2024 | 8:10 AM

ಕೋಲಾರ, ಮೇ.31: ಕೋಲಾರ ಜಿಲ್ಲೆ ಶ್ರೀನಿವಾಸಪುರ ತಾಲ್ಲೂಕು ಹೊಗಳಗೆರೆಯ ತೋಟಗಾರಿಕಾ ಇಲಾಖೆಯ ಮಾವು ಸಂಶೋಧನಾ ಕೇಂದ್ರದ ಮಾವಿನ ತೋಟದಲ್ಲಿ ಕೆಂಪಾದ ರಸಭರಿತವಾದ ಮಾವಿನ ಹಣ್ಣುಗಳು ಬಾಯಲ್ಲಿ ನೀರು ತರಿಸುವಂತಿವೆ. ವಿಶ್ವ ಪ್ರಸಿದ್ದ ಮಾವಿನ ನಗರಿ ಎಂದು ಹೇಳಲಾಗುವ ಶ್ರೀನಿವಾಸಪುರದಲ್ಲಿ (Srinivaspur) ಹಲವು ಬಗೆಯ ಮಾವಿನ ಹಣ್ಣುಗಳನ್ನು ಬೆಳೆಯಲಾಗುತ್ತದೆ. ಅದರ ಜೊತೆಗೆ ಇಲ್ಲಿ ಹೊಸ ಹೊಸ ತಳಿಗಳನ್ನು ಸಂಶೋಧನೆ ಕೂಡಾ ನಡೆಸಲಾಗುತ್ತಿದೆ. ಸದ್ಯ ಶ್ರೀನಿವಾಸಪುರದ ಹೊಗಳಗೆರೆಯಲ್ಲಿ ಇಂಡೋ ಇಸ್ರೇಲ್​ ಉತ್ಕೃಷ್ಟ ಕೇಂದ್ರ ನಿರ್ಮಾಣ ಮಾಡಲಾಗಿದೆ. ಹೊಗಳಗೆರೆ ತೋಟಗಾರಿಕಾ ಸಂಶೋಧನಾ ಕೇಂದ್ರದಲ್ಲಿ ಸುಮಾರು 226 ಎಕರೆ ಪ್ರದೇಶದಲ್ಲಿ ಮಾವು ಸಪೋಟಾ, ಹಲಸು, ನಿಂಬೆ, ಸೇರಿದಂತೆ ತೋಟಗಾರಿಕಾ ಹೊಸ ಹೊಸ ಬೆಳೆಗಳನ್ನು ಬೆಳೆಯಲಾಗುತ್ತಿದೆ.

ಇದೇ ಪ್ರದೇಶದಲ್ಲಿ ಇಂಡೋ ಇಸ್ರೇಲ್​ ಮಾವು ಉತ್ಕೃಷ್ಟ ಕೇಂದ್ರವನ್ನು 40 ಎಕರೆ ಪ್ರದೇಶದಲ್ಲಿ ಇಂಡೋ ಇಸ್ರೇಸ್ ಸಹಭಾಗಿತ್ವದಲ್ಲಿ ನಿರ್ಮಾಣ ಮಾಡಲಾಗಿದೆ. ಸದ್ಯ ಇಲ್ಲಿ ವಿದೇಶಿ ತಳಿಗಳನ್ನು ಪರಿಚಯ ಮಾಡಲಾಗಿದೆ. ಇಲ್ಲಿ ಟಾಮ್ಯಾಟಕಿಸ್​, ಕೆಂಟ್​, ಲಿಲ್ಲಿ, ಮಾಯಾ, ತಳಿಗಳನ್ನು ಹಾಕಲಾಗಿದ್ದು ಪ್ರಯೋಗ ಯಶಸ್ವಿಯಾಗಿದೆ. ಸದ್ಯದಲ್ಲೇ ಇಸ್ರೇಲ್​ ಮತ್ತು ಅಮೇರಿಕಾ ತಳಿಗಳನ್ನು ಇಲ್ಲಿ ಅಭಿವೃದ್ದಿ ಪಡಿಸಲಾಗುತ್ತದೆ ಎಂದು ಮಾವು ಉತ್ಕೃಷ್ಟ ಕೇಂದ್ರದ ಉಪನಿರ್ದೇಶಕಿ ಲಾವಣ್ಯ ಅವರು ತಿಳಿಸಿದ್ದಾರೆ.

ಇನ್ನು ಅಧಿಕ ಮತ್ತು ಅತ್ಯಧಿಕ ಸಾಂದ್ರೆಯ ಬೇಸಾಯದ ಜೊತೆಗೆ ವಯಸ್ಸಾದ ಮಾವಿನ ಮರಗಳಿಗೆ ಮತ್ತೆ ಪುನರುಜ್ಜೀವನ ಕೊಡುವಂತ ಸಂಶೋಧನೆ ಕೂಡಾ ಇಲ್ಲಿ ಮಾಡಲಾಗುತ್ತಿದೆ. ಜೊತೆಗೆ ಸದ್ಯ ಸಂಶೋಧನೆ ಬಹುತೇಕ ಯಶಸ್ವಿಯಾಗಿರುವ ಅಮೇರಿಕಾ ಹಾಗೂ ಇಸ್ರೇಲ್​ ತಳಿಗಳು ನಮ್ಮ ಸ್ಥಳೀಯ ವಾತಾವರಣಕ್ಕೆ ಹೊಂದಿಕೊಂಡಿದೆ. ಇದು ಕೂಡಾ ಮಾರುಕಟ್ಟೆಯಲ್ಲಿ ಅತ್ಯಧಿಕ ಬೇಡಿಕೆಯ ತಳಿಯಾಗುವುದರಲ್ಲಿ ಯಾವುದೇ ಅನುಮಾನವಿಲ್ಲ ಅನ್ನೋದು ತಜ್ಞರ ಅಭಿಪ್ರಾಯ. ವಿದೇಶ ತಳಿಗಳು ಉತ್ತಮ ರುಚಿ, ತೂಕ, ಹಾಗೂ ಹಣ್ಣುಗಳು ಒಳಗೆ ಮತ್ತು ಹೊರಗೆ ಆಕರ್ಷಕ ಬಣ್ಣದ ಹೊಂದಿದೆ. ಇದೆಲ್ಲದಕ್ಕೂ ಮಿಗಿಲಾಗಿ ಕಡಿಮೆ ಸಕ್ಕರೆ ಇರುವ ಮಾವಿನ ಹಣ್ಣುಗಳಾಗಿದ್ದು ಇದು ಎಲ್ಲಾ ವಯೋಮಾನದವರು ಇಷ್ಟ ಪಡುವಂತಹ ಹಣ್ಣುಗಳಾಗಿವೆ. Foreign Mango Revolution in Kolar Research of new varieties of mango in kolar mango center ಇದನ್ನೂ ಓದಿ: Karnataka Rains: ಮುಂದಿನ 48 ಗಂಟೆಗಳಲ್ಲಿ ಕರ್ನಾಟಕಕ್ಕೆ ಮುಂಗಾರು ಪ್ರವೇಶ, ಜೂನ್​ 2ರಿಂದ ಮಳೆ ಜೋರು

ಈ ಹಣ್ಣುಗಳು ಹಣ್ಣಾದ ಮೇಲೆ ಕೆಡದಂತೆ ಸುಮಾರು ಹದಿನೈದು ದಿನಗಳ ಕಾಲ ಸಂರಕ್ಷಿಸಬಹುದಾಗಿದೆ. ಹಾಗಾಗಿ ವಿದೇಶಗಳಿಗೆ ರಪ್ತು ಮಾಡಲು ಕೂಡಾ ಸೂಕ್ತವಾದಂತ ಮಾವಿನ ಹಣ್ಣಿನ ತಳಿಗಳು ಎನ್ನಲಾಗಿದೆ. ಹಾಗಾಗಿ ಬಹುತೇಕ ಯಶಸ್ವಿಯಾಗಿರುವ ಹೊಸ ತಳಿಗಳು ಇನ್ನು ಮುಂದಿನ ದಿನಗಳಲ್ಲಿ ರೈತರ ತೋಟಗಳಲ್ಲೂ ಕೂಡಾ ಕಂಗೊಳಿಸಲಿವೆ. ಈ ಮೂಲಕ ಮಾವಿನ ನಗರಿಯಿಂದ ದೂರದ ದೇಶಗಳಿಗೂ ರಪ್ತು ಮಾಡುವಂತ ಮಾವಿನ ತಳಿಗಳು ಅಭಿವೃದ್ದಿಯಾಗುತ್ತಿರುವುದ ಸಂತೋಷದ ವಿಷಯ ಅನ್ನೋದು ರೈತರು ಹಾಗೂ ತಜ್ಞರ ಮಾತು. Foreign Mango Revolution in Kolar Research of new varieties of mango in kolar mango center

ಒಟ್ಟಾರೆ ನಮ್ಮ ತಾತ ಹಾಕಿದ ಆಲದ ಮರದ ಪಾದವೇಗತಿ ಎಂದು ಸುಮ್ಮನಿರದೆ ಮಾವು ಉತ್ಪಾದನೆಯಲ್ಲೂ ಹೊಸ ಹೊಸ ಪ್ರಯೋಗ ಸಂಶೋಧನೆಗಳು ನಡೆಯುತ್ತಿದ್ದು ಈ ಮೂಲಕ ರೈತರ ಆದಾಯ ಹೆಚ್ಚಿಸುವ ಜೊತೆಗೆ ಹೊಸ ತಳಿಗಳ ಪರಿಚಯಿಸುವ ಕೆಲಸ ಆಗುತ್ತಿದೆ. ಇದು ಮಾವು ಉತ್ಪಾದನೆಯಲ್ಲಿ ಹೊಸ ಕ್ರಾಂತಿ ಮೂಡಿಸುವುದರಲ್ಲಿ ಯಾವುದೇ ಅನುಮಾನವಿಲ್ಲ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ಸುಲಭ ಕ್ಯಾಚ್ ಕೈಚೆಲ್ಲಿದರೂ ಔಟಾದ ಆರ್​ಸಿಬಿ ಬ್ಯಾಟರ್
ಸುಲಭ ಕ್ಯಾಚ್ ಕೈಚೆಲ್ಲಿದರೂ ಔಟಾದ ಆರ್​ಸಿಬಿ ಬ್ಯಾಟರ್
ಬಜೆಟ್‌ನಲ್ಲಿ ಮಾವು, ರೇಷ್ಮೆ ಬೆಳೆಗೆ ಆದ್ಯತೆ ನೀಡಿ; ಸಂಸದ ಮಂಜುನಾಥ್ ಸಲಹೆ
ಬಜೆಟ್‌ನಲ್ಲಿ ಮಾವು, ರೇಷ್ಮೆ ಬೆಳೆಗೆ ಆದ್ಯತೆ ನೀಡಿ; ಸಂಸದ ಮಂಜುನಾಥ್ ಸಲಹೆ
ಡಿಕೆ ಶಿವಕುಮಾರ್​ ಕೂಡ ಏಕನಾಥ ಶಿಂಧೆ ರೀತಿ ಆಗಬಹುದು: ಆರ್​ ಅಶೋಕ್
ಡಿಕೆ ಶಿವಕುಮಾರ್​ ಕೂಡ ಏಕನಾಥ ಶಿಂಧೆ ರೀತಿ ಆಗಬಹುದು: ಆರ್​ ಅಶೋಕ್
ಸದ್ಗುರು ವಾಸುದೇವ್ ಖುದ್ದಾಗಿ ಮನೆಗೆ ಬಂದು ಆಹ್ವಾನಿಸಿದ್ದರು: ಶಿವಕುಮಾರ್
ಸದ್ಗುರು ವಾಸುದೇವ್ ಖುದ್ದಾಗಿ ಮನೆಗೆ ಬಂದು ಆಹ್ವಾನಿಸಿದ್ದರು: ಶಿವಕುಮಾರ್
ಮಹಿಳಾ ಪಿಡಿಒಗೆ ಚಪ್ಪಲಿಯಿಂದ ಹೊಡೆದ ಗ್ರಾಮ ಪಂಚಾಯಿತಿ ಸದಸ್ಯೆ
ಮಹಿಳಾ ಪಿಡಿಒಗೆ ಚಪ್ಪಲಿಯಿಂದ ಹೊಡೆದ ಗ್ರಾಮ ಪಂಚಾಯಿತಿ ಸದಸ್ಯೆ
ಲೇಡಿ ಕಾನ್​ಸ್ಟೇಬಲ್​ರನ್ನು ಸಾರ್ವಜನಿಕವಾಗಿ ನಿಂದಿಸಿದ ಹೆಡ್ ಕಾನ್​ಸ್ಟೇಬಲ್
ಲೇಡಿ ಕಾನ್​ಸ್ಟೇಬಲ್​ರನ್ನು ಸಾರ್ವಜನಿಕವಾಗಿ ನಿಂದಿಸಿದ ಹೆಡ್ ಕಾನ್​ಸ್ಟೇಬಲ್
ವಿಧಾನಸೌಧ ಆವರಣದಲ್ಲಿ ಮೊದಲ ಬಾರಿಗೆ ಪುಸ್ತಕ ಮೇಳ ಆಯೋಜನೆ
ವಿಧಾನಸೌಧ ಆವರಣದಲ್ಲಿ ಮೊದಲ ಬಾರಿಗೆ ಪುಸ್ತಕ ಮೇಳ ಆಯೋಜನೆ
ಲಕ್ಷ್ಮಿ ಹೆಬ್ಬಾಳ್ಕರ್​ಗೆ ಭವತಿ ಭಿಕ್ಷಾಂ ದೇಹಿ ಎಂದ ವಿದ್ಯಾರ್ಥಿಗಳು !
ಲಕ್ಷ್ಮಿ ಹೆಬ್ಬಾಳ್ಕರ್​ಗೆ ಭವತಿ ಭಿಕ್ಷಾಂ ದೇಹಿ ಎಂದ ವಿದ್ಯಾರ್ಥಿಗಳು !
ರಾಜಸ್ಥಾನದ ಬಿಜೆಪಿ ಅಧ್ಯಕ್ಷರೆದುರೇ ಇಬ್ಬರು ನಾಯಕರ ಹೊಡೆದಾಟ; ವಿಡಿಯೋ ವೈರಲ್
ರಾಜಸ್ಥಾನದ ಬಿಜೆಪಿ ಅಧ್ಯಕ್ಷರೆದುರೇ ಇಬ್ಬರು ನಾಯಕರ ಹೊಡೆದಾಟ; ವಿಡಿಯೋ ವೈರಲ್
ಚಾಮುಂಡೇಶ್ವರಿ ದೇವಾಲಯಕ್ಕೆ ಬಂದ ದರ್ಶನ್ ಪುತ್ರ ವಿನೀಶ್
ಚಾಮುಂಡೇಶ್ವರಿ ದೇವಾಲಯಕ್ಕೆ ಬಂದ ದರ್ಶನ್ ಪುತ್ರ ವಿನೀಶ್