ದಾಸಯ್ಯ ಹಾಗೂ ಪೂಜಾರಿಗಳ ನಡುವೆ ಗಲಾಟೆ; ಕಾಯಿ ಕೊಚ್ಚುವ ಮಚ್ಚಿನಿಂದ ಹಲ್ಲೆ ನಡೆಸಿರುವ ಆರೋಪ

ಚಿತ್ರದುರ್ಗದ ದೇವಸ್ಥಾನದಲ್ಲಿ ಪ್ರಸಾದ ಹಾಗೂ ದಕ್ಷಿಣೆ ಸ್ವೀಕರಿಸುವ ವಿಚಾರವಾಗಿ ದಾಸಯ್ಯ ಹಾಗೂ ಪೂಜಾರಿಗಳ ನಡುವೆ ಗಲಾಟೆ ನಡೆದಿದೆ.

ದಾಸಯ್ಯ ಹಾಗೂ ಪೂಜಾರಿಗಳ ನಡುವೆ ಗಲಾಟೆ; ಕಾಯಿ ಕೊಚ್ಚುವ ಮಚ್ಚಿನಿಂದ ಹಲ್ಲೆ ನಡೆಸಿರುವ ಆರೋಪ
ಪೂಜಾರಿ ಭರತ್ ಮತ್ತು ಪುಂಡಲೀಕ
Edited By:

Updated on: Mar 07, 2021 | 12:17 PM

ಚಿತ್ರದುರ್ಗ: ದೇವಸ್ಥಾನದಲ್ಲಿ ಪ್ರಸಾದ ಹಾಗೂ ದಕ್ಷಿಣೆ ಸ್ವೀಕರಿಸುವ ವಿಚಾರವಾಗಿ ದಾಸಯ್ಯ ಹಾಗೂ ಪೂಜಾರಿಗಳ ನಡುವೆ ಗಲಾಟೆ ನಡೆದಿದೆ.  ಸಂಘರ್ಷದಲ್ಲಿ ದಾಸಯ್ಯ ಮೇಲೆ ಹಲ್ಲೆ ಮಾಡಿರುವ ಆರೋಪ ಕೇಳಿ ಬರುತ್ತಿದೆ.

ಪೂಜಾರಿಗಳು ಮತ್ತು ದಾಸಯ್ಯರ ನಡುವೆ, ಪ್ರಸಾದ ಮತ್ತು ದಕ್ಷಿಣೆ ಸ್ವೀಕಾರ ವಿಚಾರದಲ್ಲಿ ಗಲಾಟೆ ಉಂಟಾಗಿದೆ. ಕಾಯಿ ಕೊಚ್ಚುವ ಮಚ್ಚಿನಿಂದ ಪೂಜಾರಿಗಳು ಹಲ್ಲೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಗಾಯಾಳು ದಾಸಯ್ಯ ಶೇಖರ್ (34) ಚಿತ್ರದುರ್ಗ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದಾರೆ. ಪೂಜಾರಿ ಭರತ್, ಪುಂಡಲೀಕ ಮತ್ತಿತರರ ವಿರುದ್ಧ ಹಲ್ಲೆ ಆರೋಪ ಮಾಡಲಾಗಿದೆ. ಅಬ್ಬಿನಹೊಳೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಇದನ್ನೂ ಓದಿ: ದಾವಣಗೆರೆ ದರ್ಗಾದಲ್ಲಿ ಬೆಂಕಿ ಅವಘಡ: ಸಿಸಿ ಕ್ಯಾಮರಾದಿಂದ ಬಯಲಾಯಿತು ಅಸಲಿ ಕಾರಣ

ಇದನ್ನೂ ಓದಿ: ಭದ್ರಾವತಿ ಕಬಡ್ಡಿ ಗಲಾಟೆ ಪ್ರಕರಣ: ಗಲಾಟೆ ಮಾಡಿದ 15 ಜನರ ಬಂಧನ