AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೋಡಿಹಳ್ಳಿ ವಿರುದ್ದ ತಿರುಗಿ ಬಿದ್ದ ಸಾರಿಗೆ ನೌಕರರು: ಇನ್ನು ಮುಂದೆ ಮುಷ್ಕರ ಮಾಡೋದಿಲ್ಲ ಎಂದು ಸ್ಪಷ್ಟನೆ

ರಾಜ್ಯ ರಸ್ತೆ ಸಾರಿಗೆ ನೌಕರರ ಒಕ್ಕೂಟದ ಗೌರವಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ವಿರುದ್ಧ ಸಾರಿಗೆ ನೌಕರರು ತಿರುಗಿ ಬಿದ್ದಿದ್ದಾರೆ. ಅವರ ಏಕಪಕ್ಷೀಯ ನಿರ್ಧಾರಗಳಿಂದಾಗಿ ಮುಷ್ಕರ ವ್ಯರ್ಥವಾಗಿದೆ ಎಂದು ಅವರು ಆರೋಪಿಸಿದ್ದಾರೆ.

ಕೋಡಿಹಳ್ಳಿ ವಿರುದ್ದ ತಿರುಗಿ ಬಿದ್ದ ಸಾರಿಗೆ ನೌಕರರು: ಇನ್ನು ಮುಂದೆ ಮುಷ್ಕರ ಮಾಡೋದಿಲ್ಲ ಎಂದು ಸ್ಪಷ್ಟನೆ
ರಾಜ್ಯ ರಸ್ತೆ ಸಾರಿಗೆ ನೌಕರರ ಒಕ್ಕೂಟದ ಗೌರವಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ (ಫೈಲ್ ಚಿತ್ರ)
TV9 Web
| Edited By: |

Updated on:Jul 17, 2021 | 2:26 PM

Share

ಬೆಂಗಳೂರು: ರಾಜ್ಯ ರಸ್ತೆ ಸಾರಿಗೆ ನೌಕರರ ಒಕ್ಕೂಟದ ಗೌರವಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಅವರಿಂದ ಸಾರಿಗೆ ನೌಕರರ ಸಮಸ್ಯೆಗೆ ಯಾವುದೇ ಪರಿಹಾರ ಒದಗಿಸಿಲಾಗಿಲ್ಲ ಎಂದು ಸಾರಿಗೆ ಮುಖಂಡ ಆನಂದ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮುಷ್ಕರದಿಂದ‌ ಕೆಲಸ ಕಳೆದುಕೊಂಡವರು ಹಾಗೂ ನೌಕರರ ಕೂಟದ ಒಡಕಿನ ವಿಚಾರವಾಗಿ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ನಗರದ ಪ್ರೆಸ್​ಕ್ಲಬ್​ನಲ್ಲಿ ಕೋಡಿಹಳ್ಳಿ ನೇತೃತ್ವದಲ್ಲಿನ ಸಾರಿಗೆ ಕೂಟದಿಂದ ಹೊರ ಬಂದಿರುವ ನೌಕರರು, ಸಾರಿಗೆಯ ನಾಲ್ಕು ನಿಗಮಗಳ ನೌಕರರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಸುದ್ದಿಗೋಷ್ಠಿಯನ್ನು ನಡೆಸಿದ ಅವರು ಇನ್ನು ಮುಂದೆ ಕೋಡಿಹಳ್ಳಿಯವರ ಮುಷ್ಕರಕ್ಕೆ ಬೆಂಬಲ ನೀಡುವುದಿಲ್ಲ ಎಂದು ತಿಳಿಸಿದರು.

ಕೂಟದ ಅಧ್ಯಕ್ಷ ಚಂದ್ರು ಹಾಗೂ ಗೌರವಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಏಕಪಕ್ಷೀಯವಾಗಿ ನಿರ್ಧಾರ ತೆಗೆದುಕೊಳ್ಳುತ್ತಿದ್ದರು. ಸಚಿವರ ಜೊತೆ ಅಧಿಕಾರಿಗಳ ಜೊತೆ ಮಾತಾನಾಡೋಣ ಎಂದಾಗ ಕೋಡಿಹಳ್ಳಿ ಹಾಗೂ ಚಂದ್ರು ತಿರಸ್ಕಾರ ಮಾಡುತ್ತಿದ್ದರು. ಹೀಗಾಗಿ ಸಾರಿಗೆ ಮುಷ್ಕರ ವಿಫಲವಾಗಿದೆ. ನೌಕರರನ್ನು ಬೆದರಿಸಿ ಮುಷ್ಕರಕ್ಕೆ ಭಾಗಿಯಾಗುವಂತೆ ಹೇಳಿದ್ದರು. ಇದರಿಂದಾಗಿ 15 ದಿನಗಳ ಕಾಲ ಮುಷ್ಕರ ಮುಂದುವರೆದಿದ್ದರೂ ಯಾವುದೇ ಅನುಕೂಲವಾಗಿಲ್ಲ. ಎರಡು ಬಾರಿಯ ಮುಷ್ಕರದ ವಿಫಲತೆಗೂ ಕೋಡಿಹಳ್ಳಿ ಚಂದ್ರುಶೇಖರ್, ಹಾಗೂ ಅಧ್ಯಕ್ಷ ಚಂದ್ರು ನೇರ ಹೊಣೆ ಎಂದು ಆನಂದ್ ಗಂಭೀರ ಆರೋಪ ಮಾಡಿದರು.

ಈ ಕಾರಣದಿಂದಾಗಿ ನಾವು ಸಾರಿಗೆ ನೌಕರರ ಕೂಟದಿಂದ ಆಚೆ ಬಂದು ಮತ್ತೊಂದು ಒಕ್ಕೂಟ ರಚನೆ ಮಾಡಿದ್ದೇವೆ. ಮುಷ್ಕರದ ಸಂದರ್ಭದಲ್ಲಿ ಸಾವಿರಾರು ನೌಕರರು ಕೆಲಸ ಕಳೆದುಕೊಂಡಿದ್ದಾರೆ. ಕೋಡಿಹಳ್ಳಿ ಯಾರನ್ನೂ ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ. ಕೂಟದಿಂದ ಆಚೆ ಬಂದು ನಾವು ಸಚಿವ ಲಕ್ಷಣ್ ಸವದಿಯನ್ನ ಭೇಟಿ ಮಾಡಿದ್ದೇವೆ. ಕೆಲಸ ಕಳೆದುಕೊಂಡವರನ್ನ ಪುನಃ ನೇಮಕ ಮಾಡುವಂತೆ ಮನವಿ ಪತ್ರ ನೀಡಿದ್ದೇವೆ ಎಂದು ಆನಂದ್ ತಿಳಿಸಿದರು.

ಸಾರಿಗೆ ಸಚಿವರು ಮುಂದಿನ ವಾರ ಸಭೆ ಕರೆದಿದ್ದು, ನಮ್ಮ 3 ಬೇಡಿಕೆಗಳನ್ನು ಅವರ ಮುಂದೆ ಇಡಲಿದ್ದೇವೆ. ಆ ಬೇಡಿಕೆಗಳನ್ನು ಸರ್ಕಾರ ಈಡೇರಿಸುತ್ತದೆ ಎಂಬ ಭರವಸೆ ಇದೆ. ಮುಂದೆ ಯಾವುದೇ ಮುಷ್ಕರ ಮಾಡದೇ ಬೇಡಿಕೆ ಮುಂದಿಟ್ಟು ಮನವಿ ಮಾಡುತ್ತೆವೆ. ಒಂದು ವೇಳೆ ಕೋಡಿಹಳ್ಳಿ ಟಿಂ ಮುಷ್ಕರ ಮಾಡಿದರೂ ನಾವು ಬೆಂಬಲ ನೀಡುವುದಿಲ್ಲ. ಸಮಾನ ವೇತನ ಹಾಗೂ ಕೆಲಸ ಕಳೆದುಕೊಂಡವರನ್ನ ಮತ್ತೆ ನೇಮಕ ಮಾಡುತ್ತೇವೆಂದು ಸಚಿವರು ಭರವಸೆ ನೀಡಿದ್ದಾರೆ ಎಂದು ಆನಂದ್ ತಿಳಿಸಿದರು.

(The wrong decisions of Kodihalli Chandrashekhar deprive transport corporation employees of benefits and they decide to break away from Kodihalli camp)

Published On - 1:31 pm, Sat, 17 July 21

ಮೋದಿಯಿಂದ ನಾಳೆ ಉದ್ಘಾಟನೆಯಾಗಲಿದೆ ಅಸ್ಸಾಂನ ಅತಿದೊಡ್ಡ ವಿಮಾನ ನಿಲ್ದಾಣ
ಮೋದಿಯಿಂದ ನಾಳೆ ಉದ್ಘಾಟನೆಯಾಗಲಿದೆ ಅಸ್ಸಾಂನ ಅತಿದೊಡ್ಡ ವಿಮಾನ ನಿಲ್ದಾಣ
ಶಾಲೆಗೆ ಬರುವ ಮಕ್ಕಳನ್ನ ಗಾರೆ ಕೆಲಸಕ್ಕಚ್ಚಿದ ಮೇಸ್ಟ್ರು, ವಿಡಿಯೋ ವೈರಲ್
ಶಾಲೆಗೆ ಬರುವ ಮಕ್ಕಳನ್ನ ಗಾರೆ ಕೆಲಸಕ್ಕಚ್ಚಿದ ಮೇಸ್ಟ್ರು, ವಿಡಿಯೋ ವೈರಲ್
ಸಂಸತ್ ಅಧಿವೇಶನ ಮುಕ್ತಾಯ; ಮೋದಿ ಸೇರಿ ಎಲ್ಲ ಸಂಸದರಿಗೆ ಸ್ಪೀಕರ್ ಟೀ ಪಾರ್ಟಿ
ಸಂಸತ್ ಅಧಿವೇಶನ ಮುಕ್ತಾಯ; ಮೋದಿ ಸೇರಿ ಎಲ್ಲ ಸಂಸದರಿಗೆ ಸ್ಪೀಕರ್ ಟೀ ಪಾರ್ಟಿ
ಬಾಲಕನನ್ನು ಫುಟ್ಬಾಲ್​​ನಂತೆ ಒದ್ದ ಜಿಮ್ ಟ್ರೈನರ್​​ನ ಮತ್ತಷ್ಟು ಕೃತ್ಯಗಳು
ಬಾಲಕನನ್ನು ಫುಟ್ಬಾಲ್​​ನಂತೆ ಒದ್ದ ಜಿಮ್ ಟ್ರೈನರ್​​ನ ಮತ್ತಷ್ಟು ಕೃತ್ಯಗಳು
ವಕ್ಫ್ ಆಸ್ತಿಗಾಗಿ ಸಂಘರ್ಷ: 11 ಎಕರೆ ಜಮೀನಿಗಾಗಿ ಕುಟುಂಬಗಳ‌ ಮಧ್ಯೆ ಬಡಿದಾಟ
ವಕ್ಫ್ ಆಸ್ತಿಗಾಗಿ ಸಂಘರ್ಷ: 11 ಎಕರೆ ಜಮೀನಿಗಾಗಿ ಕುಟುಂಬಗಳ‌ ಮಧ್ಯೆ ಬಡಿದಾಟ
ದೇವಿ ದರ್ಶನ ಬಳಿಕ ಡಿಸಿಎಂ ಸ್ಫೋಟಕ ಹೇಳಿಕೆ: ಸಂಚಲನ ಮೂಡಿಸಿದ ಡಿಕೆಶಿ ಸಂದೇಶ
ದೇವಿ ದರ್ಶನ ಬಳಿಕ ಡಿಸಿಎಂ ಸ್ಫೋಟಕ ಹೇಳಿಕೆ: ಸಂಚಲನ ಮೂಡಿಸಿದ ಡಿಕೆಶಿ ಸಂದೇಶ
ಕುರ್ಚಿ ಕದನದ ನಡುವೆ ಅಂಕೋಲದಲ್ಲಿ ಶಕ್ತಿ ದೇವತೆ ಮೊರೆ ಹೋದ ಡಿಕೆಶಿ
ಕುರ್ಚಿ ಕದನದ ನಡುವೆ ಅಂಕೋಲದಲ್ಲಿ ಶಕ್ತಿ ದೇವತೆ ಮೊರೆ ಹೋದ ಡಿಕೆಶಿ
ಹಾವೇರಿ: ದೇವರ ಮೂರ್ತಿ ಭಗ್ನಗೊಳಿಸಿದ ಕಿಡಿಗೇಡಿಗಳು; ವಿಡಿಯೋ ನೋಡಿ
ಹಾವೇರಿ: ದೇವರ ಮೂರ್ತಿ ಭಗ್ನಗೊಳಿಸಿದ ಕಿಡಿಗೇಡಿಗಳು; ವಿಡಿಯೋ ನೋಡಿ
49 ಎಸೆತಗಳಲ್ಲಿ ಸ್ಫೋಟಕ ಶತಕ ಸಿಡಿಸಿದ ಇಶಾನ್ ಕಿಶನ್
49 ಎಸೆತಗಳಲ್ಲಿ ಸ್ಫೋಟಕ ಶತಕ ಸಿಡಿಸಿದ ಇಶಾನ್ ಕಿಶನ್
ಊಟಿಯಂತಾದ ಕೋಲಾರ, ರಸ್ತೆ ಕಾಣದೇ ವಾಹನ ಸವಾರರು ಪರದಾಟ
ಊಟಿಯಂತಾದ ಕೋಲಾರ, ರಸ್ತೆ ಕಾಣದೇ ವಾಹನ ಸವಾರರು ಪರದಾಟ