ಚುನಾವಣೆಯಲ್ಲಿ ರಾಮ ಮಂದಿರವು ಬಿಜೆಪಿಗೆ ಹೆಚ್ಚು ಸ್ಥಾನ ತಂದುಕೊಟ್ಟರೆ ತಪ್ಪೇನಿಲ್ಲ: ಪೇಜಾವರ ಶ್ರೀ

| Updated By: Rakesh Nayak Manchi

Updated on: Mar 14, 2024 | 2:30 PM

ಅಯೋಧ್ಯೆ ರಾಮ ಮಂದಿರ ಉದ್ಘಾಟನೆ ನಂತರ 40 ದಿನಗಳ ಕಾಲ ಪ್ರಭು ಶ್ರೀರಾಮನ ಪೂಜೆ ಮಾಡಿದ ಉಡುಪಿ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಅವರು ಇದೀಗ ರಾಮನ ನಾಡಿನಿಂದ ಹನುಮನ ನಾಡಿಗೆ ವಾಪಸ್ ಆಗಿದ್ದಾರೆ. ದಾವಣಗೆರೆಯಲ್ಲಿ ಮಾತನಾಡಿದ ಅವರು, ರಾಮ ಮಂದಿರ‌ ನಿರ್ಮಾಣದಿಂದ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಹೆಚ್ಚು ಸ್ಥಾನ‌ ಬಂದರೆ ತಪ್ಪೇನಿಲ್ಲ ಎಂದರು.

ಚುನಾವಣೆಯಲ್ಲಿ ರಾಮ ಮಂದಿರವು ಬಿಜೆಪಿಗೆ ಹೆಚ್ಚು ಸ್ಥಾನ ತಂದುಕೊಟ್ಟರೆ ತಪ್ಪೇನಿಲ್ಲ: ಪೇಜಾವರ ಶ್ರೀ
ಚುನಾವಣೆಯಲ್ಲಿ ರಾಮ ಮಂದಿರವು ಬಿಜೆಪಿಗೆ ಹೆಚ್ಚು ಸ್ಥಾನ ತಂದುಕೊಟ್ಟರೆ ತಪ್ಪೇನಿಲ್ಲ ಎಂದ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ
Follow us on

ದಾವಣಗೆರೆ, ಮಾ.14: ಅಯೋಧ್ಯೆ ರಾಮ ಮಂದಿರ (Ayodhya Ram Mandir) ಉದ್ಘಾಟನೆ ನಂತರ 40 ದಿನಗಳ ಕಾಲ ಪ್ರಭು ಶ್ರೀರಾಮನ ಪೂಜೆ ಮಾಡಿದ ಉಡುಪಿ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ (Vishwaprasanna Tirtha Swamiji) ಅವರು ಇದೀಗ ರಾಮನ ನಾಡಿನಿಂದ ಹನುಮನ ನಾಡಿಗೆ ವಾಪಸ್ ಆಗಿದ್ದಾರೆ. ಅದರಂತೆ, ದಾವಣಗೆರೆಯಲ್ಲಿ ಮೊದಲ ಪ್ರತಿಕ್ರಿಯೆ ನೀಡಿದ ಪೇಜಾವರ ಶ್ರೀ, ರಾಮ ಮಂದಿರ‌ ನಿರ್ಮಾಣದಿಂದ ಲೋಕಸಭೆ ಚುನಾವಣೆಯಲ್ಲಿ (Lok Sabha Elections) ಬಿಜೆಪಿಗೆ (BJP) ಹೆಚ್ಚು ಸ್ಥಾನ‌ ಬಂದರೆ ತಪ್ಪೇನಿಲ್ಲ ಎಂದರು.

ಅಯೋಧ್ಯಯಲ್ಲಿ ರಾಮ ಮಂದಿರವನ್ನು ಸುಪ್ರೀಂ ಕೋರ್ಟ ಆದೇಶದಂತೆ ನಿರ್ಮಿಸಿದ್ದಾರೆ. ಅಯೋಧ್ಯ ರಾಮಮಂದಿರ ಟ್ರಸ್ಟ್ ಸದಸ್ಯನಾಗಿದ್ದು, ರಾಮಮಂದಿರದಲ್ಲಿ ಪ್ರಾಣ ಪ್ರತಿಷ್ಠಾಪನೆ ಆದ ಬಳಿಕ ಕಳೆದ 40 ದಿನಗಳ ಕಾಲ ಅಲ್ಲಿಯೇ ಕೆಲ ಪೂಜಾ ವಿಧಿ ವಿಧಾನ ‌ಮುಗಿಸಿ ರಾಮನ ನಾಡಿನಿಂದ ಇಂದು ಹನುಮನ‌ನಾಡಿಗೆ ಬಂದಿದ್ದೇನೆ ಎಂದರು.

ಇದನ್ನೂ ಓದಿ: ಅಯೋಧ್ಯೆ ರಾಮನ ದರ್ಶನ ಮಾಡಿ ಇಹದ ಯಾತ್ರೆ ಮುಗಿಸಿದ ಪಾಂಡುರಂಗ ಶಾನುಭಾಗ್

ಅಯೋಧ್ಯೆಯಂತೆ ಹನುಮ ಪುಣ್ಯಕ್ಷೇತ್ರ ಅಭಿವೃದ್ಧಿ ಆಗಬೇಕು. ಇದಕ್ಕೊಂದು ಟ್ರ್ಟ್ ಮಾಡಬೇಕು ಎಂದ ಪೇಜಾವರ ಶ್ರೀ, ಇತ್ತೀಚಿಗೆ ರಾಮಮಂದಿರ ಧ್ವಂಸದ ಬಗ್ಗೆ ಪತ್ರಗಳು ಪತ್ತೆಯಾಗುತ್ತಿವೆ. ರಾಮ ಮಂದಿರ ಸುಪ್ರೀಂ‌ಕೋರ್ಟ್ ಅದೇಶದಂತೆ ಪ್ರಜಾಪ್ರಭುತ್ವದ ದೇಶದಲ್ಲಿ ಮಂದಿರ ನಿರ್ಮಾಣ ಆಗಿದೆ. ಇಂತಹ ಮಂದಿರಗಳ ಬಗ್ಗೆ ಅನಗತ್ಯ ಹೇಳಿಕೆ ಅಥವಾ ಪತ್ರಗಳು ಬರೆಯುವುದು ತಪ್ಪು ಎಂದರು.

ಹಿಂದೂ ದೇವಾಲಯಗಳ ಆದಾಯ ಹಿಂದೂ ಧರ್ಮಕ್ಕೆ ಬಳಕೆಯಾಗಲಿ

ರಾಜ್ಯದಲ್ಲಿ ಹಿಂದೂ ದೇವಾಲಯಗಳ ಆದಾಯವನ್ನು ಅನ್ಯಮತಗಳ ಕಲ್ಯಾಣಕ್ಕೆ ಬಳಕೆ ಮಾಡಲಾಗುತ್ತಿದೆ ಎನ್ನುವ ಗಂಭೀರ ಆರೋಪ ಕೇಳಿಬಂದಿತ್ತು. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಪೇಜಾವರ ಶ್ರೀ, ಹಿಂದೂ ದೇವಸ್ಥಾನಗಳ ಆದಾಯವನ್ನ ಸರ್ಕಾರ ಹಿಂದೂ ಧರ್ಮಕ್ಕೆ ಬಿಟ್ಟು ಬಿಡಬೇಕು ಎಂದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ