‘ಇದು ವಿದ್ಯಾರ್ಥಿಗಳ ಗೆಲುವು’: ಪ್ರಧಾನ್ ರಾಜೀನಾಮೆ ಕ್ರೆಡಿಟ್ ಬಗ್ಗೆ ಬಿಕೆ ಹರಿಪ್ರಸಾದ್ ಮಾತು
ಮುಖ್ಯಾಂಶಗಳು
- ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ
- ಯುವ ಸಮುದಾಯ ಕೇಂದ್ರ ಸರ್ಕಾರವನ್ನೇ ಬಗ್ಗಿಸಿದ್ದಾರೆ ಎಂದ ಬಿ.ಕೆ.ಹರಿಪ್ರಸಾದ್
- ವಿದ್ಯಾರ್ಥಿಗಳ ಹೋರಾಟಕ್ಕೆ ಜಯ ಸಿಕ್ಕಿದೆ
ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನಂತರ, ಬಿ.ಕೆ. ಹರಿಪ್ರಸಾದ್ ಶಿಕ್ಷಣ ಕ್ಷೇತ್ರದಲ್ಲಿ ಭ್ರಷ್ಟಾಚಾರದ ಆರೋಪ ಮಾಡಿದ್ದಾರೆ. ನಾಗಪುರ ವಿಶ್ವವಿದ್ಯಾಲಯದ ಪ್ರಭಾವದಿಂದ ಅನರ್ಹರು ನೇಮಕಗೊಂಡಿದ್ದಾರೆ ಎಂದ ಅವರು, ಇತ್ತೀಚಿನ ಪ್ರತಿಭಟನೆಗಳ ಹಿಂದೆ ಕ್ರಿಮಿನಲ್‌ಗಳಿದ್ದಾರೆ ಎಂಬ ಆರೋಪವನ್ನು ನಿರಾಕರಿಸಿದ್ದಾರೆ. ವಿದ್ಯಾರ್ಥಿಗಳ ಹೋರಾಟಕ್ಕೆ ನ್ಯಾಯ ಸಿಗಬೇಕು ಎಂದು ಹರಿಪ್ರಸಾದ್ ಪ್ರತಿಪಾದಿಸಿದ್ದಾರೆ.
ಬೆಂಗಳೂರು, ಜುಲೈ 25: ‘ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಿರುವುದು ವಿದ್ಯಾರ್ಥಿಗಳ ಗೆಲುವು. ನಾವು ಕಾಕ್ರೋಚ್ ಪಾರ್ಟಿನೋ, ಇನ್ನೊಂದು ಪಾರ್ಟಿನೋ ಅಲ್ಲ. ವಿದ್ಯಾರ್ಥಿಗಳಿಗೆ ನ್ಯಾಯ ಸಿಗಬೇಕು, ಅವರ ಭವಿಷ್ಯ ಹಾಳು ಮಾಡಬಾರದು’ ಎಂದು ನಾವು ಹೋರಾಟ ಮಾಡಿದ್ದೇವೆ ಎಂದು ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ಹೇಳಿದ್ದಾರೆ. ಪ್ರಧಾನ್ ರಾಜೀನಾಮೆ ಕ್ರೆಡಿಟ್ ವಿಚಾರವಾಗಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ‘ವಿದ್ಯಾರ್ಥಿಗಳು ಪ್ರತಿಭಟನೆ ಮಾಡಿದಾಗ ಅವರನ್ನು ದೇಶದ್ರೋಹಿಗಳು ಎಂದು ಕರೆದರು. ಆದರೆ, ಇಡೀ ಬಿಜೆಪಿ ಮತ್ತು ನಾಗಪುರ್ ಯುನಿವರ್ಸಿಟಿನಲ್ಲಿರುವವರು ನಕಲಿ ದೇಶಭಕ್ತರು’ ಎಂದು ಹರಿಪ್ರಸಾದ್ ತೀವ್ರ ವಾಗ್ದಾಳಿ ಮಾಡಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.
Follow Us

