Agnipath Scheme: ಅಗ್ನಿಪಥ್ ವಿರುದ್ಧ ಪ್ರತಿಭಟನೆ ಮಾಡುವವರು ಸೇನೆಗೆ ಸೇರ ಬಯಸುವವರಲ್ಲ: ಬಿಸಿ ಪಾಟೀಲ್​​

| Updated By: ವಿವೇಕ ಬಿರಾದಾರ

Updated on: Jun 19, 2022 | 3:39 PM

ಕೇಂದ್ರ ಸರ್ಕಾರದ ಅಗ್ನಿಪಥ್ ಮಹತ್ತರವಾದ ಯೋಜನೆಯಾಗಿದ್ದು, ಪ್ರತಿಭಟನೆ ಮಾಡುವವರು ಸೇನೆಗೆ ಸೇರಬಯಸುವವರಲ್ಲ.  ದೇಶಪ್ರೇಮ ತೋರಿಸುವವರು ರೈಲ್ವೆಗೆ ಬೆಂಕಿ ಹಾಕ್ತಾರಾ? ಜನರಿಗೆ ತೊಂದರೆ ಕೊಟ್ಟು ದೇಶ ಕಾಯೋಕೆ ಆಗುತ್ತಾ? ಎಂದು ಸಚಿವ ಬಿ.ಸಿ.ಪಾಟೀಲ್ ಪ್ರಶ್ನಿಸಿದ್ದಾರೆ.

Agnipath Scheme: ಅಗ್ನಿಪಥ್ ವಿರುದ್ಧ ಪ್ರತಿಭಟನೆ ಮಾಡುವವರು ಸೇನೆಗೆ ಸೇರ ಬಯಸುವವರಲ್ಲ: ಬಿಸಿ ಪಾಟೀಲ್​​
ಬಿ.ಸಿ ಪಾಟೀಲ್​​
Follow us on

ಧಾರವಾಡ: ಕೇಂದ್ರ ಸರ್ಕಾರದ (Central Government) ಅಗ್ನಿಪಥ್ (Agnipath) ಮಹತ್ತರವಾದ ಯೋಜನೆಯಾಗಿದ್ದು, ಪ್ರತಿಭಟನೆ ಮಾಡುವವರು ಸೇನೆಗೆ (Army) ಸೇರಬಯಸುವವರಲ್ಲ.  ದೇಶಪ್ರೇಮ ತೋರಿಸುವವರು ರೈಲ್ವೆಗೆ ಬೆಂಕಿ ಹಾಕ್ತಾರಾ? ಜನರಿಗೆ ತೊಂದರೆ ಕೊಟ್ಟು ದೇಶ ಕಾಯೋಕೆ ಆಗುತ್ತಾ? ಇದೆಲ್ಲವೂ ಕಿಡಿಗೇಡಿಗಳ ಕುತಂತ್ರವಾಗಿದೆ ಎಂದು ಧಾರವಾಡದಲ್ಲಿ (Dharwad) ಕೃಷಿ ಸಚಿವ ಬಿ.ಸಿ.ಪಾಟೀಲ್ (BC Patil)  ಹೇಳಿದ್ದಾರೆ. ಕೆಲವರು ಉದ್ದೇಶಪೂರ್ವಕವಾಗಿ ಪ್ರಚೋದಿಸುತ್ತಿದ್ದಾರೆ. ಇದಕ್ಕೆ ಯುವಕರು ಬಲಿಯಾಗಬಾರದು. ಕಾಂಗ್ರೆಸ್ ಪಕ್ಷ ಎಲ್ಲ ಕಡೆ ಅದೇ ಕೆಲಸ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಡಿಸಿದರು.

ನಾಲ್ಕು ವರ್ಷದ ಸೇವೆ ಬಳಿಕ ಬೇಕಾದ ನೌಕರಿ ಸೇರಬಹುದು. ಅದರಲ್ಲಿ‌ ಮೀಸಲಾತಿ ಸಹ ಕೊಡುತ್ತಿದ್ದಾರೆ. ಪ್ರತಿಭಟನೆ ಮಾಡುವವರೆಲ್ಲ ಆರ್ಮಿ ಸೇರಬಯಸುವವರು ಅಲ್ಲ? ಆರ್ಮಿಗೆ ಹೋಗೋ ಉದ್ದೇಶ ದೇಶ ರಕ್ಷಣೆಗಾಗಿ. ರಾಹುಲ್ ಗಾಂಧಿಗೆ ವಿಚಾರಣೆಗೆ ಕರೆದರೆ ಪ್ರತಿಭಟನೆ ಮಾಡಿದರು. ಹಿಂದೆ ಖರ್ಗೆಯವರನ್ನೂ ಇಡಿ ವಿಚಾರಣೆಗೆ ಕರೆದಿದ್ದಾಗ  ಒಬ್ಬರೂ ಪ್ರತಿಭಟನೆಗೆ ಬರಲಿಲ್ಲ. ಓರ್ವ ಹಿರಿಯ ದಲಿತ ನಾಯಕ ಖರ್ಗೆ, ಆದರೆ ರಾಹುಲ್, ಸೋನಿಯಾರನ್ನು ಕರೆದು ವಿಚಾರಣೆ ಮಾಡಬಾರದು ಅಂದರೆ ಹೇಗೆ? ಈ ದೇಶದಲ್ಲಿ ನ್ಯಾಯ, ಸಂವಿಧಾನಕ್ಕೆ ಎಲ್ಲರೂ ತಲೆ ಬಾಗಬೇಕು. ಕರೆಯಬಾರದು ಅಂತಾ ಧಮ್ಕಿ ಹಾಕಿದರೆ ಹೇಗೆ? ಎಂದು ಪ್ರಶ್ನಿಸಿದರು.

ಇದನ್ನು ಓದಿ: ನೇಮಕಾತಿ ವೇಳೆ ಹಳ್ಳಿಗಳಲ್ಲಿರುವ ಯುವಕರಿಗೆ ಶೇ.70ರಷ್ಟು ಆದ್ಯತೆ ನೀಡ್ತೇವೆ, 1 ಕೋಟಿ ರೂ. ಜೀವ ವಿಮೆ ಇದೆ -ಲೆಫ್ಟಿನೆಂಟ್ ಜನರಲ್‌ ಅನಿಲ್ ಪುರಿ

ಇದನ್ನೂ ಓದಿ
Signal Problem: ನೀವಿರುವ ಜಾಗದಲ್ಲಿ ಸರಿಯಾಗಿ ನೆಟ್​ವರ್ಕ್​ ಸಿಗುತ್ತಿಲ್ವಾ?: ಇಲ್ಲಿದೆ ಸಿಂಪಲ್ ಈ ಟ್ರಿಕ್
ಸರ್ಕಾರದ ಅತ್ಯುತ್ತಮ ಯೋಜನೆಗಳಿಗೆ ರಾಜಕೀಯ ಬಣ್ಣ: ಅಗ್ನಿಪಥ್ ವಿರೋಧಕ್ಕೆ ಪ್ರಧಾನಿ ಮೋದಿ ಬೇಸರ
International Yoga Day 2022: ಈ ಆಸನಗಳನ್ನು ಮಾಡುವುದರಿಂದ ನಿಮ್ಮ ಕಣ್ಣಿನ ಆರೋಗ್ಯ ಕಾಪಾಡಿಕೊಳ್ಳಬಹುದು
ಭ್ರಷ್ಟಾಚಾರ ಕಾಂಗ್ರೆಸ್ ಪಕ್ಷದ ಸಂಸ್ಕೃತಿ: ಗದಗದಲ್ಲಿ ಕಾಂಗ್ರೆಸ್​ ವಿರುದ್ಧ ಸಚಿವ ಶ್ರೀರಾಮುಲು ವಾಗ್ದಾಳಿ

ನಾಳೆ ಯಾರೋ‌ ಒಬ್ಬ ಕೊಲೆ ಮಾಡುತ್ತಾನೆ. ಅವನನ್ನು ಬಂಧಿಸಬೇಡಿ ಅಂತಾ ಪ್ರತಿಭಟಿಸುತ್ತಾರಾ? ಕಾಂಗ್ರೆಸ್ ಸರ್ಕಾರ ಇದ್ದಾಗಲೇ ದೂರು ದಾಖಲಾಗಿದೆ. ಇಡಿ ಪ್ರಧಾನಿ ಮಾತು ಕೇಳುತ್ತೆ ಅಂತಾರೆ. ಹಾಗಾದರೆ ಆಗ ಪಿಎಂ ಇದ್ದ ಮನಮೋಹನಸಿಂಗ್ ಕೇಸ್ ಆಗದಂತೆ ಮಾಡುತ್ತಿದ್ದರಲ್ವಾ? ಇಡಿ ಸ್ವತಂತ್ರವಾದ ಸಂಸ್ಥೆಯಾಗಿದ್ದು, ಕಾನೂನುಬದ್ಧವಾಗಿ ಕೆಲಸ ಮಾಡಲು ಬಿಡಬೇಕು ಎಂದು ಹೇಳಿದರು.

ಅಗ್ನಿಪಥ್ ಯೋಜನೆ ಹಿಂಸಾಚಾರದ ಹಿಂದೆ ಯಾರಿದ್ದಾರೆಂದು ಗೊತ್ತಿದೆ: ಗೋವಿಂದ ಕಾರ್ಜೋಳ

ಬಾಗಲಕೋಟೆ: ಅಗ್ನಿಪಥ್ ಯೋಜನೆಯಿಂದ ಯುವಕರಿಗೆ ಅನ್ಯಾಯ ಆಗುವುದಿಲ್ಲ. ಸೇನೆಯಲ್ಲಿ ಕೆಲಸ ಮಾಡಿ ಬಂದ ಬಳಿಕ ಸರ್ಕಾರಿ ನೌಕರಿಯಲ್ಲಿ ಶೇ 10 ಪ್ರತಿಶತದಷ್ಟು ಮೀಸಲಾತಿ ನೀಡಲಾಗುತ್ತದೆ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಜಿಲ್ಲೆಯ ಗಲಗಲಿ ಗ್ರಾಮದಲ್ಲಿ ಹೇಳಿದ್ದಾರೆ. ಹಿಂಸಾಚಾರದ ಹಿಂದೆ ಯಾರಿದ್ದಾರೆಂದು ಗೊತ್ತಿದೆ. ಹಿಂಸಾಚಾರದ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಅಗ್ನಿಪಥ ಯೋಜನೆ ಬಗ್ಗೆ ಕೇಂದ್ರ ಮತ್ತು ರಾಜ್ಯ ಸರ್ಕಾರ ಸ್ಪಷ್ಟವಾಗಿ ಹೇಳಿದೆ. ಇದರಿಂದ ಅನ್ಯಾಯಗುವಂತಹ ಪ್ರಶ್ನೆಯೇ ಇಲ್ಲ, ಅನುಕೂಲವಾಗಲಿದೆ ಎಂದರು.

ಇದನ್ನು ಓದಿ: ಬಡವರಿಗೆ ಸಹಾಯಕವಾಗುವ ಅಗತ್ಯ ಸಂಶೋಧನೆಗೆ ವಾಹನ ಉದ್ಯಮ ಮುಂದಾಗಬೇಕು: ನಿತಿನ್ ಗಡ್ಕರಿ

4 ವರ್ಷ ಮಾಡಿ ಬಂದರೂ ಸರ್ಕಾರಿ ನೌಕರಿಯಲ್ಲಿ ಅವಕಾಶ ಸಿಗಲಿದೆ. ಹೀಗಾಗಿ ಜನರು ಪ್ರತಿಭಟನೆ ಕೈಬಿಡಬೇಕು. ತಮಗೆ ಏನಾದರು ಆತಂಕಗಳಿದ್ದರೆ, ನ್ಯಾಯಯುತ ಬೇಡಿಕೆ ಇದ್ದರೆ ಶಾಂತ ರೀತಿಯಿಂದ ಸರ್ಕಾರಕ್ಕೆ ಮನವಿ ಮಾಡಿಕೊಳ್ಳಬೇಕು. ಇದರಲ್ಲಿ ರಾಜಕೀಯ ಕೈವಾಡ ಇದೆ ಅಂತ ಕಣ್ಣಿಗೆ ಕಾಣಿಸುತ್ತಿದೆ. ರಾಜ್ಯ & ದೇಶದಲ್ಲಿ ಈ ಹಿಂಸಾಚಾರದ ಹಿಂದೆ ಯಾರಿದ್ದಾರೆಂದು ಗೊತ್ತಿದೆ. ಈ ಬಗ್ಗೆ ತನಿಖೆಯಾಗಲಿದ್ದು, ಯಾರೂ ತಪ್ಪು ಮಾಡಿರುತ್ತಾರೆ ಅವರಿಗೆ ಖಂಡಿತವಾಗಿ ಶಿಕ್ಷೆಯಾಗುತ್ತೆ ಎಂದು ಹೇಳಿದರು.

ಕಾಂಗ್ರೆಸ್​​ನವರು ನಮ್ಮ ದೇಶದ ಯುವಕರನ್ನು ಭಯೋತ್ಪಾದಕರಾಗಿ ಮಾಡುತ್ತಿದ್ದಾರೆ: ಈಶ್ವರಪ್ಪ

ಶಿವಮೊಗ್ಗ: ನಮ್ಮ ದೇಶದ ಯುವಕರು ಭಯೋತ್ಪಾದಕರಾಗುವುದಿಲ್ಲ. ಆದರೆ ಕಾಂಗ್ರೆಸ್​​ನವರು ಭಯೋತ್ಪಾದಕರಾಗಿ ಮಾಡುತ್ತಿದ್ದಾರೆ. ಅಗ್ನಿಪಥ್​ ವಿಚಾರ ತಿರುಚಿ ಯುವಕರ ದಾರಿ ತಪ್ಪಿಸುತ್ತಿದ್ದಾರೆ. ಇದರ ಹಿಂದೆ ಕಾಂಗ್ರೆಸ್ ನೇತೃತ್ವ ಇದ್ದರೆ ತಡೆಯಬೇಕು ಎಂದು ಶಿವಮೊಗ್ಗದಲ್ಲಿ ಮಾಜಿ ಸಚಿವ ಕೆ. ಎಸ್​​. ಈಶ್ವರಪ್ಪ ವಾಗ್ದಾಳಿ ನಡೆಸಿದ್ದಾರೆ.

ಇಡಿಯವರು ರಾಹುಲ್ ಗಾಂಧಿ ವಿಚಾರಣೆಗೆ ಕರೆದ್ರೆ ತಪ್ಪಾ?  ರಾಹುಲ್ ಗಾಂಧಿಯನ್ನು ಬಂಧಿಸಿಲ್ಲ, ಜೈಲಿಗೆ ಕಳುಹಿಸಿಲ್ಲ. ವಿಚಾರಣೆಗೆ ಕರೆಯಲೇ ಬೇಡಿ ಎಂದು ಪ್ರತಿಭಟನೆ ಮಾಡಿದರೆ ಹೇಗೆ?  ಹೀಗಾಗಿಯೇ ಕಾಂಗ್ರೆಸ್ ಪಕ್ಷ ದೇಶದಲ್ಲಿ ಸೋಲುತ್ತಿದೆ. ಕಾಂಗ್ರೆಸ್ ಗಂಧ ಗಾಳಿಯೇ ಇಲ್ಲದ ಸಿದ್ದರಾಮಯ್ಯ, ಡಿಕೆಶಿ ಮತ್ತು ನಲಪಾಡ್ ಅಂತಹವರ ಕೈಯಲ್ಲಿ ಸಿಕ್ಕಿ ಕಾಂಗ್ರೆಸ್ ನರಳುತ್ತಿದೆ ಎಂದು ಹೇಳಿದರು.

ಕೇಂದ್ರದ ಅಗ್ನಿಪಥ್​ ಯೋಜನೆಗೆ ಕುಮಾರಸ್ವಾಮಿ ಗರಂ

ರಾಮನಗರ: ಕೇಂದ್ರದ ಅಗ್ನಿಪಥ್​ ಯೋಜನೆ  ಆರ್​ಎಸ್​ಎಸ್​ನ ‘ಅಗ್ನಿಪಥ್’ ಯೋಜನೆಯಾಗಿದೆ. ಈ ಹೊಸ ಕಾನ್ಸೆಪ್ಟ್​ ಮಾಡಬೇಕೆಂದು ಹೇಳಿದ್ದು ಯಾರು? ಇವರಿಗೆ ಬುದ್ಧಿ ಹೇಳಿದ್ದು ಯಾರು? ಸಂಸತ್ ಸದಸ್ಯರ ಕಮಿಟಿಯಿಂದ ಶಿಫಾರಸು ಆಗಿದೆಯಾ? ಸೇನಾ ವಿಭಾಗದಿಂದ ಯಾರಾದರೂ ಸಲಹೆ ಕೊಟ್ಟಿದ್ದಾರಾ? ಯಾರು ಈ ಬಗ್ಗೆ ಸಲಹೆ ಕೊಟ್ಟಿರೋದು ಎಂದು ಮಾಜಿ ಮುಖ್ಯಮಂತ್ರಿ ಹೆಚ್​​.ಡಿ ಕುಮಾರಸ್ವಾಮಿ ರಾಮನಗರದಲ್ಲಿ ಕೇಂದ್ರ ಸರ್ಕಾರಕ್ಕೆ ಪ್ರಶ್ನಿಸಿದ್ದಾರೆ.

4 ವರ್ಷದ ಬಳಿಕ ಶೇ.75ರಷ್ಟು ಜನರನ್ನ ಹೊರ ಕಳುಹಿಸುತ್ತೀರಿ.  ನಾಲ್ಕು ವರ್ಷದಲ್ಲಿ ಅವರಿಂದ ಏನು ಕೆಲಸ ಮಾಡಿಸುತ್ತೀರಿ? ಯಾರು ಈ ಹತ್ತು ಲಕ್ಷ ಆಯ್ಕೆಯಾಗುವವರು? ಇವರನ್ನ ಆಯ್ಕೆ ಮಾಡುವವರು ಯಾರು? RSS ಮುಖಂಡರು ಇವರನ್ನ ಆಯ್ಕೆ ಮಾಡುತ್ತಾರೋ? ಇಲ್ಲ ಆರ್ಮಿಯವರು ಆಯ್ಕೆ ಮಾಡುತ್ತಾರೋ? RSS ಕವಾಯತ್ ಮಾಡಿರುವ ಟೀಂ ಇದೆಯಲ್ಲ. ಅವರನ್ನ ಸೇನೆಗೆ ತುಂಬಿ 2.5 ಲಕ್ಷ ಜನರನ್ನ ಸೆಟಪ್ ಮಾಡಿ. ನಾಜೀ ಸಾಮ್ರಾಜ್ಯ ಇದ್ದಾಗಲೇ RSS ಉದ್ಭವ ಆಗಿರೋದು. ನಾಜೀ ಸಾಮ್ರಾಜ್ಯ ಜಾರಿಗೆ ತರಲು ಅಗ್ನಿವೀರರ ತಯಾರಿ ಮಾಡುತ್ತಿದ್ದಾರೆ ಎಂದು ಆಕ್ರೋಶ ಹೊರ ಹಾಕಿದ್ದಾರೆ.

ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ ಮಾಡಿ.