ಮಹಾನಾಯಕನೊಬ್ಬ 3 ತಿಂಗಳ ಹಿಂದೆ ಚಾಲೆಂಜ್ ಹಾಕಿದ್ದರ ಪರಿಣಾಮ ಇದು; ಆತನನ್ನು ಈಗ ಜೈಲಿಗೆ ಹಾಕಿಸುವೆ -ರಮೇಶ್ ಜಾರಕಿಹೊಳಿ
2020ರ ಫೆಬ್ರವರಿ 26ರಂದು ನಾನು ಸಚಿವನಾದೆ. ಆಗ ಒಬ್ಬ ಮಹಾನಾಯಕ ನನಗೆ ಚಾಲೆಂಜ್ ಹಾಕಿದ್ದ. ಈ ಇಲಾಖೆಯನ್ನ ಕೇವಲ 3 ತಿಂಗಳು ನಡೆಸ್ತಾನೆಂದಿದ್ದ. ನಾನು ರಾಜ್ಯವೇ ಮೆಚ್ಚುವಂತೆ ನನ್ನ ಇಲಾಖೆ ನಡೆಸಿದ್ದೆ. ಹೀಗಾಗಿ ನನ್ನ ವಿರುದ್ಧ ಅವರು ಷಡ್ಯಂತ್ರ ನಡೆಸಿದ್ದಾರೆ. ಆ ಮಹಾನಾಯಕ ನನ್ನ ವಿರುದ್ಧ ಷಡ್ಯಂತ್ರ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ.
ಬೆಂಗಳೂರು: ರಮೇಶ್ ಜಾರಕಿಹೊಳಿ ವಿರುದ್ಧ ಬಿಡುಗಡೆಯಾದ ಸೆಕ್ಸ್ ಸಿಡಿ ಕೇಸ್ ಬಗ್ಗೆ ಸ್ಪಷ್ಟನೆ ನೀಡಲು ಇಂದು ಸದಾಶಿವನಗರದ ನಿವಾಸದಲ್ಲಿ ರಮೇಶ್ ಜಾರಕಿಹೊಳಿ ಸುದ್ದಿಗೋಷ್ಠಿ ನಡೆಸಿದರು. ಈ ವೇಳೆ ರಮೇಶ್ ಜಾರಕಿಹೊಳಿ ಭಾವುಕರಾಗಿದ್ದಾರೆ. ಮಾನಸಿಕವಾಗಿ ತುಂಬಾ ನೊಂದಿದ್ದೇನೆ. ಷಡ್ಯಂತ್ರದಿಂದಲೇ ನನಗೆ ಹೀಗೆ ಮಾಡಿದ್ದಾರೆ ಅಂತಾ ಅಳಲು ತೋಡಿಕೊಂಡಿದ್ದಾರೆ. ಇನ್ನು ಈ ವೇಳೆ ಮಾತನಾಡಿದ ರಮೇಶ್ ಜಾರಕಿಹೊಳಿ ನಾಯಕರೊಬ್ಬರ ಮೇಲೆ ಆರೋಪ ಮಾಡಿದ್ದಾರೆ.
2020ರ ಫೆಬ್ರವರಿ 26ರಂದು ನಾನು ಸಚಿವನಾದೆ. ಆಗ ಒಬ್ಬ ಮಹಾನಾಯಕ ನನಗೆ ಚಾಲೆಂಜ್ ಹಾಕಿದ್ದ. ಈ ಇಲಾಖೆಯನ್ನ ಕೇವಲ 3 ತಿಂಗಳು ನಡೆಸ್ತಾನೆಂದಿದ್ದ. ನಾನು ರಾಜ್ಯವೇ ಮೆಚ್ಚುವಂತೆ ನನ್ನ ಇಲಾಖೆ ನಡೆಸಿದ್ದೆ. ಹೀಗಾಗಿ ನನ್ನ ವಿರುದ್ಧ ಅವರು ಷಡ್ಯಂತ್ರ ನಡೆಸಿದ್ದಾರೆ. ಆ ಮಹಾನಾಯಕ ನನ್ನ ವಿರುದ್ಧ ಷಡ್ಯಂತ್ರ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ.
ಇನ್ನು ಈ ವೇಳೆ ಮಾತನಾಡಿದ ರಮೇಶ್ ಜಾರಕಿಹೊಳಿ, ‘CD 100% ನಕಲಿ, ಈ CDಯಲ್ಲಿ ಸತ್ಯಾಂಶ ಇಲ್ಲ’ ಯುವತಿಗೆ ನೀಡಿರುವುದು 50 ಲಕ್ಷ ಅಲ್ಲ, 5 ಕೋಟಿ ರೂ.ವಿದೇಶದಲ್ಲಿ 2 ಫ್ಲ್ಯಾಟ್‌ಗಳನ್ನು ಕೊಡಿಸಿರುವ ಬಗ್ಗೆ ಮಾಹಿತಿ ಇದೆ ಎಂದಿದ್ದಾರೆ. ಬೇರೆ ಸೆಕ್ಸ್ ಹಗರಣಗಳಲ್ಲಿ 15-20 ಕೋಟಿ ಖರ್ಚು ಆದರೆ ನನ್ನನ್ನು ಮುಗಿಸಲು ನೂರಾರು ಕೋಟಿ ರೂ. ಖರ್ಚು ಮಾಡಿದ್ದಾರೆ. ರಾಜಕೀಯವಾಗಿ ಮುಗಿಸಲು ದೊಡ್ಡ ಷಡ್ಯಂತ್ರ ನಡೆದಿದೆ. 26 ಗಂಟೆ ಮೊದಲೇ CD ಬಿಡುಗಡೆ ಬಗ್ಗೆ ಹೈಕಮಾಂಡ್, ನನ್ನ ಹಿತೈಷಿಗಳು ಮಾಹಿತಿ ನೀಡಿದ್ದರು. ನಾಳೆ 5-6 ಗಂಟೆಗೆ CD ಬಿಡುಗಡೆ ಆಗುತ್ತೆಂದು ಹೇಳಿದ್ರು. ಭಯ ಪಡಬೇಡ, ಕಾನೂನು ಕ್ರಮಕೈಗೊಳ್ಳೋಣ ಎಂದಿದ್ರು. ಸಿಎಂ, ಬಸವರಾಜ ಬೊಮ್ಮಾಯಿ ಜತೆಯೂ ಚರ್ಚಿಸಿದ್ದೆ. ಸುಮಾರು ಒಂದು ಗಂಟೆ ಕಾಲ ಸಭೆಯಲ್ಲಿ ಭಾಗಿಯಾಗಿದ್ದೆ. ಸಿಎಂ ಎದುರು ಕುಳಿತಿದ್ದರು, ಬೊಮ್ಮಾಯಿ ಪಕ್ಕದಲ್ಲಿದ್ದರು. ನಾನು ಭಯಪಡಬೇಕಾದ ಅಗತ್ಯವಿರಲಿಲ್ಲ. ಏಕೆಂದರೆ ನಾನು ಯಾವುದೇ ತಪ್ಪು ಮಾಡಿರಲಿಲ್ಲ.
ನಾನು ಮತ್ತೆ ರಾಜಕೀಯಕ್ಕೆ ಬರುತ್ತೇನೋ ಇಲ್ವೋ ಗೊತ್ತಿಲ್ಲ. ನನಗೆ ರಾಜಕಾರಣದ ಮೇಲೆ ಆಸಕ್ತಿ ಇಲ್ಲ. ಅವರನ್ನು ಜೈಲಿಗೆ ಹಾಕುವವರೆಗೂ ಬಿಡುವುದಿಲ್ಲ. ಎಷ್ಟೇ ಖರ್ಚಾದ್ರೂ ಅವರನ್ನ ಜೈಲಿಗೆ ಹಾಕಿಸದೆ ಬಿಡುವುದಿಲ್ಲ. ಎಷ್ಟೇ ಪ್ರಭಾವಿಯಾಗಿದ್ದರೂ ಸರಿ, ಜೈಲಿಗೆ ಹಾಕಿಸುತ್ತೇನೆ ಎಂದು ಹೇಳಿದ್ರು.
ಇದನ್ನೂ ಓದಿ: Ramesh Jarkiholi Press Meet: ನಾನು ಅಪರಾಧಿಯಲ್ಲ, ಇಂತಹವು 10 ಬಂದರೂ ನಾನು ಎದುರಿಸಲು ಸಿದ್ಧ -ರಮೇಶ್ ಜಾರಕಿಹೊಳಿ
Published On - 11:13 am, Tue, 9 March 21