ಮಾನಸಿಕ ಕಿರುಕುಳಕ್ಕೆ ಬೇಸತ್ತು ಸಾಮೂಹಿಕ ವರ್ಗಾವಣೆ ಕೇಳಿದ ಶಿಕ್ಷಕರು: ಬಿಇಓ ಅಧಿಕಾರಿಯನ್ನು ಕೂಡಿ ಹಾಕಿ ಬೆದರಿಕೆ

| Updated By: ಗಂಗಾಧರ​ ಬ. ಸಾಬೋಜಿ

Updated on: Aug 07, 2024 | 3:39 PM

ಬಾಲರಾಜು ಕಿರುಕುಳಕ್ಕೆ ಬೇಸತ್ತ ಇಗ್ಗಲೂರು ಶಾಲೆಯ ಐವರು ಶಿಕ್ಷಕರು ವರ್ಗಾವಣೆ ಕೇಳಿದ್ದರು. ಆದರೆ ಇಬ್ಬರು ಶಿಕ್ಷಕರನ್ನು ಮಾತ್ರ ವರ್ಗಾವಣೆ ಮಾಡಲಾಗಿತ್ತು. ಶಿಕ್ಷಕರು ಮತ್ತು ವಿದ್ಯಾರ್ಥಿಗಳ ಸಮಸ್ಯೆ ಕೇಳಲು ಶಾಲೆಗೆ ಬಿಇಓ ತೆರಳಿದ್ದಾರೆ. ಈ ವೇಳೆ ಕ್ಷೇತ್ರ ಶಿಕ್ಷಣಾಧಿಕಾರಿ ವೆಂಕಟೇಶ್​ರನ್ನು ಕೂಡಿ ಹಾಕಿ ಇಗ್ಗಲೂರು ಸರ್ಕಾರಿ ಶಾಲೆ ಮಾಜಿ ಎಸ್​ಡಿಎಂಸಿ ಅಧ್ಯಕ್ಷ ಬಾಲರಾಜು ಬೆದರಿಕೆ ಹಾಕಿದ್ದಾರೆ.

ಮಾನಸಿಕ ಕಿರುಕುಳಕ್ಕೆ ಬೇಸತ್ತು ಸಾಮೂಹಿಕ ವರ್ಗಾವಣೆ ಕೇಳಿದ ಶಿಕ್ಷಕರು: ಬಿಇಓ ಅಧಿಕಾರಿಯನ್ನು ಕೂಡಿ ಹಾಕಿ ಬೆದರಿಕೆ
ಮಾನಸಿಕ ಕಿರುಕುಳಕ್ಕೆ ಬೇಸತ್ತು ಸಾಮೂಹಿಕ ವರ್ಗಾವಣೆ ಕೇಳಿದ ಶಿಕ್ಷಕರು: ಬಿಇಓ ಅಧಿಕಾರಿಯನ್ನು ಕೂಡಿ ಹಾಕಿ ಬೆದರಿಕೆ
Follow us on

ಆನೇಕಲ್, ಆಗಸ್ಟ್​ 07: ರಾಜ್ಯ ರಾಜಕೀಯದಲ್ಲಿ ಯಾದಗಿರಿ ಪಿಎಸ್​ಐ ಪರಶುರಾಮ ಅನುಮಾನಾಸ್ಪದ ಸಾವು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಇದರ ನಡುವೆ ಇದೀಗ ಸರ್ಕಾರಿ ಶಿಕ್ಷಕರು (teachers) ಮಾನಸಿಕ ಖಿನ್ನತೆಗೆ ಒಳಗಾಗುತ್ತಿದ್ದಾರೆ. ಶಾಲೆಗೆ ಭೇಟಿ ನೀಡಿದ ಕ್ಷೇತ್ರ ಶಿಕ್ಷಣಾಧಿಕಾರಿಗಳನ್ನು ಕೂಡಿ ಹಾಕಿ ದರ್ಪ ಮೆರೆದಿರುವಂತಹ ಘಟನೆ ನಿನ್ನೆ ಇಗ್ಗಲೂರು ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ನಡೆದಿದೆ. ಮಹಿಳಾ ಶಿಕ್ಷಕಿಯರ ಫೋಟೋ, ವಿಡಿಯೋ ಚಿತ್ರೀಕರಿಸಿ ಬೆದರಿಕೆ ಆರೋಪ ಕೇಳಿಬಂದಿದ್ದು, ಮಾಜಿ ಎಸ್​ಡಿಎಂಸಿ ಅಧ್ಯಕ್ಷ ಬಾಲರಾಜು ಕಿರುಕುಳಕ್ಕೆ ಬೇಸತ್ತ ಶಿಕ್ಷಕರು ಸಾಮೂಹಿಕ ವರ್ಗಾವಣೆ (transfer) ಕೇಳಿದ್ದಾರೆ.

ಬಾಲರಾಜು ಕಿರುಕುಳಕ್ಕೆ ಬೇಸತ್ತ ಇಗ್ಗಲೂರು ಶಾಲೆಯ ಐವರು ಶಿಕ್ಷಕರು ವರ್ಗಾವಣೆ ಕೇಳಿದ್ದರು. ಆದರೆ ಇಬ್ಬರು ಶಿಕ್ಷಕರನ್ನು ಮಾತ್ರ ವರ್ಗಾವಣೆ ಮಾಡಲಾಗಿತ್ತು. ಶಿಕ್ಷಕರು ಮತ್ತು ವಿದ್ಯಾರ್ಥಿಗಳ ಸಮಸ್ಯೆ ಕೇಳಲು ಶಾಲೆಗೆ ಬಿಇಓ ತೆರಳಿದ್ದಾರೆ. ಈ ವೇಳೆ ಕ್ಷೇತ್ರ ಶಿಕ್ಷಣಾಧಿಕಾರಿ ವೆಂಕಟೇಶ್​ರನ್ನು ಕೂಡಿ ಹಾಕಿ ಇಗ್ಗಲೂರು ಸರ್ಕಾರಿ ಶಾಲೆ ಮಾಜಿ ಎಸ್​ಡಿಎಂಸಿ ಅಧ್ಯಕ್ಷ ಬಾಲರಾಜು ಬೆದರಿಕೆ ಹಾಕಿದ್ದಾರೆ. ಕ್ಷೇತ್ರ ಶಿಕ್ಷಣಾಧಿಕಾರಿಗಳನ್ನ ಒಳಗೆ ಕೂಡಿ ಹಾಕುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆ ಆಗಿದೆ.

ಇದನ್ನೂ ಓದಿ: ಮಾವು ರಫ್ತಿನಲ್ಲಿ ಹೊಸ ದಾಖಲೆ ಬರೆದ ಬೆಂಗಳೂರು ಕೆಂಪೇಗೌಡ ಏರ್ಪೋರ್ಟ್​​

ಗೇಟ್ ಬೀಗ ಜಡಿದ ಬಾಲರಾಜು ಮಕ್ಕಳನ್ನ ಪ್ರಚೋದನೆ ಮಾಡಿ ಪ್ರತಿಭಟನೆ ಮಾಡಿಸಿದ್ದಾರೆ. ಮಕ್ಕಳ ಮನಸ್ಸಿಗೆ ಇಲ್ಲ ಸಲ್ಲದನ್ನ ವಿಚಾರ ತುಂಬಿ ಸರ್ವಾಧಿಕಾರಿಯಾಗಿ ಬಾಲರಾಜು ದರ್ಪ ತೋರಿದ್ದಾರೆ. ಮಕ್ಕಳಿಗೆ ಮಧ್ಯಾಹ್ನ ಊಟ ಕೂಡ ನೀಡದೆ ಬಿಸಿಲಿನಲ್ಲಿ ಪ್ರತಿಭಟನೆಗೆ ಪ್ರೇರೆಪಿಸಿದ್ದಾರೆ. ಅಷ್ಟೇ ಅಲ್ಲದೆ ಕರ್ತವ್ಯಕ್ಕೆ ಅಡ್ಡಿಪಡಿಸಿ ನಿಂದಿಸಿದ್ದಾರೆ. ಸಾಲದಕ್ಕೆ ಶಿಕ್ಷಕರಿಗೆ ಕರ್ತವ್ಯ ನಿರ್ವಹಿಸದಂತೆ ಕಿರುಕುಳ ನೀಡಿದ್ದಾರೆ.

ಇಲ್ಲಿಯವರೆಗೆ ಸಮವಸ್ತ್ರ ವಿತರಣೆ, ಮೊಟ್ಟೆ ವಿತರಣೆಗೂ ಅಡ್ಡಿ ಮಾಡಲಾಗಿದ್ದು, ಮಕ್ಕಳ ಮುಂದೆ ಶಿಕ್ಷಕರನ್ನು ಅವ್ಯಾಚ ಶಬ್ದಗಳಿಂದ ನಿಂದಿಸಿದ್ದಾರೆ. ಶಿಕ್ಷಕರಿಗೆ ಗೌರವ ನೀಡದಂತೆ ಮಕ್ಕಳಿಗೆ ಸೂಚಿಸಿದ್ದಾರೆ.  ತಾನು ಹೇಳಿದಂತೆ ಕೇಳಬೇಕು ಎಂದು ಮಕ್ಕಳನ್ನು ಮನಬಂದಂತೆ ಥಳಿಸಿದ್ದಾರೆ. ಶಿಕ್ಷಕರನ್ನ ಕ್ಯಾನ್ಸರ್ ಗಡ್ಡೆಗಳು ಎಂದು ಮಕ್ಕಳಿಗೆ ಹೇಳಿದ್ದಾರೆ.

ಇದನ್ನೂ ಓದಿ: ಕೋಟಿ ಕೋಟಿ ಬೆಲೆಬಾಳುವ ಜಾಗದಲ್ಲಿ ವೀರಶೈವರಿಗೆ ‌ರುದ್ರಭೂಮಿ: ನಾಮ ಫಲಕ ತೆರವುಗೊಳಿಸಿದ ಬಿಡಿಎ

ಈ ಬಗ್ಗೆ ಬಿಇಓಗೆ ಶಿಕ್ಷಕರು ದೂರು‌ ನೀಡಿದ್ದಾರೆ. ಹಿರಿಯ ಅಧಿಕಾರಿಗಳಿಗೆ ಬಾಲರಾಜು ವಿರುದ್ಧ ಕ್ರಮಕ್ಕೆ ದೂರು ನೀಡಲಾಗಿದ್ದು, ಸದ್ಯ ಇಗ್ಗಲೂರು ಶಾಲಾ ಶಿಕ್ಷಕರು ಭಯದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಸುದ್ದಿ ಮಾಡಲು ಹೋದ ಮಾಧ್ಯಮದವರ ಮೇಲೂ ಬಾಲರಾಜು ಮತ್ತು ಕುಟುಂಬಸ್ಥರಿಂದ ಆವಾಜ್​ ಹಾಕಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.