ಕೋಟಿ ಕೋಟಿ ಬೆಲೆಬಾಳುವ ಜಾಗದಲ್ಲಿ ವೀರಶೈವರಿಗೆ ‌ರುದ್ರಭೂಮಿ: ನಾಮ ಫಲಕ ತೆರವುಗೊಳಿಸಿದ ಬಿಡಿಎ

ಬೆಂಗಳೂರು ಉತ್ತರ ತಾಲೂಕಿನ ಸೋಮಶೆಟ್ಟಿಹಳ್ಳಿಯ ಸರ್ವೆ ನಂಬರ್‌ 19ರಲ್ಲಿ 3 ಎಕರೆ ಜಾಗದಲ್ಲಿ ಅಳವಡಿಸಿದ್ದ ರುದ್ರಭೂಮಿ ನಾಮಫಲಕವನ್ನು ಇಂದು ಬಿಡಿಎ ತೆರವುಗೊಳಿಸಿದೆ. ಟಿವಿ9ನಲ್ಲಿ ವರದಿ ಬೆನ್ನಲ್ಲೇ ರುದ್ರಭೂಮಿ ನಾಮಫಲಕವನ್ನು ಬಿಡಿಎ ಇಂಜಿನಿಯರ್‌ಗಳು ತೆರವುಗೊಳಿಸಿದ್ದಾರೆ. ಅನಧಿಕೃತವಾಗಿ ಸ್ಮಶಾನ ನಿರ್ಮಾಣವೆಂದು ಭೂಮಾಲೀಕರಿಂದ ಬಿಡಿಎ ಅಧಿಕಾರಿಗಳ ವಿರುದ್ಧ ಪ್ರತಿಭಟನೆ ಮಾಡಲಾಗಿದೆ.

ಕೋಟಿ ಕೋಟಿ ಬೆಲೆಬಾಳುವ ಜಾಗದಲ್ಲಿ ವೀರಶೈವರಿಗೆ ‌ರುದ್ರಭೂಮಿ: ನಾಮ ಫಲಕ ತೆರವುಗೊಳಿಸಿದ ಬಿಡಿಎ
ಕೋಟಿ ಕೋಟಿ ಬೆಲೆಬಾಳುವ ಜಾಗದಲ್ಲಿ ವೀರಶೈವರಿಗೆ ‌ರುದ್ರಭೂಮಿ: ನಾಮ ಫಲಕ ತೆರವುಗೊಳಿಸಿದ ಬಿಡಿಎ
Follow us
ಬಿ ಮೂರ್ತಿ, ನೆಲಮಂಗಲ
| Updated By: ಗಂಗಾಧರ​ ಬ. ಸಾಬೋಜಿ

Updated on:Jul 31, 2024 | 9:10 PM

ನೆಲಮಂಗಲ, ಜುಲೈ 31: ಕೋಟಿ ಕೋಟಿ ರೂ. ಬೆಲೆಬಾಳುವ ಜಾಗದಲ್ಲಿ ವೀರಶೈವರಿಗೆ ‌ರುದ್ರಭೂಮಿ (Rudrabhoomi) ವಿಚಾರವಾಗಿ ಟಿವಿ9ನಲ್ಲಿ ವರದಿ ಬೆನ್ನಲ್ಲೇ ರುದ್ರಭೂಮಿ ನಾಮಫಲಕವನ್ನು ಬಿಡಿಎ (BDA) ತೆರವುಗೊಳಿಸಿದೆ. ಬೆಂಗಳೂರು ಉತ್ತರ ತಾಲೂಕಿನ ಸೋಮಶೆಟ್ಟಿಹಳ್ಳಿಯಲ್ಲಿ ಕೇವಲ ಒಂದು ಸಮುದಾಯಕ್ಕೆ ಕೋಟ್ಯಂತರ ಮೌಲ್ಯದ ಜಾಗದಲ್ಲಿ ಹಾಕಿದ್ದ ರುದ್ರಭೂಮಿ ಫಲಕವನ್ನು ಬಿಡಿಎ ಇಂಜಿನಿಯರ್‌ಗಳು ತೆರವು ಮಾಡಿದ್ದಾರೆ.

ಸೋಮಶೆಟ್ಟಿಹಳ್ಳಿಯ ಶಿವರಾಮ ಕಾರಂತ ಬಡಾವಣೆಯಲ್ಲಿನ ಮೂರು ಎಕರೆ ಜಾಗದಲ್ಲಿ ಅನಧಿಕೃತವಾಗಿ ವೀರಶೈವ ರುದ್ರಭೂಮಿ ನಿರ್ಮಾಣಕ್ಕೆ ಮುಂದಾಗಿದ್ದ ಟ್ರಸ್ಟ್ ಗೆ ಇಂದು ಬಿಡಿಎ ಅಧಿಕಾರಿಗಳು ಬಿಗ್ ಶಾಕ್ ನೀಡಿದ್ದಾರೆ.. ಬಿಡಿಎ ಈ ಹಿಂದೆ ಶಿವರಾಮಕಾರಂತ ಬಡವಾಣೆಗೆ ನೋಟಿಫಿಕೇಷನ್ ಮಾಡಿತ್ತು. ಆದರೆ ಭೂಮಿಗೆ ಈವರೆಗೂ ಪರಿಹಾರ ನೀಡಿಲ್ಲಾ. ರೈತರಿಗೆ ಹಾಗೂ ಬಿಡಿಎಗೆ ದೋಖಾ ಮಾಡಲು ಟ್ರಸ್ಟ್ ಮುಂದಾಗಿತ್ತು‌ ಎನ್ನಲಾಗಿದೆ.. ಹೀಗಾಗಿ ಇಂದು ಭೂ‌ ಮಾಲೀಕರ ಪ್ರತಿಭಟನೆಯ ಹಿನ್ನಲೆಯಲ್ಲಿ ಬಿಡಿಎ ಅಧಿಕಾರಿಗಳು ಭಾನುವಾರ ಟ್ರಸ್ಟ್ ಹಾಕಿದ್ದ ಬೋರ್ಡ್ ನೆಲಸಮ ಮಾಡಿದ್ದಾರೆ.

ಇದನ್ನೂ ಓದಿ: ಯಡಿಯೂರಪ್ಪ ಮಂಜೂರು ಮಾಡಿದ್ದ ಜಾಗ 8 ವರ್ಷಗಳ ಬಳಿಕ ಪತ್ತೆ: ರುದ್ರಭೂಮಿಗೆ ಈಗ ಗುದ್ದಲಿ ಪೂಜೆ

ಕೋಟಿ ಕೋಟಿ ಬೆಲೆ ಬಾಳುವ ಭೂಮಿಯನ್ನು ಜನರ ವಾಸಕ್ಕೆ ಅಂತಾ ನೋಟಿಫೈ ಮಾಡಲಾಗಿದೆ. ಆದರೆ ಜನರಿಗೆ ಜಾಗ ನೀಡುವ ಬದಲು 2008 ರಲ್ಲಿ ಅಂದಿನ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ಮುಖಾಂತರ ಅವರ ಸಂಬಂಧಿ ಮಾಜಿ ಬೆಂಗಳೂರು ಜಿಲ್ಲಾ ಪಂಚಾಯತ ಅಧ್ಯಕ್ಷ ಜಿ.ಮರಿಸ್ವಾಮಿ ಅವರು ಪ್ರಭಾವ ಬಳಸಿ ಈ ಜಾಗವನ್ನು ಒಂದು ಸಮುದಾಯಕ್ಕೆ ಮಾತ್ರ ಮೀಸಲಿಟ್ಟಿರುವುದು ಆಕ್ರೋಶಕ್ಕೆ ಕಾರಣವಾಗಿದೆ.

ಇದನ್ನೂ ಓದಿ: ಕೇರಳ ಗುಡ್ಡ ಕುಸಿತ ದುರಂತದಲ್ಲಿ ಮೃತಪಟ್ಟ ಕನ್ನಡಿಗರ ಕುಟುಂಬಕ್ಕೆ ಪರಿಹಾರ ಘೋಷಿಸಿದ ಸಿದ್ದರಾಮಯ್ಯ

ಎಂಟು ವರ್ಷಗಳ ಬಳಿಕ ರುದ್ರಭೂಮಿಗೆ ಜಾಗ ಪತ್ತೆ ಮಾಡಿ ವೀರಶೈವ ರುದ್ರಭೂಮಿ ಅಭಿವೃದ್ಧಿ ಟ್ರಸ್ಟ್‌ನಿಂದ ಗುದ್ದಲಿ ಪೂಜೆ ಮಾಡಲಾಗಿತ್ತು. ಸದ್ಯಕ್ಕೆ ಬಿಡಿಎ ಅಧಿಕಾರಿಗಳು ಅನಧಿಕೃತ ತೆರವು ಮಾಡಿದ್ದಾರೆ. ಇತ್ತ ರೈತರ ನಮಗೆ ಪರಿಹಾರ ಸಿಕ್ಕಿಲ್ಲಾ. ಭೂಮಿಯನ್ನು ನೀಡೊದಿಲ್ಲಾ ಅಂತಾ ಪಟ್ಟು ಹಿಡಿದ್ದಿದ್ದಾರೆ. ಈ ಮಧ್ಯೆ ಟ್ರಸ್ಟ್ ನಾವು ಮುಂದಿನ ದಾರಿ ಹಿಡಿತ್ತಿವೀ ಅಂತಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 5:56 pm, Wed, 31 July 24

ಹೆಚ್ಎಂಪಿವಿ 2001ರಿಂದ ಭಾರತದಲ್ಲಿದೆ, ನಿಶ್ಶಕ್ತರು ಇದರ ಟಾರ್ಗೆಟ್: ದಿನೇಶ್
ಹೆಚ್ಎಂಪಿವಿ 2001ರಿಂದ ಭಾರತದಲ್ಲಿದೆ, ನಿಶ್ಶಕ್ತರು ಇದರ ಟಾರ್ಗೆಟ್: ದಿನೇಶ್
ಹೆಚ್ಎಂಪಿ ವೈರಸ್ ಯಾವ ವೇರಿಯಂಟ್ ಅಂತ ನಾನು ಹೇಳಲಾಗಲ್ಲ: ಅಶ್ವಥ್ ನಾರಾಯಣ
ಹೆಚ್ಎಂಪಿ ವೈರಸ್ ಯಾವ ವೇರಿಯಂಟ್ ಅಂತ ನಾನು ಹೇಳಲಾಗಲ್ಲ: ಅಶ್ವಥ್ ನಾರಾಯಣ
ಸಂತೋಷ್ ಲಾಡ್ ತಮ್ಮ ಪಟಾಲಂನೊಂದಿಗೆ ಅಸ್ಪತ್ರೆಗೆ ಬಂದಿದ್ದು ಸರಿಯಲ್ಲ
ಸಂತೋಷ್ ಲಾಡ್ ತಮ್ಮ ಪಟಾಲಂನೊಂದಿಗೆ ಅಸ್ಪತ್ರೆಗೆ ಬಂದಿದ್ದು ಸರಿಯಲ್ಲ
ಎನ್ಕೌಂಟರ್ ನಡೆದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ: ನಕ್ಸಲ್ ಸುಂದರಿಯ ಸಂಬಂಧಿ
ಎನ್ಕೌಂಟರ್ ನಡೆದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ: ನಕ್ಸಲ್ ಸುಂದರಿಯ ಸಂಬಂಧಿ
ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯಲ್ಲಿ ಕುಳಿತ ಐವರ ಮೇಲೆ ಹರಿದ ಕಾರು
ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯಲ್ಲಿ ಕುಳಿತ ಐವರ ಮೇಲೆ ಹರಿದ ಕಾರು
ಆನೇಕಲ್: ಸಿಲಿಂಡರ್ ಸ್ಫೋಟ ತೀವ್ರತೆಗೆ ಮನೆ ಗೋಡೆ ಕಿಟಕಿ ಛಿದ್ರ, ಇಬ್ಬಗೆ ಗಾಯ
ಆನೇಕಲ್: ಸಿಲಿಂಡರ್ ಸ್ಫೋಟ ತೀವ್ರತೆಗೆ ಮನೆ ಗೋಡೆ ಕಿಟಕಿ ಛಿದ್ರ, ಇಬ್ಬಗೆ ಗಾಯ
ನಾ ಡಿಸೋಜ ಅಂತಿಮ ದರ್ಶನ, ಅಂತ್ಯಕ್ರಿಯೆ ಬಗ್ಗೆ ಪುತ್ರ ನವೀನ್ ಮಾಹಿತಿ
ನಾ ಡಿಸೋಜ ಅಂತಿಮ ದರ್ಶನ, ಅಂತ್ಯಕ್ರಿಯೆ ಬಗ್ಗೆ ಪುತ್ರ ನವೀನ್ ಮಾಹಿತಿ
ನಡುರಸ್ತೆಯಲ್ಲಿ ವಿದ್ಯಾರ್ಥಿನಿಯ ಕತ್ತು ಹಿಸುಕಿ ಕೊಲೆ ಮಾಡಲು ಯತ್ನಿಸಿದ ಯುವಕ
ನಡುರಸ್ತೆಯಲ್ಲಿ ವಿದ್ಯಾರ್ಥಿನಿಯ ಕತ್ತು ಹಿಸುಕಿ ಕೊಲೆ ಮಾಡಲು ಯತ್ನಿಸಿದ ಯುವಕ
ಕುದುರೆಮುಖ ಅರಣ್ಯದಲ್ಲಿ ನಕ್ಸಲ್​ ನಾಯಕಿ ಸುಂದರಿ ವಾಸ
ಕುದುರೆಮುಖ ಅರಣ್ಯದಲ್ಲಿ ನಕ್ಸಲ್​ ನಾಯಕಿ ಸುಂದರಿ ವಾಸ
ಆಸ್ಟ್ರೇಲಿಯಾದಲ್ಲಿ RCB ದಾಂಡಿಗನ ಸಿಡಿಲಬ್ಬರ: ಸ್ಪೋಟಕ ಅರ್ಧಶತಕ
ಆಸ್ಟ್ರೇಲಿಯಾದಲ್ಲಿ RCB ದಾಂಡಿಗನ ಸಿಡಿಲಬ್ಬರ: ಸ್ಪೋಟಕ ಅರ್ಧಶತಕ