Loading video

ಕೊಲೆಗೆ ಕೊಲೆ ಎನ್ನುವ ಪ್ರತೀಕಾರದ ಮನೋಭಾವನೆ ಸರಿಯಲ್ಲ, ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ: ಆರ್ ಅಶೋಕ

Updated on: May 28, 2025 | 2:29 PM

ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಸರ್ಕಾರ ಯಾರನ್ನೋ ಓಲೈಕೆ ಮಾಡುವ ಭರದಲ್ಲಿ ತಾರತಮ್ಮವೆಸಗಿದರೆ ಅನಾಹುತಗಳು ನಡೆಯುತ್ತವೆ, ಈ ಹಿನ್ನೆಲೆಯಲ್ಲಿ ಸರ್ಕಾರ ಜನಪರವಾಗಿದ್ದುಕೊಂಡು ನಿಷ್ಪಕ್ಷಪಾತವಾಗಿ ಆಡಳಿತ ನೀಡಿದರೆ ಎಲ್ಲವೂ ಸುಸೂತ್ರವಾಗಿ ನಡೆಯುತ್ತದೆ ಎಂದ ಅಶೋಕ ಬೆಂಗಳೂರಿನ ಹೆಚ್​ಎಎಲ್ ಸಂಸ್ಥೆಯನ್ನು ಬೇರೆ ರಾಜ್ಯಕ್ಕೆ ಬಿಟ್ಟುಕೊಡುವ ಪ್ರಶ್ನೆಯೇ ಉದ್ಭವಿಸಲ್ಲ ಎಂದರು.

ಬೆಂಗಳೂರು, ಮೇ 28: ನಗರದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಅಬ್ದುಲ್ ರೆಹಮಾನ್ ಕೊಲೆ ಬಗ್ಗೆ ಮಾತಾಡಿದ ವಿರೋಧ ಪಕ್ಷದ ನಾಯಕ ಆರ್ ಅಶೋಕ, ಗಲಭೆ ಪೀಡಿತ ಪ್ರದೇಶಗಳಲ್ಲಿ ಸೆಕ್ಷನ್ 144 ಜಾರಿಗೊಳಿಸುವ ಮೂಲಕ ಕಾನೂನು ಸುವ್ಯವಸ್ಥೆಯನ್ನು (Law and Order) ಕಾಯ್ದುಕೊಳ್ಳಬಹುದು ಅಂತ ಈ ಸರ್ಕಾರ ಭಾವಿಸಿರುವುದರಿಂದ ಕರಾವಳಿ ಭಾಗದಲ್ಲಿ ಹತ್ಯೆಗಳು ನಡೆಯುತ್ತಿವೆ, ಒಂದು ನಿರ್ದಿಷ್ಟ ಸಮುದಾಯವನ್ನು ಓಲೈಕೆ ಮಾಡುತ್ತಿರುವುದರಿಂದ ಲವ್ ಜಿಹಾದ್ ನಡೆಯುತ್ತಿದೆ, ಪಾಕಿಸ್ತಾನ್ ಜಿಂದಾಬಾದ್ ಎಂಬ ಘೋಷಣೆಗಳು ಕೇಳಿಬರುತ್ತಿವೆ, ಮೊನ್ನೆ ಹಿಂದೂ ಕಾರ್ಯಕರ್ತನೊಬ್ಬನ ಹತ್ಯೆ ನಡೆದಾಗ ಬಿಜೆಪಿ ಪ್ರತಿಭಟನೆ ನಡೆಸಿತು, ಆದರೆ ಕೊಲೆಗೆ ಕೊಲೆ ಎಂಬ ಪ್ರತೀಕಾರದ ಮನೋಭಾವ ಸರಿಯಲ್ಲ ಎಂದು ಹೇಳಿದರು.

ಇದನ್ನೂ ಓದಿ:  ಮುನಿರತ್ನ ವಿರುದ್ಧ ಕ್ರಮ ಜರುಗಿಸದ ಅಶೋಕ ಮತ್ತು ವಿಜಯೇಂದ್ರ ಅಸಮರ್ಥ ನಾಯಕರು: ಡಿಕೆ ಸುರೇಶ್

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ