ನಾಳೆ ರಾಜ್ಯಸಭೆ ಚುನಾವಣೆ: ಮತಗಳು ಕೊರತೆಯಾಗದಂತೆ ನೋಡಿಕೊಳ್ಳಲು ಕಾಂಗ್ರೆಸ್ ಭರ್ಜರಿ ಪ್ಲ್ಯಾನ್; ಹೇಗಿದೆ ಗೊತ್ತಾ?
ನಾಳೆ ರಾಜ್ಯಸಭೆ ಚುನಾವಣೆ ನಡೆಯಲಿದೆ. ನಾಲ್ಕನೇ ಸ್ಥಾನಕ್ಕೆ ಕರ್ನಾಟಕದಿಂದ ಎನ್ಡಿಎ ಅಭ್ಯರ್ಥಿಯನ್ನಾಗಿ ಜೆಡಿಎಸ್‌ನ ಕುಪೇಂದ್ರ ರೆಡ್ಡಿ ಅವರನ್ನು ಕಣಕ್ಕಿಳಿಸಲಾಗಿದ್ದು, ಅಡ್ಡಮತದಾನ ಹಾಗೂ ಪಕ್ಷೇತರ ಶಾಸಕರ ಮತಗಳ ಮೇಲಿನ ಕಣ್ಣಿಟ್ಟಿದೆ. ಇನ್ನೊಂದೆಡೆ, ಕಾಂಗ್ರೆಸ್ ಮೂರೂ ಸ್ಥಾನಗಳನ್ನು ಗೆದ್ದುಕೊಳ್ಳಲು ಭರ್ಜರಿ ತಯಾರಿ ನಡೆಸುತ್ತಿದೆ. ಅಲ್ಲದೆ, ಮತಗಳು ಕೊರತೆಯಾಗದಂತೆ ನೋಡಿಕೊಳ್ಳಲು ಪ್ಲ್ಯಾನ್ ಮಾಡಿಕೊಂಡಿದೆ.
ಬೆಂಗಳೂರು, ಫೆ.26: ನಾಳೆ ರಾಜ್ಯಸಭೆ ಚುನಾವಣೆ (Rajya Sabha Elections) ನಡೆಯಲಿದೆ. ನಾಲ್ಕನೇ ಸ್ಥಾನಕ್ಕೆ ಕರ್ನಾಟಕದಿಂದ ಎನ್ಡಿಎ (NDA) ಅಭ್ಯರ್ಥಿಯನ್ನಾಗಿ ಜೆಡಿಎಸ್‌ನ ಕುಪೇಂದ್ರ ರೆಡ್ಡಿ ಅವರನ್ನು ಕಣಕ್ಕಿಳಿಸಲಾಗಿದ್ದು, ಅಡ್ಡಮತದಾನ ಹಾಗೂ ಪಕ್ಷೇತರ ಶಾಸಕರ ಮತಗಳ ಮೇಲಿನ ಕಣ್ಣಿಟ್ಟಿದೆ. ಇನ್ನೊಂದೆಡೆ, ಕಾಂಗ್ರೆಸ್ (Congress) ಮೂರೂ ಸ್ಥಾನಗಳನ್ನು ಗೆದ್ದುಕೊಳ್ಳಲು ಭರ್ಜರಿ ತಯಾರಿ ನಡೆಸುತ್ತಿದೆ. ಅಲ್ಲದೆ, ಮತಗಳು ಕೊರತೆಯಾಗದಂತೆ ನೋಡಿಕೊಳ್ಳಲು ಪ್ಲ್ಯಾನ್ ಮಾಡಿಕೊಂಡಿದೆ.
ಕಾಂಗ್ರೆಸ್ ಈಗಾಗಲೇ ಮತಗಳನ್ನು ಲೆಕ್ಕಾಚಾರ ಹಾಕಿಕೊಂಡಿದೆ. ಒಟ್ಟು 135 ಕಾಂಗ್ರೆಸ್ ಶಾಸಕರ ಪೈಕಿ ಸುರಪುರದ ಶಾಸಕ ರಾಜಾವೆಂಕಟಪ್ಪ ಅವರ ನಿಧನದಿಂದ ಒಂದು ಮತ ಕಡಿಮೆಯಾಗಿದೆ. ಇನ್ನುಳಿದಂತೆ, ಮೂವರು ಪಕ್ಷೇತರ ಅಭ್ಯರ್ಥಿಗಳಿದ್ದು, ಕೆಆರ್ಪಿಪಿ ಶಾಸಕ ಗಾಲಿ ಜನಾರ್ದನರೆಡ್ಡಿ ಅವರನ್ನು ಮಾತುಕತೆ ನಡೆಸಿ ವಿಶ್ವಾಸಕ್ಕೆ ಪಡೆದುಕೊಳ್ಳುವ ಪ್ರಯತ್ನ ಮಾಡಲಾಗಿದೆ.
ಇದನ್ನೂ ಓದಿ: ರಾಜ್ಯಸಭೆ ಚುನಾವಣೆ: ಎನ್ಡಿಎಗೆ ಮತ್ತೊಂದು ಶಾಕ್, ಜೆಡಿಎಸ್ ಪ್ಲ್ಯಾನ್ ಠುಸ್!
ಒಟ್ಟಾರೆಯಾಗಿ ಕಾಂಗ್ರೆಸ್ ಬಳಿ 134+4= 138 ಶಾಸಕರಿದ್ದಾರೆ. ನಾಲ್ಕು ಸ್ಥಾನಗಳಿಗೆ ನಡೆಯುವ ರಾಜ್ಯಸಭೆ ಚುನಾವಣೆಯಲ್ಲಿ ಒಬ್ಬ ಅಭ್ಯರ್ಥಿ ಗೆಲುವಿಗೆ ಕನಿಷ್ಠ 45 ಮತಗಳ ಬೇಕು. ಈ ಪೈಕಿ ಒಂದು ಸ್ಥಾನ ಬಿಜೆಪಿಗೆ ಫಿಕ್ಸ್ ಆಗಿದೆ. ಇನ್ನುಳಿದ ಮೂರು ಸ್ಥಾನಗಳಲ್ಲಿ ಎರಡು ಸ್ಥಾನಗಳು ಕಾಂಗ್ರೆಸ್ ಗೆಲುವು ಖಚಿತವಾಗಿದೆ. ಮತ್ತೊಂದು ಸ್ಥಾನಕ್ಕೆ ಎನ್ಡಿಎ ಅಭ್ಯರ್ಥಿಯಾಗಿ ಜೆಡಿಎಸ್‌ನ ಕುಪೇಂದ್ರ ರೆಡ್ಡಿ ಕಣದಲ್ಲಿದ್ದಾರೆ. ಹೀಗಾಗಿ ಕಾಂಗ್ರೆಸ್ ಅಡ್ಡಮತದಾನದ ಭೀತಿ ಎದುರಿಸುತ್ತಿದೆ.
ಅದಾಗ್ಯೂ, ಕಾಂಗ್ರೆಸ್ ತನ್ನ ಮೂರು ಅಭ್ಯರ್ಥಿಗಳಿಗೆ 46+46+46 (138) ಮತಗಳನ್ನು ಹಂಚಿಕೆ ಮಾಡಲಾಗಿದೆ. ಮೊದಲೇ ಹೇಳಿರುವಂತೆ ಒಬ್ಬ ಅಭ್ಯರ್ಥಿ ಗೆಲುವಿಗೆ ಕನಿಷ್ಠ 45 ಮತಗಳು ಅವಶ್ಯಕ. ಹೀಗಾಗಿ ತನ್ನ ಅಭ್ಯರ್ಥಿಗಳಿಗೆ ಯಾವುದೇ ಮತಗಳ ವ್ಯತ್ಯಾಸವಾಗದಂತೆ ಒಬ್ಬೊಬ್ಬ ಅಭ್ಯರ್ಥಿಗೆ 46 ರಂತೆ ಮತಗಳನ್ನು ವಿಭಜಿಸಿದೆ. ಯಾವ ಅಭ್ಯರ್ಥಿಗೆ ಯಾರು ಮತಹಾಕಬೇಕೆಂದು ನಾಯಕರು ನಿರ್ಧರಿಸಲಿದ್ದಾರೆ.
ಬಿಜೆಪಿ, ಜೆಡಿಎಸ್ ಶಾಸಕರಿಗೆ ಒತ್ತಡ
ತನ್ನ ಅಭ್ಯರ್ಥಿಗಳಿಗೆ ಸಮಾನವಾಗಿ ಮತ ವಿಭಜನೆ ಮಾಡಿರುವ ಕಾಂಗ್ರೆಸ್ಗೆ ಅಡ್ಡಮತದಾನದ ಭೀತಿ ಇರುವುದರಿಂದ ಬಿಜೆಪಿ, ಜೆಡಿಎಸ್‌ಗೆ ಮತಗಳ ಕೊರತೆ ಆಗುವಂತೆ ನೋಡಿಕೊಳ್ಳಲೂ ಪ್ಲ್ಯಾನ್ ಮಾಡಿಕೊಂಡಿದೆ. ಬಿಜೆಪಿ, ಜೆಡಿಎಸ್‌ನ ಕೆಲ ಶಾಸಕರು ಗೈರಾಗುವಂತೆ ಕಾಂಗ್ರೆಸ್ ಒತ್ತಡ ಹೇರುತ್ತಿದೆ ಎನ್ನಲಾಗುತ್ತಿದೆ. ಆ ಮೂಲಕ ಮತ ಕೊರತೆ ಉಂಟಾಗುವಂತೆ ನೋಡಿಕೊಳ್ಳುತ್ತಿದೆ.
ಜನಾರ್ದನರೆಡ್ಡಿ ಮೇಲೆ ಹಿಡಿತ
ಜೆಡಿಎಸ್‌ನ 2ನೇ ಅಭ್ಯರ್ಥಿಗೆ ಮತ ಕೊರತೆ ಉಂಟುಮಾಡಲು ಪ್ಲ್ಯಾನ್ ಮಾಡಿಕೊಂಡಿದ್ದು, ಡಿಸಿಎಂ ಡಿಕೆ ಶಿವಕುಮಾರ್ ಅವರು ಕೆಆರ್ಪಿಪಿ ಪಕ್ಷದ ಗಾಲಿ ಜನಾರ್ದನರೆಡ್ಡಿಯನ್ನೂ ತಮ್ಮ ತೆಕ್ಕೆಯಲ್ಲೇ ಲಾಕ್ ಮಾಡಿಕೊಂಡಿದ್ದಾರೆ. ಅಲ್ಲದೆ, ಜನಾರ್ದನರೆಡ್ಡಿ ಪಕ್ಷದ ಪಾರ್ಟಿ ಏಜೆಂಟ್ ಆಗಿ ಡಿಕೆ ಶಿವಕುಮಾರ್ ಅವರ ಅತ್ಯಾಪ್ತರೊಬ್ಬರನ್ನು ನೇಮಕ ಮಾಡಲಾಗಿದೆ. ರೆಡ್ಡಿ ತನ್ನ ಮತವನ್ನು ಪಾರ್ಟಿ ಏಜೆಂಟ್‌ಗೆ ತೋರಿಸಿ ಚಲಾಯಿಸಬೇಕು. ಆ ಮೂಲಕ ಒತ್ತಡ ಸೃಷ್ಟಿಸಿ ಜನಾರ್ದನರೆಡ್ಡಿ ಅವರನ್ನು ಹಿಡಿದಿಟ್ಟುಕೊಳ್ಳಲು ಡಿಕೆ ಶಿವಕುಮಾರ್ ಪ್ಲ್ಯಾನ್ ಮಾಡಿಕೊಂಡಿದ್ದಾರೆ.
ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:35 pm, Mon, 26 February 24