ತುಮಕೂರಿನಲ್ಲಿ ಗಣೇಶ ವಿಸರ್ಜನೆ ವೇಳೆ ದುರ್ಘಟನೆ: ತಂದೆ, ಮಗ ಸೇರಿ ಮೂವರು ಸಾವು

| Updated By: ಗಂಗಾಧರ​ ಬ. ಸಾಬೋಜಿ

Updated on: Sep 15, 2024 | 5:01 PM

ತುಮಕೂರು ಜಿಲ್ಲೆ ತುರುವೇಕೆರೆ ತಾಲೂಕಿನ ಮಾರಸಂದ್ರ ಗ್ರಾಮದ ಸಮೀಪದ ರಂಗನಹಟ್ಟಿ ಕೆರೆಯಲ್ಲಿ ಗಣೇಶ ವಿಸರ್ಜನೆ ವೇಳೆ ತಂದೆ, ಮಗ ಸೇರಿ ಮೂವರು ವ್ಯಕ್ತಿಗಳು ಜಲಸಮಾಧಿ ಆಗಿರುವಂತಹ ದುರ್ಘಟನೆ ನಡೆದಿದೆ. ಶವಗಳಿಗಾಗಿ ಅಗ್ನಿಶಾಮಕ ದಳದ ಸಿಬ್ಬಂದಿ ಮತ್ತು ಪೊಲೀಸರು ಶೋಧ ನಡೆಸಿದ್ದು, ಸ್ಥಳಕ್ಕೆ ದಂಡಿನಶಿವರ ಠಾಣೆ ಪೊಲೀಸರು ಭೇಟಿ ಮಾಡಿದ್ದಾರೆ.

ತುಮಕೂರಿನಲ್ಲಿ ಗಣೇಶ ವಿಸರ್ಜನೆ ವೇಳೆ ದುರ್ಘಟನೆ: ತಂದೆ, ಮಗ ಸೇರಿ ಮೂವರು ಸಾವು
ತುಮಕೂರಿನಲ್ಲಿ ಗಣೇಶ ವಿಸರ್ಜನೆ ವೇಳೆ ದುರ್ಘಟನೆ: ತಂದೆ, ಮಗ ಸೇರಿ ಮೂವರು ಸಾವು
Follow us on

ತುಮಕೂರು, ಸೆಪ್ಟೆಂಬರ್​ 15: ಗಣೇಶ ವಿಸರ್ಜನೆ ವೇಳೆ ತಂದೆ, ಮಗ ಸೇರಿ ಮೂವರು ಸಾವನ್ನಪ್ಪಿರುವಂತಹ (death) ಘಟನೆ ಜಿಲ್ಲೆಯ ತುರುವೇಕೆರೆ ತಾಲೂಕಿನ ಮಾರಸಂದ್ರ ಗ್ರಾಮ ಸಮೀಪದ ರಂಗನಹಟ್ಟಿ ಕೆರೆಯಲ್ಲಿ ದುರ್ಘಟನೆ ಸಂಭವಿಸಿದೆ. ತಂದೆ ರೇವಣ್ಣ(46), ಪುತ್ರ ಶರತ್(26), ದಯಾನಂದ ಮೃತರು. ಇಂದು ಗ್ರಾಮದಲ್ಲಿ ಇಟ್ಟಿದ್ದ ಗಣೇಶ ಮೂರ್ತಿ ವಿಸರ್ಜನೆಗೆ ತೆರಳಿದ್ದ ವೇಳೆ ಘಟನೆ ಸಂಭವಿಸಿದೆ.

ಶವಗಳಿಗಾಗಿ ಅಗ್ನಿಶಾಮಕ ದಳದ ಸಿಬ್ಬಂದಿ ಮತ್ತು ಪೊಲೀಸರು ಶೋಧ ನಡೆಸಿದ್ದು, ಸ್ಥಳಕ್ಕೆ ದಂಡಿನಶಿವರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.

ಮುನೇಶ್ವರಸ್ವಾಮಿ ದೇಗುಲಕ್ಕೆ ಟೆಂಪೋ ಡಿಕ್ಕಿ, ಓರ್ವ ದುರ್ಮರಣ

ಕೋಲಾರ: ಜಿಲ್ಲೆಯ ಮಾಲೂರು ತಾಲೂಕಿನ ಮಾಸ್ತಿ ಬಳಿಯ ಹಸಾಂಡಹಳ್ಳಿ ಮುನೇಶ್ವರಸ್ವಾಮಿ ದೇಗುಲಕ್ಕೆ ಟೆಂಪೋ ಡಿಕ್ಕಿ ಹೊಡೆದ ಪರಿಣಾಮ ಓರ್ವ ವ್ಯಕ್ತಿ ದುರ್ಮರಣ ಹೊಂದಿರುವಂತಹ ಘಟನೆ ನಡೆದಿದೆ. ದೇಗುಲದಲ್ಲಿ ಪೂಜೆ ಮಾಡುತ್ತಿದ್ದ ಮೂವರು ಮಹಿಳೆಯರಿಗೆ ಗಂಭೀರ ಗಾಯಗಳಾಗಿವೆ. ಮಾಸ್ತಿ ಗ್ರಾಮದ ನಿವಾಸಿ ಚಂದ್ರಶೇಖರ್(38) ಮೃತ ದುರ್ದೈವಿ. ಮಾಸ್ತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಮಚ್ಚಿನಿಂದ ಕೊಚ್ಚಿ ಪತ್ನಿ ಕೊಲೆಗೈದು ಪೊಲೀಸರಿಗೆ ಶರಣಾದ ಪತಿ

ಮೈಸೂರು: ಮಚ್ಚಿನಿಂದ ಕೊಚ್ಚಿ ಪತ್ನಿ ಕೊಲೆಗೈದು ಪತಿ ಪೊಲೀಸರಿಗೆ ಶರಣಾಗಿರುವಂತಹ ಘಟನೆ ಜಿಲ್ಲೆ ಹುಣಸೂರು ತಾಲೂಕಿನ ಬೆಂಕಿಪುರ ಗ್ರಾಮದಲ್ಲಿ ನಡೆದಿದೆ. ಪತ್ನಿ ರೋಜಾ(37) ಹತ್ಯೆಗೈದ ಸ್ವಾಮಿನಾಯ್ಕ. ಮತ್ತೊಬ್ಬ ಮಹಿಳೆಯ ಜತೆ ಸ್ವಾಮಿನಾಯ್ಕ ಸಲುಗೆಯಿಂದ ಇದ್ದ. ಇದೇ ವಿಚಾರಕ್ಕೆ ದಂಪತಿ ನಡುವೆ ಆಗಾಗ ಜಗಳವಾಗುತ್ತಿತ್ತು.

ಇದನ್ನೂ ಓದಿ: ಒನ್ ಡೇ ಟ್ರಿಪ್ ಮಾಡಿ ಕ್ಯಾಬ್ ಚಾಲಕನ ಬಳಿಯೇ ದರೋಡೆ: ಕಾರು ಸಮೇತ ಪರಾರಿಯಾಗಿದ್ದ ಆಸಾಮಿ ಅಂದರ್

ಇಂದು ಮಧ್ಯಾಹ್ನ ಮಚ್ಚಿನಿಂದ ಕೊಚ್ಚಿ ಪತ್ನಿ ರೋಜಾ ಕೊಲೆ ಮಾಡಲಾಗಿದ್ದು, ಪತ್ನಿ ಹತ್ಯೆಗೈದು ಬಿಳಿಕೆರೆ ಠಾಣೆಗೆ ಬಂದು ಆರೋಪಿ ಶರಣಾಗಿದ್ದಾರೆ. ಈ ಬಗ್ಗೆ ಬಿಳಿಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇಬ್ಬರು ಸೈಬರ್ ಕಳ್ಳರ ಬಂಧನ

ಹಾವೇರಿ: ಕಂಪ್ಯೂಟರ್, ಲ್ಯಾಪ್‌ಟಾಪ್​ಗಳನ್ನ ಕಡಿಮೆ ಬೆಲೆಗೆ ಕೊಡಿಸುವದಾಗಿ ಹೇಳಿ ವಂಚಿಸುತ್ತಿದ್ದ ಇಬ್ಬರು ಸೈಬರ್ ಕಳ್ಳರನ್ನು ಪೊಲೀಸರು ಬಂಧಿಸಿದ್ದಾರೆ. ಬೆಂಗಳೂರುನ ಮೂಲದ ರೋಪೇಶ್ ಹೆಚ್​ಎಂ ಮತ್ತು ಚಿಕ್ಕಮಂಗಳೂರಿನ ಚೇತನ್ ಎಂಎಸ್​ ಎಂಬುವರ ಬಂಧನ ಮಾಡಲಾಗಿದೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 4:41 pm, Sun, 15 September 24